ಮಕ್ಕಳಲ್ಲಿ ಹೆಚ್ಚುತ್ತಿದೆ Diabetes, ಈಗ್ಲೇ ಹುಷಾರಾಗಿ!

By Suvarna News  |  First Published May 11, 2022, 11:35 AM IST

Children Health Care: ವಿಶ್ವಾದ್ಯಂತ ಈಗ ಇರೋ ಮಧುಮೇಹ ಪೀಡಿತ ಮಕ್ಕಳ ಸಂಖ್ಯೆ ಸುಮಾರು 11 ಲಕ್ಷ. ಇದು ದೊಡ್ಡ ಸಂಖ್ಯೆ. ಎಚ್ಚರಗೊಂಡು ಕ್ರಿಯಾಶೀಲರಾಗಲು ಇದು ಸಕಾಲ.


ದಿನೇ ದಿನೇ ಡಯಾಬಿಟಿಸ್ (Diabetes) ಪೀಡಿತ ಮಕ್ಕಳ (Children) ಸಂಖ್ಯೆ ಹೆಚ್ಚುತ್ತಾ ಇದೆಯಂತೆ. ಹಾಗೆಂದು ಇಂಟರ್ನ್ಯಾಷನಲ್ ಡಯಾಬಿಟಿಸ್ ಫೆಡರೇಶನ್ (IDF) ಹೇಳಿದೆ. ಇದರ ಪ್ರಕಾರ, ಅಂದಾಜು 11 ಲಕ್ಷ ಮಕ್ಕಳು ಮತ್ತು ಹದಿಹರೆಯದವರು (20 ವರ್ಷಕ್ಕಿಂತ ಕಡಿಮೆ ವಯಸ್ಸಿನವರು) ಪ್ರಸ್ತುತ ವಿಶ್ವಾದ್ಯಂತ ಟೈಪ್ 1 ಮಧುಮೇಹದಿಂದ ಬಳಲುತ್ತಿದ್ದಾರೆ. ಜೊತೆಗೆ, ಪ್ರತಿ ವರ್ಷ 1,32,000 ಮಕ್ಕಳು ಮತ್ತು ಹದಿಹರೆಯದವರು ಟೈಪ್ 1 ಮಧುಮೇಹ ಗ್ರೂಪ್‌ಗೆ ಸೇರುತ್ತಾರೆ. ಇದು ನಿಜಕ್ಕೂ ಎಚ್ಚರಿಕೆಯ ಅಲಾರಂ. 

ಮಧುಮೇಹವು ದೀರ್ಘಕಾಲಿಕ ಅನಾರೋಗ್ಯ ಸ್ಥಿತಿ. ಇದರಲ್ಲಿ ನಿಮ್ಮ ಮೇದೋಜ್ಜೀರಕ ಗ್ರಂಥಿ ಸಾಕಷ್ಟು ಇನ್ಸುಲಿನ್ ಅನ್ನು ಉತ್ಪಾದಿಸುವುದಿಲ್ಲ ಅಥವಾ ನಿಮ್ಮ ದೇಹವು ಅದನ್ನು ಪರಿಣಾಮಕಾರಿಯಾಗಿ ಬಳಸಲು ವಿಫಲಗೊಳ್ಳುತ್ತದೆ. ಇದು ರಕ್ತದಲ್ಲಿನ ಸಕ್ಕರೆಯ ಮಟ್ಟವನ್ನು ಹೆಚ್ಚಿಸುತ್ತದೆ. ರಕ್ತದಲ್ಲಿನ ಗ್ಲೂಕೋಸ್ (glucose) ಶಕ್ತಿಯ ಮುಖ್ಯ ಮೂಲ. ಗ್ಲುಕೋಸ್ ಬರುವುದು ನೀವು ತಿನ್ನುವ ಆಹಾರದಿಂದ. ಇನ್ಸುಲಿನ್ (Insulin) ಒಂದು ಹಾರ್ಮೋನ್. ಅದು ರಕ್ತದಲ್ಲಿನ ಗ್ಲೂಕೋಸ್ ನಿಮ್ಮ ಜೀವಕೋಶಗಳಿಗೆ ಪ್ರವೇಶಿಸಲು ಸಹಾಯ ಮಾಡುತ್ತದೆ ಮತ್ತು ಅದನ್ನು ಶಕ್ತಿಯನ್ನಾಗಿ ಪರಿವರ್ತಿಸುತ್ತದೆ.

Tap to resize

Latest Videos

ಹೀಗಾಗಿ, ನಿಮ್ಮ ದೇಹವು ಸಾಕಷ್ಟು ಇನ್ಸುಲಿನ್ ಅನ್ನು ಉತ್ಪಾದಿಸದಿದ್ದಾಗ ಅಥವಾ ಅದನ್ನು ಉತ್ಪಾದಕ ರೀತಿಯಲ್ಲಿ ಬಳಸದಿದ್ದಾಗ, ಗ್ಲೂಕೋಸ್ ರಕ್ತಪ್ರವಾಹದಲ್ಲಿ ಉಳಿಯುತ್ತದೆ. ಇದು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಹೆಚ್ಚಿಸಲು ಕಾರಣವಾಗುತ್ತದೆ.

ಫುಡ್ ಪಾಯಿಸನ್ ಜೀವ ತೆಗೆಯುವುದೇ? ಪ್ರವಾಸ ಹೋಗೋರು ಎಚ್ಚರವಾಗಿರಿ

ಮಕ್ಕಳ ಡಯಾಬಿಟಿಸ್ ಹೇಗೆ ಬರುತ್ತೆ?

ಮಧುಮೇಹದಲ್ಲಿ ಎರಡು ವಿಧಗಳಿವೆ: ಟೈಪ್ 1 ಮತ್ತು ಟೈಪ್ 2.
ಟೈಪ್ 1 ಮಧುಮೇಹ ಸ್ವಯಂ ನಿರೋಧಕ ಕಾಯಿಲೆ. ಇದರಲ್ಲಿ ನಿಮ್ಮ ಮೇದೋಜ್ಜೀರಕ ಗ್ರಂಥಿಯು ಇನ್ಸುಲಿನ್ ಅನ್ನು ಉತ್ಪಾದಿಸುವುದಿಲ್ಲ. ಇದು ನಿಮ್ಮ ರೋಗ ಪ್ರತಿರೋಧ ವ್ಯವಸ್ಥೆಯು ಮೇದೋಜ್ಜೀರಕ ಗ್ರಂಥಿಯ ಕೋಶಗಳ ಮೇಲೆ ಹೊರೆಯಾಗುವಂತೆ ಮಾಡುತ್ತದೆ. ಹಾರ್ಮೋನ್‌ನ ನೈಸರ್ಗಿಕ ಉತ್ಪಾದನೆಯನ್ನು ತಡೆಯುತ್ತದೆ. ಅಮೆರಿಕ ಸೆಂಟರ್ಸ್ ಫಾರ್ ಡಿಸೀಸ್ ಕಂಟ್ರೋಲ್ ಅಂಡ್ ಪ್ರಿವೆನ್ಷನ್ ಪ್ರಕಾರ ಟೈಪ್ 1 ಮಧುಮೇಹ ಮಕ್ಕಳು, ಹದಿಹರೆಯದವರು ಮತ್ತು ಯುವಕರಲ್ಲಿ ಸಾಮಾನ್ಯವಾಗಿದೆ.

ಟೈಪ್ 2 ಡಯಾಬಿಟಿಸ್ ದೀರ್ಘಕಾಲದ ಅನಾರೋಗ್ಯ ಸ್ಥಿತಿ. ಇದು ನಿಮ್ಮ ದೇಹವು ರಕ್ತದಲ್ಲಿನ ಸಕ್ಕರೆ / ಗ್ಲೂಕೋಸ್ ಅನ್ನು ಸೃಷ್ಟಿಸುವ ಮತ್ತು ನಿಯಂತ್ರಿಸುವ ವಿಧಾನದ ಮೇಲೆ ಪರಿಣಾಮ ಬೀರುತ್ತದೆ. ದೇಹದಲ್ಲಿ ಉತ್ಪತ್ತಿಯಾಗುವ ಇನ್ಸುಲಿನ್‌ಗೆ ದೇಹವು ಪ್ರತಿಕ್ರಿಯಿಸುವುದನ್ನು ನಿಲ್ಲಿಸಿದಾಗ ರೋಗವು ಬೆಳೆಯುತ್ತದೆ.

ಟೈಪ್ 1 ಮತ್ತು ಟೈಪ್ 2 ಡಯಾಬಿಟಿಸ್ ಎರಡರಲ್ಲೂ ಕೆಲವು ರೋಗಲಕ್ಷಣಗಳು ಸಾಮಾನ್ಯ. ಇದರತ್ತ ಪೋಷಕರು ಗಮನ ಹರಿಸಬೇಕು.

ವಿಪರೀತ ಆಯಾಸ ಮತ್ತು ಕಡಿಮೆ ಶಕ್ತಿ
ಮಕ್ಕಳಲ್ಲಿ ಆಯಾಸ, ದೌರ್ಬಲ್ಯ ಮತ್ತು ಬಳಲಿಕೆ ಹಲವಾರು ಕಾರಣಗಳಿಂದ ಉಂಟಾಗಬಹುದು. ಆದರೆ ನಿಮ್ಮ ಮಗು ಯಾವತ್ತೂ ಜಡವಾಗಿರುತ್ತಿದ್ದು, ದಣಿದಿದ್ದರೆ, ಸರಿಯಾದ ಡಯಾಗ್ನೋಸಿಸ್‌ ಮಾಡಲು ವೈದ್ಯರ ಬಳಿಗೆ ಕರೆದೊಯ್ಯಬೇಕು. ಏಕೆಂದರೆ ಇದು ಮಧುಮೇಹದ ಸಂಕೇತವಾಗಿರಬಹುದು.

ಕೋವಿಡ್ ಸೋಂಕಿನ ಮಧ್ಯೆ Monkeypox ವೈರಸ್‌ ಭೀತಿ, ರೋಗ ಲಕ್ಷಣಗಳೇನು ?

ತೂಕದ ಏರಿಳಿತಗಳು
ಮಧುಮೇಹದಿಂದ ಬಳಲುತ್ತಿರುವ ಮಕ್ಕಳು ಅನಿರೀಕ್ಷಿತ ತೂಕದ ಏರಿಳಿತಗಳನ್ನು ಅನುಭವಿಸಬಹುದು. ವಿಶೇಷವಾಗಿ ತೂಕ ನಷ್ಟ. ಅವರ ಮೇದೋಜ್ಜೀರಕ ಗ್ರಂಥಿಯು ಸಾಕಷ್ಟು ಇನ್ಸುಲಿನ್ ಅನ್ನು ಉತ್ಪಾದಿಸದ ಕಾರಣ ಅಥವಾ ಇನ್ಸುಲಿನ್ ಅನ್ನು ಪರಿಣಾಮಕಾರಿಯಾಗಿ ಬಳಸದ ಕಾರಣ, ರಕ್ತದಲ್ಲಿನ ಗ್ಲೂಕೋಸ್ ಅನ್ನು ಶಕ್ತಿಯನ್ನಾಗಿ ಪರಿವರ್ತಿಸುವ ಪ್ರಕ್ರಿಯೆಗೆ ಅಡ್ಡಿಯಾಗುತ್ತದೆ. ಈ ಸಂದರ್ಭದಲ್ಲಿ ಅವರ ದೇಹಕ್ಕೆ ಅಗತ್ಯವಿರುವ ಇಂಧನವನ್ನು ಪಡೆಯುವುದಿಲ್ಲ. ಆದ್ದರಿಂದ ಇದು ಕೊಬ್ಬು ಮತ್ತು ಶಕ್ತಿಗಾಗಿ ಸ್ನಾಯುಗಳನ್ನು ತಿನ್ನಲು ಪ್ರಾರಂಭಿಸುತ್ತದೆ, ಇದು ತೂಕ ನಷ್ಟಕ್ಕೆ ಕಾರಣವಾಗುತ್ತದೆ.

ನಿದ್ರೆ ಮತ್ತು ಹಸಿವಿನಲ್ಲಿ ಬದಲಾವಣೆ
ಆಹಾರ ಸೇವನೆ ಮತ್ತು ಮಲಗುವ ಅಭ್ಯಾಸಗಳೊಂದಿಗೆ ಮಧುಮೇಹದ ಕೆಲವು ಚಿಹ್ನೆಗಳು ಸಂಬಂಧಿಸಿವೆ. ಹೆಚ್ಚಿದ ಬಾಯಾರಿಕೆ, ತೀವ್ರ ಹಸಿವು, ನಿದ್ರಾಭಂಗದವರೆಗೆ, ಪೋಷಕರು ಈ ಎಲ್ಲಾ ಸೂಚನೆಗಳನ್ನು ಗಮನಿಸಬೇಕು.

ಪದೇ ಪದೇ ಮೂತ್ರ ವಿಸರ್ಜನೆ
ಮಕ್ಕಳಲ್ಲಿ ಮಧುಮೇಹದ ಆರಂಭಿಕ ಲಕ್ಷಣವೆಂದರೆ ಆಗಾಗ್ಗೆ ಮೂತ್ರ ವಿಸರ್ಜನೆ. ಇದು ಹೆಚ್ಚಿದ ಬಾಯಾರಿಕೆ ಮತ್ತು ನೀರಿನ ಸೇವನೆಯ ಕಾರಣದಿಂದಾಗಿರಬಹುದು. ಇದು ದಿನವಿಡೀ ಹಲವಾರು ಬಾತ್ರೂಮ್ ಭೇಟಿಗಳಿಗೆ ಕಾರಣವಾಗುತ್ತದೆ.

ಅಸ್ಪಷ್ಟ ದೃಷ್ಟಿ
ಮಧುಮೇಹವು ಕಣ್ಣಿನ ಸಮಸ್ಯೆಗಳಿಗೆ ಕಾರಣವಾಗಬಹುದು, ವಿಶೇಷವಾಗಿ ದೃಷ್ಟಿ ಮಂದವಾಗುವುದು. ಅಧಿಕ ರಕ್ತದ ಸಕ್ಕರೆಯು ಕಣ್ಣಿನ ಮಸೂರವನ್ನು ಊದಿಕೊಳ್ಳುವಂತೆ ಮಾಡುತ್ತದೆ. ಇದು ಮಗುವಿಗೆ ಪರಿಣಾಮಕಾರಿಯಾಗಿ ನೋಡಲು ಕಷ್ಟವಾಗುವಂತೆ ಮಾಡುತ್ತದೆ.

ಜೀರ್ಣಾಂಗವ್ಯೂಹದ ಸಮಸ್ಯೆಗಳು
ಮಧುಮೇಹದಿಂದ ಮಗುವಿಗೆ ವಾಕರಿಕೆ, ಎದೆಯುರಿ, ಹೊಟ್ಟೆ ಉಬ್ಬುವುದು ಮತ್ತು ಅನೇಕ ಜಠರ ಕರುಳಿನ ಸಮಸ್ಯೆಗಳು ಉಂಟಾಗಬಹುದು. ಏಕೆಂದರೆ ಮಧುಮೇಹವು ಗ್ಯಾಸ್ಟ್ರೋಪರೆಸಿಸ್‌ಗೆ ಕಾರಣವಾಗಬಹುದು. ಇದು ಆಹಾರವನ್ನು ಜೀರ್ಣಿಸಿಕೊಳ್ಳುವ ಬಗೆಯ ಮೇಲೆ ಪರಿಣಾಮ ಬೀರುತ್ತದೆ.

ಹಣ್ಣಿನ ವಾಸನೆಯ ಉಸಿರು
ನಿಮ್ಮ ಮಗುವು ಹಣ್ಣಿನ ವಾಸನೆಯ ಉಸಿರನ್ನು ಹೊಂದಿದ್ದರೆ, ಅದು ಕೀಟೋಆಸಿಡೋಸಿಸ್‌ನ ಸಂಕೇತವಾಗಿರಬಹುದು, ಇದು ಮಧುಮೇಹಕ್ಕೆ ಸಂಬಂಧಿಸಿದ ಗಂಭೀರ ತೊಡಕು. ಮಧುಮೇಹ ಕೀಟೋಆಸಿಡೋಸಿಸ್ (DKA) ಟೈಪ್ 1 ಡಯಾಬಿಟಿಸ್ ಹೊಂದಿರುವ ಜನರಲ್ಲಿ ಹೆಚ್ಚು ಸಾಮಾನ್ಯ. ಟೈಪ್ 2 ಡಯಾಬಿಟಿಸ್ ಹೊಂದಿರುವವರಲ್ಲೂ ಇದು ಇರಬಹುದು. ಇದು ಜೀವಕ್ಕೆ ಅಪಾಯವನ್ನುಂಟುಮಾಡುವ ಸಾಧ್ಯತೆಯಿರುವುದರಿಂದ, ಈ ಲಕ್ಷಣವನ್ನು ಗಮನಿಸಿದ ಕೂಡಲೇ ಮಗುವನ್ನು ವೈದ್ಯರ ಬಳಿಗೆ ಕರೆದೊಯ್ಯಿರಿ.

ಎಷ್ಟು ಜಿಮ್‌ ಮಾಡಿದ್ರು ಸಿಕ್ಸ್‌ಪ್ಯಾಕ್‌ ಆಗ್ತಿಲ್ವಾ: ಹಾಗಿದ್ರೆ ಇದ್ನ ನೀವು ಓದ್ಲೇಬೇಕು

ಆರೋಗ್ಯಕರ ಜೀವನಶೈಲಿ
- ನಿಮ್ಮ ಹಾಗೂ ಮಕ್ಕಳ ಡಯಾಬಿಟಿಸ್ ತಡೆಯಲು ಆರೋಗ್ಯಕರ ಜೀವನಶೈಲಿ ಅನುಸರಿಸುವುದು ಮುಖ್ಯ.
- ಸರಿಯಾದ ಹೊತ್ತಿಗೆ ಊಟ ತಿಂಡಿ, ಸಾಕಷ್ಟು ನೀರು ಸೇವನೆ ಅಗತ್ಯ. ಸಕ್ಕರೆ, ಮೈದಾ ತ್ಯಜಿಸಿ. ಒಂದು ಹತ್ತು ಕಾರ್ಬೋ ತ್ಯಜಿಸಿ ತರಕಾರಿ, ಬೇಳೆಕಾಳು ಸೇವಿಸಿ.
- ದಿನಕ್ಕೆ ಒಂದು ಗಂಟೆಯಾದರೂ ಕಠಿಣ ಪರಿಶ್ರಮದ ನಡಿಗೆ, ವ್ಯಾಯಾಮ ನಿಮ್ಮ ದೇಹದ ಶಕ್ತಿಗೆ ಸೂಕ್ತ ಬಳಕೆ ನೀಡುತ್ತದೆ. 

click me!