Weight Loss : ಉಪವಾಸ ಮಾಡಿ ತೂಕ ಇಳಿಸಿಕೊಳ್ಳಲು ಮುಂದಾಗಿದ್ರೆ ಎಚ್ಚರ..!

ಹಾಳುಮೂಳು ತಿಂದು ತೂಕ ಏರಿದೆ. ತಿನ್ಬೇಕಿದ್ರೆ ಗೊತ್ತಾಗ್ಲಿಲ್ಲ. ಈಗ ಎಷ್ಟು ಕಷ್ಟಪಟ್ಟರೂ ಸಣ್ಣಗಾಗ್ತಿಲ್ಲ. ಇನ್ಮುಂದೆ ತಿನ್ನೋದು ಬಿಟ್ಬಿಡ್ತೆನೆ. ಮಧ್ಯಾಹ್ನ,ರಾತ್ರಿ ಊಟ ಕಟ್. ಬೆಳಿಗ್ಗೆ ಬರೀ ಹಣ್ಣು ಸಾಕು. ಹೀಗಂತ ನೀವೂ ಹೇಳ್ತಿದ್ದರೆ ಈಗ್ಲೇ ಈ ಸುದ್ದಿ ಓದಿ. 


ಸ್ಥೂಲಕಾಯ(Obesity) ಸದ್ಯ ಜನರನ್ನು ಕಾಡುತ್ತಿರುವ ದೊಡ್ಡ ಸಮಸ್ಯೆ. ಗೊತ್ತಿಲ್ಲದೆ ತೂಕ (Weight )ಏರುತ್ತದೆ. ಆದ್ರೆ ಏರುತ್ತಿರುವ ತೂಕವನ್ನು ಇಳಿಸಿಕೊಳ್ಳುವುದು ದುಸ್ವಪ್ನದಂತೆ. ಸ್ಥೂಲಕಾಯವನ್ನು ಇಳಿಸಿಕೊಂಡು ಮತ್ತೆ ತೆಳ್ಳಗಾಗಲು ಸಾಕಷ್ಟು ಕಸರತ್ತುಗಳನ್ನು ಮಾಡಬೇಕಾಗುತ್ತದೆ. ವ್ಯಾಯಾಮ (Exercise),ವಾಕಿಂಗ್,ಡಯೆಟ್ (Diet) ತೂಕ ಇಳಿಸಿಕೊಳ್ಳುವ ಜನಪ್ರಿಯ ವಿಧಾನಗಳು. ಇತ್ತೀಚಿನ ದಿನಗಳಲ್ಲಿ ಜನರು ಮಾತ್ರೆ ಸೇವನೆ,ಔಷಧಿ (Medicine )ಗಳ ಸೇವನೆ ಮೂಲಕವೂ ತೂಕ ಇಳಿಸಿಕೊಳ್ಳುವ ಪ್ರಯತ್ನಕ್ಕೆ ಇಳಿದಿದ್ದಾರೆ. ತೂಕ ಇಳಿಸಿಕೊಳ್ಳಲು ಬೇರೆ ಬೇರೆ ದೇಶಗಳಲ್ಲಿ ಭಿನ್ನ ವಿಧಾನಗಳನ್ನು ಅನುಸರಿಸಲಾಗುತ್ತದೆ. ನಮ್ಮ ದೇಶದಲ್ಲಿ  ಜನರು ವಿಭಿನ್ನ ರೀತಿಯ ಅಭ್ಯಾಸ ಅನುಸರಿಸುತ್ತಿದ್ದಾರೆ.

ಅಯ್ಯೋ,ತೂಕ ಹೆಚ್ಚಾಗ್ತಿದೆ. ನಾಳೆಯಿಂದ ನಾನು ಊಟ ಮಾಡಲ್ಲ ಎಂಬುದನ್ನು ನೀವು ಅನೇಕರ ಬಾಯಿಯಿಂದ ಕೇಳಿರಬಹುದು.ಸ್ಲಿಮ್ ಆಗಿ,ಫಿಟ್ನೆಸ್ (Fitness) ಮೆಂಟೇನ್ ಮಾಡ್ಬೇಕೆಂಬ ಕಾರಣಕ್ಕೆ ಆಹಾರ ತ್ಯಜಿಸುವವರ ಸಂಖ್ಯೆ ಸಾಕಷ್ಟಿದೆ. ಆಹಾರ ಬಿಟ್ಟರೆ ಅನಾರೋಗ್ಯಕ್ಕೆ ಒಳಗಾಗ್ತೆವೆ ಎಂಬುದನ್ನು ಅನೇಕರು ಮರೆಯುತ್ತಾರೆ. ತೆಳ್ಳಗಾಗಲು ಉಪವಾಸ ಮಾಡುವ ಜನರಲ್ಲಿ ನೀವು ಒಬ್ಬರಾಗಿದ್ದರೆ ಎಚ್ಚೆತ್ತುಕೊಳ್ಳಿ. ಊಟ-ಆಹಾರ ಬಿಟ್ಟರೆ ನೀವು ತೆಳ್ಳಗಾಗಲು ಸಾಧ್ಯವಿಲ್ಲ ಎಂಬ ಸತ್ಯವನ್ನು ನೀವು ಮೊದಲು ತಿಳಿದುಕೊಳ್ಳುವ ಅವಶ್ಯಕತೆಯಿದೆ. ಆಹಾರ ಬಿಟ್ಟರೆ ನಿಮ್ಮ ದೇಹ ದುರ್ಬಲವಾಗುತ್ತದೆ. ಅನೇಕ ರೋಗಕ್ಕೆ ನೀವು ಬಲಿಯಾಗಬೇಕಾಗುತ್ತದೆ. ಊಟ(Meal) ಬಿಟ್ಟಿ ತೆಳ್ಳಗಾಗ್ತೇನೆ ಎಂಬುವವರಿಗೆ ಈ ಸುದ್ದಿ. ಹೀಗೆ ಮಾಡಿದರೆ ಏನೆಲ್ಲ ನಷ್ಟವಿದೆ ಎಂಬುದನ್ನು ನಾವು ಇಂದು ಹೇಳ್ತೆವೆ.

ಆಹಾರ (Food)ಬಿಟ್ಟು ಉಪವಾಸ ಮಾಡಿದರೆ ಏನಾಗುತ್ತೆ? 
ಉಪವಾಸ ಒಳ್ಳೆಯದು. ವಾರಕ್ಕೆ ಒಂದು ಬಾರಿ ಉಪವಾಸ ಮಾಡಿದರೆ ಆರೋಗ್ಯ ವೃದ್ಧಿಯಾಗುತ್ತದೆ ಎಂದು ಆಯುರ್ವೇದದಲ್ಲಿ ಹೇಳಲಾಗಿದೆ. ಆದರೆ ಎಲ್ಲಿಯೂ ವಾರಗಟ್ಟಲೆ ಉಪವಾಸ ಮಾಡಿ ಎಂದು ಹೇಳಿಲ್ಲ. ಹಾಗೆಯೇ ಶಕ್ತಿ ನೀಡುವ ಆಹಾರಗಳನ್ನು ತ್ಯಜಿಸುವಂತೆ ಯಾವ ವೈದ್ಯರೂ ಸಲಹೆ ನೀಡುವುದಿಲ್ಲ. 

Latest Videos

ಪೋಷಕಾಂಶದ (Nutrition) ಕೊರತೆ 
ಆಹಾರ ಬಿಟ್ಟು, ಹಸಿವು ತಡೆದುಕೊಂಡು ಬೊಜ್ಜು ಕಡಿಮೆ ಮಾಡಿಕೊಳ್ಳಲು ಮುಂದಾಗುವವರ ದೇಹದಲ್ಲಿ ಪೋಷಕಾಂಶಗಳು ಕಡಿಮೆಯಾಗುತ್ತವೆ. ಈ ಕಾರಣದಿಂದಾಗಿ, ಅವರ ಚರ್ಮವು ಶುಷ್ಕವಾಗುತ್ತದೆ. ಚರ್ಮ ನಿರ್ಜೀವವಾಗಿ ಕಾಣುತ್ತದೆ. ಕೈಕಾಲುಗಳು ದುರ್ಬಲಗೊಳ್ಳಲು ಪ್ರಾರಂಭಿಸುತ್ತದೆ.

ನಿರ್ಜಲೀಕರಣ (Behydration) ಸಮಸ್ಯೆ

ಹಸಿವಿನಿಂದ ತೂಕವನ್ನು ನಿಯಂತ್ರಿಸಲು ಪ್ರಯತ್ನಿಸಿದಾಗ, ನಿಮ್ಮ ದೇಹವು ತ್ವರಿತವಾಗಿ ನಿರ್ಜಲೀಕರಣಗೊಳ್ಳಲು ಪ್ರಾರಂಭಿಸುತ್ತದೆ. ದೇಹದಲ್ಲಿ ನೀರಿನ ಅಂಶ ಕಡಿಮೆಯಾದರೆ ಅನೇಕ ರೋಗಗಳು ನಿಮ್ಮನ್ನು ಮುತ್ತಿಕೊಳ್ಳುತ್ತವೆ. 

Footwear Shopping : ಚಪ್ಪಲಿ ಖರೀದಿ ಮಾಡುವಾಗ ಈ ತಪ್ಪು ಮಾಡ್ಬೇಡಿ..

ಚಯಾಪಚಯ ಸಮಸ್ಯೆ

ಕಡಿಮೆ ತಿನ್ನುವ ಅಭ್ಯಾಸವಿರುವವರಿಗೆ ಹೆಚ್ಚು ಆಹಾರ ಸೇವನೆ ಮಾಡಿದ್ರೆ ದೇಹಕ್ಕೆ ಜೀರ್ಣಿಸಿಕೊಳ್ಳುವುದು ಸಮಸ್ಯೆಯಾಗುತ್ತದೆ. ನೀವು ನಿಮ್ಮ ದೇಹಕ್ಕೆ ನೀಡುವ ಆಹಾರಕ್ಕೆ ದೇಹ ಒಗ್ಗಿಕೊಂಡಿರುತ್ತದೆ. ಹಾಗೆ ನೀವು ಸಂಪೂರ್ಣ ಉಪವಾಸ ಮಾಡ್ತಿದ್ದರೆ  ಚಯಾಪಚಯವು ದುರ್ಬಲಗೊಳ್ಳುತ್ತದೆ. 

ಋತು ಚಕ್ರದ ಸಮಸ್ಯೆ
ಮಹಿಳೆಗೆ ಪೌಷ್ಠಿಕಾಂಶದ ಆಹಾರಗಳು ಹೆಚ್ಚಿನ ಪ್ರಮಾಣದಲ್ಲಿ ಅಗತ್ಯವಿದೆ. ಮುಟ್ಟಿನ ಸಮಯದಲ್ಲಿ ಆಕೆ ದೇಹ ದುರ್ಬಲಗೊಳ್ಳುತ್ತದೆ. ಆದ್ರೆ ಉಪವಾಸ ಮಾಡಿ ತೂಕ ಇಳಿಸಲು ಮುಂದಾದ್ರೆ  ಮಹಿಳೆಯರು ಋತುಚಕ್ರಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ಎದುರಿಸಲು ಪ್ರಾರಂಭಿಸುತ್ತಾರೆ. ಮುಟ್ಟಿನ ಸಮಯ,ರಕ್ತಸ್ರಾವ ಸೇರಿದಂತೆ ಅನೇಕ ಸಮಸ್ಯೆ ಕಾಡುತ್ತದೆ.
ಕಡಿಮೆ ರಕ್ತದೊತ್ತಡ : ಆಹಾರವನ್ನು ಸೇವಿಸದೆ ತೂಕವನ್ನು ಕಳೆದುಕೊಳ್ಳಲು ಮುಂದಾಗಿದ್ದರೆ, ಇದರಿಂದ  ಕಡಿಮೆ ರಕ್ತದೊತ್ತಡ ಸಮಸ್ಯೆ ಶುರುವಾಗಬಹುದು.

Health Tips : ವಯಸ್ಸೇ ಆಗದಂತೆ ಕಾಣಲು ಏನ್ಮಾಡಬೇಕು.. ಸರಳ ಸೂತ್ರಗಳು!

ತೂಕ ಇಳಿಸಿಕೊಳ್ಳಲು ಸರಿಯಾದ ಮಾರ್ಗಗಳು :
ತೂಕ ಇಳಿಸಿಕೊಳ್ಳಲು ಬಯಸುವವರು ಸರಿಯಾದ ಮಾರ್ಗ ಅನುಸರಿಸಬೇಕು. ಆಹಾರದಲ್ಲಿ ಫೈಬರ್ (Fiber) ಸಮೃದ್ಧವಾಗಿರುವಂತೆ ನೋಡಿಕೊಳ್ಳಬೇಕು. ಫೈಬರ್ ಆಹಾರ,ಜೀರ್ಣಕ್ರಿಯೆ ನಿಧಾನವಾಗಿ ಮತ್ತು ಸರಿಯಾಗಿ ನಡೆಯಲು ನೆರವಾಗುತ್ತದೆ. ಇದ್ರ ಜೊತೆಗೆ ತೂಕ ಇಳಿಸಿಕೊಳ್ಳಲು ಬಯಸುವವರು ಸಾಕಷ್ಟು ಪ್ರಮಾಣದಲ್ಲಿ ನೀರು ಕುಡಿಯುವುದು ಅತ್ಯಗತ್ಯ. 
 

click me!