World Tuberculosis Day: ಕ್ಷಯರೋಗದ ಬಗ್ಗೆ ಈ ಮಾಹಿತಿ ನಿಮಗೆ ಗೊತ್ತಿರಲಿ

Published : Mar 24, 2022, 01:14 PM IST
World Tuberculosis Day: ಕ್ಷಯರೋಗದ ಬಗ್ಗೆ ಈ ಮಾಹಿತಿ ನಿಮಗೆ ಗೊತ್ತಿರಲಿ

ಸಾರಾಂಶ

ಜಗತ್ತಿನಾದ್ಯಂತ ಕೊರೋನಾ ವೈರಸ್ (Corona Virus) ಹರಡುವಿಕೆ ಭೀತಿ ಹುಟ್ಟಿಸಿದೆ. ಕಣ್ಣಿಗೆ ಕಾಣದ ಅಣು ಗಾತ್ರದ ವೈರಸ್‌ವೊಂದು ಅದೆಷ್ಟೋ ಜನರ ಸಾವಿಗೆ ಕಾರಣವಾಗಿದೆ. ಅದೇ ರೀತಿ ಒಂದು ಕಾಲದಲ್ಲಿ ಜನರಲ್ಲಿ ಭೀತಿ ಹುಟ್ಟಿಸಿದ್ದ ಸಾಂಕ್ರಾಮಿಕ ಕಾಯಿಲೆ (Disese) ಕ್ಷಯ ರೋಗ (Tuberculosis). ಆ ಬಗ್ಗೆ ಇನ್ನಷ್ಟು ಮಾಹಿತಿ ಇಲ್ಲಿದೆ.

ಪ್ರತಿವರ್ಷ ಮಾರ್ಚ್‌ 24ರಂದು ವಿಶ್ವ ಕ್ಷಯ ರೋಗ ದಿನ (World Tuberculosis Day)ವನ್ನು ಆಚರಿಸಲಾಗುತ್ತದೆ. ಕ್ಷಯ ರೋಗ ಒಂದು ಕಾಲದಲ್ಲಿ ಭೀತಿ ಹುಟ್ಟಿಸಿದ್ದ ಸಾಂಕ್ರಾಮಿಕ ಕಾಯಿಲೆ (Disease). ಕ್ಷಯರೋಗಕ್ಕೆ ಆರಂಭದಲ್ಲೇ ಚಿಕಿತ್ಸೆ ಪಡೆಯದಿದ್ದರೆ ಇನ್ನೊಬ್ಬರಿಗೆ ಇದು ಸುಲಭವಾಗಿ ಹರಡುತ್ತದೆ. ಮಾತ್ರವಲ್ಲ,  ಕ್ಷಯ ರೋಗ ಅಂತಿಮಘಟ್ಟಕ್ಕೆ ತಲುಪಿದರೆ ಅವರನ್ನು ಉಳಿಸಿಕೊಳ್ಳುವುದು ಅತ್ಯಂತ ಕಷ್ಟ. ಹೀಗಾಗಿ ಕ್ಷಯರೋಗವನ್ನು ಪ್ರಾರಂಭದಲ್ಲಿಯೇ ಗುರುತಿಸುವುದು ಅತಿಮುಖ್ಯ. 

ಡಾ.ರಾಬರ್ಟ್ ಕೋಚ್ ಟಿಬಿಗೆ ಕಾರಣವಾಗುವ ಬ್ಯಾಕ್ಟೀರಿಯಾವನ್ನು1882ರಲ್ಲಿ ಕಂಡುಹಿಡಿದರು. ಈ ಆವಿಷ್ಕಾರವನ್ನು ನೆನಪಿಸಲು ಮಾರ್ಚ್ 24ನ್ನು ವಿಶ್ವ ಕ್ಷಯ ದಿನವೆಂದು ಆಚರಿಸಲಾಗುತ್ತದೆ. ಶ್ವಾಸಕೋಶದ ಆರೋಗ್ಯದ ಮೇಲೆ ಪರಿಣಾಮ ಬೀರುವ ಗಂಭೀರ ಬ್ಯಾಕ್ಟೀರಿಯಾ ಕಾಯಿಲೆಯ ಬಗ್ಗೆ ಜಾಗೃತಿ ಮೂಡಿಸಲು ವಿಶ್ವ ಕ್ಷಯ ದಿನವನ್ನು ಆಚರಿಸಲು ನಿರ್ಧರಿಸಲಾಯಿತು. ವಿಶ್ವ ಕ್ಷಯ ದಿನಾಚರಣೆ 2022ರ ಸಂದೇಶ ಟಿಬಿಯನ್ನು ಅಂತ್ಯಗೊಳಿಸಿ ಮತ್ತು ಜೀವವನ್ನು ಉಳಿಸಿ ಎಂಬುದಾಗಿದೆ.

ಪುರುಷರು ಈ ಆಹಾರ ಸೇವಿಸಿದ್ರೆ ವೀರ್ಯದ ಸಂಖ್ಯೆ ಕಡಿಮೆಯಾಗುತ್ತಂತೆ !

ಕ್ಷಯ ರೋಗ ಎಂದರೇನು ?
ಕ್ಷಯ ರೋಗ ಅಥವಾ ಟ್ಯುಬರ್ ಕ್ಯುಲೋಸಿಸ್ ಎಂದು ಕರೆಸಿಕೊಳ್ಳುವ ಈ ಮಾರಕ ರೋಗವು ಮನುಷ್ಯರು ಮಾತ್ರವಲ್ಲದೆ ಪ್ರಾಣಿಗಳಲ್ಲಿಯೂ ಕಾಣಿಸಿಕೊಳ್ಳುತ್ತದೆ. ಇವತ್ತಿನ ದಿನಗಳಲ್ಲಿ ಕೊರೋನಾ ವೈರಸ್ (Corona Virus) ಎಷ್ಟು ಮಾರಕವಾಗಿದೆಯೋ ಹಾಗೆಯೇ ಹಿಂದೆ ಕ್ಷಯ ರೋಗ ಹೆಚ್ಚು ಅಪಾಯಕಾರಿಯಾಗಿ ಪರಿಣಮಿಸಿತ್ತು. ಆದರೆ ಇದು ವೈರಸ್‌ನಿಂದ ಉಂಟಾಗುವ ಕಾಯಿಲೆಯಲ್ಲ.  ಮೈಕೊ ಬ್ಯಾಕ್ಟಿರೀಯಾ ಟ್ಯುಬರ್ ಕ್ಯುಲೋಸಿಸ್ ಎಂಬ ಬ್ಯಾಕ್ಟಿರೀಯಾ (Bacteria)ದಿಂದ ಉಂಟಾಗುತ್ತದೆ. ಈ ಬ್ಯಾಕ್ಟಿರೀಯಾಗಳು ದೇಹದೊಳಗೆ ಸೇರಿಕೊಂಡು ಶ್ವಾಸಕೋಶಗಳಿಗೆ ಹಾನಿ ಮಾಡುತ್ತವೆ.

ಕ್ಷಯರೋಗದ ಬಗ್ಗೆ ಈ ಮಾಹಿತಿ ನಿಮಗೆ ಗೊತ್ತಿರಲಿ
ಭಾರತದಲ್ಲಿ ಹೆಚ್ಚಿನವರು ಶ್ವಾಸಕೋಶದಲ್ಲಿ ಸುಪ್ತ ಕ್ಷಯರೋಗ ಹೊಂದಿರುತ್ತಾರೆ. ಕೆಲವರಿಗೆ ಇದು ದೊಡ್ಡವರಾಗಿರುವಾಗ ಗುಣವಾಗಿರುತ್ತದೆ. ಆದರೆ ಕೆಲವರಿಗೆ ಇದು ಗುಣವಾಗದೇ ದೇಹದಲ್ಲಿಯೇ ಉಳಿದುಕೊಂಡು ಬಿಡುತ್ತದೆ. ಇದರಿಂದ ದೇಹದ ಇತರ ಅಂಗಾಂಗಗಳಿಗೆ ಹಾನಿಯಾಗಬಹುದು. ಕ್ಷಯ ರೋಗವಿದ್ದಲ್ಲಿ ವಿಪರೀತ ಕೆಮ್ಮು ಕಾಣಿಸಿಕೊಳ್ಳುತ್ತದೆ. ಹೀಗಿದ್ದಾಗ ನಿರ್ಲಕ್ಷ್ಯ ವಹಿಸದೆ ವೈದ್ಯರನ್ನು ಭೇಟಿ ಮಾಡಬೇಕು.

ದೇಹದಲ್ಲಿ ರೋಗ ನಿರೋಧಕ ಶಕ್ತಿ ಕಡಿಮೆಯಾದರೆ ಕ್ಷಯ ರೋಗ ಕಾಣಿಸಿಕೊಳ್ಳುವ ಸಾಧ್ಯತೆ ಹೆಚ್ಚು. ದೇಹದಲ್ಲಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳುವ ಮೂಲಕ ಕ್ಷಯರೋಗವನ್ನು ತಡೆಗಟ್ಟಬಹುದು. ಪೌಷ್ಟಿಕ ಆಹಾರ, ಸರಿಯಾದ ನಿದ್ರೆ, ವ್ಯಾಯಾಮ ಮತ್ತು ಒತ್ತಡ-ಮುಕ್ತ ಜೀವನಶೈಲಿಯು ಕ್ಷಯರೋಗ ಸೇರಿದಂತೆ ಯಾವುದೇ ಸೋಂಕಿನ ವಿರುದ್ಧ ಹೋರಾಡಲು ಸಹಕಾರಿಯಾಗಿರುತ್ತದೆ.

ಹೀಗೆಲ್ಲಾ ಆಗ್ತಿದ್ರೆ ನೆಗ್ಲೆಕ್ಟ್ ಮಾಡ್ಬೇಡಿ..ಇದು ಥೈರಾಯ್ಡ್‌ ಸಮಸ್ಯೆನೂ ಆಗಿರ್ಬೋದು

ಕ್ಷಯರೋಗವನ್ನು ಉಂಟುಮಾಡುವ ಸೂಕ್ಷ್ಮಾಣುಜೀವಿಗಳು ಶೀತ, ತೇವದ ವಾತಾವರಣದಲ್ಲಿ ಬೆಳೆಯುತ್ತವೆ. ಆದ್ದರಿಂದ, ಸೂರ್ಯನ ಬೆಳಕು ಮತ್ತು ಗಾಳಿ ಅತಿಮುಖ್ಯ. ಮನೆಯಲ್ಲಿ ಸದಾ ಬಾಗಿಲು ಹಾಕಿಕೊಳ್ಳುವುದು, ಸೂರ್ಯನ ಬೆಳಕು ಮತ್ತು ತಾಜಾ ಗಾಳಿಯು ಟಿಬಿ ಹರಡುವುದನ್ನು ತಡೆಯಲು ಸಹಾಯ ಮಾಡುತ್ತದೆ. ಹೀಗಾಗಿ ಮನೆಯ ಕಿಟಿಕಿ, ಬಾಗಿಲುಗಳನ್ನು ಯಾವಾಗಲೂ ತೆರೆದಿಟ್ಟುಕೊಳ್ಳಿ. ಬಿಸಿಲು ಹಾಗೂ ಗಾಳಬ್ಯಾಕ್ಟೀರಿಯಾಗಳನ್ನು ಕೊಲ್ಲಲು ಸಹಕಾರಿಯಾಗಿದೆ.

ಮಹಿಳೆಯರಲ್ಲಿ ಟಿಬಿ ಹೆಚ್ಚಾಗಿ ಜನನಾಂಗಕ್ಕೆ ಹರಡುವ ಸಾಧ್ಯತೆ ಹೆಚ್ಚಾಗಿರುತ್ತದೆ. ಇದರಿಂದ ಬಂಜೆತನದ ಸಮಸ್ಯೆ ಸಹ ಕಾಣಿಸಿಕೊಳ್ಳಬಹುದು. ಬಡತನದ ಹಿನ್ನೆಲೆ ಹೊಂದಿರುವ ಸಾಕಷ್ಟು ಜನರಿಗೆ ಬಂಜೆತನಕ್ಕೆ ಕಾರಣವೇ ಟಿಬಿ ಎನ್ನಲಾಗಿದೆ.  ಸರಿಯಾದ ಸಮಯದಲ್ಲಿ ಸೂಕ್ತ ಚಿಕಿತ್ಸೆಯಿಂದ ಇದನ್ನು ಗುಣಪಡಿಸಬಹುದಾಗಿದೆ.ವಿಶೇಷವಾಗಿ ಟಿಬಿ ಮಕ್ಕಳ ಮೇಲೆ ಬೇಗನೇ ಪರಿಣಾಮ ಬೀರುತ್ತದೆ ಎಂದು ಡಬ್ಯೂಎಚ್ಒ ಹೇಳಿದೆ. ಪ್ರತಿವಷ ವಿಶ್ವದಲ್ಲಿ ಅರ್ಧ ಮಿಲಿಯನ್ ಮಕ್ಕಳು ಟಿಬಿಗೆ ಒಳಗಾಗುತ್ತಾರೆ, ಮೂರು ವರ್ಷದೊಳಗಿನ ಮಕ್ಕಳು ಅನಾರೋಗ್ಯಕ್ಕೆ ಹೆಚ್ಚು ಗುರಿಯಾಗುತ್ತಾರೆ, ಹೀಗಾಗಿ ತಾಯಂದಿರು ಮಕ್ಕಳಿಗೆ ಮರೆಯದೇ ಪ್ರತಿ 6 ತಿಂಗಳಿಗೊಮ್ಮೆ ಬಿಸಿಜಿ ನೀಡಬೇಕು ಎಂದು ಹೇಳುತ್ತಾರೆ.

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ರಾತ್ರಿ ವೇಳೆ ಅಪ್ಪಿತಪ್ಪಿಯೂ ತಿನ್ನಬಾರದ ಹಣ್ಣುಗಳು ಇವು: ತಜ್ಞರು ಹೇಳೋದೇನು?
ಸೀನು ಯಾಕೆ ಬರುತ್ತೆ ಗೊತ್ತಾ? ಇಲ್ಲಿದೆ ಅದರ ಹಿಂದಿರುವ ಕುರಿತ ಅಚ್ಚರಿಯ ಸಂಗತಿಗಳು!