ಕೊರೋನಾ ಕಾರಣಕ್ಕೆ ಸಾಮಾಜಿಕ ಅಂತರ ಮತ್ತು ಮಾಸ್ಕ್ ಕಡ್ಡಾಯ/ ಈ ಬುಟಕಟ್ಟು ಜನರ ಹೊಸ ಐಡಿಯಾ/ ಔಷಧಿ ಗುಣದ ಎಲೆಯನ್ನೇ ಮಾಸ್ಕ್ ಆಗಿ ಪರಿವರ್ತನೆ ಮಾಡಿಕೊಂಡ ಜನರು
ತೆಲಂಗಾಣ(ಆ. 05) ಕೊರೋನಾ ವೈರಸ್ ಪ್ರಪಂಚಕ್ಕೆ ವಕ್ಕರಿಸಿದ ಮೇಲೆ ಜನರು ಪ್ರತಿದನ ಒಂದೆಲ್ಲಾ ಒಂದು ತಾಪತ್ರಯ ಪಡುತ್ತಲೇ ಇದ್ದಾರೆ. ಸರ್ಕಾರಗಳು ಸಾಮಾಜಿಕ ಅಂತರ ಮತ್ತು ಮಾಸ್ಕ್ ಕಡ್ಡಾಯ ಮಾಡಿವೆ. ಆದರೆ ಇಲ್ಲೊಂದು ಗ್ರಾಮ ಪರಿಸರ ಪ್ರೇಮ ಸಾರುತ್ತ ತನ್ನದೇ ಮಾಸ್ಕ್ ತಯಾರಿಸಿಕೊಂಡು ಧರಿಸಿದೆ.
ತೆಲಂಗಾಣ ಮತ್ತು ಆಂಧ್ರ ಪ್ರದೇಶದ ಈ ಬುಟಕಟ್ಟು ಜನರು ಎಲೆಯನ್ನೇ ಮಾಸ್ಕ್ ಆಗಿ ಬಳಕೆ ಮಾಡುತ್ತಿದ್ದಾರೆ. ಯಾವುದೇ ಕಾಸ್ಟ್ ಇಲ್ಲದೇ ಮಾಸ್ಕ್ ಸಿದ್ಧ ಮಾಡಿ ಹಾಕಿಕೊಂಡಿದ್ದಾರೆ.
ಬೆಂಗಳೂರಿನಲ್ಲಿ ಸದ್ಯ ಕೊರೋನಾ ಸ್ಥಿತಿ ಹೇಗಿದೆ?
ಔಷಧಿ ಗುಣವಿರುವ ಸಸ್ಯದ ಎಲೆಯನ್ನು ಮಾಸ್ಕ್ ಆಗಿ ಬಳಕೆ ಮಾಡಿಕೊಂಡಿದ್ದಾರೆ. ಬುಟಕಟ್ಟು ಜನಾಂಗದಲ್ಲಿ ಒಂದೇ ಒಂದು ಕೊರೋನಾ ಪ್ರಕರಣ ಇಲ್ಲಿಯವರೆಗೆ ಪತ್ತೆಯಾಗಿಲ್ಲ. ತಮ್ಮದೇ ಶೈಲಿಯಲ್ಲಿ ಮಾಸ್ಕ್ ತಯಾರಿಸಿ ಧರಿಸಿಕೊಂಡಿದ್ದಾರೆ.
ಸರ್ಕಾರ ಮತ್ತು ಆಡಳಿತ ಮಾಸ್ಕ್ ಪೂರೈಕೆ ಮಾಡಲಿ ಎಂದು ಕಾಯದೆ ತಮ್ಮ ಅರಣ್ಯ ಜ್ಞಾನ ಬಳಸಿ ಇವರು ತಯಾರಿಸಿದ ಮಾಸ್ಕ್ ಮೆಚ್ಚುಗೆಗೆ ಪಾತ್ರವಾಗಿದೆ.
ಕೊರೋನಾ ಕಂಡುಹಿಡಿಯುವ ಮೂರು ವಿಧಾನಗಳು