ಭಾರತದಲ್ಲಿ ಕೋವಿಡ್ ಪ್ರಕರಣ ದಿನದಿಂದ ದಿನಕ್ಕೆ ಗಣನೀಯವಾಗಿ ಏರಿಕೆಯಾಗುತ್ತಿದೆ. ಗುರುವಾರ ಒಂದೇ ದಿನ 5383 ಹೊಸ ಕೋವಿಡ್ ಪ್ರಕರಣಗಳು ದಾಖಲಾಗಿದ್ದು,ಇದು ಕಳೆದ 195 ದಿನಗಳಲ್ಲೇ ದಾಖಲಾದ ಗರಿಷ್ಠ ಸಂಖ್ಯೆಯಾಗಿದೆ. 13 ಸೋಂಕಿತರ ಸಾವನ್ನಪ್ಪಿದ್ದಾರೆ.
ನವದೆಹಲಿ: ದೇಶದಲ್ಲಿ ಕೋವಿಡ್ ಸೋಂಕಿತರ ಸಂಖ್ಯೆಯಲ್ಲಿ ಗಮರ್ನಾಹ ಏರಿಕೆ ಕಂಡುಬಂದಿದ್ದು ಗುರುವಾರ ಒಂದೇ ದಿನ 5,335 ಹೊಸ ಪ್ರಕರಣ ಪತ್ತೆಯಾಗಿದೆ. ಇದು ಕಳೆದ 195 ದಿನಗಳ ಗರಿಷ್ಠವಾಗಿದೆ. ಕಳೆದ ಸೆಪ್ಟೆಂಬರ್ನಲ್ಲಿ 5383 ಪ್ರಕರಣ ದಾಖಲಾಗಿದ್ದು ಹಿಂದಿನ ಗರಿಷ್ಠವಾಗಿತ್ತು. ಸೋಂಕಿತರ ಪ್ರಮಾಣ ಹೆಚ್ಚಲ ಹಿನ್ನೆಲೆಯಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ 25587ಕ್ಕೆ ತಲುಪಿದೆ. 13 ಸೋಂಕಿತರು ಸಾವನ್ನಪ್ಪಿದ್ದಾರೆ. ದೈನಂದಿನ ಪಾಸಿಟಿವಿಟಿ ದರ ಶೇ.3.32ಕ್ಕೆ ತಲುಪಿದೆ. ಸೋಂಕಿತರ ಚೇತರಿಕೆಯ ಪ್ರಮಾಣವು 98.75 ರಷ್ಟುದಾಖಲಾಗಿದೆ. ದೇಶದಲ್ಲಿ ಈವರೆಗೆ 4.47 ಕೋಟಿ ಜನರಿಗೆ ಕೋವಿಡ್ ತಗುಲಿದ್ದು ಒಟ್ಟು 220.66 ಕೋಟಿ ಡೋಸ್ ಕೋವಿಡ್ ಲಸಿಕೆಗಳ (Vaccine) ವಿತರಣೆಯಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ (Health ministry) ತಿಳಿಸಿದೆ.
ಕೋವಿಡ್ ಹೆಚ್ಚಳದಿಂದ ಭಾರತದಲ್ಲಿ ಮಾರ್ಗಸೂಚಿ ಜಾರಿ, ಮತ್ತೆ ಬಂತು ಮಾಸ್ಕ್!
ವಿಶ್ವದ ಹಲವು ರಾಷ್ಟ್ರಗಳಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ ಗಣನೀಯವಾಗಿ ಏರಿಕೆಯಾಗುತ್ತಿದೆ. ಇತ್ತ ಭಾರತದಲ್ಲೂ ಕೊರೋನಾ ಮತ್ತೆ ಕಾಣಿಸಿಕೊಂಡಿದೆ. ಪ್ರತಿ ದಿನ ಸರಾಸರಿ 3,000 ಪ್ರಕರಣ ದಾಖಲಾಗುತ್ತಿದೆ. ಸಕ್ರೀಯ ಕೋವಿಡ್ ಪ್ರಕರಣ ಸಂಖ್ಯೆ ಏರಿಕೆಯಾಗಿದೆ. ಇದರ ಬೆನ್ನಲ್ಲೇ ಕೇಂದ್ರ ಸರ್ಕಾರ ಕೆಲ ಮಾರ್ಗಸೂಚಿ (Guidelines) ಬಿಡುಗಡೆ ಮಾಡಿದೆ. ವಿದೇಶಿ ಪ್ರಯಾಣಿಕರು, ಹಾಗೂ ವಿಮಾನ ಪ್ರಯಾಣಿಕರನ್ನು ಗಮನದಲ್ಲಿಟ್ಟುಕೊಂಡು ಕೇಂದ್ರ ಸರ್ಕಾರ ಮಾರ್ಗಸೂಚಿ ಪ್ರಕಟಿಸಿದೆ. ವಿಮಾನ ಪ್ರಯಾಣಿಕರು (Passnegers) ಮಾಸ್ಕ್ ಧರಿಸುವಂತೆ ಸೂಚಿಸಿದೆ.
undefined
COVID-19 : ಆಪ್ತರನ್ನು ಗುರುತಿಸೋದೂ ಕಷ್ಟ! ಕೊರೊನಾದಿಂದ ಕಾಡ್ತಿದೆ ಮತ್ತೊಂದು ಸಮಸ್ಯೆ
ವಿದೇಶಿ ಪ್ರಯಾಣಿಕರು ಮೇಲೆ ನಿಗಾ ಇಡಲಾಗುತ್ತಿದೆ. ವಿಮಾನ ಪ್ರಯಾಣಿಕರು ಮಾಸ್ಕ್ ಧರಿಸುವಂತೆ ಸೂಚಿಸಲಾಗಿದೆ. ಆದರೆ ಕಡ್ಡಾಯ ಮಾಡಿಲ್ಲ. ಸದ್ಯ ಸರಾಸರಿ 3,000 ಕೋವಿಡ್ ಪ್ರಕರಣ ದಾಖಲಾಗುತ್ತಿದೆ. ಆದರೆ ಭಾರತದಲ್ಲಿ ಕೋವಿಡ್ ಪರಿಸ್ಥಿತಿ ಸಂಪೂರ್ಣ ನಿಯಂತ್ರಣದಲ್ಲಿದೆ. ಹೀಗಾಗಿ ಜನರನ್ನು ಜಾಗೃತಗೊಳಿಸುವ ಕೆಲಸ ಮಾಡಲಾಗುತ್ತಿದೆ. ಕೋವಿಡ್ ವೈರಸ್ ಅಂಟಿಕೊಳ್ಳದಂತೆ ದೂರವಿರಲಿ ತಜ್ಞರು ಸೂಚಿಸಿದ ಸಲಹೆಗಳನ್ನೂ ಸೂಚಿಸಲಾಗಿದೆ ಎಂದು ರಾಜ್ಯಸಭೆಯಲ್ಲಿ ವಿಮಾನಯಾನ ರಾಜ್ಯ ಸಚಿವ ನಿವೃತ್ತ ಜನರಲ್ ವಿಕೆ ಸಿಂಗ್ ಹೇಳಿದ್ದಾರೆ.
ವಿದೇಶದಲ್ಲಿ ಗಣನೀಯವಾಗಿ ಕೋವಿಡ್ ಏರಿಕೆಯಾಗುತ್ತಿದೆ. ಇದರ ಆತಂಕ ಭಾರತದಲ್ಲೂ ಇದೆ. ಆದರೆ ಭಾರತದಲ್ಲಿನ ಕೋವಿಡ್ ಪ್ರಕರಣಗಳ ಸಂಖ್ಯೆ ಏರಿಕೆಯಾದರೂ ಆತಂಕಪಡವು ಅಗತ್ಯವಿಲ್ಲ. ದೇಶದಲ್ಲಿನ ಕೋವಿಡ್ ಪ್ರಕರಣ ಹಾಗೂ ತೆಗೆದುಕೊಳ್ಳಬೇಕಾದ ಕ್ರಮಗಳ ಕುರಿತು ನಿಗಾವಹಿಸಲಾಗಿದೆ. ಈಗಾಗಲೇ ಪ್ರಧಾನಿ ನರೇಂದ್ರ ಮೋದಿ ಉನ್ನತ ಮಟ್ಟದ ಸಭೆ ನಡೆಸಿ ಅಧಿಕಾರಿಗಳಿಗೆ ಮಹ್ವದ ಸೂಚನೆ ನೀಡಿದ್ದಾರೆ ಎಂದು ವಿಕೆ ಸಿಂಗ್ ರಾಜ್ಯಸಭೆಯಲ್ಲಿ ಹೇಳಿದ್ದಾರೆ.
ಕೋವಿಡ್ ಏರಿಕೆ: ತಮಿಳುನಾಡಿನ ಆಸ್ಪತ್ರೆಗಳಲ್ಲಿ ಮಾಸ್ಕ್ ಕಡ್ಡಾಯ
Covid Case ಹೆಚ್ಚಳ, ಮತ್ತೊಮ್ಮೆ ಬೂಸ್ಟರ್ ಡೋಸ್ ನೀಡಲು ಡಬ್ಲ್ಯುಎಚ್ಒ ಸಲಹೆ
ಪೂರ್ವರೋಗಗಳಿಂದ ಬಳಲುತ್ತಿರುವವರಿಗೆ, ಆರೋಗ್ಯ ಕಾರ್ಯಕರ್ತರಿಗೆ 6 ಅಥವಾ 12 ತಿಂಗಳ ಬಳಿಕ ಮತ್ತೊಂದು ಬೂಸ್ಟರ್ ಡೋಸ್ ನೀಡುವಂತೆ ವಿಶ್ವ ಆರೋಗ್ಯ ಸಂಸ್ಥೆಯ ‘ಲಸಿಕಾಕರಣ ತಜ್ಞರ ಸಮಿತಿ’ ಸಲಹೆ ನೀಡಿದೆ.ಭಾರತದಲ್ಲಿ ಇತ್ತೀಚಿನ ದಿನಗಳಲ್ಲಿ ಕೋವಿಡ್ ಹೆಚ್ಚುತ್ತಿರುವ ನಡುವೆಯೇ ಈ ಸಲಹೆ ಬಂದಿದೆ. ನಿರ್ದಿಷ್ಟಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿರುವ ಯುವಕರು, ಮುಂಚೂಣಿ ಕಾರ್ಯಕರ್ತರು, ಆರೋಗ್ಯ ಕಾರ್ಯಕರ್ತರಿಗೆ ಮತ್ತೊಂದು ಬೂಸ್ಟರ್ ಡೋಸ್ ನೀಡಬೇಕು. ಒಂದು ವೇಳೆ ಇವರು ಕೋವಿಡ್ಗೆ ತುತ್ತಾದರೆ ಹೆಚ್ಚಿನ ತೊಂದರೆಗೆ ತುತ್ತಾಗಲಿದ್ದಾರೆ ಎಂದು ಸಮಿತಿ ಹೇಳಿದೆ.
ಅಲ್ಲದೇ ಯಾವುದೇ ಆರೋಗ್ಯ ಸಮಸ್ಯೆಗಳಿಲ್ಲದ ಯುವಕರಿಗೆ ಈಗಾಗಲೇ ನೀಡಿರುವ ಬೂಸ್ಟರ್ ಡೋಸ್ ಸಾಕು ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿದೆ. ಹಾಗೆಯೇ 6 ತಿಂಗಳಿನಿಂದ 17 ವರ್ಷದೊಳಗಿನವರನ್ನು ಲಸಿಕೆ (Vaccine) ನೀಡಲು ಕೊನೆಯಲ್ಲಿ ಪರಿಗಣಿಸಹುದು ಎಂದು ಸಮಿತಿ ಹೇಳಿದೆ.