ಮಕ್ಕಳ ಆಯಾಸ ಹೋಗಿಸಲು ಹೊಸ ಟ್ರೆಂಡ್, ಶಾಲೆಯಲ್ಲೇ ಮಲಗಲು ಅವಕಾಶ!

Published : Nov 29, 2023, 01:16 PM IST
ಮಕ್ಕಳ ಆಯಾಸ ಹೋಗಿಸಲು ಹೊಸ ಟ್ರೆಂಡ್, ಶಾಲೆಯಲ್ಲೇ ಮಲಗಲು ಅವಕಾಶ!

ಸಾರಾಂಶ

ಊಟವಾದ್ಮೇಲೆ ನಿದ್ರೆ ಬರೋದು ಸಹಜ. ಮಕ್ಕಳಿಗೆ ಅದನ್ನು ತಡೆಯೋದು ಕಷ್ಟ. ನಿದ್ರೆಗಣ್ಣಿನಲ್ಲಿ ಪಾಠ ಕೇಳಿದ್ರೆ ಓದು ತಲೆಯಲ್ಲಿ ನಿಲ್ಲೋದಿಲ್ಲ. ಮಕ್ಕಳ ಗಮನವನ್ನು ಕೇಂದ್ರೀಕರಿಸಲು ಚೀನಾ ಶಾಲೆಗಳು ನೂತನ ಐಡಿಯಾ ಮಾಡಿವೆ.  

ಮಧ್ಯಾಹ್ನ ಊಟವಾದ್ಮೇಲೆ ಬೇಡ ಅಂದ್ರೂ ಕಣ್ಣು ಕೂರುತ್ತೆ. ಒಂದೇ ಕಡೆ ಕುಳಿತು ಕೆಲಸ ಮಾಡುವ ಅಥವಾ ಸ್ಕೂಲ್, ಕಾಲೇಜುಗಳಲ್ಲಿ ಪಾಠ ಕೇಳುವವರ ಪಾಡು ಹೇಳತೀರದು. ಅನೇಕರು ಕಂಪ್ಯೂಟರ್ ಮುಂದೆಯೇ ತೂಕಡಿಸಿದ್ರೆ ಮಕ್ಕಳು, ಶಿಕ್ಷಕರ ಮುಂದೆ ನಿದ್ರೆ ಹೋಗಿ ಬೈಸಿಕೊಳ್ತಾರೆ. ಉಳಿದ ಮಕ್ಕಳ ಮುಂದೆ ತಮಾಷೆ ವಸ್ತುವಾಗ್ತಾರೆ. 

ನಿದ್ರೆ (Sleep) ಬಂದಾಗ ಅದನ್ನು ತಡೆಹಿಡಿಯೋದು ಕಷ್ಟ. ನೀವು ಕಷ್ಟಪಟ್ಟು ನಿದ್ರೆ ಕಂಟ್ರೋಲ್ ಮಾಡಿದ್ರೆ ನಿಮ್ಮ ಮಾನಸಿಕ ಆರೋಗ್ಯ (Social Media) ದ ಮೇಲೆ ಇದು ಪರಿಣಾಮ ಬೀರುತ್ತದೆ. ವಾಸ್ತವವಾಗಿ ಮಧ್ಯಾಹ್ನ ಒಂದೈದು ನಿಮಿಷ ನಿದ್ರೆ ಮಾಡೋದು ಬಹಳ ಒಳ್ಳೆಯದು ಎನ್ನುತ್ತಾರೆ ತಜ್ಞರು. ಅದ್ರಲ್ಲೂ ಮಕ್ಕಳಿಗೆ ಈ ಪವರ್ (Power) ನಿದ್ರೆ ಬಹಳ ಒಳ್ಳೆಯದು. ಮಕ್ಕಳನ್ನು ಈ ನಿದ್ರೆ ಮತ್ತೆ ಉತ್ಸಾಹಗೊಳಿಸುತ್ತದೆ. ರಾತ್ರಿವರೆಗೆ ಮೆದುಳು ಚುರುಕಾಗಿರಲು ನೆರವಾಗುತ್ತದೆ. ಇದು ಚೀನಾದ ಕೆಲ ಶಾಲೆಗಳು ಚೆನ್ನಾಗಿ ಅರಿತಂತಿದೆ. ಮಕ್ಕಳಿಗೆ ಊಟದ ನಂತ್ರ ನಿದ್ರೆ ಮಾಡಲು ಶಾಲೆಗಳು ಅವಕಾಶ ನೀಡಿವೆ. ಮಕ್ಕಳಿಗೆ ಊಟದ ನಂತ್ರ ವಿಶ್ರಾಂತಿ ನೀಡಲಾಗ್ತಿದೆ. ಸಾಮಾಜಿಕ ಜಾಲತಾಣದಲ್ಲಿ ಶಾಲಾ ಕೊಠಡಿಯ ವಿಡಿಯೋ ವೈರಲ್ ಆಗಿದ್ದು, ಬಳಕೆದಾರರು ಇದಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ಮಕ್ಕಳ ನಿದ್ರೆ ವೈರಲ್ : ಸಾಮಾಜಿಕ ಜಾಲತಾಣ ಎಕ್ಸ್ ನ @ViralXfun ಹೆಸರಿನ ಖಾತೆಯಲ್ಲಿ ಈ ವಿಡಿಯೋವನ್ನು ಹಂಚಿಕೊಳ್ಳಲಾಗಿದೆ. ಕೆಲ ಚೀನಾ ಶಾಲೆಯಲ್ಲಿ ಡಸ್ಕ್ ಕೆಲ ಸಮಯಕ್ಕೆ ಹಾಸಿಗೆಯಾಗಿ ಪರಿವರ್ತನೆಯಾಗಿದೆ. ಮಕ್ಕಳ ಮಾನಸಿಕ ಆರೋಗ್ಯ ಸುಧಾರಣೆಗೆ ಊಡದ ನಂತ್ರ ನಿದ್ರೆಗೆ ವ್ಯವಸ್ಥೆ ಮಾಡಲಾಗಿದೆ ಎಂದು ಶೀರ್ಷಿಕೆ ಹಾಕಲಾಗಿದೆ.

ಗುಂಡು ಗುಂಡಾಗಿರೋ ಮಕ್ಕಳು ನೋಡಲು ಮುದ್ದು… ಆದ್ರೆ ಅವರ ಆರೋಗ್ಯದ ಗತಿ ಏನು?

ವೈರಲ್ ವಿಡಿಯೋದಲ್ಲಿ ಶಾಲಾ ಮಕ್ಕಳು ನಿದ್ರೆ ಮಾಡ್ತಿರೋದನ್ನು ನೀವು ನೋಡ್ಬಹುದು. ಊಟದ ನಂತ್ರ ಪವರ್ ನಿದ್ರೆ ಮಾಡಲು ಮಕ್ಕಳಿಗೆ ಬೆಡ್ ಶೀಟ್ ಮತ್ತು ದಿಂಬನ್ನು ನೀಡಲಾಗಿದೆ. ಮಕ್ಕಳು ಆರಾಮವಾಗಿ ಮಲಗಿರುವುದನ್ನು ವಿಡಿಯೋದಲ್ಲಿ ನೋಡಬಹುದು. ಇದಲ್ಲದೆ ಅಲ್ಲಿ ಒಬ್ಬ ಶಿಕ್ಷಕಿಯೂ ಇದ್ದಾರೆ. ಅವರು ಮಕ್ಕಳನ್ನು ಗಮನಿಸುತ್ತಿದ್ದಾರೆ. ಈ ವೀಡಿಯೋ ಅಂತರ್ಜಾಲದಲ್ಲಿ ಭಾರೀ ಸದ್ದು ಮಾಡುತ್ತಿದೆ. 

ವೀಡಿಯೊ ಇದುವರೆಗೆ 17 ಲಕ್ಷಕ್ಕೂ ಹೆಚ್ಚು ವೀಕ್ಷಣೆಗಳನ್ನು ಪಡೆದಿದೆ.   1 ಸಾವಿರಕ್ಕೂ ಹೆಚ್ಚು ಜನರು ವೀಡಿಯೊವನ್ನು ಲೈಕ್ ಮಾಡಿದ್ದಾರೆ. ಬಳಕೆದಾರರು ವೀಡಿಯೊಗೆ ವಿವಿಧ ರೀತಿಯ ಪ್ರತಿಕ್ರಿಯೆಗಳನ್ನು ನೀಡುತ್ತಿದ್ದಾರೆ. ನಮ್ಮ ಕಾಲದಲ್ಲೂ ಈ ವ್ಯವಸ್ಥೆ ಇದ್ದಿದ್ದರೆ ಎಷ್ಟು ಚೆನ್ನಾಗಿರ್ತಿತ್ತು ಎಂದು ಒಬ್ಬರು ಬರೆದ್ರೆ ಮತ್ತೊಬ್ಬರು ಕಚೇರಿಯಲ್ಲೂ ಈ ವ್ಯವಸ್ಥೆ ಇರ್ಬೇಕಿತ್ತು ಎಂದು ಕಮೆಂಟ್ ಮಾಡಿದ್ದಾರೆ. ಅನೇಕರು ಇದು ಒಳ್ಳೆಯ ಐಡಿಯಾ ಎಂದು ತಮ್ಮ ಪ್ರತಿಕ್ರಿಯೆ ನೀಡಿದ್ದಾರೆ. 

Health Tips: ಮೀನಿನ ಜೊತೆ ಈ ಆಹಾರ ತಿಂದ್ರೆ ಆರೋಗ್ಯಕ್ಕೆ ವಿಷವಾಗಬಹುದು!

ಮಧ್ಯಾಹ್ನದ ನಿದ್ರೆಯಿಂದಾಗುವ ಲಾಭಗಳು : ಮಧ್ಯಾಹ್ನ ಊಟ ಆದ್ಮೇಲೆ ಬಹುಬೇಗ ನಿದ್ರೆ ಬರುತ್ತದೆ. ಈ ಸಮಯದಲ್ಲಿ ಹತ್ತರಿಂದ ಹದಿನೈದು ನಿಮಿಷ ನಿದ್ರೆ ಮಾಡೋದು ಒಳ್ಳೆಯದು. ನೀವು ಒಂದು ಗಂಟೆ ನಿದ್ರೆ ಮಾಡಿದ್ರೆ ಮಧ್ಯಾಹ್ನದ ನಿದ್ರೆಯಿಂದ ಲಾಭವಿಲ್ಲ. ನೀವು ಪವರ್ ನಿದ್ರೆ ಮಾಡಿದ್ರೆ ನಿಮ್ಮ ಜೀರ್ಣಕ್ರಿಯೆ ಸುಧಾರಿಸುತ್ತದೆ. ಮತ್ತೆ ಕೆಲಸ ಮಾಡು ಶಕ್ತಿ ಬರುತ್ತದೆ. ಹೃದಯ ಸಮಸ್ಯೆಗಳು ದೂರವಾಗುತ್ತವೆ. ಕಿರಿಕಿರಿ ದೂರವಾಗುತ್ತದೆ. ಮಧ್ಯಾಹ್ನ ಗಂಟೆಗಟ್ಟಲೆ ನಿದ್ರೆ ಮಾಡಿದ್ರೆ ರಾತ್ರಿ ಸರಿಯಾಗಿ ನಿದ್ರೆ ಬರೋದಿಲ್ಲ. ಅದೇ ನೀವು ಸ್ವಲ್ಪೇ ಸ್ವಲ್ಪ ಸಮಯ ನಿದ್ರೆ ಮಾಡಿ ಎದ್ದರೆ ರಾತ್ರಿ ಚೆನ್ನಾಗಿ ನಿದ್ದೆ ಮಾಡಬಹುದು. ತೂಕ ಇಳಿಸು ಇದು ಸಹಕಾರಿ ಎಂದು ತಜ್ಞರು ಹೇಳ್ತಾರೆ. ಮಧ್ಯಾಹ್ನ ನಿದ್ರೆ ಮಾಡುವುದ್ರಿಂದ ಮಕ್ಕಳ ಬುದ್ಧಿ ಚುರುಕಾಗುತ್ತದೆ. 
 

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಕೆಲ್ಸ ಮಾಡೋವಾಗ ಮಾತ್ರವಲ್ಲ ರಜೆಯಲ್ಲೂ ಕಾಡುತ್ತೆ ಖಿನ್ನತೆ, ಹಾಲಿಡೇ ಡಿಪ್ರೆಷನ್ ಅಂದ್ರೇನು?
Heart Problemಗೆ ಎಲ್ಲರೂ ಹೇಳೋ ಕಾರಣವಲ್ಲವೇ ಅಲ್ಲ, ಪೌಷ್ಟಿಕ ತಜ್ಞರ ಮಹಾವಂಚನೆ ಬಯಲಿಗೆ