
ಯಾಕೋ ಇತ್ತೀಚೆಗೆ ಸರಿಯಾಗಿ ನಿದ್ರೆನೇ ಬರ್ತಿಲ್ಲ ಅಂತಾ ನಾಲ್ಕೈದು ಮಂದಿ ಸ್ನೇಹಿತರೋ, ಸಂಬಂಧಿಕರೋ ಇರುವ ಜಾಗದಲ್ಲಿ ಹೇಳ್ನೋಡಿ. ಆಗ ನೀವೊಂದೇ ಅಲ್ಲ ಅವರಲ್ಲೂ ಅನೇಕರಿಗೆ ಈ ಸಮಸ್ಯೆ ಇದೆ ಅನ್ನೋದು ನಿಮಗೆ ಗೊತ್ತಾಗುತ್ತೆ. ನಿದ್ರೆ ಬರಲ್ಲ, ಸರಿಯಾಗಿ ನಿದ್ರೆ ಆಗ್ತಿಲ್ಲ, ಮಧ್ಯರಾತ್ರಿ ಎಚ್ಚರವಾದ್ರೆ ಮತ್ತೆ ಮಲಗೋದು ಕಷ್ಟ, ರಾತ್ರಿ ೨ ಗಂಟೆಯಾದ್ರೂ ಕಣ್ಣಿಗೆ ನಿದ್ರೆ ಬರದೆ ಪರದಾಡೋದು ಮಾಮೂಲಿಯಾಗಿದೆ.. ಹೀಗೆ ಅನೇಕ ಮಾತುಗಳನ್ನು ನೀವ ಕೇಳಬಹುದು.
ನಿದ್ರೆ (Sleep) ನಮ್ಮ ಆರೋಗ್ಯ (Health) ಕ್ಕೆ ಬಹಳ ಒಳ್ಳೆಯದು. ಎರಡು ದಿನ ಸತತ ನಿದ್ರೆಗೆಟ್ಟರೆ ಆರೋಗ್ಯ ಆಳಾಗಲು ಶುರುವಾಗುತ್ತದೆ. ಇನ್ನು ಪ್ರತಿ ರಾತ್ರಿ (Night) ನಿದ್ರೆಬರದೆ ಇರೋರ ಸ್ಥಿತಿ ಹೇಗಿರಬೇಡ?. ನಿದ್ರೆಯ ಕೊರತೆಯಿಂದಾಗಿ ಅನೇಕ ರೀತಿಯ ಆರೋಗ್ಯ ಸಂಬಂಧಿತ ಸಮಸ್ಯೆಗಳು ಶುರುವಾಗುತ್ತವೆ. ನವದೆಹಲಿಯ ಏಮ್ಸ್ ವರದಿ ಪ್ರಕಾರ, ಭಾರತದಲ್ಲಿ ಸುಮಾರು 10 ಕೋಟಿ ಜನರು ನಿದ್ರಾಹೀನತೆಯಿಂದ ಬಳಲುತ್ತಿದ್ದಾರೆ. ಅವರಲ್ಲಿ ಅಬ್ಸ್ಟ್ರಕ್ಟಿವ್ ಸ್ಲೀಪ್ ಅಪ್ನಿಯ ಸಮಸ್ಯೆ ಕಂಡು ಬಂದಿದೆ ಎಂದು ವರದಿಯಲ್ಲಿ ಹೇಳಲಾಗಿದೆ. ಅಬ್ಸ್ಟ್ರಕ್ಟಿವ್ ಸ್ಲೀಪ್ ಅಪ್ನಿಯ ಅಂದ್ರೆ ನಿದ್ರೆಯಲ್ಲಿ ಉಸಿರಾಟ ಸರಿಯಾಗಿ ಆಗದೇ ಗೊರಕೆ ಬರುದ ಕಾಯಿಲೆ. ಇದರಿಂದಾಗಿ ನಿಮಗೆ ಸರಿಯಾಗಿ ನಿದ್ರೆ ಮಾಡಲು ಆಗೋದಿಲ್ಲ. ದೇಶದಲ್ಲಿ ಸುಮಾರು ಶೇಕಡಾ 11 ರಷ್ಟು ವಯಸ್ಕರು ಈ ಕಾಯಿಲೆಯಿಂದ ಬಳಲುತ್ತಿದ್ದಾರೆ ಅಂದ್ರೆ ನಿಮಗೆ ಅಚ್ಚರಿ ಆಗ್ಬಹುದು. ಕಳೆದ ಎರಡು ದಶಕಗಳಲ್ಲಿ ಈ ಬಗ್ಗೆ 6 ಸಂಶೋಧನೆ ನಡೆದಿದೆ. ಎಲ್ಲ ಸಂಶೋಧನೆಗಳ ಡೇಟಾ ಕಲೆಹಾಕಿ ಈ ಮಾಹಿತಿಯನ್ನು ನೀಡಲಾಗಿದೆ.
ಮಗುವಾದ್ಮೇಲೂ ಕುಗ್ಗಿಲ್ಲ ಆಲಿಯಾ ಬ್ಯೂಟಿ, ಫಿಗರ್ ಮೆಂಟೇನ್ ಮಾಡೋಕೆ ಏನ್ ತಿನ್ತಾರೆ?
ಏಮ್ಸ್ ವದರಿ ಪ್ರಕಾರ, ನಿದ್ರೆಯಲ್ಲಿ ಉಸಿರುಕಟ್ಟುವಿಕೆಯ ಈ ಕಾಯಿಲೆ ಮಹಿಳೆಯರಿಗಿಂತ ಪುರುಷರಲ್ಲಿ ಹೆಚ್ಚು ಕಂಡುಬರುತ್ತದೆ. ಇದು ಅವರ ಕೆಲಸದ ಮೇಲೂ ಪರಿಣಾಮ ಬೀರುತ್ತದೆ. ನಿದ್ರಾಹೀನತೆಯ ಈ ಸಮಸ್ಯೆಯಿಂದ ಬೊಜ್ಜು, ಮಧುಮೇಹ ಮತ್ತು ಹೃದಯ ಸಂಬಂಧಿ ಕಾಯಿಲೆ ಕೂಡ ಕಾಡಲಿದೆ. ಸಂಶೋಧನೆಯ ಪ್ರಕಾರ, ಭಾರತದಲ್ಲಿ 10 ಕೋಟಿ ಜನರು ನಿದ್ರಾಹೀನತೆಯಿಂದ ಬಳಲುತ್ತಿದ್ದಾರೆ. ಅವರಲ್ಲಿ 5 ಕೋಟಿ ಜನರು ಅಬ್ಸ್ಟ್ರಕ್ಟಿವ್ ಸ್ಲೀಪ್ ಅಪ್ನಿಯ ತೀವ್ರ ಲಕ್ಷಣ ಹೊಂದಿದ್ದಾರೆ. ಅಬ್ಸ್ಟ್ರಕ್ಟಿವ್ ಸ್ಲೀಪ್ ಅಪ್ನಿಯಾದಲ್ಲಿ ನಿದ್ರೆಯಲ್ಲಿ ಗೊರಕೆ ಬರುವ ಕಾರಣ ವ್ಯಕ್ತಿಯ ನಿದ್ರೆ ಪೂರ್ಣವಾಗುವುದಿಲ್ಲ. ಆತ ಬೆಳಿಗ್ಗೆ ನಿದ್ರೆ ಗುಂಗಿನಲ್ಲಿ ಇರುತ್ತಾನೆ. ಪಾರ್ಶ್ವವಾಯು, ಅಧಿಕ ರಕ್ತದೊತ್ತಡ ಮತ್ತು ಚಯಾಪಚಯ ಕಾಯಿಲೆಗಳ ಅಪಾಯವೂ ಆತನಿಗೆ ಕಾಡುತ್ತದೆ.
Mental Health : ಯುವಕರಲ್ಲಿ ಹೆಚ್ಚಾಗ್ತಿದೆ ಉದ್ಯೋಗ ಹುಡುಕಾಟದ ಖಿನ್ನತೆ
ಯಾರನ್ನು ಹೆಚ್ಚಾಗಿ ಕಾಡುತ್ತೆ ಈ ರೋಗ? : ವಯಸ್ಸಾದ ಜನರಿಗೆ ಅಬ್ಸ್ಟ್ರಕ್ಟಿವ್ ಸ್ಲೀಪ್ ಅಪ್ನಿಯ ಕಾಡುವುದು ಹೆಚ್ಚು. ಸ್ಥೂಲಕಾಯ ಹೊಂದಿರುವ ಜನರಿಗೆ ಕೂಡ ಅಬ್ಸ್ಟ್ರಕ್ಟಿವ್ ಸ್ಲೀಪ್ ಅಪ್ನಿಯಾ ಕಾಡುವುದು ಹೆಚ್ಚು ಎನ್ನುತ್ತದೆ ಸಂಶೋಧನೆ. ಅಬ್ಸ್ಟ್ರಕ್ಟಿವ್ ಸ್ಲೀಪ್ ಅಪ್ನಿಯಾ ಲಕ್ಷಣ ಕಾಣಿಸಿಕೊಳ್ತಿದ್ದಂತೆ ಅದನ್ನು ನಿರ್ಲಕ್ಷ್ಯ ಮಾಡಬಾರದು. ತಕ್ಷಣ ವೈದ್ಯರನ್ನು ಭೇಟಿ ಮಾಡ್ಬೇಕು.
ಅಬ್ಸ್ಟ್ರಕ್ಟಿವ್ ಸ್ಲೀಪ್ ಅಪ್ನಿಯಾ ಲಕ್ಷಣ : ರಾತ್ರಿಯಲ್ಲಿ ಜೋರಾಗಿ ಗೊರಕೆ ಹೊಡೆಯುವುದು ಇದರ ಮುಖ್ಯ ಲಕ್ಷಣವಾಗಿದೆ. ಇದಲ್ಲದೆ ನಿದ್ರೆಯ ಸಮಯದಲ್ಲಿ ಉಸಿರಾಟದ ತೊಂದರೆ ಇವರನ್ನು ಕಾಡುತ್ತದೆ.
ನಿದ್ರೆಯಲ್ಲಿ ಉಸಿರುಕಟ್ಟುವಿಕೆಗೆ ಬಗ್ಗೆ ತುಂಬಾ ಭಯಪಡುವ ಅಗತ್ಯವಿಲ್ಲ. ಜೀವನಶೈಲಿಯಲ್ಲಿ ಕೆಲವು ಬದಲಾವಣೆ ಸ್ಲೀಪ್ ಅಪ್ನಿಯದಲ್ಲಿ ಏರುಪೇರಾಗಲು ಕಾರಣವಾಗುತ್ತದೆ. ನಿದ್ದೆ ಮಾಡುವಾಗ ನಿಮ್ಮ ಮೇಲ್ಭಾಗದ ಶ್ವಾಸನಾಳದ ಸ್ನಾಯುಗಳು ವಿಶ್ರಾಂತಿ ಪಡೆದಾಗ ಸ್ಲೀಪ್ ಅಪ್ನಿಯ ಸಂಭವಿಸುತ್ತದೆ. ನೀವು ಎಸ್ಪಿಎಪಿ ತೆಗೆದುಕೊಳ್ತಿದ್ದರೆ ಧನಾತ್ಮಕ ಪರಿಣಾಮವನ್ನು ಮೂರು ತಿಂಗಳಲ್ಲಿ ನೋಡಬಹುದು. ಪೂರ್ಣ ಚೇತರಿಕೆಗೆ ವರ್ಷಗಳು ಹಿಡಿಯುತ್ತವೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.