ಮಕ್ಕಳು ಮೂರ್ನಾಲ್ಕು ದಿನಗಳಿಗೊಮ್ಮೆ ಮಲ ವಿಸರ್ಜನೆ ಮಾಡಿದ್ರೆ ಅವರಿಗೆ ಮಲಬದ್ಧತೆ ಸಮಸ್ಯೆ ಕಾಡ್ತಿದೆ ಎಂದರ್ಥ. ಕಡಿಮೆ ನೀರು ಸೇವನೆ, ಫೈಬರ್ ಕೊರತೆ ಇರುವ ಆಹಾರ ಸೇವನೆ ಇದಕ್ಕೆ ಮುಖ್ಯ ಕಾರಣ. ಒತ್ತಡ ಕೂಡ ಇದಕ್ಕೆ ಕಾರಣವಾಗಿದ್ದು, ಪರಿಹಾರ ಇಲ್ಲಿದೆ.
ಹೊಟ್ಟೆ ನೋವು (Stomach Pain) ಮಕ್ಕಳಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ. ಬೇರೆ ಬೇರೆ ಕಾರಣಕ್ಕೆ ಹೊಟ್ಟೆ ನೋವು ಕಾಣಿಸಿಕೊಳ್ಳುತ್ತದೆ. ಆದ್ರೆ ಹೊಟ್ಟೆ ನೋವಿಗೆ ಮಲಬದ್ಧತೆ (Constipation) ಯೂ ಒಂದು ಮುಖ್ಯ ಕಾರಣ. ದೊಡ್ಡವರಿಗೆ ಮಾತ್ರವಲ್ಲ ಚಿಕ್ಕ ಮಕ್ಕಳಿಗೂ ಮಲಬದ್ಧತೆ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಟಾಯ್ಲೆಟ್ (Toilet) ಗೆ ಹೋಗಿ ತುಂಬಾ ಸಮಯ ಅಲ್ಲಿಯೇ ಮಗು ಕುಳಿತುಕೊಂಡಿದ್ದರೆ ಮಗುವಿಗೆ ಮಲಬದ್ಧತೆ ಸಮಸ್ಯೆ ಕಾಡ್ತಿದೆ ಎಂದು ನೀವು ಅರ್ಥೈಸಿಕೊಳ್ಳಬಹುದು. ಹಲವಾರು ದಿನಗಳವರೆಗೆ ಹೊಟ್ಟೆ ಕ್ಲೀನ್ ಆಗದೆ ಹೋದ್ರೆ, ಮಗುವಿಗೆ ಹೊಟ್ಟೆ ನೋವು, ಹಸಿವಿನ ಕೊರತೆ, ಹೊಟ್ಟೆ ಉಬ್ಬರ ದಂತಹ ಸಮಸ್ಯೆ ಕಾಣಿಸಿಕೊಳ್ಳಲು ಶುರುವಾಗುತ್ತದೆ. ಮಲಬದ್ಧತೆಯಿಂದಾಗಿ ಮಲ ಗಟ್ಟಿಯಾಗುತ್ತದೆ, ಒಣಗುತ್ತದೆ. ಇದರಿಂದಾಗಿ ಕರುಳಿನ ಚಲನೆಗೆ ತೊಂದರೆಯಾಗುತ್ತದೆ. ಇಂದು ನಾವು ಮಕ್ಕಳಲ್ಲಿ ಕಾಡುವ ಮಲಬದ್ಧತೆಗೆ ಕಾರಣ, ಲಕ್ಷಣ ಹಾಗೂ ಪರಿಹಾರವೇನು ಎಂಬುದನ್ನು ಹೇಳ್ತೇವೆ.
ಮಕ್ಕಳ ಮಲಬದ್ಧತೆಗೆ ಇದು ಕಾರಣಗಳು : ಮಕ್ಕಳ (Children) ಲ್ಲಿ ಅನೇಕ ಬಾರಿ ಕಡಿಮೆ ನೀರು ಕುಡಿಯುವುದರಿಂದ ಮಲಬದ್ಧತೆ ಸಮಸ್ಯೆ ಕಾಡುತ್ತದೆ. ಫೈಬರ್ (Fiber) ಭರಿತ ಆಹಾರವನ್ನು ಸೇವಿಸದಿರುವುದು, ಆಹಾರ (Food) ದಲ್ಲಿ ಅತಿಯಾದ ಕೊಬ್ಬು ಸೇವನೆ ಕೂಡ ಇದಕ್ಕೆ ಕಾರಣವಾಗುತ್ತದೆ. ಅನೇಕ ಮಕ್ಕಳ ದೈಹಿಕ ವ್ಯಾಯಾಮ ಕಡಿಮೆ ಇರುತ್ತದೆ. ಇದು ಕೂಡ ಅವರ ಮಲಬದ್ಧತೆಗೆ ಕಾರಣವಾಗುತ್ತದೆ. ಇದಲ್ಲದೆ ಕೆಲ ಬೇರೆ ವೈದ್ಯಕೀಯ ಸಮಸ್ಯೆಯಿಂದಲೂ ಕಾಡುತ್ತದೆ. ಮಕ್ಕಳಲ್ಲಿ ಒತ್ತಡದಿಂದಾಗಿ ಕೆಲವೊಮ್ಮೆ ಮಲಬದ್ಧತೆ ಉಂಟಾಗುತ್ತದೆ. ಹೊಸ ಸ್ನೇಹಿತರನ್ನು ಮಾಡಿಕೊಳ್ಳುವುದು, ಶಿಕ್ಷಕರ ಭಯ, ಹೊಸ ಶಾಲೆಗೆ ಹೋಗುವುದು, ಯಾವುದೋ ಚಿಂತೆ, ಮನೆಯಲ್ಲಿ ಹಿರಿಯರ ನಡುವಿನ ಜಗಳಗಳು, ಭಾವನಾತ್ಮಕ ಏರಿಳಿತಗಳು ಮುಂತಾದ ಹಲವು ಕಾರಣಗಳಿಂದ ಒತ್ತಡ ಉಂಟಾಗುತ್ತದೆ. ಹಾಗಂತ, ಮಲಬದ್ಧತೆ ಬಗ್ಗೆ ಹೆಚ್ಚು ಗಾಬರಿಯಾಗುವ ಅಗತ್ಯವಿಲ್ಲ. ನೀವು ಆಹಾರದಲ್ಲಿ ಕೆಲವು ಬದಲಾವಣೆಗಳನ್ನು ಮಾಡುವ ಮೂಲಕ ಮಕ್ಕಳಲ್ಲಿ ಮಲಬದ್ಧತೆಯ ಸಮಸ್ಯೆಯನ್ನು ನಿವಾರಿಸಬಹುದು.
ಮಕ್ಕಳಲ್ಲಿ ಮಲಬದ್ಧತೆಯ ಲಕ್ಷಣಗಳು :
ವಾರದಲ್ಲಿ ಮೂರು ಬಾರಿಗಿಂತಲೂ ಕಡಿಮೆ ಬಾರಿ ಮಲ ವಿಸರ್ಜನೆ ಮಾಡುವುದು, ಮಲ ಗಟ್ಟಿಯಾಗುವುದು, ಶುಷ್ಕ ಮತ್ತು ಮಲ ಹೊರಬರಲು ಕಷ್ಟವಾಗುವುದು. ಮಲ ವಿಸರ್ಜನೆ ಮಾಡುವಾಗ ವಿಪರೀತ ನೋವು, ಹೊಟ್ಟೆಯಲ್ಲಿ ನೋವು, ಒಳ ಉಡುಪುಗಳಲ್ಲಿ ದ್ರವ, ಗಟ್ಟಿಯಾದ ಮಲದ ಮೇಲ್ಮೈಯಲ್ಲಿ ರಕ್ತ ಇವೆಲ್ಲವೂ ಮಲಬದ್ಧತೆ ಲಕ್ಷಣವಾಗಿದೆ.
Kidney Illegal Business : ಕಾನೂನು ಬಿಗಿಯಾಗಿದ್ರೂ ಅಂಗ ಮಾರಾಟ ಕಡಿಮೆಯಾಗಿಲ್ಲ
ಮಲಬದ್ಧತೆ ಸಮಸ್ಯೆಗೆ ಇಲ್ಲಿದೆ ಪರಿಹಾರ :
ಮಲಬದ್ಧತೆ ಸಮಸ್ಯೆ ಇರುವ ಮಕ್ಕಳಿಗೆ ಸಾಕಷ್ಟು ನೀರು ಕುಡಿಯಲು ನೀಡಿಬೇಕು. ಹೆಚ್ಚಿನ ಮಕ್ಕಳು ದಿನವಿಡೀ ಕೆಲವೇ ಕೆಲವು ಲೋಟ ನೀರು ಕುಡಿಯುತ್ತಾರೆ. ಇದು ಅವರ ಒಟ್ಟಾರೆ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಮಕ್ಕಳಿಗೆ ದಿನಚರಿಯಲ್ಲಿ ನೀರು ಕುಡಿಯುವ ಅಭ್ಯಾಸ ರೂಢಿಮಾಡಿ. ದಿನಕ್ಕೆ 6 ರಿಂದ 7 ಗ್ಲಾಸ್ ನೀರು ಕುಡಿಯುವುದು ಮುಖ್ಯ.ನಾರಿನಂಶವಿರುವ ಆಹಾರವನ್ನು ಸೇವಿಸುವುದರಿಂದ ಮಲಬದ್ಧತೆ ನಿವಾರಣೆಯಾಗುತ್ತದೆ. ಕರುಳಿನ ಚಲನೆಯು ಸುಗಮವಾಗಿ ಕಾರ್ಯನಿರ್ವಹಿಸಲು ಫೈಬರ್ ಭರಿತ ಆಹಾರಗಳ ಸೇವನೆಯು ಸಹ ಅಗತ್ಯವಾಗಿದೆ. ಇತ್ತೀಚಿನ ದಿನಗಳಲ್ಲಿ ಮಕ್ಕಳು ಮಲಬದ್ಧತೆಗೆ ಕಾರಣವಾಗುವ ಮ್ಯಾಗಿ, ಜಂಕ್ ಫುಡ್ಸ್, ಚಿಪ್ಸ್, ಬಿಸ್ಕತ್ತುಗಳನ್ನು ಹೆಚ್ಚು ಸೇವಿಸುತ್ತಾರೆ. ಇದು ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಧಾನ್ಯಗಳು, ಹಸಿರು ತರಕಾರಿಗಳು, ಫೈಬರ್ ಸಮೃದ್ಧವಾಗಿರುವ ಹಣ್ಣುಗಳು, ಬೀನ್ಸ್, ಬೇಳೆಕಾಳುಗಳನ್ನು ನೀಡಬೇಕು.
ಅಪರೂಪದ ಖಾಯಿಲೆಯಿಂದ ಬಳಲುತ್ತಿರುವ ಅಮೂಲ್ಯ, ಬೇಕಿದೆ ನಿಮ್ಮ ನೆರವಿನ ಹಸ್ತ
ಅಗಸೆ ಬೀಜಗಳು ಮಲಬದ್ಧತೆಯನ್ನು ನಿವಾರಿಸಲು ಸಹಾಯ ಮಾಡುತ್ತವೆ. ಅಗಸೆ ಬೀಜ ಫೈಬರ್ ನಲ್ಲಿ ಸಮೃದ್ಧವಾಗಿವೆ. ಉಗುರು ಬೆಚ್ಚಗಿನ ಹಾಲಿನೊಂದಿಗೆ ಬಾಳೆಹಣ್ಣನ್ನು ತಿನ್ನಲು ನೀಡಬೇಕು. ಮಕ್ಕಳು ಬಾಳೆ ಹಣ್ಣನ್ನು ಇಷ್ಟಪಟ್ಟು ತಿನ್ನುತ್ತಾರೆ. ಇದು ಮಲ ವಿಸರ್ಜನೆಯನ್ನು ಸುಲಭಗೊಳಿಸುತ್ತದೆ.