Turmeric Varieties: ಅರಿಶಿನದಲ್ಲೂ ಅದೆಷ್ಟು ವಿಧಗಳು !

By Suvarna News  |  First Published Dec 29, 2021, 5:46 PM IST

ಭಾರತದಲ್ಲಿ ಹಲವಾರು ಅರಿಶಿನ (Turmeric) ಪ್ರಭೇದಗಳು ಲಭ್ಯವಿವೆ. ನೋಡಲು ಅವುಗಳೆಲ್ಲವೂ ಒಂದೇ ರೀತಿ ಕಾಣುತ್ತಿದ್ದರೂ, ಅವುಗಳು ಒಂದಕ್ಕೊಂದು ವಿಭಿನ್ನವಾಗಿವೆ. ವಿಭಿನ್ನವಾದ ಅರಿಶಿನದಿಂದ ಸಿಗುವ ಪ್ರಯೋಜನಗಳು ಸಹ ವ್ಯತ್ಯಸ್ತವಾಗಿವೆ. ಹಾಗಿದ್ರೆ ಎಲ್ಲೆಲ್ಲಿ ಅರಿಶಿನ ಬೆಳೆಯುತ್ತಾರೆ, ಅರಿಶಿನದಲ್ಲಿ ಎಷ್ಟೆಲ್ಲಾ ವಿಧಗಳಿವೆ. ಇದರಲ್ಲಿ ಯಾವುದು ಹೆಚ್ಚು ಉಪಯುಕ್ತ (Helpful) ಎಂಬುದನ್ನು ತಿಳಿಯೋಣ.


ಅರಿಶಿನವು ಭಾರತೀಯ ಅಡುಗೆಯ ಅವಿಭಾಜ್ಯ ಅಂಗವಾಗಿದೆ. ಸಾರು, ಸಾಂಬಾರು ದಾಲ್‌, ಸಬ್ಜಿ ಎಂದು ಎಲ್ಲಾ ಅಡುಗೆಯಲ್ಲೂ ಅರಿಶಿನವನ್ನು ಸೇರಿಸಲಾಗುತ್ತದೆ. ಆರ್ಯುವೇದದಲ್ಲಿಯೂ ಅರಿಶಿನಕ್ಕೆ ಹೆಚ್ಚಿನ ಮಹತ್ವವಿದ್ದು, ಹಲವು ಔಷಧಿಗಳ ತಯಾರಿಗೂ ಇದನ್ನು ಬಳಸಲಾಗುತ್ತದೆ. ಹಲವು ರೋಗಕ್ಕೆ ಮನೆ ಮದ್ದಾಗಿ ಸಹ ಅರಿಶಿನ ಬಳಕೆಯಾಗುತ್ತದೆ. ಅರಿಶಿನವು ಉರಿಯೂತವನ್ನು ಕಡಿಮೆ ಮಾಡುತ್ತದೆ. ಚಳಿಗಾಲದಲ್ಲಿ ಜ್ವರದಿಂದ ದೇಹವನ್ನು ರಕ್ಷಿಸುತ್ತದೆ. ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚುವಂತೆ ಮಾಡುತ್ತದೆ. ಮಧುಮೇಹ, ಕ್ಯಾನರ್‌ನಂತಹಾ ದೀರ್ಘ ಕಾಲದ ಕಾಯಿಲೆಗಳನ್ನು ತಡೆಯುತ್ತದೆ. 

ಗೋಲ್ಡನ್ ಮಸಾಲೆ ಎಂದು ಕರೆಯಲ್ಪಡುವ ಅರಿಶಿನದಲ್ಲಿ ಕರ್ಕ್ಯೂಮಿನ್ ಎಂಬ ಅಂಶವಿದ್ದು, ಇದು ನಮ್ಮ ಆರೋಗ್ಯಕ್ಕೆ ಹೆಚ್ಚು ಪ್ರಯೋಜನಕಾರಿಯಾಗಿದೆ. ವಿಶಿಷ್ಟ ಔಷಧೀಯ ಗುಣಗಳೊಂದಿಗೆ ಇದು ನಮ್ಮ ದೇಹವನ್ನು ಆರೋಗ್ಯಕರವಾಗಿ ಇರಿಸುತ್ತದೆ. ಅರಿಶಿನದಲ್ಲಿರುವ ಕರ್ಕ್ಯೂಮಿನ್ ಹೃದಯದ ಆರೋಗ್ಯವನ್ನೂ ಸುಧಾರಿಸುತ್ತದೆ. ಅರಿಶಿನ ಹೃದಯ ಸಂಬಂಧಿ ಕಾಯಿಲೆಗಳು ಹೆಚ್ಚಾಗುವುದನ್ನು ತಡೆಯುತ್ತದೆ.

Tap to resize

Latest Videos

ರಕ್ತದಲ್ಲಿಯ ಸಕ್ಕರೆ ನಿಯಂತ್ರಣಕ್ಕೆ ಇಲ್ಲಿವೆ ಸೂಪರ್ ಮನೆ ಮದ್ದು!

ಅರಿಶಿನ (Turmeric) ಎಂದಾಗ ಸಾಮಾನ್ಯವಾಗಿ ಸಿಟಿಯಲ್ಲಿರುವವರಿಗೆ ಪ್ಯಾಕೆಟ್‌ನಲ್ಲಿ ಬರುವ ಅರಿಶಿನ ಪುಡಿಯ ಬಗ್ಗೆ ಗೊತ್ತಿರುತ್ತದೆ. ಹಳ್ಳಿಯಲ್ಲಿರುವವರು ಅರಿಶಿನ ಕೊಂಬನ್ನು ನೋಡಿರುತ್ತಾರೆ. ಆದರೆ ಈ ಅರಿಶಿನದಲ್ಲೂ ಹಲವು ವಿಧಗಳಿವೆ ಎಂಬುದು ಹಲವರಿಗೆ ಗೊತ್ತಿಲ್ಲ. ಭಾರತದಲ್ಲಿ ಹಲವು ರಾಜ್ಯಗಳಲ್ಲಿ ಅರಿಶಿನ ಬೆಳೆಯಲಾಗುತ್ತದೆ. ನೋಡಲು ಅವುಗಳೆಲ್ಲವೂ ಒಂದೇ ರೀತಿ ಕಾಣುತ್ತಿದ್ದರೂ, ಅವುಗಳು ಒಂದಕ್ಕೊಂದು ವಿಭಿನ್ನವಾಗಿವೆ. ವಿಭಿನ್ನವಾದ ಅರಿಶಿನದಿಂದ ಸಿಗುವ ಪ್ರಯೋಜನಗಳು ಸಹ ವ್ಯತ್ಯಸ್ತವಾಗಿವೆ. ಅರಿಶಿನದಲ್ಲಿ ಎಷ್ಟೆಲ್ಲಾ ವಿಧಗಳಿವೆ. ಇದರಲ್ಲಿ ಯಾವುದು ಹೆಚ್ಚು ಉಪಯುಕ್ತ ಎಂಬ ಬಗ್ಗೆ ಇಲ್ಲಿದೆ ಮಾಹಿತಿ.

ಲಕಾಡಾಂಗ್ (​Lakadong): ಲಕಡಾಂಗ್ ಅರಿಶಿನವು ಮೇಘಾಲಯ ರಾಜ್ಯದಲ್ಲಿ ನೆಲೆಗೊಂಡಿರುವ ಲಕಡಾಂಗ್ ಗ್ರಾಮಕ್ಕೆ ಸೇರಿದ್ದಾಗಿದೆ. ಕರ್ಕ್ಯುಮಿನ್ ಮಟ್ಟಗಳ ಹೆಚ್ಚಿನ ಸಾಂದ್ರತೆಯಿಂದಾಗಿ ಇದು ವಿಶ್ವದ ಅತ್ಯುತ್ತಮ ಅರಿಶಿನ ರೂಪಾಂತರ ಎಂದು ಗುರುತಿಸಿಕೊಂಡಿದೆ. ಕರ್ಕ್ಯುಮಿನ್ ಎಂಬುದು ಅರಿಶಿನದಲ್ಲಿರುವ ಉರಿಯೂತ ನಿವಾರಕ ಸಂಯುಕ್ತವಾಗಿದ್ದು, ದೇಹವನ್ನು ಆರೋಗ್ಯಕರವಾಗಿರಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಸಾಮಾನ್ಯವಾಗಿ, ಅರಿಶಿನವು ಸುಮಾರು 2-4% ಕರ್ಕ್ಯುಮಿನ್ ಅನ್ನು ಹೊಂದಿರುತ್ತದೆ ಆದರೆ ಲಕಾಡಾಂಗ್‌ನ ಸಾಂದ್ರತೆಯು 7-12% ವರೆಗೆ ಇರುತ್ತದೆ.

Turmeric on Belly: ರಾತ್ರಿ ಮಲಗೋ ಮೊದಲು ನಾಭಿ ಮೇಲೆ ಅರಿಶಿನ ಹಚ್ಚಿ ನೋಡಿ

ಅಲೆಪ್ಪಿ (​Alleppey): ಅಲೆಪ್ಪಿಯು ಕೇರಳ (Kerala)ದ ಒಂದು ಸಣ್ಣ ಪಟ್ಟಣವಾಗಿದ್ದು, ಪ್ರಕೃತಿಯ ರಮಣೀಯ ಸೌಂದರ್ಯಕ್ಕೆ ಹೆಸರುವಾಸಿಯಾಗಿದೆ. ಹಾಗೆಯೇ ಅಲೆಪ್ಪಿಯಲ್ಲಿ ಹೆಚ್ಚನ ಪ್ರಮಾಣದಲ್ಲಿ ಅರಿಶಿನವನ್ನು ಬೆಳೆಯುತ್ತಾರೆ. ಅಲೆಪ್ಪಿ ಅರಿಶಿನವು ಸುಮಾರು 5% ಕರ್ಕ್ಯುಮಿನ್ ಅನ್ನು ಹೊಂದಿರುತ್ತದೆ ಮತ್ತು ಹಲವಾರು ಮನೆಮದ್ದುಗಳು ಮತ್ತು ಆಯುರ್ವೇದ (Ayurveda) ಔಷಧಿಗಳನ್ನು ತಯಾರಿಸಲು ಬಳಸಲಾಗುತ್ತದೆ.

ಮದ್ರಾಸ್‌ (Madras): ಮತ್ತೊಂದು ಪ್ರಸಿದ್ಧ ದಕ್ಷಿಣ ಭಾರತದ ಅರಿಶಿನ ವಿಧವು ಮದ್ರಾಸ್‌ನಿಂದ ಬಂದಿದೆ. ಇತರ ಬಣ್ಣಗಳಿಗೆ ಹೋಲಿಸಿದರೆ ಇದು ತಿಳಿ ಹಳದಿ (Yellow) ಬಣ್ಣವನ್ನು ಹೊಂದಿರುತ್ತದೆ. ಮದ್ರಾಸ್ ಅರಿಶಿನ ಸರಾಸರಿ 3.5% ಕರ್ಕ್ಯುಮಿನ್ ಅನ್ನು ಹೊಂದಿರುತ್ತದೆ.

ಈರೋಡ್ (​Erode): ಮಾರ್ಚ್ 2019ರಲ್ಲಿ ಈರೋಡ್ ಅರಿಶಿನವು ತನ್ನ GI ಟ್ಯಾಗ್ ಅನ್ನು ಪಡೆದುಕೊಂಡಿದೆ. GI ಟ್ಯಾಗ್ ಅಥವಾ ಭೌಗೋಳಿಕ ಟ್ಯಾಗ್ ಎನ್ನುವುದು ಒಂದು ನಿರ್ದಿಷ್ಟ ಭೌಗೋಳಿಕ ಸ್ಥಳದಲ್ಲಿ ಉತ್ಪಾದಿಸಲ್ಪಡುವ, ಅಲ್ಲಿನ ಕೆಲವು ವಿಶೇಷ ಗುಣಗಳನ್ನು ಹೊಂದಿರುವ ಆಹಾರ ಉತ್ಪನ್ನಗಳಿಗೆ ನೀಡುವ ಟ್ಯಾಗ್ (Tag) ಆಗಿದೆ. ಈರೋಡ್ ತಮಿಳುನಾಡಿನ ಒಂದು ಸಣ್ಣ ನಗರವಾಗಿದ್ದು, ಇಲ್ಲಿ ಈ ಅರಿಶಿನವನ್ನು ಉತ್ಪಾದಿಸಕಾಗುತ್ತದೆ.

ಸಾಂಗ್ಲಿ (Sangli): ಸಾಂಗ್ಲಿ ಅರಿಶಿನವು ಅದರ ವಿಶಿಷ್ಟ ಗುಣಲಕ್ಷಣಗಳಿಂದಾಗಿ 2018ರಲ್ಲಿ ಅದರ GI ಟ್ಯಾಗ್ ಅನ್ನು ಪಡೆದುಕೊಂಡಿದೆ. ಇದನ್ನು ಮಹಾರಾಷ್ಟ್ರದ ಸಾಂಗ್ಲಿಯಲ್ಲಿ ಉತ್ಪಾದಿಸಲಾಗುತ್ತದೆ. ದೇಶದಲ್ಲಿ 70%ಕ್ಕಿಂತ ಹೆಚ್ಚು ಅರಿಶಿನ ಉತ್ಪಾದನೆಯ ಮಹಾರಾಷ್ಟ್ರ ರಾಜ್ಯದಿಂದಾಗಿದೆ. ಸಾಂಗ್ಲಿ ಅರಿಶಿನವು ಕಿತ್ತಳೆ ಬಣ್ಣವನ್ನು ಹೊಂದಿರುತ್ತದೆ. ಈ ಅರಿಶಿನವನ್ನು ಹೆಚ್ಚಾಗಿ ಔಷಧೀಯ ಉದ್ದೇಶಗಳಿಗಾಗಿ ಬಳಸಲಾಗುತ್ತದೆ.

ನಿಜಾಮಾಬಾದ್ (​Nizamabad): ಜನಪ್ರಿಯ ಭಾರತೀಯ ಅರಿಶಿನ ವಿಧದಲ್ಲಿ ನಿಜಾಮಾಬಾದ್ ಕೂಡಾ ಒಂದು. ತೆಲಂಗಾಣದ ನಿಜಾಮಾಬಾದ್ ನಲ್ಲಿ ಇದನ್ನು ಬೆಳೆಯಲಾಗುತ್ತದೆ. ಇದು ಸರಾಸರಿ 2-4% ಕರ್ಕ್ಯುಮಿನ್ ಅನ್ನು ಹೊಂದಿರುತ್ತದೆ ಮತ್ತು ಗಾಢ ಹಳದಿ ಬಣ್ಣವನ್ನು ಹೊಂದಿರುತ್ತದೆ.

click me!