ಕೊರೊನಾ ಲಕ್ಷಾಂತರ ಮಂದಿ ಬಲಿ ಪಡೆದಿದೆ. ಈಗ ಮತ್ತೆ ತನ್ನ ಅಬ್ಬರ ಹೆಚ್ಚಿಸಿದೆ. ಈ ಮಧ್ಯೆ ಕೊರೋನಾ ಬಗ್ಗೆ ಮತ್ತೊಂದು ಅಧ್ಯಯನ ನಡೆದಿದೆ. ರೋಗಿ ರಕ್ತದಿಂದಲೇ ಕೊರೊನಾ ಎಷ್ಟು ಅಪಾಯಕಾರಿ ಎಂಬುದನ್ನು ಪತ್ತೆ ಮಾಡ್ಬಹುದು ಎನ್ನುತ್ತಾರೆ ವಿಜ್ಞಾನಿಗಳು.
ಕೊರೊನಾ ದಾಳಿ ಇಟ್ಟಾಗಿನಿಂದ ಪ್ರಪಂಚದ ಪ್ರತಿಯೊಬ್ಬ ವಿಜ್ಞಾನಿಯೂ ಕೊರೊನಾ ಬಗ್ಗೆ ಹೊಸ ಹೊಸ ಅಧ್ಯಯನವನ್ನು ಮಾಡುತ್ತಿದ್ದಾರೆ. ಕೊರೊನಾಗೆ ಸಂಬಂಧಿಸಿದಂತೆ ಅನೇಕ ಅಧ್ಯಯನಗಳನ್ನು ಈಗಾಗಲೇ ನಡೆಸಲಾಗಿದೆ. ಪ್ರತಿ ಅಧ್ಯಯನದಲ್ಲೂ ಆಘಾತಕಾರಿ ವಿಷ್ಯಗಳು ಹೊರ ಬಿದ್ದಿವೆ. ಈಗ ಮತ್ತೊಂದು ಅಧ್ಯಯನ ನಡೆದಿದೆ. ಈ ಅಧ್ಯಯನದಲ್ಲಿ ಕೊರೊನಾ ರೋಗಿಯ ರಕ್ತದಿಂದ ಆತನ ರೋಗದ ಪ್ರಮಾಣ ಹಾಗೂ ಆತನ ಬದುಕುಳಿಯುವಿಕೆಯನ್ನು ಪತ್ತೆ ಮಾಡಬಹುದಾಗಿದೆ. ಕೊರೊನಾ ಬಗ್ಗೆ ನಡೆದ ಅಧ್ಯಯನ ಹೆಚ್ಚಿನ ಮಾಹಿತಿ ಇಲ್ಲಿದೆ.
ಅಮೆರಿಕದ ವಾಷಿಂಗ್ಟನ್ (Washington) ಯೂನಿವರ್ಸಿಟಿ ಸ್ಕೂಲ್ ಆಫ್ ಮೆಡಿಸಿನ್ ಸಂಶೋಧಕರು ಈ ಬಗ್ಗೆ ಅಧ್ಯಯನ (Study) ನಡೆಸಿದ್ದಾರೆ. ಅಧ್ಯಯನದ ವೇಳೆ ಆಘಾತಕಾರಿ ವಿಷ್ಯ ಬಹಿರಂಗವಾಗಿದೆ. ಸಂಶೋಧಕರು ಸೋಂಕಿತರ (Infected) ರಕ್ತದ ಪ್ಲಾಸ್ಮಾದಲ್ಲಿ ನಿರ್ದಿಷ್ಟ ಪ್ರೋಟೀನ್ ಳನ್ನು ಗುರುತಿಸಿದ್ದಾರೆ. ಯಾವ ರೋಗಿಗೆ ಉಸಿರಾಡಲು ವೆಂಟಿಲೇಟರ್ ಹಾಕಬೇಕಾಗಬಹುದು ಮತ್ತು ವೈರಸ್ (Virus)ನಿಂದ ಸಾಯುವ ಸಾಧ್ಯತೆ ಯಾರಲ್ಲಿ ಹೆಚ್ಚು ಎಂಬುದನ್ನು ಇದ್ರಿಂದ ಪತ್ತೆ ಮಾಡಲಾಗಿದೆ. 332 ಕೋವಿಡ್ ರೋಗಿಗಳ ರಕ್ತದ ಪ್ಲಾಸ್ಮಾ ಮಾದರಿಗಳನ್ನು ಅಧ್ಯಯನಕ್ಕೆ ಬಳಸಲಾಗಿದೆ ಎಂದು ಸಂಶೋಧಕರು ಹೇಳಿದ್ದಾರೆ.
CHILDRENS HEALTH: ಚಿಕ್ಕ ಮಕ್ಕಳಿಗೆ ಮೊಸರು, ಮಜ್ಜಿಗೆ ಕೊಡಬಹುದಾ?
ಪ್ರೋಟೀನ್ ನಿಂದ ಪತ್ತೆಯಾಗುತ್ತೆ ರೋಗದ ತೀವ್ರತೆ : ಹಾನಿಕಾರಕ ಪ್ರೋಟೀನ್ ಗುರುತಿಸುವುದ್ರಿಂದ ಸಾಕಷ್ಟು ಲಾಭವಿದೆ ಎನ್ನುತ್ತಾರೆ ಅಧ್ಯಯನದ ಪ್ರಧಾನ ತನಿಖಾಧಿಕಾರಿ ಕಾರ್ಲೋಸ್ ಕ್ರುಚಾಗಾ. ಹಾನಿಕಾರ ಪ್ರೋಟೀನ್ ನಿಂದ ಕೊರೊನಾಗೆ ವೈರಸ್ ರೂಪಾಂತರ ಯಾವುದು ಎಂಬುದು ಪತ್ತೆಯಾಗುತ್ತದೆ. ಇದಲ್ಲದೆ ಭವಿಷ್ಯದಲ್ಲಿ ಹೊರಹೊಮ್ಮಬಹುದಾದ ವೈರಸ್ ರೂಪಾಂತರವನ್ನು ಕೂಡ ಪತ್ತೆ ಮಾಡಬಹುದು. ಆಗ ಇದಕ್ಕೆ ಸೂಕ್ತ ಕ್ರಮಕೈಗೊಳ್ಳಬಹುದು ಎಂದು ಕಾರ್ಲೋಸ್ ಹೇಳಿದ್ದಾರೆ.
ಕೋವಿಡ್ ಸೋಂಕಿಗೆ ಒಳಗಾದ ವ್ಯಕ್ತಿಯ ರಕ್ತ ಪರೀಕ್ಷೆಯಿಂದ ಪ್ರಮುಖ ಪ್ರೋಟೀನ್‌ಗಳ ಮಟ್ಟವನ್ನು ಪರೀಕ್ಷಿಸಬಹುದು. ಗಂಭೀರ ಪರಿಸ್ಥಿತಿ ಇದ್ರೆ ತ್ವರಿತವಾಗಿ ಹೆಚ್ಚಿನ ಚಿಕಿತ್ಸೆ ನೀಡುವ ಬಗ್ಗೆ ಕ್ರಮಕೈಗೊಳ್ಳಬಹುದು ಎಂದು ಕಾರ್ಲೋಸ್ ಹೇಳಿದ್ದಾರೆ. ಯುಎಸ್ ಎ (USA) ನ ಸೇಂಟ್ ಲೂಯಿಸ್‌ನಲ್ಲಿರುವ ಬಾರ್ನ್ಸ್-ಯಹೂದಿ ಆಸ್ಪತ್ರೆಗೆ ದಾಖಲಾದ ಕೋವಿಡ್ 19 ರೋಗಿಗಳ ಪ್ಲಾಸ್ಮಾ ಮಾದರಿಗಳನ್ನು ಸಂಶೋಧಕರ ತಂಡ ಅಧ್ಯಯನ ಮಾಡಿದೆ. SARS-CoV-2 ಸೋಂಕಿಗೆ ಒಳಗಾಗದ 150 ಜನರ ಪ್ಲಾಸ್ಮಾ ಮಾದರಿಗಳೊಂದಿಗೆ ಹೋಲಿಕೆ ಮಾಡಲಾಗಿದೆ.
Health Tips: ಒಗ್ಗರಣೆಗೆ ಬಳಸೋದು ಮಾತ್ರವಲ್ಲ, ಕಿಡ್ನಿ ಸಮಸ್ಯೆನೂ ಬಗೆಹರಿಸುತ್ತೆ ಸಾಸಿವೆ
ಹೈ-ಥ್ರೂಪುಟ್ ಪ್ರೋಟಿಯೊಮಿಕ್ಸ್ ತಂತ್ರವನ್ನು ಬಳಸಿ ಪ್ರೋಟೀನ್‌ಗಳ ಅತಿಯಾದ ಒತ್ತಡ ಮತ್ತು ಅಂಡರ್ ಎಕ್ಸ್ ಪ್ರೆಶನ್ ಅನ್ನು ಗುರುತಿಸಲಾಗಿದೆ. ಇದನ್ನು ಡಿಸ್‌ರೆಗ್ಯುಲೇಷನ್ ಎಂದು ಕರೆಯಲಾಗುತ್ತದೆ. ಯಾವ ಪ್ರೋಟೀನ್ ತೀವ್ರವಾದ ಕಾಯಿಲೆಗೆ ಕಾರಣವಾಗುತ್ತವೆ ಎಂಬುದನ್ನು ಪತ್ತೆ ಹಚ್ಚಲು ವಿಜ್ಞಾನಿಗಳು ಪ್ರತ್ಯೇಕವಾಗಿ ಅಧ್ಯಯನ ನಡೆಸಿದ್ದಾರೆ. ಅಧ್ಯಯನದಲ್ಲಿ ಅಪಾಯಕಾರಿ ಪ್ರೋಟೀನ್ ಪತ್ತೆಯಾಗಿದೆ. 32 ಪ್ರೋಟೀನ್‌ಗಳ ಉಪಸ್ಥಿತಿಯು ಕೋವಿಡ್ ಸೋಂಕಿನ ಸಮಯದಲ್ಲಿ ರೋಗಿಯ ಸ್ಥಿತಿಯನ್ನು ಗಂಭೀರಗೊಳಿಸುತ್ತದೆ ಎಂದು ವಿಜ್ಞಾನಿಗಳು ಪತ್ತೆ ಮಾಡಿದ್ದಾರೆ. ಅದರಲ್ಲಿ ಐದು ಪ್ರೋಟೀನ್ ರೋಗಿಯ ಸಾವಿನ ಸಾಧ್ಯತೆಯನ್ನು ಹೆಚ್ಚಿಸುತ್ತದೆ ಎಂದು ವಿಜ್ಞಾನಿಗಳು ಹೇಳಿದ್ದಾರೆ. ಕೊರೊನಾ ಸೋಂಕಿತ ರೋಗಿಗಳಲ್ಲಿ ಪತ್ತೆಯಾದ ಕೆಲ ಕೆಟ್ಟ ಪ್ರೋಟೀನ್ ಪರಿಧಮನಿಯ ಕಾಯಿಲೆ ಮತ್ತು ಆಲ್‌ಝೈಮರ್‌ನ ಕಾಯಿಲೆ ಜೊತೆ ಸಂಬಂಧ ಹೊಂದಿದೆ ಎಂಬುದನ್ನು ವಿಜ್ಞಾನಿಗಳು ಪತ್ತೆ ಮಾಡಿದ್ದಾರೆ.
ಕಳೆದ ಒಂದು ವರ್ಷದಿಂದ ತನ್ನ ಅಬ್ಬರ ಕಡಿಮೆ ಮಾಡಿದ್ದ ಕೊರೊನಾ ಈಗ ಮತ್ತೆ ದಾಳಿ ಶುರು ಮಾಡಿದೆ. ಭಾರತದಲ್ಲಿ ಕೊರೊನಾ ರೋಗಿಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗ್ತಿದೆ. ಆರೋಗ್ಯ ಇಲಾಖೆ ಮಾಹಿತಿ ಪ್ರಕಾರ ಭಾರತದಲ್ಲಿ ಕಳೆದ 24 ಗಂಟೆಯಲ್ಲಿ ಕೊರೊನಾ ರೋಗಿಗಳ ಸಂಖ್ಯೆ 10, 158ಕ್ಕೆ ಏರಿಕೆಯಾಗಿದೆ. ಕೊರೊನಾ ರೋಗಿಗಳ ಸಂಖ್ಯೆ ಒಂದೇ ದಿನದಲ್ಲಿ 1149ರಷ್ಟು ಹೆಚ್ಚಾಗಿದ್ದು, ಆತಂಕ ಮೂಡಿಸಿದೆ.