ತಾಪಮಾನ ಏರಿಕೆ; ಇನ್ನು ಹುಟ್ಟುವ ಮಕ್ಕಳಿಗೆ ಜೀವನವಿಡೀ ಆರೋಗ್ಯ ತೊಂದರೆ!

By Kannadaprabha NewsFirst Published Nov 17, 2019, 11:38 AM IST
Highlights

ಜಾಗತಿಕ ತಾಪಮಾನ ಏರಿಕೆಯಿಂದ ಸುಮಾರು 600 ಕೋಟಿ ಜನರು ಸಮಸ್ಯೆಗೆ ತುತ್ತಾಗುತ್ತಾರೆ. ತಾಪಮಾನ ಏರಿಕೆಯನ್ನು ಕಡಿಮೆ ಮಾಡಬೇಕು ಎಂದು ಮಾಡಿಕೊಂಡ ಪ್ಯಾರಿಸ್‌ ಒಪ್ಪಂದದಿಂದ ಇತ್ತೀಚೆಗೆ ಅಮೆರಿಕ ಹೊರಬಂದಿದೆ. ಆದರೆ ಪ್ಯಾರಿಸ್‌ ಒಪ್ಪಂದದ ಅನುಸಾರ ತಾಪಮಾನ ಕಡಿಮೆ ಮಾಡದಿದ್ದರೆ ಇಡೀ ಜಗತ್ತಿಗೆ ಕಂಟಕ ತಪ್ಪಿದ್ದಲ್ಲ. 

ತಾಪಮಾನ ಏರಿಕೆಯಿಂದ ಜಗತ್ತು ಯಾವ ರೀತಿ ತೊಂದರೆ ಅನುಭವಿಸುತ್ತಿದೆ ಎಂಬ ಬಗ್ಗೆ ನಿತ್ಯ ವರದಿಗಳಾಗುತ್ತಿವೆ. ಇದೇ ರೀತಿ ತಾಪಮಾನ ಏರಿಕೆಯಾಗುತ್ತಿದ್ದರೆ ಈಗ ಜನಿಸುವ ಮಕ್ಕಳು ಅವರ ಜೀವನ ಪರ್ಯಂತ ಆರೋಗ್ಯ ಸಮಸ್ಯೆಯಿಂದ ಬಳಲುತ್ತಾರೆ. ಈ ಮಕ್ಕಳಿಗೆ 71 ವರ್ಷವಾಗುವ ವೇಳೆಗೆ ಜಗತ್ತಿನ ತಾಪಮಾನ ಸರಾಸರಿ 4 ಡಿಗ್ರಿ ಸೆಲ್ಷಿಯಸ್‌ನಷ್ಟುಏರಿಕೆಯಾಗಿರಲಿದೆ ಎಂದು ದಿ ಲ್ಯಾನ್ಸೆಟ್‌ ಕೌಂಟ್‌ಡೌನ್‌ ಮೆಡಿಕಲ್‌ ಜರ್ನಲ್‌ ಪ್ರಕಟಿಸಿದೆ.

ಅಮೆರಿಕದ ಮನವೊಲಿಸದಿದ್ದರೆ ಕಷ್ಟ

ಜಾಗತಿಕ ತಾಪಮಾನ ಏರಿಕೆಯಿಂದ ಸುಮಾರು 600 ಕೋಟಿ ಜನರು ಸಮಸ್ಯೆಗೆ ತುತ್ತಾಗುತ್ತಾರೆ. ತಾಪಮಾನ ಏರಿಕೆಯನ್ನು ಕಡಿಮೆ ಮಾಡಬೇಕು ಎಂದು ಮಾಡಿಕೊಂಡ ಪ್ಯಾರಿಸ್‌ ಒಪ್ಪಂದದಿಂದ ಇತ್ತೀಚೆಗೆ ಅಮೆರಿಕ ಹೊರಬಂದಿದೆ. ಆದರೆ ಪ್ಯಾರಿಸ್‌ ಒಪ್ಪಂದದ ಅನುಸಾರ ತಾಪಮಾನ ಕಡಿಮೆ ಮಾಡದಿದ್ದರೆ ಇಡೀ ಜಗತ್ತಿಗೆ ಕಂಟಕ ತಪ್ಪಿದ್ದಲ್ಲ.

2050 ಕ್ಕೆ ಮುಂಬೈ, ಕೋಲ್ಕತ್ತಾರೆ ಮುಳುಗಡೆ ಭೀತಿ

ಒಪ್ಪಂದದಂತೆ ಜಾಗತಿಕ ತಾಪಮಾನವನ್ನು 2 ಡಿಗ್ರಿ ಸೆಲ್ಷಿಯಸ್‌ನಷ್ಟುಕಡಿಮೆ ಮಾಡಬೇಕು ಮತ್ತು ಅದಕ್ಕಾಗಿ ಕಾರ್ಬನ್‌ ಹೊರಸೂಸುವಿಕೆಯನ್ನು ತಗ್ಗಿಸಲು ಎಲ್ಲಾ ದೇಶಗಳು ಶತಪ್ರಯತ್ನ ಮಾಡಲೇಬೇಕು.

ಆಹಾರವೇ ದೊರಕುವುದಿಲ್ಲ!

ತಾಪಮಾನ ಏರಿಕೆಯಾಗುತ್ತ ಹೋದಂತೆ ಬೆಳೆ ಬೆಳೆಯುವುದು ಕಷ್ಟವಾಗುತ್ತದೆ. ತತ್ಪರಿಣಾಮ ಮಾರುಕಟ್ಟೆಯಲ್ಲಿ ಆಹಾರ ಧಾನ್ಯದ ಬೆಲೆ ಗಗನಕ್ಕೇರುತ್ತದೆ. ಶ್ರೀಮಂತರೇನೋ ಕೊಂಡುಕೊಳ್ಳುತ್ತಾರೆ. ಆದರೆ ಬಡವರು ಊಟಕ್ಕೆ ಪರದಾಡಬೇಕಾದ ಪರಿಸ್ಥಿತಿ ಬರಬಹುದು. ಆಗ ಬಡಮಕ್ಕಳು ಪೌಷ್ಟಿಕ ಆಹಾರದ ಕೊರತೆ ಎದುರಿಸುತ್ತಾರೆ.

ಮಕ್ಕಳ ಬೆಳವಣಿಗೆ ಕುಂಠಿತವಾಗುತ್ತದೆ. ಅವರಲ್ಲಿ ರೋಗ ನಿರೋಧಕ ಶಕ್ತಿ ಕಡಿಮೆಯಾಗುತ್ತದೆ. ಪರಿಣಾಮ ಮಕ್ಕಳಲ್ಲಿ ದೀರ್ಘಕಾಲಿಕ ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ಕಳೆದ 30 ವರ್ಷಗಳಿಂದ ಜಾಗತಿಕವಾಗಿ ಆಹಾರ ಧಾನ್ಯಗಳ ಇಳುವರಿ ಕಡಿಮೆಯಾಗುತ್ತದೆ. ಭಾರತದಲ್ಲಿ ಜೋಳ 4%, ಗೋದಿ 6%, ಸೋಯಾಬೀನ್‌ 3%, ಭತ್ತ 4% ಇಳುವರಿ ಕಡಿಮೆಯಾಗಿದೆ.

ಪ್ರಪಂಚದ ಬಹುತೇಕ ದೇಶಗಳು ಒಮ್ಮೆಲೆ ಹೋರಾಟಕ್ಕಿಳಿದಿರುವ ಅತೀ ದೊಡ್ಡ ಪ್ರತಿಭಟನೆ!

ಒಂದೇ ವರ್ಷ 29 ಲಕ್ಷ ಜನರ ಸಾವು!

ಇಂದಿನ ಬಹುಪಾಲು ಯುವಜನತೆ ವಿಷಕಾರಿ ಅನಿಲವನ್ನು ಸೇವಿಸುತ್ತಿದ್ದಾರೆ. ಇದರಿಂದ ಹೃದಯ ಮತ್ತು ಶ್ವಾಸಕೋಶಕ್ಕೆ ತೀವ್ರ ಹಾನಿಯಾಗುತ್ತದೆ. ಗಾಳಿಯಲ್ಲಿನ ಪರ್ಟಿಕ್ಯುಲೇಟ್‌ ಮ್ಯಾಟರ್‌ನಿಂದಾಗಿ 2017ರಲ್ಲಿ ಜಗತ್ತಿನಾದ್ಯಂತ 29 ಲಕ್ಷ ಜನರು ಸಾವನ್ನಪ್ಪಿದ್ದಾರೆ.

ಇನ್ಮುಂದೆ ಪ್ರವಾಹ, ಚಂಡಮಾರುತ, ಕಾಳ್ಗಿಚ್ಚು ಹೆಚ್ಚು

ಹವಾಮಾನ ಬದಲಾವಣೆಯಿಂದ ಅಕಾಲಿಕ ಮಳೆ ಉಂಟಾಗಿ ಮಕ್ಕಳಲ್ಲಿ ಅತಿಸಾರ ಮತ್ತು ಸೊಳ್ಳೆಗಳಿಂದ ತಗಲುವ ರೋಗಗಳು ಹೆಚ್ಚುತ್ತವೆ. ವಾಯುಮಾಲಿನ್ಯ ಅತಿಯಾಗಿ ಅದರಲ್ಲಿನ ಪರ್ಟಿಕ್ಯುಲೇಟ್‌ ಮ್ಯಾಟರ್‌ ಪ್ರಮಾಣ ಏರಿಕೆಯಾದರೆ ಸಾವಿನ ಸಂಖ್ಯೆಯೂ ಅಧಿಕವಾಗುತ್ತದೆ. ಹಾಗೆಯೇ ಪ್ರವಾಹ, ಸುನಾಮಿ, ಚಂಡಮಾರುತ, ಕಾಳ್ಗಿಚ್ಚು ಹೆಚ್ಚಾಗಿ ಜನರು ನಲುಗಬೇಕಾಗುತ್ತದೆ.

click me!