
Bread Omeletter for Breakfast: ಪ್ರತಿದಿನ ಬ್ರೆಡ್–ಆಮ್ಲೆಟ್ Breakfast ತಿನ್ನುವುದು ಆರೋಗ್ಯಕರವೇ? ಯಾವ ಬ್ರೆಡ್ ಉತ್ತಮ, ತೂಕ ಹೆಚ್ಚುತ್ತದೆಯೇ, ಎಷ್ಟು ಎಣ್ಣೆ ಬಳಸಬೇಕು ಎಂಬ ಸಂಪೂರ್ಣ ಮಾಹಿತಿ ಇಲ್ಲಿ ಓದಿ.
ಬಹುಜನರಿಗೆ ಬ್ರೆಡ್–ಆಮ್ಲೆಟ್ ಅಂದರೆ 'ಫಿಕ್ಸ್' ಬ್ರೇಕ್‌ಫಾಸ್ಟ್. ತಯಾರಿಸಲು ಸುಲಭ, ಸಮಯ ಕಡಿಮೆ, ಜೊತೆಗೆ ಪೌಷ್ಟಿಕತೆಯೂ ಇದೆ. ಬ್ರೆಡ್ ಕರಂ ಕುರಂ ಮತ್ತು ಮೊಟ್ಟೆ ಸ್ಮೂತ್ ಟೆಕ್ಸ್ಚರ್ ಒಟ್ಟಿಗೆ ಸೇರಿದಾಗ ತಿನ್ನಲು ರುಚಿಯಾಗುತ್ತದೆ. ಆದರೆ ಇದೇ ಆಹಾರವನ್ನು ಪ್ರತಿದಿನ ತಿಂದ್ರೆ ದೇಹದ ಮೇಲೆ ಪಾಸಿಟಿವ್ ಎಫೆಕ್ಟ್ ಆಗುತ್ತೋ, ನೆಗಟಿವ್ ಆಗುತ್ತೋ?
Nutracy Lifestyle ಸಂಸ್ಥೆಯ ಸ್ಥಾಪಕಿ ಮತ್ತು CEO, ನ್ಯೂಟ್ರಿಷನಿಸ್ಟ್ ಡಾ. ರೋಹಿಣಿ ಪಾಟೀಲ್ ಪ್ರಕಾರ 'ಸರಿಯಾದ ಪದಾರ್ಥಗಳು ಮತ್ತು ಪ್ರಮಾಣವನ್ನು ಗಮನದಲ್ಲಿಟ್ಟುಕೊಂಡರೆ, ಪ್ರತಿದಿನ ಬ್ರೆಡ್–ಆಮ್ಲೆಟ್ ತಿನ್ನುವುದು ದೇಹಕ್ಕೊಳಿತು'.
ಮೊಟ್ಟೆ ಪೌಷ್ಟಿಕಾಂಶಗಳ ಪವರ್‌ಹೌಸ್. ಇದರಲ್ಲಿ ಉನ್ನತ ಮಟ್ಟದ ಪ್ರೋಟೀನ್ ವಿಟಮಿನ್ B, ಕೊಲಿನ್, ಅಗತ್ಯ ಅಮಿನೋ ಆಸಿಡ್‌ಗಳೆಲ್ಲವೂ ಸ್ನಾಯು ಗಟ್ಟಿಗೊಳಿಸಲು, ಜೀರ್ಣ ಕ್ರಿಯೆ ಹೆಚ್ಚಿಸಲು ಮತ್ತು ಮೆದುಳಿನ ಕಾರ್ಯಕ್ಷಮತೆಗೆ ಸಹಕರಿಸುತ್ತದೆ. ಆದರೆ ಬ್ರೆಡ್–ಆಮ್ಲೆಟ್ ಎಷ್ಟು ಆರೋಗ್ಯಕರ ಅನ್ನೋದು ಯಾವ ಬ್ರೆಡ್ ಬಳಸುತ್ತೀರಿ ಮತ್ತು ಹೇಗೆ ಬೇಯಿಸುತ್ತೀರಿ ಅನ್ನೋದರ ಮೇಲೆ ಡಿಪೆಂಡ್ ಆಗಿರುತ್ತದೆ.
ಬಿಳಿ ಬ್ರೆಡ್ (White Bread): ತುಂಬಾ ರಿಫೈನ್ ಆಗಿದ್ದು, ಫೈಬರ್ ಕಡಿಮೆಯಾಗಿರುತ್ತದೆ. ಬೇಗ ಜೀರ್ಣವಾಗುತ್ತದೆ. ರಕ್ತದಲ್ಲಿನ ಸಕ್ಕರೆ ತಕ್ಷಣ ಏರಿಸಿ, ಬೇಗ ಹಸಿವು ತರುತ್ತದೆ.
ಬ್ರೌನ್ ಬ್ರೆಡ್ (Brown Bread): ಬಹಳಷ್ಟು ಬಾರಿ ಬಿಳಿ ಬ್ರೆಡ್‌ಗೆ ಬಣ್ಣ ಮಾತ್ರ ಹಾಕಿರುತ್ತಾರೆ. 'Whole wheat' ಮೊದಲ ಪದಾರ್ಥವಾಗಿ ಇದ್ದರೆ ಮಾತ್ರ ಆರೋಗ್ಯಕರ
ಸಂಪೂರ್ಣ ಗೋಧಿ ಬ್ರೆಡ್ (Whole Wheat Bread): ಫೈಬರ್ ಮತ್ತು ಮೈಕ್ರೋನ್ಯೂಟ್ರಿಯಂಟ್‌ಗಳು ಹೆಚ್ಚು. ಜೀರ್ಣಕ್ರಿಯೆ ನಿಧಾನ. ಗಟ್ ಹೆಲ್ತ್‌ಗೆ ಒಳ್ಳೇಯದು. ಹೆಚ್ಚು ಸಮಯ ಹೊಟ್ಟೆ ತುಂಬಿದ ಫೀಲ್ ಕೊಡುತ್ತದೆ. ಇದನ್ನೇ ಬಳಸೋದು ಆರೋಗ್ಯಕ್ಕೆ ಒಳ್ಳೇದು.
ಮಲ್ಟಿಗ್ರೇನ್ ಬ್ರೆಡ್ (Multigrain Bread): Whole-grain ಆಗಿದ್ದರೆ ಮಾತ್ರ ಉಪಯುಕ್ತ. ಕೆಲವು ಬ್ರ್ಯಾಂಡ್‌ಗಳು ರಿಫೈನ್ ಹಿಟ್ಟಿಗೆ ಕೇವಲ ಬೀಜ ಹಾಕಿದ್ದವಾಗಿರುತ್ತವೆ.
ಮಧುಮೇಹ, ಕುಟುಂಬದಲ್ಲೇ ಹೆಚ್ಚಿದ ಕೊಲೆಸ್ಟ್ರಾಲ್ ಇತಿಹಾಸ, ಅಥವಾ ಹೃದಯ ರೋಗ ಇರುವವರು ವೈದ್ಯರ ಸಲಹೆ ಪಡೆಯಬೇಕು. ಆದರೂ, ಮಿತ ಪ್ರಮಾಣದಲ್ಲಿ ಮೊಟ್ಟೆ ಇವರ ಆಹಾರದಲ್ಲೂ ಸೇರಿಸಬಹುದು.
ಎಣ್ಣೆ, ಬೆಣ್ಣೆ ಬಗ್ಗೆ ಎಚ್ಚರವಿರಲಿ. ಹೆಚ್ಚು ಎಣ್ಣೆ, ಬೆಣ್ಣೆ ಅಥವಾ ಬಿಳಿ ಬ್ರೆಡ್ ಬಳಸಬೇಡಿ. ಇವು ಕ್ಯಾಲೊರಿಗಳು ಹೆಚ್ಚು, ರಕ್ತದ ಸಕ್ಕರೆಯನ್ನೂ ವೇಗವಾಗಿ ಹೆಚ್ಚಿಸುತ್ತವೆ.
ಆಮ್ಲೇಟ್ ರೆಸಿಪಿ, ಬೆಸ್ಟ್ ಫುಡ್:
- ಆಮ್ಲೆಟ್‌ಗೆ ಈರುಳ್ಳಿ, ಟೊಮ್ಯಾಟೋ, ಪಾಲಕ್, ಕ್ಯಾಪ್ಸಿಕಂ ಮುಂತಾದ ತರಕಾರಿಗಳನ್ನು ಸೇರಿಸಿ.
- Whole-grain ಬ್ರೆಡ್ ಆಯ್ಕೆ ಮಾಡಿ
- ಸ್ಟ್ರೀಟ್ ಫುಡ್ ಅಥವಾ ಕ್ಯಾಂಟೀನ್ ಆಮ್ಲೆಟ್‌ಗಿಂತ ಮನೆಯಲ್ಲೇ ತಯಾರಿಸಿದ ಆಮ್ಲೆಟ್ ಉತ್ತಮ.
- ಡಾ. ಪಾಟೀಲ್ ಹೇಳುವಂತೆ, ಹೊರಗಡೆ ಸಿಗುವ ಆಮ್ಲೆಟ್‌ಗಳಲ್ಲಿ ಮರುಬಳಕೆ ಮಾಡಿದ ಎಣ್ಣೆ, ಹೆಚ್ಚು ಬೆಣ್ಣೆ / ಮಾರ್ಜರಿನ್, ಕಡಿಮೆ ಗುಣಮಟ್ಟದ ಬ್ರೆಡ್ ಬಳಸಿರುತ್ತಾರೆ. ತರಕಾರಿಯಂತೂ ಇರುವುದೇ ಇಲ್ಲ. ಇವುಗಳಿಂದ ಕ್ಯಾಲೊರಿ ಮತ್ತು ಟ್ರಾನ್ಸ್-ಫ್ಯಾಟ್ ಪ್ರಮಾಣ ಜಾಸ್ತಿ ಆಗುತ್ತದೆ.
ಮೊಟ್ಟೆ ತೂಕ ನಿಯಂತ್ರಣಕ್ಕೆ ಸಹಕಾರಿ.
- ಹೆಚ್ಚು ಸಮಯ ತೃಪ್ತಿ ಕೊಡುತ್ತದೆ.
- ರಕ್ತದ ಸಕ್ಕರೆಯನ್ನು ಸ್ಥಿರವಾಗಿಡುತ್ತದೆ.
- ಮಧ್ಯಾಹ್ನದ ಹೊತ್ತಿಗೆ ಬರುವ ಹಸಿವನ್ನು ಕಡಿಮೆ ಮಾಡುತ್ತದೆ.
- ಆರೋಗ್ಯವಂತ ವ್ಯಕ್ತಿಗೆ ದಿನಕ್ಕೆ ಒಂದು ಮೊಟ್ಟೆ ಸುರಕ್ಷಿತ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.