ರೋಗಿ ಹೊಟ್ಟೆಯಲ್ಲಿತ್ತು 62 ಸ್ಪೂನ್, ತಪಾಸಣೆ ಮಾಡಿದ ವೈದ್ಯರೇ ಶಾಕ್ !

By Suvarna News  |  First Published Sep 29, 2022, 8:51 AM IST

ಉತ್ತರ ಪ್ರದೇಶ ಭೋಪಾಡ ಜಿಲ್ಲೆಯ ಅನಾರೋಗ್ಯದಿಂದ ಬಳಲುತ್ತಿದ್ದ ವ್ಯಕ್ತಿಯನ್ನು ತಪಾಸಣೆ ಮಾಡಿದ ವೈದ್ಯರೇ ಕೆಲಕಾಲ ಶಾಕ್​ ಆಗಿದ್ದಾರೆ. ಆ ರೋಗಿಯ ಹೊಟ್ಟೆಯಲ್ಲಿ ಬರೋಬ್ಬರಿ 62 ಚಮಚಗಳು ಪತ್ತೆಯಾಗಿದ್ದು, ರೋಗಿಯ ಸ್ಥಿತಿ ಇನ್ನೂ ಗಂಭೀರವಾಗಿದೆ ಎಂದು ತಿಳಿದುಬಂದಿದೆ.


ಉತ್ತರಪ್ರದೇಶ:  ಭೋಪಾಡ ರಸ್ತೆಯ ಇವಾನ್ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ನಡೆಸಿದ ಶಸ್ತ್ರ ಚಿಕಿತ್ಸೆಯಲ್ಲಿ ರೋಗಿಯ ಹೊಟ್ಟೆಯಿಂದ ಬರೋಬ್ಬರಿ 63 ಸ್ಟೀಲ್ ಸ್ಪೂನ್‌ಗಳನ್ನು ಹೊರ ತೆಗೆಯಲಾಗಿದೆ. ಉತ್ತರ ಪ್ರದೇಶ ಭೋಪಾಡ ಜಿಲ್ಲೆಯ ಅನಾರೋಗ್ಯದಿಂದ ಬಳಲುತ್ತಿದ್ದ ವ್ಯಕ್ತಿಯನ್ನು ತಪಾಸಣೆ ಮಾಡಿದ ವೈದ್ಯರೇ ಕೆಲಕಾಲ ಶಾಕ್​ ಆಗಿದ್ದಾರೆ. ಆ ರೋಗಿಯ ಹೊಟ್ಟೆಯಲ್ಲಿ ಬರೋಬ್ಬರಿ 62 ಚಮಚಗಳು ಪತ್ತೆಯಾಗಿದ್ದು, ಕಳೆದ ಒಂದು ವರ್ಷದಿಂದ ಆತ ಚಮಚಗಳನ್ನು ತಿನ್ನುತ್ತಿದ್ದ ಎಂಬುದು ಬಯಲಾಗಿದೆ. ಆದ್ರೆ ರೋಗಿಯ ಸ್ಥಿತಿ ಇನ್ನೂ ಗಂಭೀರವಾಗಿದೆ ಎಂಬುದು ವೈದ್ಯರ ಹೇಳಿಕೆಯಾಗಿದೆ. ಮನ್ಸೂರ್‌ಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಅಚ್ಚರಿಯ ಪ್ರಕರಣ ಬೆಳಕಿಗೆ ಬಂದಿದೆ.

ರೋಗಿಯ ಹೊಟ್ಟೆ ಶಸ್ತ್ರಚಿಕಿತ್ಸೆ ನಡೆಸಿದ ವೈದ್ಯರೇ ಶಾಕ್
ಇಂತಹ ವಿಚಿತ್ರ ಪ್ರಕರಣ ಉತ್ತರ ಪ್ರದೇಶದ ಮುಜಾಫರ್‌ನಗರ ಜಿಲ್ಲೆಯಲ್ಲಿ ನಡೆದಿದೆ. 2 ಗಂಟೆಗಳ ಕಾಲ ಶಸ್ತ್ರಚಿಕಿತ್ಸೆ (Operation) ನಡೆಸಿದ ವೈದ್ಯರು ರೋಗಿಯ (Patient) ಹೊಟ್ಟೆಯಿಂದ 62 ಚಮಚ (Spoon)ಗಳನ್ನು ಹೊರತೆಗೆದಿದ್ದರಾದರೂ ಆತನ ಆರೋಗ್ಯ (Health) ಸ್ಥಿತಿ ಸುಧಾರಿಸಿಲ್ಲ. ಗಂಭೀರ ಸ್ಥಿತಿಯಲ್ಲಿದ್ದು, ಐಸಿಯುನಲ್ಲಿ ಚಿಕಿತ್ಸೆ (Treatment) ಮುಂದುವರಿದಿದೆ. ಮಾಹಿತಿ ಪ್ರಕಾರ, ಮನ್ಸೂರ್‌ಪುರ ಪೊಲೀಸ್ ಠಾಣಾ ವ್ಯಾಪ್ತಿಯ ಬೋಪಾಡ ಗ್ರಾಮದ ನಿವಾಸಿ ವಿಜಯ್ ಮಾದಕ ವ್ಯಸನಿಯಾಗಿದ್ದಾನೆ. ಹೀಗಾಗಿ ವಿಜಯ್ ಕುಟುಂಬಸ್ಥರು ಅವರನ್ನು ಮಾದಕ ವ್ಯಸನ ನಿವಾರಣಾ ಕೇಂದ್ರಕ್ಕೆ ದಾಖಲಿಸಿದ್ದರು. ಶಾಮ್ಲಿಯಲ್ಲಿರುವ ಮಾದಕ ವ್ಯಸನ ನಿಗ್ರಹ ಕೇಂದ್ರದಲ್ಲಿ ವಿಜಯ್ ಸುಮಾರು ಒಂದು ತಿಂಗಳ ಕಾಲ ಇದ್ದರು ಎಂದು ಹೇಳಲಾಗುತ್ತಿದೆ.

Latest Videos

undefined

ಅಬ್ಬಬ್ಬಾ..3 ಇಂಚು ಎತ್ತರವಾಗಲು ಭರ್ತಿ 60 ಲಕ್ಷ ರೂ. ಖರ್ಚು ಮಾಡಿದ ಭೂಪ !

63 ಸ್ಟೀಲ್ ಸ್ಪೂನ್​ ಹೊರತೆಗೆದ ವೈದ್ಯರು
ಇಲ್ಲಿ ಅವರ ಆರೋಗ್ಯ ಹದಗೆಟ್ಟಿದ್ದರಿಂದ ಕುಟುಂಬದವರು ಅವರನ್ನು ಮುಜಾಫರ್‌ನಗರದ ಖಾಸಗಿ ಆಸ್ಪತ್ರೆಗೆ (Hospital) ಕರೆದೊಯ್ದರು. ಇಲ್ಲಿ ತಪಾಸಣೆ ನಡೆಸಿದ ವೈದ್ಯರಿಗೆ (Doctor) ಶಾಕ್​ ಆಗಿತ್ತು. ಬಳಿಕ ಶಸ್ತ್ರಚಿಕಿತ್ಸೆ ನಡೆಸಿ ವಿಜಯ್ ಹೊಟ್ಟೆಯಲ್ಲಿದ್ದ 63 ಸ್ಟೀಲ್ ಸ್ಪೂನ್​ಗಳನ್ನು ಹೊರ ತೆಗೆದರು. ಇದನ್ನು ನೋಡಿದ ವೈದ್ಯರು ಸಹ ಆಶ್ಚರ್ಯಚಕಿತರಾದರು. ಆದರೆ, ಆಪರೇಷನ್ ನಂತರವೂ ವಿಜಯ್ ಸ್ಥಿತಿ ಚಿಂತಾಜನಕವಾಗಿದೆ ಎಂದು ತಿಳಿದುಬಂದಿದೆ.ವಿಜಯ್ ಹೊಟ್ಟೆಯಲ್ಲಿ ಇಷ್ಟೊಂದು ಚಮಚಗಳು ಹೇಗೆ ಹೋದವು ಎಂಬ ಪ್ರಶ್ನೆ ಉದ್ಭವಿಸಿದೆ. ಸಾಮಾನ್ಯವಾಗಿ, ಒಬ್ಬ ವ್ಯಕ್ತಿಯು ಆಹಾರ (Food)ದೊಂದಿಗೆ ಇಷ್ಟೊಂದು ಚಮಚವನ್ನು ತಿನ್ನಲು ಸಾಧ್ಯವಿಲ್ಲ ಎಂದು ವೈದ್ಯರೇ ಅಚ್ಚರಿ ವ್ಯಕ್ತಪಡಿಸಿದ್ದಾರೆ.

ಮಾದಕ ವ್ಯಸನಿಯಾಗಿದ್ದ ವಿಜಯ್‌
ವಿಜಯ್ ಕುಟುಂಬ ಸದಸ್ಯರು, ಮಾದಕ ವ್ಯಸನ ಕೇಂದ್ರದ ಸಿಬ್ಬಂದಿ ಬಲವಂತವಾಗಿ ವಿಜಯ್​ಗೆ ಚಮಚ ತಿನ್ನಿಸಿದ್ದಾರೆ ಎಂದು ಆರೋಪಿಸಿದ್ದಾರೆ. ಆದರೆ, ಸಂತ್ರಸ್ತರ ಕುಟುಂಬ ಈ ಬಗ್ಗೆ ಯಾವುದೇ ದೂರು (Complaint) ನೀಡಿಲ್ಲ. ಇದೇ ವೇಳೆ ವಿಜಯ್‌ಗೆ ಚಿಕಿತ್ಸೆ ನೀಡುತ್ತಿರುವ ವೈದ್ಯರಿಂದಲೂ ಈ ಕುರಿತು ಯಾವುದೇ ಪ್ರತಿಕ್ರಿಯೆ ಸಿಕ್ಕಿಲ್ಲ. ವಿಜಯ್ ಹೊಟ್ಟೆಯಲ್ಲಿ 63 ಸ್ಪೂನ್​ಗಳು ಹೇಗೆ ಹೋದವು ಎಂಬ ಚರ್ಚೆ ನಡೆಯುತ್ತಿದೆ.

ಈ ಪ್ರಕರಣ ಕುರಿತು ಪ್ರತಿಕ್ರಿಯಿಸಿರುವ ವೈದ್ಯ ಡಾ.ರಾಕೇಶ್ ಖುರಾನಾ, 32 ವರ್ಷದ ರೋಗಿ ವಿಜಯ್ ಅವರ ಹೊಟ್ಟೆಯಿಂದ 62 ಚಮಚಗಳನ್ನು ಹೊರತೆಗೆಯಲಾಗಿದೆ. ಚಮಚಗಳನ್ನು ತಾನೇ ತಿನ್ನುತ್ತಿದ್ದೆ ಎಂದು ವಿಜಯ್​ ಹೇಳಿದ್ದಾರೆ. ಅವರು ಆರೋಗ್ಯ ಸದ್ಯ ಗಂಭೀರವಾಗಿದ್ದು, ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದಿದ್ದಾರೆ.

ಅಬ್ಬಬ್ಬಾ..ಮಹಿಳೆ ನುಂಗಿದ್ದು ಬರೋಬ್ಬರಿ 55 ಬ್ಯಾಟರಿ, ಆಪರೇಷನ್ ಮಾಡಿದ ವೈದ್ಯರೇ ಸುಸ್ತು !

ಮಹಿಳೆಯ ಹೊಟ್ಟೆ,ಕರುಳಿನಿಂದ 55 ಬ್ಯಾಟರಿ ತೆಗೆದುಹಾಕಿದ ವೈದ್ಯರು 
ಈ ಹಿಂದೆ ಮಹಿಳೆಯೊಬ್ಬಳು ಬ್ಯಾಟರಿ ನುಂಗಿದ್ದು ವೈದ್ಯರು ಆಪರೇಷನ್ ಮಾಡಿ ಹೊರತೆಗೆದಿದ್ದರು. ಐರ್ಲೆಂಡ್‌ನ ವೈದ್ಯರು ಮಹಿಳೆಯ ಹೊಟ್ಟೆ ಮತ್ತು ಕರುಳಿನಿಂದ 55 ಬ್ಯಾಟರಿಗಳನ್ನು ತೆಗೆದುಹಾಕಿದ್ದರು. ಮಹಿಳೆಗೆ (Woman) ಬ್ಯಾಟರಿಯ ಸ್ಮೆಲ್ ಮೊದಲಿನಿಂದಲೂ ತುಂಬಾ ಪ್ರಿಯವಾಗಿತ್ತು. ಆದರೆ ಮಹಿಳೆ ಯಾವಾಗ ಇಷ್ಟೆಲ್ಲಾ ಬ್ಯಾಟರಿ ನುಂಗಿದ್ದಾಳೆ ಎಂಬುದು ತಿಳಿದುಬಂದಿಲ್ಲ. ಸಿಲಿಂಡರಾಕಾರದ ಬ್ಯಾಟರಿಗಳನ್ನು ಸೇವಿಸಿದ ನಂತರ 66 ವರ್ಷದ ಮಹಿಳೆ ಡಬ್ಲಿನ್‌ನ ಸೇಂಟ್ ವಿನ್ಸೆಂಟ್ಸ್ ಯೂನಿವರ್ಸಿಟಿ ಆಸ್ಪತ್ರೆಯಲ್ಲಿ ಚಿಕಿತ್ಸೆ (Treatment) ಪಡೆಯುತ್ತಿದ್ದಳು. ಎಕ್ಸ್-ರೇ ಮೂಲಕ ಪರಿಶೀಲಿಸಿದಾಗ ಅವುಗಳಲ್ಲಿ ಹೆಚ್ಚಿನವು ಹೊಟ್ಟೆಯಲ್ಲಿ ಸಿಲುಕಿಕೊಂಡಿರುವುದು ಕಂಡುಬಂದಿದೆ. ಐರಿಶ್ ಮೆಡಿಕಲ್ ಜರ್ನಲ್‌ನಲ್ಲಿ ಈ ವರದಿ (Report) ಪ್ರಕಟವಾಗಿದ್ದು, ಎಲ್ಲರೂ ಬೆಚ್ಚಿ ಬೀಳುವಂತೆ ಮಾಡಿತ್ತು. 

click me!