ದೇಜಾ ವೂ: ಹೊಸದೊಂದು ಘಟನೆ ಆಗಲೇ ನಡೆದಂತೆ ಅನಿಸದರೆ ಏನರ್ಥ?

By Suvarna News  |  First Published Nov 7, 2023, 2:20 PM IST

ಮನುಷ್ಯನ ಮೆದುಳು ಅಗಾಧ ಶಕ್ತಿಯನ್ನು ಹೊಂದಿದೆ. ಎಷ್ಟೂ ವಿಷ್ಯಗಳನ್ನು ಸಂಗ್ರಹಿಸಿಟ್ಟುಕೊಳ್ಳುವ ಸಾಮರ್ಥ್ಯ ಅದಕ್ಕಿದೆ. ಕೆಲವೊಮ್ಮೆ ಅದನ್ನು ಅರ್ಥಮಾಡಿಕೊಳ್ಳೋದೆ ಕಷ್ಟ. ಅದ್ರಲ್ಲಿ ಈ ವಿಚಿತ್ರ ಭಾವನೆಯೊಂದು ಸೇರಿದೆ . ಅದರ ಸಂಪೂರ್ಣ ಮಾಹಿತಿ ಇಲ್ಲಿದೆ


ಇದು ಹಿಂಗೆ ಆಗುತ್ತೆ ಅಂತಾ ನನಗೆ ಗೊತ್ತಿತ್ತು.. ನಾನು ಇದನ್ನು ಎಲ್ಲೋ ನೋಡಿದಂತೆ ಇದೆ.. ಈ ಘಟನೆ ಮೊದಲೇ ಆಗಿತ್ತು ಅಂತಾ ನನಗೆ ಅನ್ನಿಸ್ತಾ ಇದೆ…ಈ ಎಲ್ಲ ಮಾತುಗಳನ್ನು ನೀವು ಆಡಿರಬಹುದು ಇಲ್ಲ ಯಾರೋ ಆಡಿದ್ದನ್ನು ಕೇಳಿರಬಹುದು. ಅನೇಕರು ಈ ವಿಚಿತ್ರ ಭಾವನೆಯನ್ನು ಅನುಭವಿಸ್ತಾರೆ. ಈ ಘಟನೆ ನನ್ನ ಕಣ್ಣಿಗೆ ಕಟ್ಟಿದಂಗೆ ಇದೆ. ಮೊದಲೇ ಇದು ನಡೆದಿದೆ ಅನ್ನಿಸ್ತಾ ಇದೆ ಅಂತಾ ಕೆಲ ದಿನಗಳ ಹಿಂದೆ ಸ್ನೇಹಿತರೊಬ್ಬರು ಹೇಳಿದ್ರು. ಅದೆಲ್ಲ ಹೆಂಗೆ ಸಾಧ್ಯ ಅಂತಾ ನಾನು ತಮಾಷೆ ಮಾಡಿದ್ದೆ. ಆದ್ರೆ ಅದು ಸತ್ಯ ಅನ್ನೋದು ನನ್ನ ಅನುಭವಕ್ಕೆ ಬಂದಾಗ ಗೊತ್ತಾಯ್ತು. ಅದ್ರ ಬಗ್ಗೆ ಒಂದಿಷ್ಟು ಮಾಹಿತಿ ಇಲ್ಲಿದೆ.  

ಎಲ್ಲ ಪ್ರಾಣಿಗಳಲ್ಲು ಕೂಡ ಕಣ್ಣಿಗೆ ಕಾಣಿಸಿದ ಯಾವುದೋ ಒಂದು ಜ್ಞಾನ (Knowledge)  ಅಡಗಿರುತ್ತದೆ. ಕೆಲವರಿಗೆ ಪ್ರಸ್ತುತ ಅವರ ಬದುಕಿನಲ್ಲಿ ನಡೆಯುತ್ತಿರುವ ಘಟನೆಗಳು ಹಿಂದೆಯೇ ನನ್ನ ಜೀವನದಲ್ಲಿ ನಡೆದಿತ್ತು ಎನಿಸುತ್ತದೆ. ಯಾರಾದರೂ ಹೊಸಬರನ್ನು ನೋಡಿದಾಗ ಇವರನ್ನು ನಾನು ಮೊದಲೇ ನೋಡಿದ್ದೆ, ಭೇಟಿಯಾಗಿದ್ದೆ ಎನಿಸುವುದು. ಯಾವುದೋ ಹೊಸ ಸ್ಥಳಕ್ಕೆ ಭೇಟಿ ನೀಡಿದಾಗ ಈ ಮೊದಲೇ ನಾನು ಇಲ್ಲಿಗೆ ಬಂದಿದ್ದೆ ಎನ್ನುವ ಭಾವನೆ ಬರುತ್ತದೆ. ಈ ತರಹದ ಫೀಲಿಂಗ್ಸ್ ಅನ್ನು ದೇಜಾ ವೂ (Deja Vu) ಎನ್ನಲಾಗುತ್ತದೆ.

Latest Videos

undefined

ಬೆಳಗ್ಗೆ ಬೇಗ ಏಳಬೇಕು ಎಚ್ಚವಾಗುತ್ತೋ, ಇಲ್ಲವೋ ಎಂಬ ಆತಂಕದಲ್ಲಿ ನಿದ್ರೆಯೇ ಬಾರದಿದ್ದರೆ?

ದೇಜಾ ವೂ ಎಂದರೇನು?  : ದೇಜಾ ವೂ ಎನ್ನುವುದು ಕೆಲವೇ ಸೆಂಕೆಂಡ್ ಗಳು ಇರುವಂತಹ ಒಂದು ಫೀಲಿಂಗ್ಸ್ ಆಗಿದೆ. ಇದೊಂದು ಫ್ರಾನ್ಸಿಸ್ ಶಬ್ದವಾಗಿದ್ದು ಇದರ ಅರ್ಥ “ಈಗಾಗಲೇ ನೋಡಿದ್ದೇನೆ” ಎಂದಾಗಿದೆ.  ಸೈಕಾಲಜಿಸ್ಟ್ ಡಾ. ಸನಮ್ ಹಫೀಜ್ ಅವರು ಈ ಬಗ್ಗೆ ಮಾಹಿತಿ ನೀಡಿದ್ದಾರೆ. ದೇಜಾ ವೂ ಒಂದು ವಿಶೇಷ ರೀತಿಯ ಭಾವನೆಯಾಗಿದ್ದು, ಇದರಲ್ಲಿ ಒಬ್ಬ ವ್ಯಕ್ತಿಗೆ ವರ್ತಮಾನದಲ್ಲಿ ಆಗುತ್ತಿರುವ ಘಟನೆ ಮೊದಲೇ ತನ್ನ ಜೀವನದಲ್ಲಿ ನಡೆದುಹೋಗಿದೆ ಎಂದು ಭಾವಿಸ್ತಾರೆ ಎಂದಿದ್ದಾರೆ.

ರಾತ್ರಿ ಕಾಲು ಊದಿಕೊಂಡು, ಬೆಳಗ್ಗೆ ಸರಿ ಹೋಗಿದೆಯಂದ್ರೆ ಅಲರ್ಟ್ ಆಗಿ, ಕಿಡ್ನಿ ಚೆಕ್ ಮಾಡಿಸಿಕೊಳ್ಳಿ!

ದೇಜಾ ವೂ ಏಕಾಗುತ್ತದೆ? : ದೇಜಾ ವೂ ಗೆ ಸರಿಯಾದ ಕಾರಣ ಏನು ಎನ್ನುವುದು ಇದುವರೆಗೆ ಯಾರಿಗೂ ತಿಳಿಯಲು ಸಾಧ್ಯವಾಗಿಲ್ಲ. ಇದಕ್ಕೆ ಕಾರಣ ಇನ್ನೂ ರಹಸ್ಯಮಯವಾಗಿಯೇ ಇದೆ. ಕೆಲವರು ಇದು ಅವರವರ ಮೆದುಳಿನ ನೆನಪಿನ ಶಕ್ತಿಯನ್ನು ಅವಲಂಬಿಸಿದೆ ಎನ್ನುತ್ತಾರೆ. ಕೆಲವರ ಮೆದುಳು ಬಹಳ ಹಿಂದೆ ನಡೆದ ಘಟನೆಗಳನ್ನು ಕೂಡ ನೆನಪಿನಲ್ಲಿ ಇಟ್ಟುಕೊಂಡಿರುತ್ತದೆ. ಕೆಲವೊಮ್ಮೆ ಚಿಕ್ಕ ಮಕ್ಕಳು ಕೂಡ ಹಿಂದಿನ ಜನ್ಮದ ಘಟನೆಗಳನ್ನು ಹೇಳುವುದುನ್ನು ನಾವು ಸಾಮಾಜಿಕ ಜಾಲತಾಣಗಳಲ್ಲಿ ನೋಡುತ್ತೇವೆ. ದೇಜಾ ವೂ ಫೀಲಿಂಗ್ಸ್ ಸಾಮಾನ್ಯವಾಗಿ ಎಲ್ಲರಲ್ಲೂ ಇರುತ್ತೆ. ಪ್ರತಿಶತ 60-70 ರಷ್ಟು ಆರೋಗ್ಯವಂತ ವ್ಯಕ್ತಿಗಳು ತಮ್ಮ ಜೀವನದಲ್ಲಿ ಯಾವುದಾದರೂ ಒಂದು ರೂಪದಲ್ಲಿ ದೇಜಾ ವೂ ಭಾವನೆಯನ್ನು ಅನುಭವಿಸಿಯೇ ಅನುಭವಿಸುತ್ತಾರೆ ಎಂದು ಅಧ್ಯಯನಕಾರರು ಹೇಳುತ್ತಾರೆ. 

ದೇಜಾ ವೂ ಯಾವುದಾದರೂ ರೋಗಕ್ಕೆ ಸಂಬಂಧಿಸಿದೆಯಾ? : ದೇಜಾ ಯಾವುದೇ ಒಂದು ವಯಸ್ಸಿನವರಿಗೆ ಉಂಟಾಗುತ್ತೆ ಎಂದೇನಿಲ್ಲ. ಇದು ಚಿಕ್ಕ ಮಕ್ಕಳಿಗೆ, ವಯಸ್ಸಾದವರಿಗೆ ಹೀಗೆ ಎಲ್ಲಾ ವಯೋಮಾನದವರಿಗೂ ಉಂಟಾಗಬಹುದು. ಎಲ್ಲರಿಗೂ ಒಂದಲ್ಲ ಒಂದು ಬಾರಿ ಈ ಫೀಲಿಂಗ್ಸ್ ಉಂಟಾಗುತ್ತದೆ. ಇದು ಯಾವುದೇ ರೀತಿಯ ರೋಗ ಅಥವಾ ರೋಗದ ಲಕ್ಷಣವಲ್ಲ. ಹೆಲ್ತ್ ಡಾಟ್ ಕಾಂ ವರದಿಯ ಪ್ರಕಾರ 15 ರಿಂದ 25 ವರ್ಷದವರಿಗೆ ದೇಜಾ ವೂ ಹೆಚ್ಚು ಅನುಭವವಾಗುತ್ತದೆ. ಇವರ ಹೊರತಾಗಿ ಹೆಚ್ಚು ಓದಿದವರಲ್ಲಿ ಅಥವಾ ಜಗತ್ತಿನ ಮೂಲೆ ಮೂಲೆಗಳನ್ನು ಹೆಚ್ಚು ಬಾರಿ ತಿರುಗಿದವರಲ್ಲಿ ಕೂಡ ದೇಜಾ ವೂ ಫೀಲಿಂಗ್ಸ್ ಬರುತ್ತದೆ.

click me!