ಟೀ ಕುಡಿದ್ರೆ ಬೊಜ್ಜು ಹೆಚ್ಚಾಗುತ್ತೆ.. ಹೀಗಂತ ನಾವು ಹೇಳಿದ್ರೆ ನೀವು ನಗ್ತೀರಾ ಅಂತಾ ಗೊತ್ತು. ಟೀ ಪುಡಿಯಲ್ಲಿ ತೂಕ ಹೆಚ್ಚಿಸುವ ಯಾವುದೇ ಅಂಶವಿಲ್ಲ. ಆದ್ರೆ ಟೀ ತಯಾರಿಸಲು ಬಳಸುವ ಇತರ ವಸ್ತುಗಳು ನಿಮ್ಮ ಕೆಜಿ ಹೆಚ್ಚಿಸುತ್ತೆ ಹುಷಾರ್.
ಟೀ ಇಲ್ಲದೆ ಬಹುತೇಕ ಜನರಿಗೆ ಬೆಳಗಾಗೋದಿಲ್ಲ. ಹಾಸಿಗೆಯಿದ್ದ ಎದ್ದ ತಕ್ಷಣ ಕೆಲವರು ಟೀ ಕುಡಿಯಲು ಶುರು ಮಾಡಿದ್ರೆ ರಾತ್ರಿ ಮಲಗುವವರೆಗೆ ಸೇವನೆ ಮಾಡುತ್ತಾರೆ. ದಿನಕ್ಕೆ ಎಷ್ಟು ಕಪ್ ಟೀ ಸೇವನೆ ಮಾಡಿದ್ದೇವೆ ಎಂಬುದೇ ಅನೇಕರಿಗೆ ನೆನಪಿರೋದಿಲ್ಲ. ಟೀ ಕುಡಿಯೋದು ಕೂಡ ಒಂದು ಚಟ. ಭಾರತ (India) ದಲ್ಲಿ ಟೀ (Tea) ಪ್ರೇಮಿಗಳ ಸಂಖ್ಯೆ ಸಾಕಷ್ಟಿದೆ. ಅದೇ ಕಾರಣಕ್ಕೆ ಗಲ್ಲಿ ಗಲ್ಲಿಯಲ್ಲಿ ನೀವು ಟೀ ಸ್ಟಾಲ್ ನೋಡ್ಬಹುದು. ವಿಶೇಷವೆಂದ್ರೆ ಬಹುತೇಕ ಎಲ್ಲ ಟೀ ಸ್ಟಾಲ್ ಮುಂದೆ ಜನರಿರ್ತಾರೆ. ಟೀ, ಆಯಾಸವನ್ನು ಕಡಿಮೆ ಮಾಡುತ್ತೆ. ಟೀ ಸೇವನೆ ಮಾಡೋದ್ರಿಂದ ಮನಸ್ಸು ರಿಪ್ರೆಶ್ ಆಗುತ್ತೆ. ಇದೇ ಕಾರಣಕ್ಕೆ ಜನರು ಪದೇ ಪದೇ ಟೀ ಕುಡಿತಾರೆ. ಮನೆಗೆ ಯಾವುದೇ ಗೆಸ್ಟ್ ಬರಲಿ ಟೀ ಸಿದ್ಧವಾಗಿರುತ್ತದೆ. ಹೊರಗೆ ಕೆಲಸ ಮಾಡುವವರು ಟೀ ಸೇವನೆ ಮಾಡೋದು ಹೆಚ್ಚು ಅಂದ್ರೆ ತಪ್ಪಾಗಲಾರದು. ನಿಮಗಿಷ್ಟವಾಗುವ, ನಿಮ್ಮ ಮೂಡ್ ಸರಿಯಾಗೋಕೆ ಬೇಕೇ ಬೇಕು ಎನ್ನುವ ಟೀ ನಿಮ್ಮ ಬೊಜ್ಜು ಹೆಚ್ಚಿಸುತ್ತೆ ಅಂದ್ರೆ ನಂಬ್ತೀರಾ?
ಟೀ ಪುಡಿಯಲ್ಲಿ ತೂಕ (Weight) ಹೆಚ್ಚಿಸುವ ಯಾವುದೇ ಅಂಶವಿಲ್ಲ ನಿಜ. ಆದ್ರೆ ನೀವು ಟೀ ತಯಾರಿಸಲು ಬಳಸುವ ಇತರ ವಸ್ತುಗಳು ನಿಮ್ಮ ತೂಕವನ್ನು ಹೆಚ್ಚಿಸುತ್ತವೆ ಎನ್ನುತ್ತಾರೆ ತಜ್ಞರು. ಚಹಾವನ್ನು ನೀವು ಸರಿಯಾಗಿ ಕುಡಿದರೆ ಆರೋಗ್ಯಕ್ಕೆ ಒಳ್ಳೆಯದು. ಆದ್ರೆ ಚಹಾಕ್ಕೆ ಹಾಕುವ ಪದಾರ್ಥಗಳ ಬಗ್ಗೆ ಹೆಚ್ಚು ಗಮನವಿರಬೇಕು.
undefined
RECIPES: ಮನೆಯಲ್ಲೇ ತಯಾರಿಸಿ ರುಚಿಯಾದ ತೆಂಗಿನಕಾಯಿ ಹಾಲು
ಚಹಾ ನಿಜವಾಗಿಯೂ ತೂಕ ಹೆಚ್ಚಿಸುತ್ತಾ? : ನಾವು ಟೀ ತಯಾರಿಸುವ ವೇಳೆ ಕೊಬ್ಬಿನಿಂದ ಕೂಡಿದ ಹಾಲು ಹಾಗೂ ಸಕ್ಕರೆ (Sugar) ಯನ್ನು ಬಳಸ್ತೇವೆ. ಹಾಲು (Milk), ಸಕ್ಕರೆ ಬೆರೆಸಿದ ಸರಾಸರಿ ಒಂದು ಕಪ್ ಟೀ 120-150 ಕ್ಯಾಲೋರಿ (calorie) ಹೊಂದಿರುತ್ತದೆ. ಪ್ರತಿ ದಿನ ಒಂದು ಕಪ್ ಟೀ ಕುಡಿದ್ರೆ ಅದು ನಿಮ್ಮ ತೂಕದ ಮೇಲೆ ಯಾವುದೇ ವ್ಯತ್ಯಾಸ ಉಂಟು ಮಾಡುವುದಿಲ್ಲ. ಆದರೆ ಮೇಲಿನ ಕ್ಯಾಲೋರಿಗಿಂತ ಹೆಚ್ಚು ಕ್ಯಾಲೋರಿ ಇರುವ ಟೀಯನ್ನು ದಿನಕ್ಕೆ ಐದಾರು ಬಾರಿ ಸೇವನೆ ಮಾಡಿದ್ರೆ ಅದು ಬೊಜ್ಜಿಗೆ ಕಾರಣವಾಗೋದು ನಿಜ ಎನ್ನುತ್ತಾರೆ ತಜ್ಞರು.
ಬೊಜ್ಜು (Obesity ) ಕಡಿಮೆ ಮಾಡಲು ಟೀ ಬಿಡಬೇಕಾ? : ದಿನದಲ್ಲಿ ಮೂರರಿಂದ ನಾಲ್ಕು ಕಪ್ ಚಹಾ ಕುಡಿಯುವುದು ಭಾರತೀಯ ಮನೆಯಲ್ಲಿ ಬಹಳ ಸಾಮಾನ್ಯ. ಹಾಗಿರುವಾಗ ಟೀ ಬಿಡಿ ಅಂದ್ರೆ ಅದು ಅವರಿಗೆ ಕಷ್ಟವಾಗಬಹುದು. ಟೀಯನ್ನು ಸಂಪೂರ್ಣವಾಗಿ ಬಿಡುವ ಬದಲು ಟೀ ಸೇವನೆ ವಿಧಾನದಲ್ಲಿ ಬದಲಾವಣೆ ಮಾಡಬಹುದು. ಆರೋಗ್ಯಕರ ಟೀ ಸೇವನೆ ಮಾಡುವುದು ಒಳ್ಳೆಯದು. ಟೀಗೆ ಸಕ್ಕರೆ ಬಳಸದಿರುವುದು ಒಳ್ಳೆಯದು. ಅದು ಕಷ್ಟ ಎನ್ನುವವರು ಕಡಿಮೆ ಪ್ರಮಾಣದಲ್ಲಿ ಸಕ್ಕರೆ ಬಳಸಬೇಕು. ಇಲ್ಲವೆ ನೀವು ಸಕ್ಕರೆ ಬದಲು ಬೆಲ್ಲವನ್ನು ಕೂಡ ಟೀಗೆ ಹಾಕಬಹುದು. ಇದಲ್ಲದೆ ದಿನಕ್ಕೆ ಟೀ ಸೇವನೆಯನ್ನು ಎರಡು ಕಪ್ ಗೆ ಮಿತಿಗೊಳಿಸಿ.
ದೇಹಕ್ಕೆ ವಿಟಮಿನ್ ಬಿ 12 ಬೇಕೇ ಬೇಕು, ಇಲ್ಲದಿದ್ರೆ ಏನಾಗುತ್ತೆ ?
ಈ ಟೀ ಸೇವನೆ ಆರೋಗ್ಯಕ್ಕೆ ಒಳ್ಳೆಯದು : ಕೆಲ ಟೀ ಸೇವನೆ ನಮ್ಮ ಆರೋಗ್ಯವನ್ನು ವೃದ್ಧಿಸುತ್ತದೆ. ಗ್ರೀನ್ ಟೀ (Green Tea), ಮಸಾಲೆ ಟೀ ಕುಡಿಯುವುದು ಒಳ್ಳೆಯದು. ಜಾಯಿಕಾಯಿ, ಶುಂಠಿ, ಲವಂಗ, ಕರಿಮೆಣಸು, ತುಳಸಿ (Tulsi), ದಾಲ್ಚಿನ್ನಿ ಅಥವಾ ಮಸಾಲೆ ಟೀಗಳನ್ನು ಕುಡಿಯುವುದ್ರಿಂದ ನಿಮ್ಮ ಆರೋಗ್ಯ ಸುಧಾರಿಸುತ್ತದೆ. ಈ ಟೀ ಪೌಷ್ಟಿಕಾಂಶವನ್ನು ನೀಡುತ್ತದೆ. ಚಯಾಪಚಯವನ್ನು ಸುಧಾರಿಸುತ್ತದೆ. ತೂಕ ಕಡಿಮೆ ಮಾಡುತ್ತದೆ. ಸೋಂಪು, ಓಂಕಾಳು, ಲವಂಗ ಬೆರೆಸಿದ ಟೀಗಳು ಕೊಬ್ಬು ಕರಗಲು ಸಹಾಯ ಮಾಡುತ್ತವೆ ಎನ್ನುತ್ತಾರೆ ತಜ್ಞರು.