ಮಹಿಳೆಯ ಮನವಿಯ ಮೇರೆಗೆ ಪೀರಿಯಡ್ಸ್ ಮೆಡಿಸಿನ್ ತಂದುಕೊಟ್ಟ ಸ್ವಿಗ್ಗಿ ಡೆಲಿವರಿ ಬಾಯ್‌, ನೆಟ್ಟಿಗರ ಮೆಚ್ಚುಗೆ

By Vinutha PerlaFirst Published Apr 23, 2024, 5:16 PM IST
Highlights

ಜನರು ಕಾಲಿಗೆ ಚಕ್ರ ಕಟ್ಟಿಕೊಂಡು ಓಡುವ ಜಗತ್ತಿನಲ್ಲಿ ನಾವಿದ್ದೇವೆ. ಹೀಗಾಗಿ ಇಲ್ಲಿ ಯಾರಿಗೂ ಮತ್ತೊಬ್ಬರಿಗೆ ಸಹಾಯ ಮಾಡುವ ಮನಸ್ಸಿಲ್ಲ..ಸಮಯವೂ ಇಲ್ಲ. ಇಂಥಾ ಸಂದರ್ಭದಲ್ಲಿ ಯಾರೋ ಇನ್ನೊಬ್ಬರಿಗೆ ಹೆಲ್ಪ್ ಮಾಡಿದರೆ ಆ ವಿಚಾರ ದೊಡ್ಡ ಮಟ್ಟಿಗೆ ಸುದ್ದಿಯಾಗುತ್ತದೆ. ಸದ್ಯ ಮಹಿಳೆಯೊಬ್ಬರು ಸ್ವಿಗ್ಗಿ ಫುಡ್ ಡೆಲಿವರಿ ಏಜೆಂಟ್ ಮಾಡಿದ ಸಹಾಯವನ್ನು ನೆನಪಿಸಿಕೊಂಡಿದ್ದಾರೆ.

ಕಾಲ ಬದಲಾದಂತೆ ಮಾನವೀಯತೆ ಅನ್ನೋದು ಮರೀಚಿಕೆಯಾಗುತ್ತಿದೆ. ಜನರು ಕಾಲಿಗೆ ಚಕ್ರ ಕಟ್ಟಿಕೊಂಡು ಓಡುವ ಜಗತ್ತಿನಲ್ಲಿ ನಾವಿದ್ದೇವೆ. ಹೀಗಾಗಿ ಇಲ್ಲಿ ಯಾರಿಗೂ ಮತ್ತೊಬ್ಬರಿಗೆ ಸಹಾಯ ಮಾಡುವ ಮನಸ್ಸಿಲ್ಲ..ಸಹಾಯ ಮಾಡುವ ಮನಸ್ಸಿದ್ದರು ಸಮಯವೂ ಇಲ್ಲ. ಹೀಗಾಗಿ ಎಲ್ಲರೂ ತಮ್ಮ ತಮ್ಮ ಕಷ್ಟಗಳನ್ನೇ ನೆನೆಸಿಕೊಂಡು, ಮತ್ತೊಬ್ಬರು ಕಷ್ಟವನ್ನು ಕಂಡು ಕಣ್ಮುಚ್ಚಿಕೊಂಡು ಹೋಗುತ್ತಾರೆ. ಇಂಥಾ ಸಂದರ್ಭದಲ್ಲಿ ಯಾರೋ ಇನ್ನೊಬ್ಬರಿಗೆ ಹೆಲ್ಪ್ ಮಾಡಿದರೆ ಆ ವಿಚಾರ ದೊಡ್ಡ ಮಟ್ಟಿಗೆ ಸುದ್ದಿಯಾಗುತ್ತದೆ. ಸದ್ಯ ಮಹಿಳೆಯೊಬ್ಬರು ಸ್ವಿಗ್ಗಿ ಫುಡ್ ಡೆಲಿವರಿ ಏಜೆಂಟ್ ಮಾಡಿದ ಸಹಾಯವನ್ನು ನೆನಪಿಸಿಕೊಂಡಿದ್ದಾರೆ.

ಸ್ವಿಗ್ಗಿ ಡೆಲಿವರಿ ಏಜೆಂಟ್ಸ್ ತಮ್ಮ ನಿಸ್ವಾರ್ಥ ಸೇವೆಯಿಂದ ಕೆಲವೊಮ್ಮೆ ಗ್ರಾಹಕರ ಮನ ಗೆಲ್ಲುತ್ತಾರೆ. ಮಳೆಯಲ್ಲೂ ಬಂದು ಡೆಲಿವರಿ ಮಾಡುವುದು, ಲೊಕೇಶನ್ ದೂರವಿದ್ದರೂ ಹುಡುಕಿಕೊಂಡು ಬಂದು ಆಹಾರ ವಿತರಿಸುವುದನ್ನು ಮಾಡುತ್ತಾರೆ. ಇಂಥಾ ವಿಚಾರಗಳು ಆಗಾಗ ವೈರಲ್ ಆಗಿದ್ದೂ ಇದೆ. ಹೀಗಿರುವಾಗ ಸದ್ಯ ಮಹಿಳೆಯೊಬ್ಬರು ಸ್ವಿಗ್ಗಿ ಫುಡ್ ಡೆಲಿವರಿ ಏಜೆಂಟ್ ಮಾಡಿದ ಸಹಾಯವನ್ನು ನೆನಪಿಸಿಕೊಂಡಿದ್ದಾರೆ.

ಬೆಂಗಳೂರು ರೈಲ್ವೆ ನಿಲ್ದಾಣದಲ್ಲಿ ಇನ್ಮುಂದೆ ಪ್ರಯಾಣಿಕರಿಗೆ ಆಹಾರ ತಲುಪಿಸಲಿದೆ ಸ್ವಿಗ್ಗಿ, ಬುಕ್‌ ಮಾಡೋದು ಹೇಗೆ?

ರಾಂಚಿಯಲ್ಲಿ, ಆಹಾರ ವಿತರಣಾ ಏಜೆಂಟ್ ಮಹಿಳೆಗೆ ಪೀರಿಯಡ್ಸ್ ಟ್ಯಾಬ್ಲೆಟ್ ತಂದುಕೊಟ್ಟಿದ್ದನ್ನು 'X'ನಲ್ಲಿ ಬರೆದುಕೊಂಡಿದ್ದಾರೆ. ನಂದಿನಿ ತಮ್ಮ ಎಕ್ಸ್ ಖಾತೆಯಲ್ಲಿ, 'ನನಗೆ ತೀವ್ರವಾದ ಮುಟ್ಟಿನ ಸೆಳೆತವಿತ್ತು. ಮೆಡಿಕಲ್ ಸ್ಟೋರ್‌ಗೆ ನಡೆದುಕೊಂಡು ಹೋಗಲು ಸಾಧ್ಯವಾಗುತ್ತಿರಲ್ಲಿಲ್ಲ. ಆದ್ದರಿಂದ @Swiggy ನಲ್ಲಿ ಆಹಾರವನ್ನು ಆರ್ಡರ್ ಮಾಡಿದೆ ಮತ್ತು ನನಗೆ ಔಷಧಿಯನ್ನು ಖರೀದಿಸಬಹುದೇ ಎಂದು ವಿತರಣಾ ಏಜೆಂಟ್‌ಗೆ ಕೇಳಿದೆ. ಅವರು ಮೆಡಿಸಿನ್‌ ತರಲು ನಿರಾಕರಿಸಬಹುದು ಎಂದು ನಾನು ಭಾವಿಸಿದೆ. ಆದರೆ ಅದೃಷ್ಟವಶಾತ್ ಅವರು ಯಾವುದೇ ಹಿಂಜರಿಕೆಯಿಲ್ಲದೆ ಟ್ಯಾಬ್ಲೆಟ್ಸ್ ತಂದುಕೊಟ್ಟರು' ಎಂದು ಬರೆದುಕೊಂಡಿದ್ದಾರೆ.

ಎಕ್ಸ್‌ನಲ್ಲಿ ಮೆಡಿಸಿನ್ ಮತ್ತು ಡೆಲಿವರಿ ರಸೀದಿಯ ಪೋಟೋವನ್ನು ಸಹ ಪೋಸ್ಟ್ ಮಾಡಲಾಗಿದೆ. ಈ ಪೋಸ್ಟ್ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಸ್ವಿಗ್ಗಿ ಏಜೆಂಟ್‌ ಸಹಾಯಕ್ಕೆ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಒಬ್ಬ ಬಳಕೆದಾರರು, 'ಸ್ವಿಗ್ಗಿ ಏಜೆಂಟ್‌ನ ಕಾರ್ಯ ನಿಜಕ್ಕೂ ಮೆಚ್ಚುವಂತದ್ದು' ಎಂದಿದ್ದಾರೆ. ಮತ್ತೆ ಕೆಲವರು, 'ಇಂಥಾ ವ್ಯಕ್ತಿಗಳಿಂದಲೇ ಸಮಾಜದಲ್ಲಿ ಮಾನವೀಯತೆ ಜೀವಂತವಾಗಿದೆ' ಎಂದು ಹೊಗಳಿದ್ದಾರೆ.

'ನನ್ನ ಹತ್ರ ಟೈಮ್‌ ಇಲ್ಲ..' ಆರ್ಡರ್‌ ಡೆಲಿವರಿ ಮಾಡಲು ನಿರಾಕರಿಸಿದ ಸ್ವಿಗ್ಗಿ ಏಜೆಂಟ್‌!

ಇವೆಲ್ಲದರ ಮಧ್ಯೆ ಮುಟ್ಟಿನ ಸೆಳೆತಕ್ಕೆ ತೆಗೆದುಕೊಂಡ ಔಷಧದ ಸುರಕ್ಷತೆಯ ಬಗ್ಗೆ ಕಳವಳಗಳು ಕಾಣಿಸಿಕೊಂಡವು. ಡಿಸೆಂಬರ್ 2023 ರಿಂದ ಇಂಡಿಯನ್ ಫಾರ್ಮಾಕೊಪೊಯಿಯಾ ಆಯೋಗದ (IPC) ಎಚ್ಚರಿಕೆಯ ಟಿಪ್ಪಣಿಯನ್ನು ಉಲ್ಲೇಖಿಸಿ, ಮೆಫ್ಟಲ್ ಸ್ಪಾಗಳಿಗೆ ಸಂಬಂಧಿಸಿದ ಕೆಲವು ಅಪಾಯಗಳನ್ನು ಹೈಲೈಟ್ ಮಾಡುವ ಅನೇಕ ಲಿಂಕ್‌ಗಳನ್ನು ಜನರು ಹಂಚಿಕೊಂಡಿದ್ದಾರೆ. ಮುಟ್ಟಿನ ಸೆಳೆತ, ರುಮಟಾಯ್ಡ್ ಸಂಧಿವಾತ, ಅಸ್ಥಿಸಂಧಿವಾತ, ಡಿಸ್ಮೆನೊರಿಯಾ, ಸೌಮ್ಯದಿಂದ ಮಧ್ಯಮ ನೋವು, ಉರಿಯೂತ, ಜ್ವರ ಮತ್ತು ಹಲ್ಲಿನ ನೋವು ಸೇರಿದಂತೆ ವಿವಿಧ ಪರಿಸ್ಥಿತಿಗಳಿಗೆ ಚಿಕಿತ್ಸೆ ನೀಡಲು ಸಾಮಾನ್ಯವಾಗಿ ಬಳಸುವ ಔಷಧಿಗಳ ವಿರುದ್ಧ IPC ಸಲಹೆ ನೀಡಿದೆ.

ಮೆಫ್ಟಾಲ್ ಸ್ಪಾಗಳಲ್ಲಿರುವ ಒಂದು ಘಟಕಾಂಶವಾದ ಮೆಫೆನಾಮಿಕ್ ಆಮ್ಲವು DRESS ಸಿಂಡ್ರೋಮ್ ಎಂದು ಕರೆಯಲ್ಪಡುವ ತೀವ್ರ ಸ್ಥಿತಿಯನ್ನು ಒಳಗೊಂಡಂತೆ ಸಂಭಾವ್ಯ ಪ್ರತಿಕೂಲ ಪ್ರತಿಕ್ರಿಯೆಗಳಿಗೆ ಕಾರಣವಾಗಬಹುದು ಎಂದು ಎಚ್ಚರಿಕೆಯಲ್ಲಿ ಉಲ್ಲೇಖಿಸಲಾಗಿದೆ. DRESS ಸಿಂಡ್ರೋಮ್ ಕೆಲವು ಔಷಧಿಗಳಿಗೆ ಅಪರೂಪದ ಆದರೆ ಗಂಭೀರವಾದ ಅತಿಸೂಕ್ಷ್ಮ ಪ್ರತಿಕ್ರಿಯೆಯಾಗಿದೆ, ಇದು ಜೀವಕ್ಕೆ ಅಪಾಯಕಾರಿಯಾಗಿದೆ. ಈ ಕಳವಳಗಳನ್ನು ತಿಳಿಸುತ್ತಾ, ನಂದಿತಾ ತನ್ನ ವೈದ್ಯರ ಪ್ರಿಸ್ಕ್ರಿಪ್ಷನ್ ಅನ್ನು ಅನುಸರಿಸಿದ್ದೇನೆ ಮತ್ತು ಚಿಂತೆ ಮಾಡಲು ಯಾವುದೇ ಕಾರಣವಿಲ್ಲ ಎಂದು ಹೇಳಿದ್ದಾರೆ.

click me!