ಕ್ಯಾನ್ಸರ್ ಈಗಿನ ದಿನಗಳಲ್ಲಿ ನೂರಾರು ಜನರ ಜೀವ ತೆಗೆಯುತ್ತಿದೆ. ಕೊನೆ ಸಮಯದಲ್ಲಿ ತನ್ನ ಅಸ್ತಿತ್ವದ ಬಗ್ಗೆ ತಿಳಿಸುವ ಕ್ಯಾನ್ಸರ್ ಅನೇಕರ ಪ್ರಾಣ ಬಲಿಪಡೆಯುತ್ತಿದೆ. ಹೊಟ್ಟೆ ಸ್ವಲ್ಪ ದೊಡ್ಡದಾಗಿ ಬಂದ್ರೂ ಈಗ ಪರೀಕ್ಷೆ ಮಾಡಿಸಿಕೊಳ್ಳುವ ಅನಿವಾರ್ಯತೆಯಿದೆ.
ಕೆಲವು ಖಾಯಿಲೆಗಳು ಸದ್ದಿಲ್ಲದೆ ನಮ್ಮ ದೇಹ ಪ್ರವೇಶ ಮಾಡಿ ರಾದ್ದಾಂತ ಮಾಡಿರುತ್ತವೆ. ಆದ್ರೆ ಅದ್ರ ಪರಿವೆಯೇ ನಮಗಿರೋದಿಲ್ಲ. ಕೊನೆ ಹಂತದಲ್ಲಿ ರೋಗ ಪತ್ತೆಯಾಗುವ ಕಾರಣ ಅದ್ರಿಂದ ಹೊರಗೆ ಬಂದು, ಜೀವ ಉಳಿಸಿಕೊಳ್ಳುವುದು ಸವಾಲಿನ ಕೆಲಸವಾಗುತ್ತದೆ. ಕ್ಯಾನ್ಸರ್ (Cancer) ಕೂಡ ಅಂತಹುದೇ ಒಂದು ಮಾರಣಾಂತಿಕ ಖಾಯಿಲೆ (Disease) ಗಳಲ್ಲಿ ಒಂದಾಗಿದೆ. ಕೆಲವೇ ಕೆಲವು ಮಂದಿಗೆ ಮಾತ್ರ ಇದು ಪ್ರಾಥಮಿಕ ಹಂತದಲ್ಲಿ ತಿಳಿದುಬರುತ್ತದೆ. ದೇಹದಲ್ಲಿ ಜೀವಕೋಶಗಳ ವಿಭಜನೆ ಒಂದು ನಿಯಂತ್ರಿತ ರೀತಿಯಲ್ಲಿ ಆಗುತ್ತದೆ. ಇಂತಹ ಜೀವಕೋಶ (Cell) ಗಳು ಅನಿಯಂತ್ರಿತ ಬೆಳವಣಿಗೆಯಾಗಿ ಅಂಗಾಂಶಗಳ ಮೇಲೆ ದುಷ್ಪರಿಣಾಮ ಬೀರುತ್ತದೆ. ಜೀವಕೋಶಗಳು ಗುಂಪಾಗಿ ರೂಪಗೊಂಡು ಗಡ್ಡೆಯಾಗುತ್ತದೆ.
ಇದರಲ್ಲಿ ಕೂಡ ಕೆಲವು ಗಡ್ಡೆಗಳು ಹಾನಿಕರವಾಗಿದ್ದು ಇನ್ನು ಕೆಲವು ಗಡ್ಡೆಗಳಿಂದ ಶರೀರಕ್ಕೆ ಯಾವುದೇ ಹಾನಿಯಾಗುವುದಿಲ್ಲ. ಶರೀರ (Body) ಕ್ಕೆ ಹಾನಿಮಾಡುವ ಕ್ಯಾನ್ಸರ್ ಕಣದಿಂದ ಸ್ತನ, ಕರುಳು, ಪ್ರಾಸ್ಟೇಟ್ ಕ್ಯಾನ್ಸರ್ ಮುಂತಾದವು ಉಂಟಾಗುತ್ತದೆ. ದೇಹದಲ್ಲಿನ ಕೆಲವು ಗಡ್ಡೆ ಅಥವಾ ಗಂಟುಗಳನ್ನು ಮೊದಮೊದಲು ನಾವು ನಿರ್ಲಕ್ಷಿಸುತ್ತೇವೆ. ವೈದ್ಯರಿಗೂ ಒಮ್ಮೊಮ್ಮೆ ಇದರ ಸೂಚನೆ ಸಿಗುವುದಿಲ್ಲ. ಅಮೆರಿಕದಲ್ಲಿ ಕೂಡ ಇಂತಹುದೇ ಒಂದು ಘಟನೆ ನಡೆದಿದೆ. ಮೊದಲು ಮಹಿಳೆ ಗರ್ಭವತಿಯೆಂದು ತಿಳಿದಿದ್ದ ವೈದ್ಯರೇ ಕೊನೆಗೆ ಶಾಕ್ ಗೆ ಒಳಗಾಗಿದ್ದಾರೆ.
undefined
ಬೇಸಿಗೆಯಲ್ಲಿ ಕಾಡೋ ಒಣ ಚರ್ಮ ಸಮಸ್ಯೆ ಹೋಗಲಾಡಿಸುವುದು ಹೇಗೆ?
ಕ್ಯಾನ್ಸರ್ ಅನ್ನು ಪ್ರೆಗ್ನೆನ್ಸಿ ಅಂದುಕೊಂಡಳು : ಜೀವಕೋಶಗಳ ಅನಿಯಂತ್ರಿತ ಬೆಳವಣಿಗೆಯಾದಾಗ ಅದು ಎಲ್ಲ ಸ್ನಾಯುಗಳಿಗೂ ಹರಡುತ್ತದೆ. ಇದನ್ನು ಜನರು ಕ್ಯಾನ್ಸರ್ ಎಂದು ತಿಳಿಯದೇ ಬೇರೆ ಯಾವುದೋ ಖಾಯಿಲೆ ಎಂಬ ತಪ್ಪು ಕಲ್ಪನೆಯಲ್ಲಿರುತ್ತಾರೆ. ಅಮೆರಿಕದ ಫ್ಲೋರಿಡಾದ ನಿವಾಸಿಯಾದ ಡಾ. ಲಾರೆನ್ ಜುವಾ ವೃತ್ತಿಯಲ್ಲಿ ಸ್ತ್ರೀ ರೋಗ ತಜ್ಞರು. ಮೊದಮೊದಲು ಇವರಿಗೆ ಹೊಟ್ಟೆಯಲ್ಲಿ ನೋವು ಮತ್ತು ಸುಸ್ತು ಕಾಣಿಸಿಕೊಳ್ಳುತ್ತಿತ್ತು. ಸ್ವತಃ ವೈದ್ಯರಾದ ಇವರು ತನ್ನ ಶರೀರದಲ್ಲಾಗುತ್ತಿರುವ ಕೆಲವು ಬದಲಾವಣೆಗಳನ್ನು ಗಮನಿಸಿ ತಾನು 16 ವಾರಗಳ ಗರ್ಭಿಣಿ ಎಂದುಕೊಂಡಿದ್ದರು. ನಂತರದಲ್ಲಿ ಇವರಿಗೆ ತಾನು ಗರ್ಭಿಣಿಯಲ್ಲ, ತನ್ನ ಹೊಟ್ಟೆಯಲ್ಲಿರುವುದು ಮಗುವಲ್ಲ ಕ್ಯಾನ್ಸರ್ ಗಡ್ಡೆ ಎಂಬುದು ಗೊತ್ತಾಯ್ತು.
ಈ ಲಕ್ಷಣಗಳು ಕಾಣಿಸಿತ್ತು : ಸಾಮಾನ್ಯವಾಗಿ ಗರ್ಭದಾರಣೆಯ ಕೆಲ ವಾರದಲ್ಲಿ ಸುಸ್ತು ಹಾಗೂ ಇನ್ನಿತರ ಕೆಲವು ಚಿಕ್ಕ ಚಿಕ್ಕ ಬದಲಾವಣೆಗಳು ಆಗುತ್ತದೆ. ವೈದ್ಯೆಯಾದ ಜುವಾ ಅವರಿಗೆ ಕೂಡ ಸುಮಾರು ಎರಡು ವಾರಗಳ ತನಕ ಸುಸ್ತು ಉಂಟಾಗುತ್ತಿತ್ತು. ಮಕ್ಕಳನ್ನು ನೋಡಿಕೊಳ್ಳುವುದು, ಮನೆಯ ಕೆಲಸದಿಂದ ಸುಸ್ತಾಗಿರಬಹುದು ಎಂದು ಅವರು ಭಾವಿಸಿದ್ದರು. ತನಗೆ ಕರುಳಿನ ಕ್ಯಾನ್ಸರ್ ಇದೆ ಎನ್ನುವುದರ ಅರಿವೇ ಅವರಿಗಿರಲಿಲ್ಲ. ಕೊಲೊನ್ ಕ್ಯಾನ್ಸರ್ ಅಥವಾ ದೊಡ್ಡ ಕರುಳಿನ ಕ್ಯಾನ್ಸರ್ ಅಲ್ಲಿ ಸಾಮಾನ್ಯವಾಗಿ ಹೊಟ್ಟೆಯಲ್ಲಿ ನೋವು, ತೂಕದಲ್ಲಿ ಇಳಿಕೆ, ಮಲಬದ್ಧತೆ, ಮಲದಲ್ಲಿ ರಕ್ತ, ಲೂಸ್ ಮೊಷನ್ ಮುಂತಾದ ಸಮಸ್ಯೆಗಳು ಕಾಣಿಸುತ್ತವೆ. ಡಾ. ಲಾರೆನ್ ಹೇಳುವ ಪ್ರಕಾರ ಯುವಕರಲ್ಲಿ ಹೆಚ್ಚಿನ ಲಕ್ಷಣಗಳು ಕಾಣಿಸುವುದಿಲ್ಲ. ವಯಸ್ಸಾದವರಲ್ಲಿ ರೋಗಲಕ್ಷಣಗಳು ತೀವ್ರವಾಗಿರುತ್ತವೆ. ಹಾಗಾಗಿ ಕ್ಯಾನ್ಸರ್ ಬರದಂತೆ ಎಚ್ಚರಿಕೆವಹಿಸಬೇಕು ಎಂದು ಲಾರೆನ್ ಹೇಳುತ್ತಾರೆ.
ಪಾರ್ಕಿನ್ಸನ್ ರೋಗದ ಬಗ್ಗೆ ನೀವು ತಿಳಿಯಲೇ ಬೇಕಾದ ಮಾಹಿತಿಗಳಿಷ್ಟು
2020 ರಲ್ಲಿ 20 ಲಕ್ಷ ಪ್ರಕರಣಗಳು : 2020 ರಲ್ಲಿ ಕೊಲೊನ್ ಕ್ಯಾನ್ಸರ್ ನ 2 ಮಿಲಿಯನ್ ಪ್ರಕರಣಗಳು ಬೆಳಕಿಗೆ ಬಂದಿವೆ ಎಂದು ವಿಶ್ವ ಸಂಸ್ಥೆ ವರದಿ ಮಾಡಿದೆ. ಕೊಲೊರೆಕ್ಟಲ್, ಕ್ಯಾನ್ಸರ್ ಗೆ ಮುಖ್ಯ ಕಾರಣವಾಗಿದೆ ಎಂದು ಕೂಡ ವಿಶ್ವಸಂಸ್ಥೆ ತಿಳಿಸಿದೆ. ಇದರಿಂದಾಗಿ ಪ್ರತಿವರ್ಷ ಜಗತ್ತಿನಲ್ಲಿ 1 ಮಿಲಿಯನ್ ಜನರು ಸಾಯುತ್ತಾರೆ. ಕೊಲೊನ್ ಕ್ಯಾನ್ಸರ್ ಸಣ್ಣ ಪಾಲಿಪ್ಸ್ ರೂಪದಲ್ಲಿ ಆರಂಭವಾಗಿ ನಂತರದಲ್ಲಿ ಕ್ಯಾನ್ಸರ್ ಕೋಶವಾಗಿ ಬದಲಾಗುತ್ತದೆ. ಹಾಗಾಗಿ ಇದಕ್ಕೆ ಸಕಾಲಿಕ ಚಿಕಿತ್ಸೆ ಅಗತ್ಯ.