ಟಾಲಿವುಡ್ ನಟಿ ಸಮಂತಾ ರುತ್ ಪ್ರಭು ಮಯೋಸೈಟಿಸ್ ಕಾಯಿಲೆಗೆ ಕ್ರಯೋಥೆರಪಿ ಚಿಕಿತ್ಸೆ ಪಡೆಯುತ್ತಿದ್ದು, ಅದರ ವಿಡಿಯೋ ಶೇರ್ ಮಾಡಿದ್ದಾರೆ.
ಟಾಲಿವುಡ್ ನಟಿ ಸಮಂತಾ ರುತ್ ಪ್ರಭು (Samantha) ಸದ್ಯ ‘ಖುಷಿ’ ಸಿನಿಮಾದ ಖುಷಿಯಲ್ಲಿದ್ದಾರೆ. 36 ವರ್ಷದ ನಟಿಯ ಖುಷಿ ಚಿತ್ರ ಸಕತ್ ಕಲೆಕ್ಷನ್ ಮಾಡಿದೆ. ಅನಾರೋಗ್ಯದ ಹಿನ್ನಲೆ ಸಿನಿಮಾದಿಂದ ಬ್ರೇಕ್ ಪಡೆದುಕೊಂಡಿರುವ ಸಮಂತಾ ಈಗ ಪಾಲಿಟಿಕ್ಸ್‌ಗೆ ಎಂಟ್ರಿ ಕೊಡುವ ವಿಚಾರವಾಗಿ ಸಖತ್ ಸುದ್ದಿಯಲ್ಲಿದ್ದಾರೆ. ಕೆಲ ತಿಂಗಳಿನಿಂದ ಮಯೋಸಿಟಿಸ್ ಎಂಬ ಸ್ನಾಯು ಸಂಬಂಧಿ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿರುವ ಸಮಂತಾ ಅಮೆರಿಕದಲ್ಲಿ ಚಿಕಿತ್ಸೆ ಪಡೆಯಲಿದ್ದು ಆರು ತಿಂಗಳಿನಿಂದ ಒಂದು ವರ್ಷದವರೆಗೆ ಚಿತ್ರರಂಗದಿಂದ ಬ್ರೇಕ್ ತೆಗೆದುಕೊಳ್ಳಲಿದ್ದಾರೆ ಎನ್ನಲಾಗಿತ್ತು. ಅದಕ್ಕೆ ಪೂರಕ ಎಂಬಂತೆ ಖುಷಿ ಸಿನಿಮಾ ಹಾಗೂ ದಿ ಸಿಟಡೆಲ್ ವೆಬ್ಸರಣಿ ಚಿತ್ರೀಕರಣ ಪೂರ್ಣಗೊಳಿಸಿದ ಸಮಂತಾ, ಹೊಸ ಪ್ರಾಜೆಕ್ಟ್ಗಳನ್ನು ಒಪ್ಪಿಕೊಂಡಿರಲಿಲ್ಲ. ಇದರ ನಡುವೆಯೇ ಹೊಸ ವಿಚಾರವೊಂದು ಮುನ್ನೆಲೆಗೆ ಬಂದಿದೆ. ಅದೇನೆಂದರೆ, ಸಮಂತಾ ರಾಜಕೀಯಕ್ಕೆ ಎಂಟ್ರಿ ಕೊಡುವತ್ತಿದ್ದಾರೆ ಎನ್ನುವುದು. ಬಿ-ಟೌನ್ನಲ್ಲಿ ಈ ಬಗ್ಗೆ ಸಕತ್ ಸುದ್ದಿಯಾಗುತ್ತಿದೆ. ಮಯೋಸಿಟಿಸ್ ಎಂಬ ಕಾಯಿಲೆಯಿಂದ ಬಳಲುತ್ತಿರುವ ಸಮಂತಾ ಸದ್ಯ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದರ ಜೊತೆಗೆ ರಾಜಕೀಯಕ್ಕೆ (Politics) ಎಂಟ್ರಿ ಕೊಡುವ ಬಗ್ಗೆ ಸಮಂತಾ ಯೋಚಿಸಿದ್ದಾರೆ ಎನ್ನಲಾಗುತ್ತಿದೆ.
ಇದರ ನಡುವೆಯೇ ನಟಿ ಈಗ ಮಯೋಸೈಟಿಸ್ ಕಾಯಿಲೆಯಿಂದ ಗುಣವಾಗಲು ಪಡೆಯುತ್ತಿರುವ ಚಿಕಿತ್ಸೆಯ ವಿಡಿಯೋ ಒಂದನ್ನು ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿದ್ದಾರೆ. ನಟಿ ಇದಾಗಲೇ ಹಲವು ಬಗೆಯ ಚಿಕಿತ್ಸೆ ಪಡೆಯುತ್ತಿದ್ದು, ಅದರಲ್ಲಿ ಒಂದು ಕ್ರಯೋಥೆರಪಿ. ಈ ಚಿಕಿತ್ಸೆಯ ವಿಡಿಯೋ ವೈರಲ್ ಆಗುತ್ತಿದೆ. ಸೂಕ್ತ ವಿಧಾನದ ಮೂಲಕ ಒಂದು ನಿರ್ದಿಷ್ಟ ಸಮಯದವರೆಗೆ ದೇಹವನ್ನು ಅತಿಯಾದ ಶೀತದ ವಾತಾವರಣಕ್ಕೆ ಒಡ್ಡುವ ಪ್ರಕ್ರಿಯೆಯೇ ಕ್ರಯೋಥೆರಪಿ. ಇದರಿಂದ ಹಲವು ಅನುಕೂಲತೆ ಇದೆ. ಇದರಿಂದ ರಕ್ತ ಸಂಚಾರ ಸರಾಗವಾಗುತ್ತದೆ. ದೇಹದ ಸಹಿಷ್ಠು ಶಕ್ತಿ ಹೆಚ್ಚುತ್ತದೆ. ಅಗತ್ಯ ಇರುವ ಹಾರ್ಮೋನ್ಗಳ ವೃದ್ಧಿಗೂ ಇದು ಸಹಕಾರಿ ಆಗಿದೆ. ಚರ್ಮದಲ್ಲಿ ಇರುವ ಡೆಡ್ ಸೆಲ್ಗಳನ್ನು ತೆಗೆದು ಹಾಕಲು ಕೂಡ ಈ ಚಿಕಿತ್ಸಾ ವಿಧಾನವನ್ನು ಬಳಸುತ್ತಾರೆ. ‘ರಿಕವರಿ’ ಎಂಬ ಕ್ಯಾಪ್ಷನ್ನೊಂದಿಗೆ ಸಮಂತಾ ರುತ್ ಪ್ರಭು ಅವರು ಈ ಫೋಟೋವನ್ನು ಹಂಚಿಕೊಂಡಿದ್ದಾರೆ.
ಮುಂದಿನ ಜನ್ಮದಲ್ಲಾದ್ರೂ ನಾಯಿ ಮಾಡಪ್ಪಾ ಅಂತಿದ್ದಾರೆ ಕೃತಿ ಫ್ಯಾನ್ಸ್! ಕಾರಣ ಬೇಕಿದ್ರೆ ಈ ವಿಡಿಯೋ ನೋಡಿ...
ಶೀಘ್ರದಲ್ಲಿ ಗುಣಮುಖರಾಗಿ ಬನ್ನಿ ಫ್ಯಾನ್ಸ್ ಹಾರೈಸುತ್ತಿದ್ದಾರೆ. ಅದೇ ಇನ್ನೊಂದೆಡೆ, ಇವರ ಲವ್ ಮ್ಯಾಟರ್ ಕೂಡ ಸಾಕಷ್ಟು ಸದ್ದು ಮಾಡುತ್ತಿದೆ. ಸದ್ಯ ಸಮಂತಾ ಮತ್ತು ವಿಜಯ್ ದೇವರಕೊಂಡ ಅವರ ರೊಮ್ಯಾನ್ಸ್ ವಿಷಯದ್ದೇ ಮಾತು. ಇವರಿಬ್ಬರ ನಡುವೆ ಏನೋ ನಡೆಯುತ್ತಿದೆ ಎನ್ನುವ ಗಾಳಿ ಸುದ್ದಿ ಕೆಲ ತಿಂಗಳಿನಿಂದ ಹರಿದಾಡುತ್ತಿರುವ ನಡುವೆಯೇ ಈ ರೊಮ್ಯಾನ್ಸ್ ವಿಡಿಯೋ ವೈರಲ್ ಆಗಿತ್ತು. ಅದಕ್ಕೂ ಮುನ್ನ ಖುಷಿ ಸಿನಿಮಾದ ಟ್ರೈಲರ್ಗೂ ವ್ಯಾಪಕ ಮೆಚ್ಚುಗೆ ವ್ಯಕ್ತವಾಗುತ್ತಿರುವ ಬೆನ್ನಲ್ಲೇ, ಖುಷಿ (Khushi) ಸಿನಿಮಾದ ನಟಿ ಸಮಂತಾ ರುತ್ ಪ್ರಭು ತಮ್ಮ ಕ್ರಷ್ ಎಂದು ಬಹಿರಂಗವಾಗಿ ಹೇಳಿಕೊಂಡಿದ್ದರು ವಿಜಯ್. ಇಲ್ಲಿಯವರೆಗೆ ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಡೇಟಿಂಗ್ ಮಾಡುತ್ತಿದ್ದಾರೆ ಎನ್ನಲಾಗಿತ್ತು. ಆದರೆ ಈಗ ಅವರ ಹೆಸರು ಸಮಂತಾ ಜೊತೆ ಥಳಕು ಹಾಕಿಕೊಂಡಿದೆ.
ಇದರ ಜೊತೆಗೆ, ಸಮಂತಾ ತೆಲಂಗಾಣದ ಜನರು ಮತ್ತು ರೈತರಿಗೆ ಬೆಂಬಲವಾಗಿದ್ದಾರೆ. ಇದರೊಂದಿಗೆ ವರದಿಗಳಲ್ಲಿ ಸಮಂತಾ, ಕೆ. ಚಂದ್ರಶೇಖರ್ ರಾವ್ ಅವರ ಭಾರತ್ ರಾಷ್ಟ್ರ ಸಮಿತಿ (BRS) ಭಾಗವಾಗಬಹುದು ಎನ್ನಲಾಗುತ್ತಿದೆ. ತೆಲಂಗಾಣದ (Telangana) ಭಾರತ್ ರಾಷ್ಟ್ರ ಸಮಿತಿ ಪಕ್ಷದ ನಾಯಕರು ಸಮಂತಾರನ್ನ ಭೇಟಿಯಾಗಿ ಈ ಬಗ್ಗೆ ಮಾತುಕತೆ ನಡೆಸಿದ್ದಾರೆ ಎಂದೂ ವರದಿಯಾಗಿದೆ. ತೆಲಂಗಾಣದ ಕೈಮಗ್ಗ ನೇಕಾರರು ನೇಯ್ದ ಬಟ್ಟೆಗಳ ರಾಯಭಾರಿಯಾಗಿರುವ ಸಮಂತಾ, ಆಗಾಗ ಕೃಷಿಕರ ಸಮಸ್ಯೆಗಳ ಕುರಿತೂ ಮಾತನಾಡಿದ್ದಾರೆ. ಜತೆಗೆ ಭಾರತ ರಾಷ್ಟ್ರ ಸಮಿತಿ (ಬಿಆರ್ಎಸ್) ನೇತೃತ್ವದ ತೆಲಂಗಾಣ ಸರ್ಕಾರದ ಹಲವು ಕಾರ್ಯಕ್ರಮಗಳಲ್ಲೂ ಸಮಂತಾ ಭಾಗಿಯಾಗಿದ್ದು, ಬ್ರೇಕ್ ನಂತರ ಅದೇ ಪಕ್ಷಕ್ಕೆ ಸೇರ್ಪಡೆಯಾಗಲಿದ್ದಾರೆ ಎಂಬ ಸುದ್ದಿ ಸದ್ಯ ಜಾಲತಾಣದಲ್ಲಿ ಹರಿದಾಡುತ್ತಿದೆ. ಈ ಬಗ್ಗೆ ಸಮಂತಾ ಅಧಿಕೃತವಾಗಿ ಏನೂ ಹೇಳಿಲ್ಲ.
ರಾಖಿ ಪತಿ ಆದಿಲ್ ಜೊತೆ ಶೆರ್ಲಿನ್ ಚೋಪ್ರಾ ಮತ್ತೆ ರೊಮ್ಯಾನ್ಸ್: ವಿಡಿಯೋ ನೋಡಿ ದಂಗಾದ ಫ್ಯಾನ್ಸ್!
'Recovery 🤍'
~ 🫶 pic.twitter.com/StYVXq4YuC