ಜೀವನ ಎಂದರೇನು ? ಹರ್ಷ ಗೋಯೆಂಕಾಗೆ ಗುರು ಹೇಳಿರೋ ಮಾತುಗಳಿವು

Published : Dec 13, 2022, 05:14 PM ISTUpdated : Dec 14, 2022, 09:29 AM IST
ಜೀವನ ಎಂದರೇನು ? ಹರ್ಷ ಗೋಯೆಂಕಾಗೆ ಗುರು ಹೇಳಿರೋ ಮಾತುಗಳಿವು

ಸಾರಾಂಶ

ಜೀವನ ಅಂದ್ರೆ ಒಬ್ಬೊಬ್ಬರ ವ್ಯಾಖ್ಯಾನ ಒಂದೊಂದು ರೀತಿ ಇರುತ್ತದೆ. ಕೆಲವೊಬ್ಬರಿಗೆ ಖುಷಿ, ಕೆಲವೊಬ್ಬರಿಗೆ ದುಃಖ, ಇನ್ನು ಕೆಲವರಿಗೆ ನಿರಾಶೆ, ಮತ್ತಷ್ಟು ಮಂದಿಗೆ ಜಂಜಾಟ. ಆದ್ರೆ ನಿಜವಾಗಿಯೂ ಜೀವನ ಅಂದ್ರೇನು ಕೈಗಾರಿಕೋದ್ಯಮಿ ಹರ್ಷ ಗೋಯೆಂಕಾ ಏನ್ ಅಂತಾರೆ ತಿಳಿಯೋಣ.

ಜೀವನ (Life) ಅಂದ್ರೇನು, ಹೀಗೊಂದು ಪ್ರಶ್ನೆ ಕೇಳಿದರೆ ಉತ್ತರಿಸುವುದು ಹಲವರ ಪಾಲಿಗೆ ಕಷ್ಟವಾಗಬಹುದು. ಯಾಕೆಂದರೆ ಜೀವನ ಅನ್ನೋದು ಎಲ್ಲರ ಪಾಲಿಗೂ ಒಂದೇ ರೀತಿಯಾಗಿ ಉಳಿದಿಲ್ಲ. ಅದರ ವ್ಯಾಖ್ಯಾನ ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗುತ್ತಾ ಹೋಗುತ್ತದೆ. ಕೆಲವೊಬ್ಬರ ಪಾಲಿಗೆ ಜೀವನ ಅನ್ನೋದು ಒಂದು ಪಯಣ ಅಷ್ಟೆ, ಆದರೆ ಇನ್ನು ಕೆಲವೊಬ್ಬರ ಪಾಲಿಗೆ ಇದು ಕಠಿಣ ಹಾದಿ. ಲವೊಬ್ಬರಿಗೆ ಖುಷಿ, ಕೆಲವೊಬ್ಬರಿಗೆ ದುಃಖ, ಇನ್ನು ಕೆಲವರಿಗೆ ನಿರಾಶೆ, ಮತ್ತಷ್ಟು ಮಂದಿಗೆ ಜಂಜಾಟ. ಆದ್ರೆ ನಿಜವಾಗಿಯೂ ಜೀವನ ಅಂದ್ರೇನು ಕೈಗಾರಿಕೋದ್ಯಮಿ ಹರ್ಷ ಗೋಯೆಂಕಾ ತಿಳಿಸಿದ್ದಾರೆ. 

ಜೀವನ ಎಂದರೇನು ? 
ಟ್ವಿಟರ್‌ನಲ್ಲಿ ಹರ್ಷ ಗೋಯೆಂಕಾ ತಮ್ಮ ಗುರುವಿನಲ್ಲಿ ಜೀವನ ಏನೆಂದು ಕೇಳಿದೆ. ಅದಕ್ಕೆ ಅವರು ಏನೆಂದು ಉತ್ತರಿಸಿದರು ಎಂಬ ಮಾಹಿತಿಯನ್ನು ಶೇರ್ ಮಾಡಿಕೊಂಡಿದ್ದಾರೆ. 'ನನ್ನ ಗುರುವಿನಲ್ಲಿ ಜೀವನ ಎಂದರೇನು' ಎಂದು ಕೇಳಿದೆ.  ಅದಕ್ಕೆ ಅವರು 'ನೀವು ಏನೂ ಇಲ್ಲದೆ ಬರುತ್ತೀರಿ. ಎಲ್ಲದಕ್ಕಾಗಿ ಹೊಡೆದಾಟ ನಡೆಸುತ್ತೀರಿ. ಆದರೆ ಕೊನೆಗೆ ನೀವು ಎಲ್ಲವನ್ನೂ ಬಿಟ್ಟುಬಿಡುತ್ತೀರಿ. ಎಲ್ಲವನ್ನೂ ಬಿಟ್ಟು ಹೋಗುತ್ತೀರಿ' ಎಂದು ಉತ್ತರಿಸಿದರು ಎಂದು ತಿಳಿಸಲಾಗಿದೆ. ಈ ಟ್ವಿಟರ್‌ಗೆ ನೆಟ್ಟಿಗರು ನಾನಾ ರೀತಿಯಲ್ಲಿ ಕಾಮೆಂಟ್ ಮಾಡಿದ್ದಾರೆ. ಕೆಲವೊಬ್ಬರ ಜೀವನದ ಕುರಿತಾದ ಈ ಮಾತಿಗೆ ಮೆಚ್ಚುಗೆ ಸೂಚಿಸಿದರೆ, ಇನ್ನು ಕೆಲವರು ಇದಕ್ಕೆ ವಿರೋಧವನ್ನು ಸಹ ವ್ಯಕ್ತಪಡಿಸಿದ್ದಾರೆ.

Bhagavad Gita ಹೇಳುವುದ ಕೇಳಿ, ಕೆಟ್ಟ ಅಭ್ಯಾಸ ಬಿಟ್ಟು ಯಶಸ್ಸು ನಿಮ್ಮದಾಗಿಸಿಕೊಳ್ಳಿ!

ಹರ್ಷ ಗೋಯೆಂಕಾ ಟ್ವೀಟ್‌ಗೆ ನೆಟ್ಟಿಗರ ಕಾಮೆಂಟ್‌
ಇನ್ನೊಬ್ಬರು ಕಾಮೆಂಟ್ ಮಾಡಿ 'ಸರ್ ಇಲ್ಲಿ ನಿಮ್ಮ ಗುರು ಹೇಳಿದ್ದು ನೂರಕ್ಕೆ ನೂರರಷ್ಟು ಸರಿಯಿಲ್ಲ. ಜನರು ಬರೀ ಕೈಯಿಂದ ಬರುತ್ತಾರೆ ಮತ್ತು ಬರಿಗೈಯಲ್ಲಿ ಹೋಗುತ್ತಾರೆ ಆದರೆ ಅವರ ಕರ್ಮ ಕೂಡ ಅವರ ಜೊತೆ ಹೋಗುತ್ತದೆ. ಹೊತ್ತಿನ ತುತ್ತಿಗಾಗಿ ಜೀವನದಲ್ಲಿ ಹೋರಾಡುವುದು ಯಾವಾಗಲೂ ಸರಿ. ಆದರೆ ಇನ್ನೊಬ್ಬರ ಜೀವನವನ್ನು ಸ್ವಂತ ಲಾಭಕ್ಕಾಗಿ ಕಸಿದುಕೊಳ್ಳುವುದು ಕೆಟ್ಟ ಕರ್ಮದ ಸಂಕೇತ'. ಎಂದಿದ್ದಾರೆ. ನೀವು ಹೋದ ನಂತರವೂ ಜನರು ನಿಮ್ಮನ್ನು ನೆನಪಿಸಿಕೊಳ್ಳುವಂತಹ ದೊಡ್ಡ ಕೆಲಸವನ್ನು ಮಾಡಿ. ಅದರ ಮೂಲಕ ನಮ್ಮಂತಹ ಸಾಮಾನ್ಯರಿಗೆ ನಮ್ಮದೇ ಆದ ಗುರುತನ್ನು ಸೃಷ್ಟಿಸಿಕೊಳ್ಳುವುದು ಅಸಾಧ್ಯ

ಚಾಣಕ್ಯ ನೀತಿ: ಈ ವಿಷ್ಯಗಳು ಸಾವಿಗಿಂತಲೂ ಹೆಚ್ಚಿನ ನೋವು ನೀಡುತ್ತೆ

ಟಿಬೆಟಿಯನ್ ಜನರ ಆಧ್ಯಾತ್ಮಿಕ ನಾಯಕ ಮತ್ತು ಟಿಬೆಟಿಯನ್ ಬೌದ್ಧಧರ್ಮದ ಜಾಗತಿಕ ನಾಯಕರಾದ ದಲೈ ಲಾಮಾ ಅವರು ತಮ್ಮ ಶಾಂತಿಯುತ ಮಾತುಗಳಿಂದ ಜಗತ್ತನ್ನು ಗುಣಪಡಿಸುವ ಅತ್ಯಂತ ಶಾಂತ ಮತ್ತು ಹಿತವಾದ ಮಾರ್ಗವನ್ನು ಹೊಂದಿದ್ದಾರೆ. ಜೀವನವನ್ನು ಸಂತೋಷ, ಧನಾತ್ಮಕ (Positive) ಮತ್ತು ಆರೋಗ್ಯಕರ ರೀತಿಯಲ್ಲಿ ಹೇಗೆ ಬದುಕಬೇಕು ಎಂಬ ಅವರ ಬುದ್ಧಿವಂತಿಕೆಯು ಜನರು ತಮ್ಮ ಜೀವನ (Life)ವನ್ನು ಪೂರ್ಣವಾಗಿ ಬದುಕಲು ಪ್ರೇರೇಪಿಸುತ್ತದೆ. ಖುಷಿಯಾಗಿರಲು ಏನ್ ಮಾಡ್ಬೇಕು ? ದಲೈಲಾಮ ಏನ್‌ ಹೇಳುತ್ತಾರೆ ತಿಳಿಯೋಣ.

ನೀವು ಮಾಡುವ ಕೆಲಸ ಸಂತೋಷವನ್ನು ನಿರ್ಧರಿಸುತ್ತವೆ: ಸಂತೋಷಕ್ಕಾಗಿ ನಾವು ಎಲ್ಲೆಲ್ಲೂ ಹುಡುಕಬೇಕಾಗಿಲ್ಲ. ಸಂತೋಷ ನಮ್ಮೊಳಗೇ ಇರುತ್ತದೆ. ನಾವದನ್ನು ಹುಡುಕಿಕೊಳ್ಳಬೇಕಷ್ಟೆ. ನಾವು ಮಾಡುವ ಕೆಲಸಗಳಿಂದ ಸಂತೋಷ ಲಭಿಸುತ್ತದೆ. ನಾವು ಮಾಡುವ ಕೆಲಸಗಳು ನಮ್ಮಲ್ಲಿ ಖುಷಿಯ ಭಾವನೆ (Feelings)ಗಳನ್ನು ಹುಟ್ಟು ಹಾಕುತ್ತವೆ. ಹೀಗಾಗಿ ಯಾವಾಗಲೂ ಉತ್ತಮ ಕೆಲಸ ಮಾಡಿ ಎಂದು ದಲೈಲಾಮಾ ಹೇಳುತ್ತಾರೆ

ಇತರರಿಗೆ ಸಹಾಯ ಮಾಡುವುದರಿಂದ ಖುಷಿಯಾಗುತ್ತದೆ:  ಜೀವನದಲ್ಲಿ ಮುಖ್ಯ ಉದ್ದೇಶ ಇತರರಿಗೆ ಸಹಾಯ (Help) ಮಾಡುವುದಾಗಿರಬೇಕು. ನೀವು ಅವರಿಗೆ ಸಹಾಯ ಮಾಡಲು ಸಾಧ್ಯವಾಗದಿದ್ದರೆ, ಕನಿಷ್ಠ ಅವರನ್ನು ನೋಯಿಸಬೇಡಿ ಎಂದು ದಲೈಲಾಮ ಹೇಳುತ್ತಾರೆ. ಇತರರಿಗೆ ಸಹಾಯ ಮಾಡಿದಾಗ, ನೀವು ತಕ್ಷಣ ನಿಮ್ಮ ಮನಸ್ಸಿನಲ್ಲಿ ಹೆಮ್ಮೆ ಮತ್ತು ಸಂತೋಷವನ್ನು ಅನುಭವಿಸುತ್ತೀರಿ. ಜನರಿಗೆ ಅವರ ಕಷ್ಟದ ಸಮಯದಲ್ಲಿ ಸಹಾಯ ಮಾಡುವುದು ಮತ್ತು ಅವರ ಕೃತಜ್ಞತೆಯನ್ನು ಸ್ವೀಕರಿಸುವುದು ನಿಮ್ಮ ಮನಸ್ಸನ್ನು ಖುಷಿ ಪಡಿಸುತ್ತದೆ.

ಕೋಪವನ್ನು ಬಿಟ್ಟುಬಿಡಿ: ಕೋಪವು (Angry) ಮನಸ್ಸಿನಲ್ಲಿ ಅಶಾಂತಿಯನ್ನು ಹುಟ್ಟುಹಾಕುತ್ತದೆ. ಕೋಪವು ಶಾಂತಿಯ ಸ್ಥಿತಿಯನ್ನು ಸಾಧಿಸುವುದನ್ನು ತಡೆಯುವ ಏಕೈಕ ವಿಷಯವಾಗಿದೆ. ಕೋಪ, ದ್ವೇಷ ಮತ್ತು ಅಸೂಯೆಗಳು ನಿಮ್ಮನ್ನು ಆವರಿಸಿಕೊಂಡಾಗ ಯಾವ ಸಂತೋಷವನ್ನು ಸಹ ಆಸ್ವಾದಿಸಲಾಗುವುದಿಲ್ಲ. ಒಮ್ಮೆ ನೀವು ಈ ನಕಾರಾತ್ಮಕ ಭಾವನೆಗಳನ್ನು ಬಿಟ್ಟುಬಿಟ್ಟರೆ ಖುಷಿಯಿಂದ ಇರಲು ಸಾಧ್ಯವಾಗುತ್ತದೆ.

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

Foods that Block Arteries: ನೀವು ಪ್ರತಿದಿನ ಸೇವಿಸೋ ಈ ಆಹಾರಗಳೇ ಹೃದಯಾಘಾತಕ್ಕೆ ಕಾರಣವಾಗಬಹುದು ಎಚ್ಚರ
ಕೆಲ್ಸ ಮಾಡೋವಾಗ ಮಾತ್ರವಲ್ಲ ರಜೆಯಲ್ಲೂ ಕಾಡುತ್ತೆ ಖಿನ್ನತೆ, ಹಾಲಿಡೇ ಡಿಪ್ರೆಷನ್ ಅಂದ್ರೇನು?