ಮೊದಲ ಮಗುವಿನ ನಿರೀಕ್ಷೆಯಲ್ಲಿರುವ ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಗರ್ಭಿಣಿಯರು ಯಾವ ರೀತಿ ಸ್ವ-ಕಾಳಜಿಯನ್ನು ನೋಡಿಕೊಳ್ಳಬೇಕೆಂದು ಬರೆದುಕೊಂಡಿದ್ದಾರೆ.
ಮೊದಲ ಮಗುವಿನ ನಿರೀಕ್ಷೆಯಲ್ಲಿರುವ ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಗರ್ಭಿಣಿಯಾಗಿದ್ದರೂ ಸ್ವಯಂ ಕಾಳಜಿಯ ಬಗ್ಗೆ ಮರೆತಿಲ್ಲ. ತನ್ನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಈ ಬಗ್ಗೆ ಫೋಟೋವೊಂದನ್ನು ಶೇರ್ ಮಾಡಿಕೊಂಡಿರುವ ನಟಿ ಇದು ಸ್ವಯಂ ಕಾಳಜಿಯ ತಿಂಗಳು ಎಂದು ಬರೆದುಕೊಂಡಿದ್ದಾರೆ. ಮತ್ತು ಯಾಕೆ ಇದನ್ನು ಗರ್ಭಿಣಿಯಾದವರು ಮಾಡಬೇಕು ಎಂದು ಹೇಳಿದ್ದು, ವಿಪರೀತ ಕರಣಿ ಯೋಗ ಭಂಗಿಯಲ್ಲಿ ಫೋಟೋ ಹಂಚಿಕೊಂಡಿದ್ದಾರೆ.
ನೀವು ಪ್ರತಿದಿನ ಸ್ವ-ಆರೈಕೆಯ ಸರಳ ಕ್ರಿಯೆಗಳನ್ನು ಅಭ್ಯಾಸ ಮಾಡುವಾಗ 'ಸ್ವ-ಆರೈಕೆ ಮಾಸ'ವನ್ನು ಏಕೆ ಆಚರಿಸುತ್ತೀರಿ? ನಾನು ಉತ್ತಮ ವ್ಯಾಯಾಮವನ್ನು ಇಷ್ಟಪಡುತ್ತೇನೆ ಎಂಬುದು ಸೀಕ್ರೆಟ್ ಆಗಿ ಉಳಿದಿಲ್ಲ. ಆದರೆ ನಾನು 'ಚಂದವಾಗಿ ಕಾಣಲು' ಇದನ್ನು ಮಾಡುತ್ತಿಲ್ಲ ವಾಸ್ತವವಾಗಿ ನನಗೆ ಫಿಟ್ ಆಗಿರುವ ಫೀಲ್ ನೀಡುತ್ತದೆ. ನನಗೆ ನೆನಪಿರುವವರೆಗೂ ವ್ಯಾಯಾಮವು ನನ್ನ ಜೀವನಶೈಲಿಯ ಭಾಗವಾಗಿರಲಿದೆ.
ದೀಪಿಕಾ ಪಡುಕೋಣೆ ಗರ್ಭಿಣಿಯಾಗಿರುವ ಬಗ್ಗೆ ಐವಿಎಫ್ ತಜ್ಞೆ ಅನುಮಾನ, ಬೇಬಿ ಬಂಪ್ ಶೇಪ್ ಬಗ್ಗೆ ಕಮೆಂಟ್!
ನಾನು ವರ್ಕೌಟ್‌ಗೆ ಹೊಂದಿಕೊಳ್ಳಲು ಸಾಧ್ಯವಾಗದಿದ್ದಾಗ, ಈ ಸರಳ 5 ನಿಮಿಷದ ದಿನಚರಿಯನ್ನು ಅಭ್ಯಾಸ ಮಾಡುತ್ತೇನೆ. ತಾಯಿಯಾಗಲಿರುವವರು ಯಾವಾಗಲೂ ಸ್ವ-ಆರೈಕೆ ಬಗ್ಗೆ ಹೆಚ್ಚು ತಿಳಿದುಕೊಂಡಿರಬೇಕು ಎಂದು ಮಾಹಿತಿಯನ್ನು ಹಂಚಿಕೊಂಡಿದ್ದಾರೆ. ಜೊತೆಗೆ ನನ್ನೊಂದಿಗೆ ಜಾಯಿನ್ ಆಗಿ ಎಂದು ಕೇಳಿಕೊಂಡಿದ್ದಾರೆ.
ದಿನದ ಐದು ನಿಮಿಷವನ್ನು ನಿಮ್ಮ ಸ್ವ-ಆರೈಕೆಗೆ ಮೀಸಲಿಡಿ ಎಂದು ವಿಪರೀತ ಕರಣಿ ಯೋಗದ ಮಹತ್ವವನ್ನು ಕೂಡ ತಿಳಿಸಿದ್ದಾರೆ. ಈ ಯೋಗಾಸನವು ಗೋಡೆಯ ವಿರುದ್ಧ ನಿಮ್ಮ ಕಾಲುಗಳನ್ನು ಮೇಲಕ್ಕೆತ್ತಿ ಮಲಗುವುದಾಗಿದೆ. ಇದು ದೇಹಕ್ಕೆ ಚೈತನ್ಯವನ್ನು ನೀಡುತ್ತದೆ. ನರಮಂಡಲವನ್ನು ಶಾಂತಗೊಳಿಸುತ್ತದೆ. ಇಮ್ಯೂನಿಟಿ ಶಕ್ತಿಯನ್ನು ಹೆಚ್ಚಿಸುತ್ತದೆ. ಒತ್ತಡದಿಂದ ಹೊರಬರುವಂತೆ ಮಾಡುತ್ತದೆ.
2024ರಲ್ಲಿ ಪ್ರೆಗ್ನೆನ್ಸಿ ಅನೌನ್ಸ್ ಮಾಡಿದ ಕನ್ನಡ ನಟಿಯರ ಸಾಲಿಗೆ ಹರ್ಷಿಕಾ ಸೇರ್ಪಡೆ, ಯಾರೆಲ್ಲ ಇದ್ದಾರೆ?
ತಾಯಂದಿರಾಗುತ್ತಿರುವವರು ಕುಶನ್, ಅಥವಾ ದಿಂಬುಗಳ ಸಹಾಯದಿಂದ ಈ ಯೋಗ ಭಂಗಿಯನ್ನು ಮಾಡಬಹುದು. ಈ ವ್ಯಾಯಾಮವು ಸ್ನಾಯುಗಳು ಮತ್ತು ಕೀಲುಗಳಲ್ಲಿನ ನೋವನ್ನು ಕಡಿಮೆ ಮಾಡುತ್ತದೆ. ಗರ್ಭಿಣಿಯರು ದಿಂಬಿನ ಸಹಾಯದ ಮೂಲಕ ಮಾಡುವುದು ಉತ್ತಮವಾಗಿದೆ. ಗರ್ಭಿಣಿ ತನ್ನ ಕಾಲನ್ನು ಎತ್ತಿದಾಗ ಕಾಲುಗಳಲ್ಲಿ ಊತಗಳಿದ್ದರೆ ಕಡಿಮೆ ಮಾಡುತ್ತದೆ. ಈ ಯೋಗ ಭಂಗಿಯನ್ನು ಯಾರು ಮಾಡಬಾರದು ಎಂದು ಕೂಡ ಹೇಳಿದ್ದಾರೆ ಗ್ಲುಕೋಮಾ ಮತ್ತು ಅಧಿಕ ರಕ್ತದೊತ್ತಡ ಹೊಂದಿರುವ ವ್ಯಕ್ತಿಗಳು ಈ ಯೋಗ ಭಂಗಿಯನ್ನು ಮಾಡುವುದು ಒಳಿತಲ್ಲ. ವೈದ್ಯರ ಸಲಹೆ ಪಡೆದೇ ಮಾಡಬೇಕು ಎಂದಿದ್ದಾರೆ.