ಗ್ಲಾಸ್ ನಲ್ಲಿ ನೀರು ಕುಡಿದ್ರೆ ಆರೋಗ್ಯಕ್ಕೆ ಒಳ್ಳೆಯದು. ಹಾಗಂತ ಒಂದೇ ಗ್ಲಾಸ್ ನಲ್ಲಿ ನೀರು ಕುಡಿದ್ರೆ ಆರೋಗ್ಯ ಹಾಳಾಗುತ್ತೆ ಗೊತ್ತಾ? ಇದ್ರಿಂದ ನಾನಾ ಸಮಸ್ಯೆ ಶುರುವಾಗುತ್ತೆ ಎನ್ನುತ್ತಾರೆ ತಜ್ಞರು.
ಬೇಸಿಗೆ ಶುರುವಾಗಿದೆ. ನೀರು ಕುಡಿಯೋದು ಹೆಚ್ಚಾಗಿದೆ. ಸಾಮಾನ್ಯವಾಗಿ ಮನೆಯಲ್ಲಿ ನೀರು ಕುಡಿಯೋರು ಲೋಟ ಬಳಸ್ತಾರೆ. ಲೋಟದಲ್ಲಿ ಟೀ ಅಥವಾ ಜ್ಯೂಸ್ ಕುಡಿದಾಗ ಆ ಲೋಟವನ್ನು ಪಾತ್ರೆ ತೊಳೆಯುವ ಸೋಪ್ ಅಥವಾ ಜೆಲ್ ಹಾಗಿ ಕ್ಲೀನ್ ಮಾಡ್ತಾರೆ. ಅದೇ ನೀರು ಕುಡಿದ ಲೋಟವನ್ನು ಹೆಚ್ಚು ಗಂಭೀರವಾಗಿ ಪರಿಗಣಿಸುವುದಿಲ್ಲ. ಕುಡಿದಿದ್ದು ನೀರು ಎನ್ನುವ ಕಾರಣಕ್ಕೆ ಲೋಟವನ್ನು ಸ್ವಚ್ಛವಾಗಿ ಕ್ಲೀನ್ ಮಾಡೋದಿಲ್ಲ. ಕೆಲವರು ಅದನ್ನು ಹಾಗೆ ಇಟ್ಟರೆ ಮತ್ತೆ ಕೆಲವರು ಸ್ವಲ್ಪ ನೀರ್ ಹಾಕಿ, ಕ್ಲೀನ್ ಮಾಡಿದಂತೆ ಮಾಡಿ ಲೋಟ ಇಡ್ತಾರೆ. ನೀವೂ ನೀರಿನ ಲೋಟವನ್ನು ಕ್ಲೀನ್ ಆಗಿ ತೊಳೆದಿಲ್ಲವೆಂದ್ರೆ ಎಚ್ಚರ. ಇದು ಒಳ್ಳೆ ಅಭ್ಯಾಸವಲ್ಲ ಎನ್ನುತ್ತಾರೆ ತಜ್ಞರು.
ಮತ್ತೆ ಮತ್ತೆ ಒಂದೇ ಲೋಟದಲ್ಲಿ ನೀರು (Water) ಕುಡಿಯುವ ಕೆಟ್ಟ ಅಭ್ಯಾಸದಿಂದಲೇ ಅನೇಕ ರೀತಿಯ ರೋಗ (Disease) ಗಳು ಅಂಟಿಕೊಳ್ಳುತ್ತವೆ. ತಿಳಿದೂ ತಿಳಿದು ನಾವು ಇಂತಹ ತಪ್ಪನ್ನು ಮಾಡಿ ರೋಗವನ್ನು ಬರಮಾಡಿಕೊಳ್ತೇವೆ. ನಾವೇ ಸ್ವತಃ ಕೆಟ್ಟ ಬ್ಯಾಕ್ಟೀರಿಯಾ (Bacteria) ವನ್ನು ಸಂಪರ್ಕದಲ್ಲಿಟ್ಟುಕೊಳ್ಳುತ್ತೇವೆ. ನಮ್ಮ ಆಲಸಿತನದಿಂದ ಲೋಟ ಕೊಳೆಯಾಗಿರುತ್ತದೆ. ಆದರೆ ಆ ಕೊಳೆ ನಮ್ಮ ಕಣ್ಣಿಗೆ ಕಾಣಿಸುವುದಿಲ್ಲ ಅಷ್ಟೇ.
HEALTH TIPS: ಕಾಫಿ ಅಡಿಕ್ಷನ್ ನಿಮಗಿದ್ಯಾ? ಹೆಲ್ತ್ ಹಾಳಾಗ್ಬಾರ್ದು ಅಂದ್ರೆ ಈ ರೀತಿ ಮಾಡಿ ಕುಡೀರಿ
ಒಂದೇ ಲೋಟ ಬಳಸೋದ್ರಿಂದ ಯಾವ ರೋಗ ಬರುತ್ತೆ ಗೊತ್ತಾ? : ಸಂಪೂರ್ಣವಾಗಿ ಶುಚಿಯಾಗದ ಲೋಟದಲ್ಲಿ ನೊರೊವೈರಸ್ ಇರುತ್ತದೆ. ಕಲುಷಿತ ಆಹಾರ ಮತ್ತು ಪಾನೀಯದ ಮೂಲಕವೇ ಇದು ಹರಡುತ್ತದೆ. ಈ ವೈರಸ್ ಒಂದು ವಾರಕ್ಕಿಂತ ಹೆಚ್ಚು ಕಾಲ ಬದುಕಿರುತ್ತದೆ. ಒಂದು ವಾರದ ತನಕ ನೀರಿನ ಲೋಟವನ್ನು ತೊಳೆಯದೆ ಹಾಗೇ ಇಟ್ಟರೆ ಅದರಲ್ಲಿ ಬ್ಯಾಕ್ಟೀರಿಯಾ ಉದ್ಭವವಾಗುತ್ತೆ. ತೊಳಯದೇ ಇರುವ ಲೋಟದಲ್ಲಿ ನೀವು ಶುದ್ಧವಾದ ನೀರನ್ನು ಹಾಕಿದರು ಕೂಡ ಅದರಲ್ಲಿನ ಬ್ಯಾಕ್ಟೀರಿಯಾ ನಿಮ್ಮ ಆರೋಗ್ಯಕ್ಕೆ ಅಪಾಯಕಾರಿ. ನೀವು ನೀರಿನ ಲೋಟವನ್ನು ತೊಳೆಯದೇ ಇಟ್ಟಾಗ ಅದರಲ್ಲಿ ಬೆಳೆಯುವ ಈ ವೈರಸ್ ನಿಂದ ವಾಂತಿ, ಭೇದಿ, ಹೊಟ್ಟೆ ಸೆಳೆತ, ತಲೆನೋವು, ಸ್ನಾಯುಗಳ ನೋವು ಮುಂತಾದವು ಒಬ್ಬರಿಂದ ಇನ್ನೊಬ್ಬರಿಗೆ ಹರಡುತ್ತದೆ.
ಈ ಸೋಂಕಿಗೆ ಒಳಗಾದ ವ್ಯಕ್ತಿಯೊಂದಿಗೆ ನೇರಸಂಪರ್ಕದಲ್ಲಿರುವವರಿಗೂ ಸೋಂಕು ತಗುಲುತ್ತದೆ. ನೊರೊ ವೈರಸ್ ದೇಹ ಪ್ರವೇಶಿಸಿದ 12 ಗಂಟೆಯ ಒಳಗೆ ರೋಗಲಕ್ಷಣಗಳು ಕಾಣಿಸಿಕೊಳ್ಳಬಹುದು ಅಥವಾ 1-2 ದಿನಗಳ ನಂತರವೂ ರೋಗ ಲಕ್ಷಣ ಕಾಣಿಸಬಹುದು. ಕೆಲವೊಮ್ಮೆ ನೊರೊವೈರಸ್ ಸೋಂಕಿತ ವ್ಯಕ್ತಿಯಲ್ಲಿ ಯಾವುದೇ ರೋಗಲಕ್ಷಣ ಕಾಣಿಸಿದಿದ್ದರೂ ಅವರಿಂದ ಇನ್ನೊಬ್ಬರಿಗೆ ವೈರಸ್ ರವಾನೆಯಾಗಬಹುದು. ಶಿಶುಗಳಲ್ಲಿ ಮತ್ತು ವಯಸ್ಸಾದವರಿಗೆ ಈ ವೈರಸ್ ಪ್ರಬಲ ಮತ್ತು ಅಪಾಯಕಾರಿಯಾಗಿದೆ.
ಜಾಣರು ಮತ್ಸರದ ಭಾವನೆಗೆ ನೀರೆರೆಯೋದಿಲ್ಲ, ಅದ್ಯಾಕೆ ನೋಡಿ
ಸೋಪು ಮತ್ತು ನೀರನ್ನು ಬಳಸಿ : ನೀರಿನ ಲೋಟವನ್ನು ನೀರಿನಿಂದ ತೊಳೆಯುವವರೇ ಹೆಚ್ಚು ಮಂದಿ. ಇದು ತಪ್ಪು. ಅದರಲ್ಲಿನ ಕೀಟಾಣುಗಳು ಪೂರ್ತಿಯಾಗಿ ಹೋಗಬೇಕೆಂದರೆ ನೀವು ಸೋಪನ್ನು ಬಳಸಲೇಬೇಕು. ಇಲ್ಲದಿದ್ದರೆ ಬ್ಯಾಕ್ಟೀರಿಯಾಗಳು ಲೋಟದಲ್ಲಿ ಬಯೋಫಿಲ್ಮ್ ಅನ್ನು ನಿರ್ಮಿಸುತ್ತವೆ. ಇದರ ಹೊರತಾಗಿ ಕೆಲವರು ಮಲಗುವಾಗ ಅಥವಾ ಕೆಲಸಮಾಡುವಾಗ ನೀರಿನ ಲೋಟವನ್ನು ತೆರೆದೇ ಇಡುತ್ತಾರೆ. ಹೀಗೆ ತೆರೆದಿಟ್ಟ ನೀರಿನಲ್ಲಿ ಸುತ್ತಲಿನ ಧೂಳು ಮತ್ತು ಇತರ ಬ್ಯಾಕ್ಟೀರಿಯಾಗಳು ನೀರಿನಲ್ಲಿ ಸೇರಿಕೊಳ್ಳುತ್ತವೆ. ಹಾಗಾಗಿ ಮಲಗುವ ಮುನ್ನ ಅಥವಾ ಇನ್ಯಾವುದೋ ಸಮಯದಲ್ಲಿ ನೀವು ನೀರನ್ನು ತೆರೆದಿಡುವುದು ಸೂಕ್ತವಲ್ಲ. ಹಾಗೊಮ್ಮೆ ಮಲಗುವ ಸಮಯದಲ್ಲಿ ನೀವು ನೀರು ಬಳಸುತ್ತೀರಿ ಎಂದಾದರೆ ಮುಚ್ಚಲಿರುವ ಬಾಟಲಿಯಲ್ಲೇ ನೀರನ್ನು ತುಂಬಿಟ್ಟುಕೊಳ್ಳುವುದು ಉತ್ತಮ.
ನೀರನ್ನು ಕೂಡ ಬದಲಾಯಿಸಿ : ನಿಮ್ಮ ನೀರಿನ ಬಾಟಲಿ ಮತ್ತು ಲೋಟವನ್ನು ತೊಳೆಯುವುದರ ಜೊತೆಗೆ ನಿಮ್ಮ ನೀರಿನ ಕಂಟೇನರ್ ನಲ್ಲಿ ಕೂಡ ಪ್ರತಿನಿತ್ಯ ತಾಜಾ ನೀರನ್ನೇ ತುಂಬಿಟ್ಟುಕೊಳ್ಳಬೇಕು. ಕಂಟೇನರ್ ನಲ್ಲಿ ಹೆಚ್ಚು ದಿನ ನೀರು ಸಂಗ್ರಹವಾದರೆ ಅದರಲ್ಲಿ ಕೂಡ ಬ್ಯಾಕ್ಟೀರಿಯಾ ಹುಟ್ಟಿಕೊಳ್ಳುತ್ತವೆ. ಕೇವಲ ಒಂದೇ ಒಂದು ಲೋಟ ನೀರು ನಮ್ಮ ಆರೋಗ್ಯವನ್ನು ಹೇಗೆ ಬೇಕಾದರೂ ಹದಗೆಡಿಸಬಹುದು. ಹಾಗಾಗಿ ನೀರಿನ ಲೋಟವನ್ನು ಶುಭ್ರವಾಗಿ ತೊಳೆಯುವುದು ಹಾಗೂ ನೀರಿನ ಕಂಟೇನರ್ ನಲ್ಲಿರುವ ನೀರನ್ನು ಆಗಾಗ ಬದಲಿಸುವುದು ಮುಖ್ಯವಾಗಿದೆ.