ಮೊದಲ ಒತ್ತಡದಿಂದ ಬದುಕುತ್ತಿದ್ದ ಮನುಷ್ಯನಿಗೆ ಇದೀಗ ಕೊರೋನಾ ಸಂಕಟವೂ ಜೊತೆಯಲ್ಲಿ ಸೇರಿಕೊಂಡಿದೆ. ಹೇಗಾದರೂ ಒಂದಲ್ಲೊಂದು ಚಟುವಟಿಕೆ ಮೂಲಕ ಒತ್ತಡ ಮುಕ್ತನಾಗುತ್ತಿದ್ದ ಮನುಷ್ಯನಿಗೆ ಇದೀಗ ಇನ್ನೊಬ್ಬರೊಟ್ಟಿಗೆ ಬೆರೆಯಲೂ ಸಾಧ್ಯವಾಗುತ್ತಿಲ್ಲ. ಇದರಿಂದ ಮತ್ತಷ್ಟು ಒತ್ತಡ. ಈ ಎಲ್ಲ ಜಂಜಾಟಗಳಿಂದ ಮುಕ್ತರಾಗಲು ಇಲ್ಲಿದೆ ಅವಕಾಶ....ಮನೆಯಲ್ಲಿ ಕೂತು ಒತ್ತಡದಿಂದ ಮುಕ್ತರಾಗುವ ವಿದ್ಯೆ ಕಲಿತುಕೊಳ್ಳಿ...
ಒಂದೆಡೆ ಕೊರೋನಾ ವೈರಸ್ ಎಂಬ ಕಂಡು, ಕೇಳರಿಯದ ಸೋಂಕು. ಮತ್ತೊಂದೆಡೆ ಉದ್ಯೋಗ ಕಡಿತ, ರೋಗದ ಭೀತಿಯಿಂದ ಹೆಚ್ಚುತ್ತಿರುವ ಆತಂಕ. ಸಂಘ ಜೀವಿಯಾದ ಮನುಷ್ಯ ಒಂಟಿಯಾಗಿರಬೇಕಾದ ಪರಿಸ್ಥಿತಿಯಿಂದ ಹೆಚ್ಚುತ್ತಿರುವ ಮಾನಸಿಕ ಒತ್ತಡ. ಈ ಎಲ್ಲ ಕಾರಣಗಳಿಂದ ಒತ್ತಡ ಮುಕ್ತ ಜೀವನ ನಡೆಸುವುದು ಸುಲಭದ ಮಾತಲ್ಲ. ಆದರೆ, ಅದೇನೂ ಆಗು ಹೋಗುವ ಮಾತಲ್ಲ. ಅದಕ್ಕೆ ಆರ್ಟ್ ಆಫ್ ಲಿವಿಂಗ್ ಉಸಿರಾಟದ ಪ್ರಕ್ರಿಯೆಯನ್ನು ಹೇಳಿ ಕೊಡುತ್ತಿದೆ. ನೀವಿರುವಲ್ಲಿಯೇ ಇಂಟರ್ನೆಟ್ ಸಂಪರ್ಕವೊಂದಿದ್ದರೆ ಸಾಕು, ಈ ವಿದ್ಯೆಯಲ್ಲಿ ಕರಗತವಾಗಿಬಿಡಬಹುದು.
ವಿಶ್ವವೇ ಮಹಾಮಾರಿ ಕೊರೋನಾ ಭಯದಿಂದ ಇದೆ. ಆದರೆ, ಈ ರೋಗ ಬಂದವರೆಲ್ಲ ಸಾಯುವುದಿಲ್ಲ ಎಂಬುವುದು ಎಲ್ಲರಿಗೂ ಗೊತ್ತು. ಅಲ್ಲದೇ ರೋಗ ಬಾರದ ಹಾಗೆ ಅಗತ್ಯ ಕ್ರಮಗಳನ್ನು ಕೈಗೊಳ್ಳುವ ಅನಿವಾರ್ಯತೆಯೂ ಇದೀಗ ಎಲ್ಲರಿಗೆ. ಇದಕ್ಕೆ ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಮನೆ ಮದ್ದಿನೊಂದಿಗೆ ಪೋಷಕಾಂಶಯುಕ್ತ ಆಹಾರ ಸೇವನೆಯೂ ಅಗತ್ಯ.
ಈಗಾಗಲೇ ಪ್ರಾಣಾಯಾಮ ಈ ರೋಗಕ್ಕೆ ಅತ್ಯುತ್ತಮ ಮದ್ದೆಂದು ಸೋಂಕಿನಿಂದ ಗುಣಮುಖರಾದ ಅನೇಕ ರೋಗಿಗಳು ಹೇಳಿದ್ದು, ಶ್ವಾಸಕೋಶದ ಆರೋಗ್ಯದ ಮೇಲೆ ಹೆಚ್ಚು ಗಮನ ಹರಿಸುವುದು ಇಂದಿನ ತುರ್ತು. ಈ ನಿಟ್ಟಿನಲ್ಲಿ ಸುದರ್ಶನ ಕ್ರಿಯೆ ಉಪಯುಕ್ತವಾಗಲಿದ್ದು, ಆರ್ಟ್ ಆಪ್ ಲೀವಿಂಗ್ ಆಗಸ್ಟ್ 6ರ ಗುರುವಾರದಿಂದ, ಆಗಸ್ಟ್ 8ರ ಭಾನುವಾರದವರೆಗೆ ಮೂರು ಬ್ಯಾಚ್‌ಗಳಲ್ಲಿ, ದಿನಕ್ಕೆ 2 ಗಂಟೆಯಂತೆ ನುರಿತ ತಜ್ಞರಿಂದ ಸುದರ್ಶನ ಕ್ರಿಯೆ ತರಬೇತಿ ನೀಡುತ್ತಿದೆ.
ಕೋವಿಡ್ ಗೆಲ್ಲಲು ಪ್ರಾಣಾಯಾಮ ಬೆಸ್ಟ್ ಮದ್ದು
ಝೂಮ್ ಆ್ಯಪ್ ಸಹಾಯದಿಂದ ಈ ತರಬೇತಿ ನೀಡಲಿದ್ದು, ಈ ಆ್ಯಪ್‌ನೊಂದಿಗೆ ಇಂಟರ್ನೆಟ್ ಸೌಲಭ್ಯ ಇರುವವರು ಸುಲಭವಾಗಿ ಈ ಕೋರ್ಸ್ ಪೂರೈಸಬಹುದು.
ಈ ಸುದರ್ಶನ ಕ್ರಿಯೆ ಉಪಯೋಗಗಳೇನು?
- ನಮ್ಮ ಆರೋಗ್ಯವನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳುವುದು ಸದ್ಯದ ತುರ್ತು. ಅದಕ್ಕಾಗಿ ಈ ಕೋರ್ಸ್ ಸಹಕಾರಿ.
- ಆತಂಕ, ಭಯ, ಚಿಂತೆಗಳನ್ನು ದೂರ ಮಾಡಬಹುದು.
- ಸುಖವಾಗಿ ನಿದ್ರಿಸಲು.
- ಮನಸ್ಸಿನ ಮೇಲೆ ಹಿಡಿತ ಸಾಧಿಸಿ, ಜೀವನವನ್ನು ಮತ್ತಷ್ಟು ಸುಧಾರಿಸಿಕೊಳ್ಳಲು.
- ನಮ್ಮಲ್ಲಿರೋ ಅಗಾಧ ಶಕ್ತಿಯನ್ನು ಹೊರ ಹಾಕಲು ಈ ಕೋರ್ಸ್ ಸಹಕರಿಸುತ್ತದೆ.
ಅದೂ ಅಲ್ಲದೇ ಈ ಕೋರ್ಸಿನಲ್ಲಿ ಉಸಿರಾಟದ ಪ್ರಕ್ರಿಯೆ ಕಲಿಸಲಿದ್ದು, ರೋಗ ನಿರೋಧ ಶಕ್ತಿಯನ್ನೂ ಹೆಚ್ಚಿಸಿಕೊಳ್ಳುವಲ್ಲಿಯೂ ಸಹಕಾರಿಯಾಗಲಿದೆ. ಸುಮಾರು 156 ದೇಶಗಳಲ್ಲಿ ಕಳೆದ 40 ವರ್ಷಗಳಿಂದ ಈ ವಿದ್ಯೆಯ ತರಬೇತಿ ನೀಡಲಾಗುತ್ತಿದ್ದು, ಅತ್ಯುತ್ತಮ ಫಲ ನೀಡುತ್ತಿದೆ.
ಹೆಚ್ಚಿನ ಮಾಹಿತಿಗೆ...
ನಿವೇದಿತಾ: 09426407501
ರಿಜಿಸ್ಟ್ರೇಷನ್‌ಗೆ ಇಲ್ಲಿ ಕ್ಲಿಕ್ಕಿಸಿ
ಬೆಳಗ್ಗೆ 6 ರಿಂದ 8 ಗಂಟೆ
ರಿಜಿಸ್ಟ್ರೇಷನ್ ಲಿಂಕ್
aolt.in/487685
ಮಧ್ಯಾಹ್ನ 3 ರಿಂದ 5 ಗಂಟೆ
ರಿಜಿಸ್ಟ್ರೇಷನ್ ಲಿಂಕ್
aolt.in/487691
ಸಂಜೆ 7 ರಿಂದ 9 ಗಂಟೆ
ರಿಜಿಸ್ಟ್ರೇಷನ್ ಲಿಂಕ್
aolt.in/487692