Chicken Pox Treatment: ಬೇಸಿಗೆಯಲ್ಲಿ ಹೆಚ್ಚುತ್ತಿರೋ ಸಿಡುಬು; ಈ ಕಷಾಯ ಕುಡಿದ್ರೆ ಅಪ್ಪಿ ತಪ್ಪಿಯೂ ಬರಲ್ಲ

Published : Apr 21, 2026, 04:35 PM IST
chicken pox symptoms

ಸಾರಾಂಶ

Chicken Pox: ಚಿಕನ್‌ ಪಾಕ್ಸ್‌ ಎಂದರೆ ನಿಜಕ್ಕೂ ನರಕ. ಅದರಲ್ಲಿಯೂ ಬೇಸಿಗೆಯಲ್ಲಿ ಚಿಕನ್‌ ಪಾಕ್ಸ್‌ ಆದರೆ ಮೈತುಂಬ ಗುಳ್ಳೆಗಳು ಆಗಿರುತ್ತವೆ, ಒಂದು ಕಡೆ ಜ್ವರ, ಇನ್ನೊಂದು ಕಡೆ ಹೊಟ್ಟೆಯಲ್ಲಿ ಸಂಕಟ, ಸುಸ್ತು. ಇದು ಬರದಂತೆ ತಡೆಯಲು ಏನು ಮಾಡಬೇಕು?

ಬೇಸಿಗೆಯಲ್ಲಿ ಚಿಕನ್‌ ಪಾಕ್ಸ್‌ ಅಥವಾ ಸಿಡುಬು ಆಗೋದು ಜಾಸ್ತಿ. ಇದು ಒಬ್ಬರಿಂದ ಇನ್ನೊಬ್ಬರಿಗೆ ಹರಡುವುದು. ಮೆಡಿಕಲ್‌ನಲ್ಲಿ ಇದಕ್ಕೆ ಇನ್ನೂ ಸರಿಯಾದ ಚಿಕಿತ್ಸೆಯನ್ನು ಕಂಡುಹಿಡಿದಿಲ್ಲ. ಚಿಕನ್‌ ಪಾಕ್ಸ್‌ ಕಾಯಿಲೆಯನ್ನು ಅಮ್ಮ ಎಂದು ಕೂಡ ಕರೆಯುತ್ತಾರೆ. ಇದು ದೇವರಿಂದ ಬಂದ ಕಾಯಿಲೆ ಎಂದು ಕೂಡ ಕೆಲವರು ಕರೆಯುತ್ತಾರೆ.

ಚಿಕನ್‌ ಪಾಕ್ಸ್‌ ಬರದಂತೆ ತಡೆಯುವ ಔಷಧಿಗಳು

ನೆಲ ನೆಲ್ಲಿ ಗಿಡ

ನೆಲ ನೆಲ್ಲಿ ಗಿಡದ ಸೊಪ್ಪಿನ ಕಷಾಯವನ್ನು ಮಾಡಿಕೊಂಡು ಕುಡಿದರೆ ಚಿಕನ್‌ ಪಾಕ್ಸ್‌ ಬರೋದೇ ಇಲ್ಲ ಎಂದು ಹೇಳುತ್ತಾರೆ.

ಮುಳ್ಳೆ ಹಣ್ಣಿನ ಗಿಡದ ಬೇರು

ಮುಳ್ಳೆ ಹಣ್ಣಿನ ಗಿಡದ ಬೇರನ್ನು ನೀರಿನಲ್ಲಿ ತೇಯ್ದು, ತಿಂದರೆ ಚಿಕನ್‌ ಪಾಕ್ಸ್‌ ಆಗೋದೇ ಇಲ್ಲ ಎಂದು ಕೂಡ ಹೇಳ್ತಾರೆ.

ಕಹಿ ಬೇವಿನ ಸೊಪ್ಪಿನ ಕಷಾಯ

ಕಹಿ ಬೇವಿನ ಸೊಪ್ಪಿನ ಕಷಾಯ ಮಾಡಿ ಕುಡಿಯಬೇಕು, ಇದು ಮೈಯಲ್ಲಿರುವ ನಂಜನ್ನು ಹೊರಹಾಕುತ್ತದೆ ಎನ್ನುತ್ತಾರೆ.

ಚಿಕನ್‌ ಪಾಕ್ಸ್‌ ಬಂದ್ಮೇಲೆ ಏನು ಮಾಡಬೇಕು?

ಉಗುರಿನಿಂದ ಗುಳ್ಳೆಯನ್ನು ಒಡೆಯುವುದು ಮಾಡಬಾರದು, ಅದನ್ನು ಮುಟ್ಟಬಾರದು. ಕಹಿ ಬೇವಿನ ಸೊಪ್ಪಿನ ಪೇಸ್ಟ್‌ಗೆ ಅರಿಷಿಣ ಹಾಕಿ ಹಚ್ಚಬೇಕು, ಬೇವಿನ ಎಣ್ಣೆ ಹಚ್ಚಬೇಕು.

ಈ ರೀತಿ ಆದಾಗ ಅವಲಕ್ಕಿ, ನುಗ್ಗೇಕಾಯಿ, ಬಾಳೆಹಣ್ಣು, ಉದ್ದು, ಕಡಲೆ ಮುಂತಾದ ನಂಜಿನ ಆಹಾರ ಪದಾರ್ಥಗಳನ್ನು ತಿನ್ನೋದಿಲ್ಲ, ಅಷ್ಟೇ ಅಲ್ಲದೆ ಉಪ್ಪು, ಹುಳಿ ಖಾರದ ಐಟಮ್‌ನ್ನು ಕೂಡ ಸೇವಿಸೋದಿಲ್ಲ. ಎರಡು ತಿಂಗಳಗಳ ಕಾಲ ಪಥ್ಯ ಮಾಡಬೇಕು ಎಂದು ಹೇಳುತ್ತಾರೆ. ಆದರೆ ವೈದ್ಯರು ಮಾತ್ರ ಎಣ್ಣೆ ತಿಂಡಿ, ಖಾರ, ಹುಳಿ ಇರುವ ಐಟಮ್‌ ತಿನ್ನಬೇಡಿ ಎನ್ನುತ್ತಾರೆ ಅಷ್ಟೇ

ಆಪತ್ತಿ ಚಕ್ಕೆ

ಕದಂಬ ಮರ (Anthocephalus cadamba) ಅಥವಾ ಆಪತ್ತಿ ಚಕ್ಕೆಯ ತೊಗಟೆಯನ್ನು ಜಜ್ಜಿ ನೀರಿಗೆ ಹಾಕಿ ಕುದಿಸಿ, ಅದರ ಕಷಾಯವನ್ನು ದಿನಕ್ಕೆ ಕೆಲ ಬಾರಿ ಕುಡಿಯುವ ಮೂಲಕ ಸಿಡುಬು ಕಡಿಮೆ ಆಗುವುದು

 

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಲಿವರ್ ಆರೋಗ್ಯ ಕಾಪಾಡಲು ಈ 7 ಆಹಾರಗಳು ಬೆಸ್ಟ್
Summer Diet: ಈ ಆಹಾರಗಳಿಂದ ದೇಹದ ಉಷ್ಣಾಂಶ ಹೆಚ್ಚಾಗುತ್ತೆ: ಬೇಸಿಗೆಯಲ್ಲಿ ಕೂಲ್ ಆಗಿರಲು ಇವುಗಳಿಂದ ದೂರವಿರಿ