ಚಳಿಗಾಲದಲ್ಲಿ ಅತಿಯಾಗಿ ಹಸಿವಾಗುವ ಆ ವೈಜ್ಞಾನಿಕ ಸೀಕ್ರೆಟ್ ಕೊನೆಗೂ ಬಹಿರಂಗ; ಇಲ್ಲಿದೆ ನೋಡಿ ಸೂಕ್ತ ಪರಿಹಾರದ ಐಡಿಯಾ!

Published : Nov 01, 2026, 10:48 AM IST
Increased Appetite

ಸಾರಾಂಶ

ಸರಿಯಾದ ನಿದ್ದೆ ಇಲ್ಲದಿರುವುದು, ತಡರಾತ್ರಿಯವರೆಗೆ ಮೊಬೈಲ್ ನೋಡುವುದು ಮತ್ತು ಹವಾಮಾನ ಬದಲಾವಣೆಯಿಂದ ಬರುವ ಸುಸ್ತು ಕೂಡ ಹಸಿವನ್ನು ನಿಯಂತ್ರಿಸುವ ಹಾರ್ಮೋನ್‌ಗಳ ಕೆಲಸವನ್ನು ಹಾಳುಮಾಡುತ್ತವೆ. ಮೊಟ್ಟಮೊದಲು ಕಾರಣವನ್ನು ಪತ್ತೆ ಹಚ್ಚಿ, ಬಳಿಕ ಸೂಕ್ತ ಪರಿಹಾರದ ಬಗ್ಗೆ ಯೋಚಿಸಿ ಕ್ರಮ ಅನುಸರಿಸಿ. ಇಲ್ಲಿದೆ ನೋಡಿ ಸೂಕ್ತಯ ಸಲಹೆ!

The Best Health Tips to know here: ಚಳಿಗಾಲದಲ್ಲಿ ನಿಮಗೆ ಯಾಕೆ ಪದೇ ಪದೇ ಹಸಿವಾಗುತ್ತದೆ ಅಂತ ಎಂದಾದರೂ ಯೋಚಿಸಿದ್ದೀರಾ? ಈ ಚಳಿಯಲ್ಲಿ ಊಟದ ಮೇಲಿನ ಆಸೆ ಹೆಚ್ಚಾಗುವುದರ ಹಿಂದಿನ ವೈಜ್ಞಾನಿಕ ಕಾರಣಗಳು ಮತ್ತು ಅತಿಯಾಗಿ ತಿನ್ನುವುದನ್ನು ಹೇಗೆ ನಿಯಂತ್ರಿಸಬಹುದು ಅನ್ನೋದನ್ನು ಇಲ್ಲಿ ತಿಳಿಯಿರಿ.

ವಾತಾವರಣದಲ್ಲಿ ಚಳಿ ಹೆಚ್ಚಾದಾಗ ನಮ್ಮಲ್ಲಿ ಬಹುತೇಕರಿಗೆ ಹಸಿವು ಕೂಡ ದಿಢೀರ್ ಅಂತ ಹೆಚ್ಚಾಗುತ್ತದೆ. ಬಿಸಿ ಬಿಸಿ ಪರೋಟ, ಸಿಹಿ ತಿನಿಸುಗಳನ್ನು ತಿನ್ನಬೇಕು ಎಂಬ ಆಸೆ ಈ ಸಮಯದಲ್ಲಿ ಸಹಜವಾಗಿ ಮೂಡುತ್ತದೆ.

ಚಳಿಗಾಲದಲ್ಲಿ ನಾವು ಅತಿಯಾಗಿ ತಿನ್ನುವುದರ ಹಿಂದೆ ಹಾರ್ಮೋನ್‌ಗಳ ಪಾತ್ರ, ದೇಹದ ವಿನ್ಯಾಸ ಮತ್ತು ದೈಹಿಕ ಚಟುವಟಿಕೆಗಳ ಕೊರತೆ ಸೇರಿದಂತೆ ಹಲವು ಸಂಕೀರ್ಣ ಕಾರಣಗಳಿವೆ. ಈ ಚಳಿಗಾಲದ ಹಸಿವಿನ ಹಿಂದಿನ ವಿಜ್ಞಾನ ಏನು ಮತ್ತು ಈ ಆಹಾರದ ಬಯಕೆಯನ್ನು ಹೇಗೆ ಕಂಟ್ರೋಲ್ ಮಾಡಬಹುದು ಅಂತ ನೋಡೋಣ.

ಚಳಿಗಾಲ ಕೇವಲ ತಾಪಮಾನವನ್ನು ಮಾತ್ರ ಕಡಿಮೆ ಮಾಡುವುದಿಲ್ಲ

ಚಳಿಗಾಲ ಕೇವಲ ತಾಪಮಾನವನ್ನು ಮಾತ್ರ ಕಡಿಮೆ ಮಾಡುವುದಿಲ್ಲ. ಬಿಸಿ ಬಿಸಿ ಪರೋಟ, ಹಲ್ವಾ, ಎಣ್ಣೆಯಲ್ಲಿ ಕರಿದ ತಿಂಡಿಗಳನ್ನು ತಿನ್ನುವ ಆಸೆಯನ್ನೂ ಹುಟ್ಟುಹಾಕುತ್ತದೆ. ಹೊಟ್ಟೆ ತುಂಬಾ ಊಟ ಮಾಡಿದರೂ, ಮತ್ತೆ ಮತ್ತೆ ಏನಾದರೂ ತಿನ್ನಬೇಕು ಎಂಬ ಭಾವನೆ ಹಲವರಲ್ಲಿ ಕಾಡುತ್ತದೆ.

ತಂಪಾದ ವಾತಾವರಣದಲ್ಲಿ ದೇಹದ ಒಳಗಿನ ಉಷ್ಣಾಂಶವನ್ನು ಕಾಪಾಡಿಕೊಳ್ಳಲು ನಮ್ಮ ದೇಹವು ಹೆಚ್ಚು ಶಕ್ತಿಯನ್ನು ಬಳಸುತ್ತದೆ. ಆದರೆ, ನಾವು ಬೆಚ್ಚಗಿನ ಬಟ್ಟೆಗಳನ್ನು ಧರಿಸಿ ಮನೆಯೊಳಗೇ ಕುಳಿತಿದ್ದರೆ, ದೇಹಕ್ಕೆ ಹೆಚ್ಚುವರಿಯಾಗಿ ಬೇಕಾಗುವ ಕ್ಯಾಲೊರಿ ಪ್ರಮಾಣ ವಾಸ್ತವದಲ್ಲಿ ತುಂಬಾ ಕಡಿಮೆಯಿರುತ್ತದೆ.

ಗ್ರೆಲಿನ್' ಮತ್ತು 'ಲೆಪ್ಟಿನ್' ಎಂಬ ಹಾರ್ಮೋನ್‌ಗಳು

'ಗ್ರೆಲಿನ್' ಮತ್ತು 'ಲೆಪ್ಟಿನ್' ಎಂಬ ಹಾರ್ಮೋನ್‌ಗಳು ನಮ್ಮ ಹಸಿವು ಮತ್ತು ಹೊಟ್ಟೆ ತುಂಬಿದ ಭಾವನೆಯನ್ನು ನಿಯಂತ್ರಿಸುತ್ತವೆ. ಆದರೆ ಚಳಿಗಾಲದಲ್ಲಿ ಸೂರ್ಯನ ಬೆಳಕಿನ ಕೊರತೆ ಮತ್ತು ನಿದ್ದೆಯ ಕೊರತೆಯಿಂದಾಗಿ ಈ ಹಾರ್ಮೋನ್‌ಗಳ ಕಾರ್ಯದಲ್ಲಿ ಏರುಪೇರಾಗುತ್ತದೆ. ಇದು ನಮ್ಮನ್ನು ಭಾವನಾತ್ಮಕವಾಗಿ ಹೆಚ್ಚು ತಿನ್ನುವಂತೆ ಮತ್ತು ಸಿಹಿ ಪದಾರ್ಥಗಳತ್ತ ಆಕರ್ಷಿತರಾಗುವಂತೆ ಮಾಡುತ್ತದೆ.

ಎಣ್ಣೆಯುಕ್ತ ಮತ್ತು ಸಿಹಿ ತಿನಿಸುಗಳು ನಮಗೆ ತಕ್ಷಣದ ನೆಮ್ಮದಿ ಮತ್ತು ಶಕ್ತಿಯನ್ನು ಕೊಡುತ್ತವೆ. ಚಳಿಗಾಲದಲ್ಲಿ ಇಂತಹ ಆಹಾರಗಳು ಬಾಯಿಗೆ ರುಚಿಯಾಗಿ ಕಂಡರೂ, ದೇಹಕ್ಕೆ ನಿಜವಾಗಿಯೂ ಇಷ್ಟೊಂದು ಸಕ್ಕರೆ ಅಥವಾ ಕೊಬ್ಬಿನ ಅಗತ್ಯವಿದೆ ಎಂದರ್ಥವಲ್ಲ. ಮನೆಯಲ್ಲೇ ಸುಮ್ಮನೆ ಕುಳಿತು ಟಿವಿ ನೋಡುತ್ತಾ ಅತಿಯಾಗಿ ತಿನ್ನುವುದರಿಂದ ದೇಹದಲ್ಲಿ ಕ್ಯಾಲೊರಿ ಪ್ರಮಾಣ ಮಿತಿಮೀರುತ್ತದೆ.

ಸರಿಯಾದ ನಿದ್ದೆ ಇಲ್ಲದಿರುವುದು, ತಡರಾತ್ರಿಯವರೆಗೆ ಮೊಬೈಲ್ ನೋಡುವುದು ಮತ್ತು ಹವಾಮಾನ ಬದಲಾವಣೆಯಿಂದ ಬರುವ ಸುಸ್ತು ಕೂಡ ಹಸಿವನ್ನು ನಿಯಂತ್ರಿಸುವ ಹಾರ್ಮೋನ್‌ಗಳ ಕೆಲಸವನ್ನು ಹಾಳುಮಾಡುತ್ತವೆ. ಮೊಟ್ಟಮೊದಲು ಕಾರಣವನ್ನು ಪತ್ತೆ ಹಚ್ಚಿ, ಬಳಿಕ ಸೂಕ್ತ ಪರಿಹಾರದ ಬಗ್ಗೆ ಯೋಚಿಸಿ ಕ್ರಮ ಅನುಸರಿಸಿ.

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ನಿದ್ರೆಗೂ, ಹೃದಯದ ಆರೋಗ್ಯಕ್ಕೂ ಸಂಬಂಧವಿದೆ; ಮಲಗುವ ಹೊತ್ತಲ್ಲಿ ಈ ತಪ್ಪುಗಳನ್ನು ಮಾಡುತ್ತಿದ್ದರೆ ಇಂದೇ ಹುಶಾರಾಗಿ!
63ನೇ ವಯಸ್ಸಿನಲ್ಲೂ ನೀತಾ ಅಂಬಾನಿ ಇಷ್ಟು ಫಿಟ್ ಆಗಿರೋದ್ಯಾಕೆ? ಅವರ ಡಯಟ್, ವರ್ಕೌಟ್ ರಹಸ್ಯ ಇಲ್ಲಿದೆ!