ಖಿನ್ನತೆ ಓಡಿಸುವ ಸಂಗೀತ ಕೇಳೋ ಸಮಯ ಗೊತ್ತಿರಲಿ

Published : Dec 13, 2022, 05:11 PM IST
ಖಿನ್ನತೆ ಓಡಿಸುವ ಸಂಗೀತ ಕೇಳೋ ಸಮಯ ಗೊತ್ತಿರಲಿ

ಸಾರಾಂಶ

ಹಾಡಿನಲ್ಲಿ ಮಾಂತ್ರಿಕ ಶಕ್ತಿಯಿದೆ. ನಮ್ಮ ಮನಸ್ಸಿಗೆ ಇಷ್ಟವಾಗುವ ಸಂಗೀತವನ್ನು ಆಲಿಸಿದ್ರೆ ನೋವು ದೂರವಾಗುತ್ತದೆ. ಸಂಗೀತ ಮನಸ್ಸಿನ ಆರೋಗ್ಯ ಸುಧಾರಿಸುತ್ತದೆ. ಆತ್ಮವಿಶ್ವಾಸವನ್ನು ಹೆಚ್ಚಿಸುವ ಹಾಡನ್ನು ನಾವು ಪ್ರತಿ ದಿನ ಕೇಳ್ಬೇಕು.  

ಪ್ರಪಂಚದ ಎಲ್ಲ ದುಃಖವನ್ನು ಮರೆಸುವ ಶಕ್ತಿ ಸಂಗೀತಕ್ಕಿದೆ. ಅನೇಕ ಅಧ್ಯಯನಗಳಲ್ಲಿ ಕೂಡ ಇದು ಸಾಭೀತಾಗಿದೆ. ಸಂಗೀತವನ್ನು ಸಾಮಾನ್ಯವಾಗಿ ಪ್ರತಿಯೊಬ್ಬರೂ ಇಷ್ಟಪಡ್ತಾರೆ. ಮ್ಯೂಜಿಕ್ ನಲ್ಲಿ ಮಹಾನ್ ಶಕ್ತಿಯಿದೆ ಅಂದ್ರೆ ತಪ್ಪಾಗೋದಿಲ್ಲ. ಬೆಳಿಗ್ಗೆ ಹಾಸಿಗೆಯಿಂದ ಏಳ್ತಿದ್ದಂತೆ ಸುಮಧುರ ಸಂಗೀತ ಕೇಳುವ ಜನರು ಸಾಕಷ್ಟು ಮಂದಿ. ಸಂಗೀತ ಮನಸ್ಸಿಗೆ ನೆಮ್ಮದಿ ನೀಡುತ್ತದೆ. ಸಂಗೀತ ಮನಸ್ಸಿಗೆ ಹುಮ್ಮನ್ನು ನೀಡುತ್ತದೆ. ಹಾಡು ದೇಹಕ್ಕೆ ಚೈತನ್ಯ ನೀಡುತ್ತದೆ. ಏನೂ ಸಾಧ್ಯವಿಲ್ಲ ಎಂದು ಕುಳಿತ ವ್ಯಕ್ತಿಯನ್ನು ಸಾಧನೆ ಶಿಖರಕ್ಕೆ ಕರೆದೊಯ್ಯುವ ಮಾಂತ್ರಿಕ ಶಕ್ತಿ ಸಂಗೀತಕ್ಕಿದೆ. 

ಸಂಗೀತ (Music) ನಮ್ಮ ಜೀವನದ ಅವಿಭಾಜ್ಯ ಅಂಗ. ಸಂಗೀತ ಆರೋಗ್ಯ (Health) ಕ್ಕೆ ತುಂಬಾ ಪ್ರಯೋಜನಕಾರಿಯಾಗಿದೆ. ನಿಮಗೆ ಹಾಡು ಹೇಳಲು ಬರಬೇಕಾಗಿಲ್ಲ. ನೀವು ಹಾಡನ್ನು ಕೇಳಿದ್ರೆ ಸಾಕು. ಹಾಡುಗಳನ್ನು ಕೇಳುವುದು ಮಾನಸಿಕ ಆರೋಗ್ಯಕ್ಕೆ ಪ್ರಯೋಜನಕಾರಿ ಎಂದು ತಜ್ಞರು ಹೇಳ್ತಾರೆ. ಅನೇಕ ಬಾರಿ ಖಿನ್ನತೆಗೆ ಒಳಗಾದ ಜನರು, ಮಾನಸಿಕ (Mental) ಅಸ್ವಸ್ಥತೆಯಿಂದ ಬಳಲುತ್ತಿರುವ ಜನರಿಗೆ ಸಂಗೀತ ಚಿಕಿತ್ಸೆ ನೀಡಲಾಗುತ್ತದೆ. ಇದರಿಂದಾಗಿ ಅವರ ಮಾನಸಿಕ ಸ್ಥಿತಿ ಸುಧಾರಿಸುತ್ತದೆ. 

ಖಿನ್ನತೆ (Depression) ಅಥವಾ ಯಾವುದೇ ಒತ್ತಡ (Pressure) ದಿಂದ ನೀವು ಬಳಲುತ್ತಿದ್ದರೆ  ದುಬಾರಿ ಚಿಕಿತ್ಸೆ, ಮಾತ್ರೆ ಔಷಧಿಗಳ ಸೇವನೆ ಬದಲು ನೀವು ಸಂಗೀತ ಚಿಕಿತ್ಸೆಯನ್ನು ಪ್ರಯತ್ನಿಸಬಹುದು. ಹಾಡು ನಿಮ್ಮ ಮನಸ್ಸನ್ನು ಶಾಂತಗೊಳಿಸುತ್ತದೆ. ಒತ್ತಡವನ್ನು ಕಡಿಮೆ ಮಾಡುತ್ತದೆ.  ಆರೋಗ್ಯಕರ ಜೀವನ ನಿಮ್ಮದಾಗಬೇಕು, ಸದಾ ಮನಸ್ಸು ಶಾಂತವಾಗಿರಬೇಕು ಎಂದು ಬಯಸಿದ್ರೆ ನೀವು ನಿಮ್ಮ ನಿತ್ಯದ ಜೀವನದಲ್ಲಿ ಸಂಗೀತವನ್ನು ಅಳವಡಿಸಿಕೊಳ್ಳಬೇಕು. ಸಂಗೀತ ನಿಮ್ಮ ಮೂಡ್ ಚೆನ್ನಾಗಿರುವಂತೆ ನೋಡಿಕೊಳ್ಳುತ್ತದೆ. ಕೋಪವನ್ನು ಕಡಿಮೆ ಮಾಡುವ ಸಾಮರ್ಥ್ಯವನ್ನು ಸಂಗೀತ ಹೊಂದಿದೆ. ನಕಾರಾತ್ಮಕ ಭಾವನೆ ದೂರವಾಗಿ ಸಕಾರಾತ್ಮಕ ಭಾವನೆ ಬೆಳೆಯಲು ಸಂಗೀತ ಒಳ್ಳೆಯದು. ನಿಮ್ಮಲ್ಲಿ ಕೀಳರಿಮೆ ಭಾವನೆ ಇದ್ದರೆ ನೀವು ಅವಶ್ಯವಾಗಿ ಸಂಗೀತ ಆಲಿಸಿ ಎನ್ನುತ್ತಾರೆ ತಜ್ಞರು. ಈ ಸಂಗೀತ ಮನುಷ್ಯನ ಕೀಳರಿಮೆಯನ್ನು ಮೆಟ್ಟಿ ನಿಲ್ಲುತ್ತದೆ. ನಿಮ್ಮಲ್ಲಿ ಆತ್ಮವಿಶ್ವಾಸ ಹೆಚ್ಚಿಸುವ ಕೆಲಸವನ್ನು ಸಂಗೀತ ಮಾಡುತ್ತದೆ. 

ಒತ್ತಡ ಮತ್ತು ಖಿನ್ನತೆ ನಿವಾರಣೆಯಾಗ್ಬೇಕೆಂದ್ರೆ ಈ ಸಮಯದಲ್ಲಿ ಸಂಗೀತ ಕೇಳಿ : 

ಪ್ರಯಾಣದ ವೇಳೆ ಸಂಗೀತ ಕೇಳಿ : ಪ್ರಯಾಣ ಅನೇಕರಿಗೆ ಆಯಾಸವನ್ನುಂಟು ಮಾಡಿದ್ರೆ ಮತ್ತೆ ಕೆಲವರಿಗೆ ಬೋರಿಂಗ್ ಆಗಿರುತ್ತದೆ. ದೀರ್ಘಕಾಲದ ಪ್ರಯಾಣವಿರಲಿ ಇಲ್ಲ ಪ್ರತಿ ದಿನ ಕಚೇರಿಗೆ ಹೋಗುವ ಸಮಯವಿರಲಿ ನೀವು ಈ ಸಂದರ್ಭದಲ್ಲಿ ಸಂಗೀತ ಕೇಳಬೇಕು. ಹಾಡುಗಳನ್ನು ಕೇಳುವುದ್ರಿಂದ ಮನಸ್ಸು ಖುಷಿಯಾಗುತ್ತದೆ. ಹಿತವಾದ ಸಂಗೀತವನ್ನು ಕೇಳಲು ನಿಮಗೆ ಪ್ರಯಾಣದಲ್ಲಿ ಸಮಯ ಸಿಗುತ್ತದೆ. ಪ್ರಯಾಣದ ವೇಳೆ ನೀವು ಸಹ ಪ್ರಯಾಣಿಕರ ಖಾಸಗಿತನವನ್ನು ನೆನಪಿನಲ್ಲಿಟ್ಟುಕೊಳ್ಳಬೇಕು. ಅವರಿಗೆ ಕಿರಿಕಿರಿ ಎನ್ನಿಸದ ಹಾಗೆ ನೀವು ಸಣ್ಣ ಧ್ವನಿಯಲ್ಲಿ ಸಂಗೀತ ಕೇಳಬೇಕು. 

ವರ್ಕೌಟ್ ನಂತ್ರ ತುಂಬಾ ತಲೆನೋವು ಆಗುತ್ತಾ? ಇದಾಗಿರಬಹುದು ಕಾರಣ!

ಅಡುಗೆ ಮಾಡುವ ಸಮಯದಲ್ಲಿ ಹಾಡು ಕೇಳಿ : ಅಡುಗೆ ಮಾಡುವುದರಿಂದ ಒತ್ತಡ ಕಡಿಮೆಯಾಗುತ್ತದೆ. ಈ ಸಮಯದಲ್ಲಿ ಒತ್ತಡ ಇನ್ನಷ್ಟು ಕಡಿಮೆಯಾಗ್ಬೇಕು ಅಂದ್ರೆ ನೀವು ಹಾಡು ಕೇಳ್ತಾ ಅಡುಗೆ ಮಾಡಿ. ಇದು ನಿಮ್ಮನ್ನು ರುಚಿ ರುಚಿ ಅಡುಗೆ ಮಾಡಲು ಪ್ರೋತ್ಸಾಹಿಸುತ್ತದೆ. ಕೆಲವರಿಗೆ ಅಡುಗೆ ಮಾಡುವುದು ಬೇಸರದ ಸಂಗತಿ. ಅಂಥವರು ಸಂಗೀತದ ಜೊತೆ ಅಡುಗೆ ಮಾಡುವ ರೂಢಿ ಮಾಡಿಕೊಳ್ಳಿ. ಆಗ ನಿಮ್ಮ ಬೇಸರ ಮಾಯವಾಗುತ್ತದೆ. 

ಆಹಾರ ಸೇವನೆ ಮಾಡುವಾಗ ಸಂಗೀತ ಆಲಿಸಿ : ಊಟ ಮಾಡುವಾಗಲೂ ಸಂಗೀತ ಕೇಳಬಹುದು. ಲಘು ಸಂಗೀತ ನಿಮ್ಮ ಕಾರ್ಟಿಸೋಲ್ ಮಟ್ಟವನ್ನು ಕಡಿಮೆ ಮಾಡುತ್ತದೆ. ನೀವು ಆರಾಮವಾಗಿ ಆಹಾರ ಸೇವನೆ ಮಾಡಲು ಇದು ನೆರವಾಗುತ್ತದೆ. 

ಸೋಡಿಯಂ ಅಂಶ ಕಡಿಮೆ ಇರೋ ಈ ಆಹಾರದಿಂದ ಆರೋಗ್ಯ

ಮಲಗುವ ಮುನ್ನ ಹಾಡು ಕೇಳಿದ್ರೆ ಉತ್ತಮ ನಿದ್ರೆ : ಮಲಗುವ ಮುನ್ನ ಸಂಗೀತ ಕೇಳುವುದು ತುಂಬಾ ಒಳ್ಳೆಯ ಅಭ್ಯಾಸವಾಗಿದೆ. ಇಡೀ ದಿನದ ಒತ್ತಡ ಇದ್ರಿಂದ ಕಡಿಮೆಯಾಗುತ್ತದೆ. ಹಾಯಾಗಿ ನಿದ್ರೆ ನಿಮ್ಮನ್ನು ಆವರಿಸುತ್ತದೆ.  
 

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

Foods that Block Arteries: ನೀವು ಪ್ರತಿದಿನ ಸೇವಿಸೋ ಈ ಆಹಾರಗಳೇ ಹೃದಯಾಘಾತಕ್ಕೆ ಕಾರಣವಾಗಬಹುದು ಎಚ್ಚರ
ಕೆಲ್ಸ ಮಾಡೋವಾಗ ಮಾತ್ರವಲ್ಲ ರಜೆಯಲ್ಲೂ ಕಾಡುತ್ತೆ ಖಿನ್ನತೆ, ಹಾಲಿಡೇ ಡಿಪ್ರೆಷನ್ ಅಂದ್ರೇನು?