Health Care : ಆರೋಗ್ಯ ಸೇವೆ ಡಿಜಿಟಲೀಕರಣಕ್ಕೆ ಜನ ಆಸಕ್ತಿ

By Suvarna News  |  First Published Mar 24, 2023, 4:22 PM IST

ಆರೋಗ್ಯ ಸೇವೆಯಲ್ಲಿ ಈಗ ಸಾಕಷ್ಟು ಬದಲಾವಣೆಯಾಗಿದೆ. ಹಿಂದಿನಂತೆ ವೈದ್ಯರು ಕೊಟ್ಟ ಚೀಟಿ ತೆಗೆದುಕೊಂಡು ಹೋಗ್ಬೇಕಾಗಿಲ್ಲ. ನಿಮ್ಮ ಹೆಸರು, ಸಂಖ್ಯೆ ಹೇಳಿದ್ರೆ ನಿಮ್ಮೆಲ್ಲ ಆರೋಗ್ಯ ಮಾಹಿತಿ ವೈದ್ಯರಿಗೆ ಲಭ್ಯವಾಗುತ್ತದೆ. ಇಷ್ಟೇ ಅಲ್ಲ ಮನೆಯಲ್ಲೇ ಕುಳಿತು ಆನ್ಲೈನ್ ಮೂಲಕ ನೀವು ಆರೋಗ್ಯ ಸೇವೆ ಪಡೆಯಬಹುದು. ಈ ಡಿಜಿಟಲೀಕರಣಕ್ಕೆ ನಿಧಾನವಾಗಿ ಪ್ರೋತ್ಸಾಹ ಸಿಕ್ತಿರೋದು ಖುಷಿ ವಿಷ್ಯ.
 


ದೇಶ ನಿಧಾನವಾಗಿ ಡಿಜಿಟಲ್ ಆಗ್ತಿದೆ. ಈಗ ಎಲ್ಲವೂ ಆನ್ಲೈನ್ ನಲ್ಲಿ ಲಭ್ಯವಿದೆ. ದೇಶದ ಮೂಲೆ ಮೂಲೆಗಳಲ್ಲಿ ಡಿಜಿಟಲ್ ಸೇವೆ ವೇಗ ಪಡೆದಿದೆ. ಆರೋಗ್ಯ ಸೇವೆಗಳಲ್ಲೂ  ಡಿಜಿಟಲೀಕರಣವನ್ನು ನಾವು ನೋಡ್ಬಹುದು. ಕೊರೊನಾ ನಂತ್ರ ಈ ಕ್ಷೇತ್ರದಲ್ಲಿ ಮಹತ್ವದ ಬದಲಾವಣೆಯಾಗಿದೆ. ಜನರು ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿವಹಿಸುವ ಜೊತೆಗೆ ಡೇಟಾವನ್ನು ಡಿಜಿಟಲೀಕರಣಗೊಳಿಸಲು ಆಸಕ್ತಿ ತೋರುತ್ತಿದ್ದಾರೆ.

ದೇಶ (Country) ದ ಶೇಕಡಾ 74 ರಷ್ಟು ಜನರು ವಿವಿಧ ಆರೋಗ್ಯ ಸೇವೆಗಳನ್ನು ಡಿಜಿಟಲ್ (Digital) ಆಗಿ ಪರಿವರ್ತಿಸಿದ್ದಾರೆ. ಕಳೆದ ಒಂದು ವರ್ಷದಲ್ಲಿ ಸುಮಾರು ಶೇಕಡಾ 67 ರಷ್ಟು ಜನರು ಆರೋಗ್ಯ (Health) ಸೇವೆಗಳನ್ನು ಡಿಜಿಟಲ್ ರೂಪದಲ್ಲಿ ಬಳಸಿದ್ದಾರೆ.  ಆರೋಗ್ಯ ಸೇವೆಗಳಲ್ಲಿ ಡಿಜಿಟಲೀಕರಣ ಎಂದಾಗ ಇದು ದತ್ತಾಂಶಗಳನ್ನು ರಕ್ಷಿಸುವುದು, ಆಸ್ಪತ್ರೆಗಳಲ್ಲಿ ರೋಗಿಗಳ ವಿವಿಧ ಪರೀಕ್ಷಾ ವರದಿಗಳು/ಬಿಲ್‌ಗಳ ತಯಾರಿಯಂತ ಸೇವೆಗಳಿಗೆ ಮೀಸಲಾಗಿದೆ.  ಆರೋಗ್ಯ ತಜ್ಞರು ಅಥವಾ ವೈದ್ಯರಿಂದ ಆನ್‌ಲೈನ್ ಸಮಾಲೋಚನೆಯಂತಹ ಮೂಲಭೂತ ಆರೋಗ್ಯ ಸೇವೆಗಳ ವಿಷಯದಲ್ಲಿ ಈ ಅಂಕಿ ಅಂಶ ಸಾಕಷ್ಟು ಹಿಂದಿದೆ. ಆನ್ಲೈನ್ ಮೂಲಕ ವೈದ್ಯರಿಂದ ಸಲಹೆ ಪಡೆಯುವ ಪ್ರಮಾಣ ಶೇಕಡಾ 34ರಷ್ಟಿದೆ ಎಂದು ವರದಿ ಹೇಳಿದೆ.  

Tap to resize

Latest Videos

undefined

SEX DETOX : ಸೆಕ್ಸ್ ಬ್ರೇಕ್ ಅಂದ್ರೇನು ಗೊತ್ತಾ? ಸಂಬಂಧಕ್ಕಿದು ಬೇಕೇ ಬೇಕು

ನೀತಿ ಆಯೋಗ ಸದಸ್ಯ ವಿಕೆ ಪಾಲ್ ಅವರ ಉಪಸ್ಥಿತಿಯಲ್ಲಿ ಬಿಡುಗಡೆಯಾದ ವರದಿಯ ಪ್ರಕಾರ, ನಗರ ಪ್ರದೇಶಗಳಲ್ಲಿ ದೊಡ್ಡ ಖಾಸಗಿ ಆಸ್ಪತ್ರೆಗಳು ಅಥವಾ ಸರ್ಕಾರಿ ಆರೋಗ್ಯ ಸೇವೆಗಳಲ್ಲಿ ಡಿಜಿಟಲೀಕರಣ ಹೆಚ್ಚಾಗಿದೆ. ಗ್ರಾಮೀಣ ಪ್ರದೇಶಗಳಲ್ಲಿ ಮತ್ತು ಮಧ್ಯಮ-ಸಣ್ಣ ಆಸ್ಪತ್ರೆಗಳು ಮತ್ತು ಆರೋಗ್ಯ ಸೇವೆಗಳಲ್ಲಿ ಡಿಜಿಟಲೀಕರಣವು ಇನ್ನೂ ಹಿಂದುಳಿದಿದೆ. ಕೊರೊನಾ ಅವಧಿಯಲ್ಲಿ ಬಿಡುಗಡೆಯಾದ ಕೋವಿನ್ ಆ್ಯಪ್, ಇ-ಸಂಜೀವನಿ ಸೇವೆ ಮತ್ತು ಅಭಾ ಐಡಿಯಲ್ಲಿ ಡಿಜಿಟಲೀಕರಣವು ಶೇಕಡಾ 90 ಅಥವಾ ಅದಕ್ಕಿಂತ ಹೆಚ್ಚು ಎಂದು ವರದಿಯಲ್ಲಿ ಹೇಳಲಾಗಿದೆ. 

ವರದಿಯ ಪ್ರಕಾರ, ಡಿಜಿಟಲೀಕರಣವು ಆರೋಗ್ಯ ಸೇವೆಗಳನ್ನು ದುಬಾರಿ ಮಾಡುತ್ತದೆ ಎಂದು ಶೇಕಡಾ 40 ರಷ್ಟು ಜನರು ನಂಬುತ್ತಾರೆ. ಹಾಗಾಗಿ ಇತರ ವಿಧಾನಗಳ ಮೂಲಕ ಆರೋಗ್ಯ ಸೇವೆ  ಪಡೆಯುವುದು ಉತ್ತಮವೆಂದು ಪರಿಗಣಿಸುತ್ತಾರೆ. ಆದ್ರೆ ಇದು ತಪ್ಪು.  ಆರೋಗ್ಯ ಸೇವೆಗಳ ಡಿಜಿಟಲೀಕರಣದಿಂದಾಗಿ ಜನರು ಅಗ್ಗದ ಸೇವೆಗಳನ್ನು ಪಡೆಯುತ್ತಾರೆ ಎಂದು ಆರೋಗ್ಯ ತಜ್ಞರು ಹೇಳ್ತಾರೆ. 

ಡಿಜಿಟಲೀಕರಣದ ದೊಡ್ಡ ಪ್ರಯೋಜನ : ಕೊರೊನಾ ಅಥವಾ ಯಾವುದೇ ಪ್ರಮುಖ ಆರೋಗ್ಯ ಸಮಸ್ಯೆ ಉದ್ಭವಿಸಿದ ಸಂದರ್ಭದಲ್ಲಿ ಡಿಜಿಟಲೀಕರಣ ನೆರವಾಗುತ್ತದೆ. ಹಿಂದಿನ ರೋಗವನ್ನು ಟ್ರ್ಯಾಕ್ ಮಾಡಿ, ಅದಕ್ಕೆ ಸೂಕ್ತವಾದ ಚಿಕಿತ್ಸೆ ನೀಡಲು ಇದು ಸಹಕಾರಿ. ಸಂಭಾವ್ಯ ಕಾಯಿಲೆಗೆ ಲಸಿಕೆಯನ್ನು ತಯಾರಿಸುವುದು ಸಹ ಈಗ ಮೊದಲಿಗಿಂತ ಕಡಿಮೆ ಸಮಯವನ್ನು ತೆಗೆದುಕೊಳ್ಳುತ್ತದೆ. ಕೊರೊನಾ ಲಸಿಕೆಯನ್ನು ಹೆಚ್ಚು ಸುಲಭವಾಗಿ ಮತ್ತು ವೇಗವಾಗಿ ತಯಾರಿಸಲು ಡಿಜಿಟಲೀಕರಣದ ನೆರವಾಯ್ತು. ಭವಿಷ್ಯದಲ್ಲಿ ಇದು ಹೆಚ್ಚಿನ ಪ್ರಯೋಜನಗಳನ್ನು ನೀಡಲಿದೆ. 

Health Tips : 30 ನಿಮಿಷದ ಕಡಿಮೆ ನಿದ್ರೆ ಮಾಡಿದ್ರೂ ಮಕ್ಕಳ ಆರೋಗ್ಯಕ್ಕೆ ಕುತ್ತು!

ಡಿಜಿಟಲೀಕರಣದಿಂದಾಗುವ ದೊಡ್ಡ ಸಮಸ್ಯೆ ಮತ್ತು ಸಂಭವನೀಯ ಪರಿಹಾರ :  ಡೇಟಾ ಡಿಜಿಟಲೀಕರಣದಿಂದ ಲಾಭವೇನೋ ಇದೆ. ಆದ್ರೆ ಅದ್ರಲ್ಲಿ ಕೆಲವೊಂದು ಅಪಾಯವೂ ಇದೆ. ಡೇಟಾದ ಡಿಜಿಟಲೀಕರಣದ ನಂತರ ಅದರ ಕಳ್ಳತನದ ದೊಡ್ಡ ಅಪಾಯವಿರುವುದು ಸತ್ಯ. ನಿರ್ದಿಷ್ಟ ಸಂಸ್ಥೆ ಅಥವಾ ಸಣ್ಣ ಆಸ್ಪತ್ರೆಗಳ ಡೇಟಾ ಕಳ್ಳತನವಾಗಿದೆ ಎನ್ನುವ ಬಗ್ಗೆ ಅನೇಕ ಸುದ್ದಿಗಳನ್ನು ನಾವು ಕೇಳ್ತೇವೆ. 

ಹಾಗಂತ ಇದಕ್ಕೆ ಪರಿಹಾರವಿಲ್ಲ ಎಂದಲ್ಲ. ಸೈಬರ್ ಭದ್ರತೆ ಮತ್ತಷ್ಟು ಹೆಚ್ಚಾಗಿದ್ದು, ಅದಕ್ಕೆ ಆಧುನಿಕ ವಿಧಾನಗಳನ್ನು ಅಳವಡಿಸಿಕೊಂಡ ಕಾರಣ ಡೇಟಾ ಕಳ್ಳತನದಲ್ಲಿ ಸಾಕಷ್ಟು ಇಳಿಕೆಯಾಗಿದೆ.  ಮಾಸ್ಕಿಂಗ್ ನಂತಹ ವಿಧಾನಗಳು ಡೇಟಾವನ್ನು ಸುಲಭವಾಗಿ ಕದಿಯಲು ಅವಕಾಶ ನೀಡ್ತಿಲ್ಲ. ಡೇಟಾ ಕಳವಾದ ನಂತರವೂ ರೋಗಿಯ ಖಾಸಗಿತನಕ್ಕೆ ಯಾವುದೇ ಹಾನಿಯಾಗುವುದಿಲ್ಲ. 
 

click me!