ಹೀಗೆಲ್ಲಾ ಮಾಡಿದ್ರೆ ನಿಮ್ಗೂ ಮೂತ್ರಪಿಂಡದ ಕಾಯಿಲೆ ಬರ್ಬೋದು..!

By Suvarna News  |  First Published Mar 24, 2022, 2:21 PM IST

ಮೂತ್ರಪಿಂಡದ ಕಾಯಿಲೆ (Chronic Kidney Disease) ಸಾಮಾನ್ಯವಾಗಿ ಎಲ್ಲರಲ್ಲೂ ಕಂಡುಬರಲ್ಲ. ಹೀಗಾಗಿ ಇದರ ಬಗ್ಗೆ ಎಲ್ಲರೂ ಎಚ್ಚರಿಕೆ ವಹಿಸೋದಿಲ್ಲ. ಆದ್ರೆ ನೀವು ಡೈಲಿ (Daily) ಈ ರೀತಿಯ ತಪ್ಪು (Mistake)ಗಳನ್ನು ಮಾಡ್ತಿದ್ರೆ ನಿಮ್ಗೂ ಮಾತ್ರಪಿಂಡದ ಕಾಯಿಲೆ ಬರೋದ್ರಲ್ಲಿ ಡೌಟೇ ಇಲ್ಲ.


ಮೂತ್ರಪಿಂಡಗಳು ಅಥವಾ ಕಿಡ್ನಿ (Kidney) ನಮ್ಮ ದೇಹದಲ್ಲಿನ ಅದ್ಭುತ ಅಂಗಗಳು. ಬೀಜದ ಆಕಾರದಲ್ಲಿರುವ ಕಿಡ್ನಿ ಹೊಟ್ಟೆಯ ಮೇಲ್ಭಾಗದಲ್ಲಿಇರುತ್ತದೆ. ಇದು ದೇಹ (Body)ದಿಂದ ವಿಷಾಂಶಗಳ ವಿಸರ್ಜನೆಯಂತಹಾ ಪ್ರಧಾನ ಪಾತ್ರವನ್ನು ನಿರ್ವಹಿಸುತ್ತವೆ. ಪ್ರತಿ ಕಿಡ್ನಿಯೂ 10 ಲಕ್ಷ ಮೈಕ್ರೋಫಿಲ್ಟರ್‌ಗಳನ್ನು ಹೊಂದಿರುತ್ತದೆ. ಈ ಫಿಲ್ಟರ್‌ಗಳ ಮೂಲಕ ದೇಹದ ತ್ಯಾಜ್ಯ ದ್ರವ ಅಂಶ ಸೋಸುತ್ತದೆ. ಫಿಲ್ಟರ್‌ಗಳೂ ಸರಿಯಾಗಿ ಕಾರ್ಯ ನಿರ್ವಹಿಸದೆ ಹೋದರೆ ಕಲ್ಮಶಗಳು ನಮ್ಮ ದೇಹದಲ್ಲಿ ಉಳಿದು ಸಮಸ್ಯೆ ಉಂಟುಮಾಡುತ್ತವೆ. 

ಕಿಡ್ನಿಗಳು ದೇಹದಲ್ಲಿ ನೀರು (Water) ಮತ್ತು ಉಪ್ಪಿನಂಶವನ್ನು ಉಳಿಸಿಕೊಂಡು ಕಲ್ಮಶವನ್ನು ಮೂತ್ರದ ಮೂಲಕ ತೆಗೆದು ಹಾಕುತ್ತವೆ. ಹಿಮೋಗ್ಲೋಬಿನ್ ಮಟ್ಟ, ಮೂಳೆ ಆರೋಗ್ಯ (Bone Health) ಮತ್ತು ಒಟ್ಟಾರೆ ರೋಗನಿರೋಧಕ ಶಕ್ತಿಯನ್ನು ಕಾಪಾಡಿಕೊಳ್ಳುತ್ತವೆ. ಆದ್ದರಿಂದ, ಪ್ರತಿಯೊಬ್ಬರೂ ಕಿಡ್ನಿ ಆರೋಗ್ಯವನ್ನು ಕಾಪಾಡಿಕೊಳ್ಳುವುದು ಮುಖ್ಯವಾಗಿದೆ.

Tap to resize

Latest Videos

Health Tips: ಮಧುಮೇಹಿಗಳಿಗೆ ಅಪಾಯಕಾರಿ ಮೂತ್ರಪಿಂಡದ ಕಾಯಿಲೆ!

ಕಿಡ್ನಿ ಕಾಯಿಲೆಗಳೇನು ?
ಕಿಡ್ನಿಯ ಸಮಸ್ಯೆಗಳು ಆರಂಭದಿಂದಲೇ ಸೂಚನೆ ಕೊಡಲು ಆರಂಭಿಸುತ್ತವೆ. ಕಿಡ್ನಿಯಲ್ಲಿ ಕಲ್ಲು ಆದರೆ ಮೂತ್ರ ನಿಧಾನವಾಗುವುದು, ಕಟ್ಟಿ ಕಟ್ಟಿ ಬರುವುದು, ಪದೇ ಪದೇ ಮೂತ್ರಕ್ಕೆ ಹೋಗಬೇಕು ಅನಿಸುವುದು ಸಾಮಾನ್ಯ. ಇದರ ಮೊದಲ ಮತ್ತು ಎರಡನೆಯ ಹಂತದಲ್ಲಿ ವೈದ್ಯರು ಸುಲಭವಾಗಿ ಇದನ್ನು ನಿವಾರಣೆ ಮಾಡುತ್ತಾರೆ. ಮೂರನೇ ಮತ್ತು ನಾಲ್ಕನೇ ಹಂತಗಳಲ್ಲಿ ಹೆಚ್ಚಿನ ವೈದ್ಯಕೀಯ (Medical) ನಿರ್ವಹಣೆ ಬೇಕು. ಕಿಡ್ನಿ ವಿಫಲವಾಗಿದ್ದರೆ, ಕಾರ್ಯ ಸರಿಯಾಗಿ ನಿರ್ವಹಿಸಲಾಗದ ಹಂತ ತಲುಪಿದ್ದರೆ, ಡಯಾಲಿಸಿಸ್ (Dialysis) ಅಗತ್ಯ. ಆಗ ಡಯಾಲಿಸಿಸ್ ಅಥವಾ ಕಿಡ್ನಿ ಕಸಿಯ ಬಗ್ಗೆ ಚಿಂತಿಸಬೇಕಾಗುತ್ತದೆ.

ಮೂತ್ರಪಿಂಡ ಕಾಯಿಲೆಗಳ ಲಕ್ಷಣಗಳೇನು ?
ಮೂತ್ರಪಿಂಡ ಕಾಯಿಲೆ(Chronic Kidney Disease)ಯಿದ್ದಾಗ ಮೂತ್ರ ಉತ್ಪಾದನೆಯಲ್ಲಿ ವ್ಯತ್ಯಾಸ, ಮೂತ್ರ ಪ್ರಮಾಣದಲ್ಲಿ ಹೆಚ್ಚಳ ಕಂಡು ಬರುತ್ತದೆ. ವಿಶೇಷವಾಗಿ ರಾತ್ರಿಯ ಹೊತ್ತಿನಲ್ಲಿ ಮೂತ್ರ (Urine)ದ ಪ್ರಮಾಣ ಕಡಿಮೆಯಾಗುತ್ತದೆ. ದೇಹದಲ್ಲಿ ರಕ್ತದೊತ್ತದ ಹೆಚ್ಚಾಗುತ್ತದೆ. ಯಾವಾಗಲೂ ಸುಸ್ತಾಗುತ್ತಿರುತ್ತದೆ. ಮೂತ್ರ ಕಡು ಬಣ್ಣ ಅಥವಾ ನೊರೆಯಿಂದ ಕೂಡಿರುತ್ತದೆ. ಕೆಲವೊಮ್ಮೆ ರಕ್ತವನ್ನೂ ಒಳಗೊಂಡಿರುತ್ತದೆ. 

Health Alert: ಈ ಸಮಸ್ಯೆ ಹೊಂದಿರುವ ಜನ ತಪ್ಪಿಯೂ ಬಾದಾಮಿ ಸೇವಿಸಬಾರದು

ಮೂತ್ರಪಿಂಡ ಕಾಯಿಲೆಯನ್ನು ತಿಳಿದುಕೊಳ್ಳುವುದು ಹೇಗೆ ?
ಮೂತ್ರಪಿಂಡ ಕಾಯಿಲೆಯ ರೋಗನಿರ್ಣಯಕ್ಕೆ ಮೊದಲ ಹೆಜ್ಜೆಯಾಗಿ,  ವೈದ್ಯರು ನಿಮ್ಮ ವೈಯಕ್ತಿಕ ಮತ್ತು ಕುಟುಂಬದ ಇತಿಹಾಸವನ್ನು ನಿಮ್ಮೊಂದಿಗೆ ಚರ್ಚಿಸುತ್ತಾರೆ. ಇತರ ವಿಷಯಗಳ ಜೊತೆಗೆ, ನೀವು ಅಧಿಕ ರಕ್ತದೊತ್ತಡದಿಂದ ಬಳಲುತ್ತಿದ್ದೀರಾ, ಮೂತ್ರಪಿಂಡದ ಕ್ರಿಯೆಯ ಮೇಲೆ ಪರಿಣಾಮ ಬೀರುವ ಔಷಧಿಗಳನ್ನು ತೆಗೆದುಕೊಳ್ಳುತ್ತೀರಾ ಎಂಬುದನ್ನು ತಿಳಿದುಕೊಳ್ಳುತ್ತಾರೆ. ಬಳಿಕ ದೈಹಿಕ ಪರೀಕ್ಷೆಯನ್ನು ನಡೆಸುತ್ತಾರೆ. ನಂತರ ಹೃದಯ (Heart) ಅಥವಾ ರಕ್ತನಾಳಗಳೊಂದಿಗಿನ ಸಮಸ್ಯೆಗಳ ಚಿಹ್ನೆಗಳನ್ನು ಪರಿಶೀಲಿಸುತ್ತಾರೆ ಮತ್ತು ನರವೈಜ್ಞಾನಿಕ ಪರೀಕ್ಷೆಯನ್ನು ನಡೆಸುತ್ತಾರೆ.

ರಕ್ತ ಪರೀಕ್ಷೆಗಳು, ಮೂತ್ರಪಿಂಡದ ಕಾರ್ಯ ಪರೀಕ್ಷೆಗಳು ನಿಮ್ಮ ರಕ್ತದಲ್ಲಿನ ಕ್ರಿಯೇಟಿನೈನ್ ಮತ್ತು ಯೂರಿಯಾದಂತಹ ತ್ಯಾಜ್ಯ ಉತ್ಪನ್ನಗಳ ಮಟ್ಟವನ್ನು ನೋಡುತ್ತವೆ. ಮೂತ್ರ ಪರೀಕ್ಷೆಗಳು, ಮೂತ್ರದ ಮಾದರಿಯನ್ನು ವಿಶ್ಲೇಷಿಸುತ್ತದೆ. ಇದು ದೀರ್ಘಕಾಲದ ಮೂತ್ರಪಿಂಡ ವೈಫಲ್ಯವನ್ನು ಸೂಚಿಸುವ ಅಸಹಜತೆಗಳನ್ನು ಬಹಿರಂಗಪಡಿಸಬಹುದು. ಇಮೇಜಿಂಗ್ ಪರೀಕ್ಷೆಯಲ್ಲಿ ವೈದ್ಯರು ಮೂತ್ರಪಿಂಡಗಳ ರಚನೆ ಮತ್ತು ಗಾತ್ರವನ್ನು ನಿರ್ಣಯಿಸಲು ಅಲ್ಟ್ರಾಸೌಂಡ್ ಅನ್ನು ಬಳಸಬಹುದು. ಕೆಲವು ಸಂದರ್ಭಗಳಲ್ಲಿ ಇತರ ಇಮೇಜಿಂಗ್ ಪರೀಕ್ಷೆಗಳನ್ನು ಬಳಸಬಹುದು.

ಮೂತ್ರಪಿಂಡ ಕಾಯಿಲೆಗಳು ಉಂಟಾಗುವ ಅಪಾಯ ಯಾರಿಗೆ ಹೆಚ್ಚು ?
ಅಧಿಕ ರಕ್ತದೊತ್ತಡ (Blood preasure), ದೀರ್ಘಕಾಲದಿಂದ ಮಧುಮೇಹ (Diabetes)ಹೊಂದಿರುವವರಿಗೆ ಮೂತ್ರಪಿಂಡದ ಕಾಯಿಲೆಗಳು ಉಂಟಾಗುವ ಅಪಾಯ ಹೆಚ್ಚು. ಮಾತ್ರವಲ್ಲ, ಧೂಮಪಾನಿಗಳು, ಬೊಜ್ಜು ಹೊಂದಿರುವವರು, ಮೂತ್ರಪಿಂಡ ಕಾಯಿಲೆಗಳ ಕೌಟುಂಬಿಕ ಇತಿಹಾಸ ಹೊಂದಿರುವವರು, ನೋವು ನಿವಾರಕ ಔಷಧಗಳನ್ನು ಅಧಿಕ ಪ್ರಮಾಣದಲ್ಲಿ ತೆಗೆದುಕೊಳ್ಳುವವರಿಗೆ ಕಾಯಲೆ ಬೇಗ ಕಾಣಿಸಿಕೊಳ್ಳುತ್ತದೆ.

ಸ್ವಯಂ ನಿರೋಧಕ ಕಾಯಿಲೆಗಳಂತಹ ರೋಗಗಳು ಮೂತ್ರಪಿಂಡಗಳ ಮೇಲೆ ನೇರವಾಗಿ ಪರಿಣಾಮ ಬೀರುತ್ತವೆ. ಈ ರೋಗಗಳನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳುವುದು ಅತಿಮುಖ್ಯ. ಈ ಕಾಯಿಲೆಗಳಿಗಾಗಿ ನಿಯಮಿತ ತಪಾಸಣೆ, ಔಷಧಿಗಳು ಮೂತ್ರಪಿಂಡಗಳ ಮೇಲೆ ಪರಿಣಾಮ ಬೀರುವ ಅಡ್ಡ ಪರಿಣಾಮಗಳನ್ನು ತಡೆಯಲು ಸಹಾಯ ಮಾಡುತ್ತದೆ.

ಮೂತ್ರಪಿಂಡ ಕಾಯಿಲೆಗಳನ್ನು ತಡೆಗಟ್ಟುವುದು ಹೇಗೆ ?
ಮೂತ್ರಪಿಂಡ ಕಾಯಿಲೆಗಳನ್ನು ತಡೆಗಟ್ಟಲು ನಿಯಮಿತವಾಗಿ ವ್ಯಾಯಾಮ (Exercise) ಮಾಡಬೇಕು, ಆಹಾರಾಭ್ಯಾಸ ಸಮರ್ಪಕವಾಗಿರಬೇಕು. ರಕ್ತದಲ್ಲಿ ಸಕ್ಕರೆಯ ಅಂಶ ಮತ್ತು ರಕ್ತದೊತ್ತಡಗಳನ್ನು ನಿಯಮಿತವಾಗಿ ಪರೀಕ್ಷಿಸಿಕೊಳ್ಳುತ್ತಿರಬೇಕು. ಹೆಚ್ಚು ನೀರು ಕುಡಿಯಬೇಕು. ಅನಗತ್ಯವಾಗಿ ಔಷಧಿ, ನೋವು ನಿವಾರಕ ಮಾತ್ರೆಗಳನ್ನು ತಿನ್ನಬಾರದು.

click me!