
ನವದೆಹಲಿ: ಜಗತ್ತಿನಲ್ಲಿ ಇದೇ ಮೊದಲ ಬಾರಿ ಎಚ್3ಎನ್8 ವೈರಸ್ ಹಕ್ಕಿಜ್ವರಕ್ಕೆ ವ್ಯಕ್ತಿಯೊಬ್ಬರು ಬಲಿಯಾಗಿದ್ದಾರೆ. ದಕ್ಷಿಣ ಪ್ರಾಂತ್ಯದ ಗುವಾಂಗ್‌ಡಾಂಗ್‌ನ 56 ವರ್ಷದ ಮಹಿಳೆ ಏವಿಯನ್ ಇನ್ಫ್ಲುಯೆಂಜಾದ H3N8 ಉಪವಿಭಾಗದಿಂದ ಸೋಂಕಿಗೆ ಒಳಗಾದ ಮೂರನೇ ವ್ಯಕ್ತಿ ಎಂದು WHO ಹೇಳಿಕೆಯಲ್ಲಿ ತಿಳಿಸಿದೆ. ಕಳೆದ ವರ್ಷ ಮೊದಲ ಎರಡು ಪ್ರಕರಣಗಳು ವರದಿಯಾಗಿವೆ. ಹಕ್ಕಿ ಜ್ವರದಂತಹಾ ಸೋಂಕುಗಳು ಚೀನಾದಲ್ಲಿ ಸಾಮಾನ್ಯವಾಗಿದೆ. ಅಲ್ಲಿ ಏವಿಯನ್ ಫ್ಲೂ ವೈರಸ್‌ಗಳು ನಿರಂತರವಾಗಿ ಬೃಹತ್ ಕೋಳಿ ಮತ್ತು ಕಾಡು ಪಕ್ಷಿಗಳಿಂದ ಹರಡುತ್ತವೆ.
ಇಡೀ ವಿಶ್ವಕ್ಕೆ ಕೊರೋನಾ ವೈರಸ್ ಹಬ್ಬಿಸಿದ ಕುಖ್ಯಾತಿಯ ಚೀನಾದಲ್ಲೇ ಹಕ್ಕಿ ಜ್ವರಕ್ಕೆ (Bird fulu) ಮೊದಲ ವ್ಯಕ್ತಿ ಬಲಿಯಾಗಿದ್ದು, ಚೀನಿ ವೈರಸ್ ಬಗ್ಗೆ ಜಗತ್ತು ಈಗ ಆತಂಕ ಪಡುವಂತಾಗಿದೆ. ಹಕ್ಕಿಜ್ವರ ಸಾಮಾನ್ಯವಾಗಿ ಮನುಷ್ಯರಿಗೆ ಬರುವುದಿಲ್ಲ. ಈ ಕುರಿತು ಹೇಳಿಕೆ ಬಿಡುಗಡೆ ಮಾಡಿರುವ ವಿಶ್ವ ಆರೋಗ್ಯ ಸಂಸ್ಥೆ (WHO), ಚೀನಾದ ಗುವಾಂಗ್‌ಡಾಂಗ್ ಪ್ರಾಂತ್ಯದಲ್ಲಿ ಮಾ.16ರಂದು 56 ವರ್ಷದ ಮಹಿಳೆ ಹಕ್ಕಿಜ್ವರದಿಂದ ಸಾವನ್ನಪ್ಪಿದ್ದಾರೆ. ಆಕೆಗೆ ಫೆ.22ರಂದು ಹಕ್ಕಿಜ್ವರದ ಲಕ್ಷಣ ಕಾಣಿಸಿಕೊಂಡಿತ್ತು. ಮಾ.3ರಂದು ತೀವ್ರ ನ್ಯುಮೋನಿಯಾದಿಂದ ಆಸ್ಪತ್ರೆಗೆ ದಾಖಲಿಸಲಾಗಿತ್ತು ಎಂದು ತಿಳಿಸಿದೆ.
ಕೋವಿಡ್ ಬೆನ್ನಲ್ಲೇ ಹಳದಿ ಜ್ವರದ ಭೀತಿ, ಲಸಿಕೆ ಕಡ್ಡಾಯಗೊಳಿಸಿದ ಕೇಂದ್ರ ಆರೋಗ್ಯ ಇಲಾಖೆ
ಹಕ್ಕಿಜ್ವರದಿಂದ ಸಾವನ್ನಪ್ಪಿದ ಮಹಿಳೆಗೆ ಬೇರೆ ರೀತಿಯ ಹಲವು ಅನಾರೋಗ್ಯಗಳಿದ್ದವು. ಹಕ್ಕಿಜ್ವರ ತಗಲುವುದಕ್ಕೂ ಮುನ್ನ ಅವಳು ಪೌಲ್ಟ್ರಿಯ ಸಂಪರ್ಕದಲ್ಲಿದ್ದಳು. ಅವಳ ಮನೆ ಸುತ್ತಮುತ್ತ ಕಾಡು ಹಕ್ಕಿಗಳಿದ್ದವು. ಅವಳಿಂದ ಬೇರೆ ಯಾರಿಗೂ ಹಕ್ಕಿಜ್ವರ ಹರಡಿರುವ ಮಾಹಿತಿ ಇಲ್ಲ ಎಂದು ತಿಳಿಸಿದೆ. H3N8 ಸೋಂಕು H5N1 ಬರ್ಡ್ ಫ್ಲೂ ಸಾಂಕ್ರಾಮಿಕ ರೋಗಕ್ಕೆ (Disease) ಸಂಬಂಧಿಸಿಲ್ಲ, ಇದು ಕಳೆದ 18 ತಿಂಗಳುಗಳಲ್ಲಿ ವಿಶ್ವದಾದ್ಯಂತ ಕೋಳಿ ಮತ್ತು ಕಾಡು ಪಕ್ಷಿಗಳನ್ನು ನಾಶಪಡಿಸಿದೆ ಮತ್ತು ನರಿಗಳು, ಕರಡಿಗಳು ಮತ್ತು ಸಾಕು ಬೆಕ್ಕುಗಳು ಸೇರಿದಂತೆ ಸಸ್ತನಿಗಳಿಗೆ ಹರಡಿದೆ.
ಮನುಷ್ಯರಿಂದ ಮನುಷ್ಯರಿಗೆ ಹರಡುವುದಿಲ್ಲ
ಈವರೆಗೆ ಜಗತ್ತಿನಲ್ಲಿ ಮೂವರಿಗೆ ಮಾತ್ರ ಹಕ್ಕಿಜ್ವರ ಬಂದಿದೆ. ಇದು ಮನುಷ್ಯರಿಂದ ಮನುಷ್ಯರಿಗೆ ಹರಡುವುದೂ ಇಲ್ಲ. ಎಚ್3ಎನ್8 ವೈರಸ್‌ನಿಂದ ಬರುವ ಹಕ್ಕಿಜ್ವರ ಬಹಳ ಹಳೆಯದು. ಇದು ಹಕ್ಕಿಗಳಲ್ಲಿ ಸಾಮಾನ್ಯವಾಗಿದೆ. ಆದರೆ ಈ ವೈರಸ್ ಮನುಷ್ಯರಿಗೆ ಹರಡಿ, ಅದರಿಂದ ವ್ಯಕ್ತಿಯೊಬ್ಬರು ಸಾವನ್ನಪ್ಪಿರುವುದು ಇದೀಗ ತೀವ್ರ ಆತಂಕ ಸೃಷ್ಟಿಸಿದೆ.
ಲಭ್ಯವಿರುವ ಮಾಹಿತಿಯ ಆಧಾರದ ಮೇಲೆ, 'ಈ ವೈರಸ್ ವ್ಯಕ್ತಿಯಿಂದ ವ್ಯಕ್ತಿಗೆ ಸುಲಭವಾಗಿ ಹರಡುವ ಸಾಮರ್ಥ್ಯವನ್ನು ಹೊಂದಿಲ್ಲ ಎಂದು ತೋರುತ್ತದೆ. ಆದ್ದರಿಂದ ರಾಷ್ಟ್ರೀಯ, ಪ್ರಾದೇಶಿಕ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ಮಾನವರಲ್ಲಿ ಹರಡುವ ಅಪಾಯವು ಕಡಿಮೆ ಎಂದು ಪರಿಗಣಿಸಲಾಗಿದೆ' ಎಂದು WHO ಹೇಳಿಕೆಯಲ್ಲಿ ತಿಳಿಸಿದೆ. ಲೈವ್ ಪೌಲ್ಟ್ರಿ ಮಾರುಕಟ್ಟೆಗೆ ಒಡ್ಡಿಕೊಳ್ಳುವುದು ಸೋಂಕಿಗೆ ಕಾರಣವಾಗಿದ್ದರೂ, ಈ ಸೋಂಕಿನ ನಿಖರವಾದ ಮೂಲ ಯಾವುದು ಮತ್ತು ಈ ವೈರಸ್ ಪ್ರಾಣಿಗಳಲ್ಲಿ ಪರಿಚಲನೆಗೊಳ್ಳುವ ಇತರ ಏವಿಯನ್ ಇನ್ಫ್ಲುಯೆನ್ಸ A (H3N8) ವೈರಸ್‌ಗಳಿಗೆ ಹೇಗೆ ಸಂಬಂಧಿಸಿದೆ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ ಎಂದು ತಿಳಿದುಬಂದಿದೆ.
ಕಿಸ್ಸಿಂಗ್ ರೋಗ: ಸಮಸ್ಯೆ ಕಡೆಗಣಿಸಿದ್ರೆ ಗಂಭೀರವಾಗೋ ಸಾಧ್ಯತೆನೂ ಇದೆ
ಮಾನವರಿಗೆ ಸೋಂಕು ತಗುಲಿಸಲು H5N1 ವೈರಸ್ ಶ್ವಾಸಕೋಶಕ್ಕೆ (Lungs) ತಲುಪಬೇಕು. ಆದರೆ ಅದೃಷ್ಟವಶಾತ್, ಈ ವೈರಸ್ ಶ್ವಾಸಕೋಶವನ್ನು ತಲುಪುವ ಸುಲಭವಾದ ಸಾಮರ್ಥ್ಯವನ್ನು ವೈರಸ್ ಹೊಂದಿರುವುದಿಲ್ಲ ಎಂದು ವ್ಯಾಂಡರ್‌ಬಿಲ್ಟ್ ವಿಶ್ವವಿದ್ಯಾಲಯದ ಸಾಂಕ್ರಾಮಿಕ ರೋಗಗಳ ವಿಭಾಗದ ವೈದ್ಯಕೀಯ ಪ್ರಾಧ್ಯಾಪಕ ವಿಲಿಯಂ ಶಾಫ್ನರ್ ತಿಳಿಸಿದ್ದಾರೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.