ಹೊಟ್ಟೆ ಕ್ಲೀನ್ ಮಾಡಲು ಇಸಬ್‌ಗೋಲ್ ತಿಂದ್ರೆ ಯಡವಟ್ಟಾಗ್ಬುದು, ಜೋಪಾನ

By Suvarna News  |  First Published Nov 8, 2022, 3:37 PM IST

Isabgol side effects: ಹೊಟ್ಟೆಯಲ್ಲಿ ಯಾವುದೇ ಸಮಸ್ಯೆಯಾದ್ರೂ ಕೆಲವರು ಇಸಬ್ಗೋಲ್ ಕುಡಿತಾರೆ. ಆದ್ರೆ ಇದ್ರಿಂದನೂ ಸಾಕಷ್ಟು ನಷ್ಟವಿದೆ. ಇತಿಮಿತಿಯಲ್ಲಿದ್ರೆ ಮಾತ್ರ ಇಸಬ್ಗೋಲ್ ಆರೋಗ್ಯಕ್ಕೆ ಒಳ್ಳೆಯದು. ನಿಗದಿಗಿಂತ ಹೆಚ್ಚು ಸೇವನೆ ಮಾಡಿದ್ರೆ ಹಾಸಿಗೆ ಹಿಡಿಯೋದು ನಿಶ್ಚಿತ.


ಮಲಬದ್ಧತೆ, ಸಾಮಾನ್ಯವಾಗಿ ಜೀವನದಲ್ಲಿ ಒಮ್ಮೆಯಾದ್ರೂ ಕಾಡುವ ಅನಾರೋಗ್ಯ. ಕೆಲವರು ಪ್ರತಿ ದಿನ ಈ ಸಮಸ್ಯೆಯಿಂದ ಬಳಲ್ತಾರೆ. ಮಲಬದ್ಧತೆ ನಿವಾರಣೆಗೆ ರಾತ್ರಿ ಮಾತ್ರೆ ಸೇವಿಸಿ ಮಲಗುವವರಿದ್ದಾರೆ. ಇನ್ನು ಕೆಲವರು ಆಯುರ್ವೇದ ಹಾಗೂ ಮನೆ ಮದ್ದಿಗೆ ಹೆಚ್ಚು ಆದ್ಯತೆಯನ್ನು ನೀಡ್ತಾರೆ. ಮಲಬದ್ಧತೆಗೆ ರಾಮಬಾಣವೆಂದ್ರೆ ಅದು ಇಸಬ್ಗೋಲ. ಇದರ ಸೇವನೆಯಿಂದ ಮಲಬದ್ಧತೆ ಸಮಸ್ಯೆ ಕಡಿಮೆಯಾಗುತ್ತದೆ. ಇಸಾಬ್ಗೋಲ (Isabgol) ಮೂಲತಃ ಪ್ಲಾಂಟಗೋ ಓವಾಟಾ (Plantago Ovata ) ಎಂಬ ಸಸ್ಯದ ಬೀಜವಾಗಿದೆ. ಈ ಸಸ್ಯವು ಚಿಕ್ಕ ಎಲೆಗಳು ಮತ್ತು ಹೂವುಗಳೊಂದಿಗೆ ನಿಖರವಾಗಿ ಗೋಧಿಯಂತೆ ಕಾಣುತ್ತದೆ. ಈ ಸಸ್ಯದ ಕೊಂಬೆಗಳಲ್ಲಿ  ಬಿಳಿ ಬಣ್ಣದ ವಸ್ತು ಅಂಟಿಕೊಂಡಿರುತ್ತವೆ. ಇದನ್ನು ಇಸಾಬ್ಗೋಲ ಹೊಟ್ಟು  ಎಂದು ಕರೆಯಲಾಗುತ್ತದೆ. ಇಸಾಬ್ಗೋಲ ಸಿಪ್ಪೆಯಲ್ಲಿ ಹಲವಾರು ಔಷಧೀಯ ಗುಣಗಳು ಕಂಡುಬರುತ್ತವೆ.  ಇದು ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ. ಇಸಾಬ್ಗೋಲವನ್ನು ಭಾರತ (India) ಸೇರಿದಂತೆ ವಿಶ್ವದ ಅನೇಕ ದೇಶಗಳಲ್ಲಿ ಬೆಳೆಸಲಾಗುತ್ತದೆ. 

ಇಸಬ್ಗೋಲವನ್ನು ಎಲ್ಲಾ ವಯಸ್ಸಿನ ಜನರು ಸೇವಿಸಬಹುದು. ಭೇದಿ, ಮಲಬದ್ಧತೆ (Constipation), ಅತಿಸಾರ, ಬೊಜ್ಜು, ನಿರ್ಜಲೀಕರಣ, ಮಧುಮೇಹ ಮುಂತಾದ ಕಾಯಿಲೆಗಳಲ್ಲಿ ಇಸಾಬ್ಗೋಲ ತುಂಬಾ ಪ್ರಯೋಜನಕಾರಿ ಎಂದು ನಂಬಲಾಗುತ್ತದೆ. ಇಸಾಬ್ಗೋಲವನ್ನು ಆಯುರ್ವೇದ ಮತ್ತು ಅಲೋಪಥಿಕ್ ಔಷಧಿಗಳಲ್ಲಿ ಬಳಸಲಾಗುತ್ತದೆ. 

Tap to resize

Latest Videos

ರಾತ್ರಿಯಲ್ಲಿ ಜಿಮ್ ಮಾಡ್ತೀರಾ? ಮಾಡೋ ಮುನ್ನ ಇದನ್ನೊಮ್ಮೆ ಓದಿ

ಇಸಬ್ಗೋಲದ ಪ್ರಯೋಜನ ಪಡೆಯಬೇಕೆಂದ್ರೆ ನಾವು ಅದನ್ನು ಸರಿಯಾದ ಪ್ರಮಾಣದಲ್ಲಿ ಸೇವನೆ ಮಾಡಬೇಕು. ಒಂದು ಗ್ಲಾಸ್ ಬಿಸಿ ನೀರಿಗೆ ಒಂದರಿಂದ ಎರಡು ಚಮಚ ಇಸಬ್ಗೋಲವನ್ನು ಹಾಕಿ ನೆನೆ ಹಾಕಬೇಕು. ರಾತ್ರಿ ಊಟದ ನಂತ್ರ ಅದನ್ನು ಸೇವನೆ ಮಾಡಬೇಕು. ಇಲ್ಲವೆಂದ್ರೆ ನೀವು ಮೊಸರಿನ ಜೊತೆ ಇಸಬ್ಗೋಲ ಬೆರೆಸಿ ಕೂಡ ಸೇವನೆ ಮಾಡಬಹುದು. ಇಸಬ್ಗೋಲ ಆರೋಗ್ಯಕ್ಕೆ ಪ್ರಯೋಜನ ನೀಡುವ ಜೊತೆಗೆ ಹಾನಿಯುಂಟು ಮಾಡುತ್ತದೆ. ಹಾಗಾಗಿ ಅದ್ರ ಸೇವನೆ ವೇಳೆ ಗಮನ ನೀಡುವುದು ಮುಖ್ಯ.

ಇಸಬ್ಗೋಲ ಸೇವನೆಯಿಂದಾಗುವ ಅಡ್ಡ ಪರಿಣಾಮಗಳು :

ಕಿಬ್ಬೊಟ್ಟೆಯ ಸೆಳೆತ : ಕೆಲವೊಮ್ಮೆ ಇಸಾಬ್ಗೋಲ ತಿಂದ ನಂತರ  ಹೊಟ್ಟೆ ಸೆಳೆತ ಅಥವಾ ಹೊಟ್ಟೆ ಉಬ್ಬುವ ಸಮಸ್ಯೆ ಕಾಣಿಸಿಕೊಳ್ಳುತ್ತದೆ.  ನಿಮಗೂ ಈ ಅನುಭವವಾಗ್ತಿದ್ದರೆ ಇಸಾಬ್ಗೋಲ್ ಸೇವನೆ ನಿಲ್ಲಿಸಬೇಕು. 

ಔಷಧಿಗಳ ಮೇಲೆ ಅಡ್ಡ ಪರಿಣಾಮ : ಬೇರೆ ಔಷಧಿ, ಮಾತ್ರೆಗಳನ್ನು ಸೇವನೆ ಮಾಡ್ತಿದ್ದು, ಹೊಟ್ಟೆಯಲ್ಲಿ ಸಮಸ್ಯೆ ಎನ್ನಿಸಿದಾಗ ಇಸಾಬ್ಗೋಲ ಸೇವನೆ ಮಾಡಿದ್ರೆ ಔಷಧಿ ಮೇಲೆ ಅದು ಪರಿಣಾಮ ಬೀರುತ್ತದೆ. ಔಷಧಿ ಇದರಿಂದ ಕರಗುವುದಿಲ್ಲ. ಬೇರೆ ಚಿಕಿತ್ಸೆಗೆ ಒಳಪಟ್ಟಿರುವವರು ಇಸಬ್ಗೋಲ ಸೇವನೆ ಮುನ್ನ ವೈದ್ಯರನ್ನು ಕೇಳುವುದು ಒಳ್ಳೆಯದು.

ಪೋಷಕಾಂಶಗಳ (Nutrients) ಹೀರಿಕೊಳ್ಳುವುದ್ರಲ್ಲಿ ಏರುಪೇರು : ಇಸಾಬ್ಗೋಲ ಸೇವನೆಯಿಂದ ದೇಹದಲ್ಲಿ ಸತು, ತಾಮ್ರ ಮತ್ತು ಇತರ ಪ್ರಮುಖ ಪೋಷಕಾಂಶಗಳ ಹೀರಿಕೊಳ್ಳುವಿಕೆ ಕಡಿಮೆಯಾಗುತ್ತದೆ. ಈ ಪೋಷಕಾಂಶಗಳು ದೇಹವನ್ನು ಆರೋಗ್ಯಕರವಾಗಿಡುವಲ್ಲಿ ಪ್ರಮುಖ ಪಾತ್ರವಹಿಸುತ್ತವೆ. ಹಾಗಾಗಿ ಇಸಾಬ್ಗೋಲವನ್ನು ನಿಯಮಿತವಾಗಿ ಸೇವನೆ ಮಾಡುವುದು ಒಳ್ಳೆಯದಲ್ಲ.

ಕಡಿಮೆಯಾಗುತ್ತೆ ಹಸಿವು : ನಿಯಮಿತವಾಗಿ, ಪ್ರತಿ ದಿನ ಇಸಾಬ್ಗೋಲ ಸೇವನೆ ಮಾಡಿದ್ರೆ ಹಸಿವು ಕಡಿಮೆಯಾಗುತ್ತದೆ. ಈ ಸಮಸ್ಯೆ ಎಲ್ಲರಲ್ಲಿಯೂ ಕಂಡು ಬರುವುದಿಲ್ಲ ಎಂಬುದು ಗಮನದಲ್ಲಿರಲಿ. 

ಹೆಚ್ಚಾಗುವ ಮಲಬದ್ಧತೆ (Consitpation) ಸಮಸ್ಯೆ : ಮಲಬದ್ಧತೆ ನಿವಾರಣೆಗೆ ಇಸಬ್ಗೋಲ ಬಳಕೆ ಮಾಡ್ತಿರುತ್ತೇವೆ. ಆದ್ರೆ ಅತಿಯಾದ ಇಸಬ್ಗೋಲ ಸೇವನೆ ಮಾಡಿ, ನೀರನ್ನು ಕಡಿಮೆ ಪ್ರಮಾಣದಲ್ಲಿ ಕುಡಿದ್ರೆ  ಮಲಬದ್ಧತೆ ಹೆಚ್ಚಾಗುತ್ತದೆ. ಇಸಬ್ಗೋಲ ಬಳಕೆ ಮಾಡುವವರು ನೀರನ್ನು ಹೆಚ್ಚಾಗಿ ಕುಡಿಯಬೇಕು. 

ಗರ್ಭಿಣಿಯರು ಯಾವುದೇ ಕಾರಣಕ್ಕೂ ವೈದ್ಯರ ಸಲಹೆಯಿಲ್ಲದೆ ಇಸಬ್ಗೋಲವನ್ನು ಸೇವನೆ ಮಾಡಬಾರದು. ಇದು ಅವರ ಆರೋಗ್ಯದ ಮೇಲೆ ಅಡ್ಡ ಪರಿಣಾಮ ಬೀರುವ ಸಾಧ್ಯತೆಯಿರುತ್ತದೆ.

ಯಾವಾಗಲೂ ಸ್ಟ್ರೆಸ್ ಅನ್ನೋರ ಗಮನಕ್ಕೆ, ಆಯುರ್ದವೇದದಲ್ಲಿದೆ ಸಿಂಪಲ್ ಮದ್ದು

ಹೊಟ್ಟೆ ಸ್ವಚ್ಛವಾಗುತ್ತೆ ಎನ್ನುವ ಕಾರಣಕ್ಕೆ ಜನರು ಪ್ರತಿ ದಿನ ಇಸಬ್ಗೋಲವನ್ನು ಸೇವನೆ ಮಾಡಿದ್ರೆ ನಾನಾ ತರಹದ ಸಮಸ್ಯೆ ಕಾಡಲು ಶುರುವಾಗುತ್ತದೆ.

click me!