ಸೆಲೆಬ್ರಿಟಿಗಳ ಮುಖ ಫಳಫಳ ಹೊಳೆಯೋದು ಸುಮ್ನೆ ಏನಲ್ಲ, ಸ್ಕಿನ್ ರೊಟೀನ್ ಹೇಗಿರುತ್ತೆ ನೋಡಿ

By Vinutha Perla  |  First Published Feb 9, 2024, 3:55 PM IST

ಸೆಲೆಬ್ರಿಟಿಗಳ ಮುಖ ಯಾವಾಗ್ಲೂ ಫಳಫಳ ಅಂತ ಹೊಳೀತಿರೋದನ್ನು ನೀವು ನೋಡಿರಬಹುದು. ಮೇಕಪ್‌ ಇದರ ಹಿಂದಿರುವ ಕಾರಣ ಅಂತ ಹೆಚ್ಚಿನವರು ಅಂದುಕೊಂಡಿದ್ದಾರೆ. ಆದ್ರೆ ಇದಲ್ಲದೆಯೂ ನಟ-ನಟಿಯರ ಮುಖ ಶೈನ್ ಆಗ್ತಿರುತ್ತೆ. ಅದರ ಹಿಂದಿರುವ ಕಾರಣ ಇದುವೇ ನೋಡಿ..


ಪ್ರತಿ ಹೆಣ್ಣುಮಕ್ಕಳೂ ಸುಂದರವಾಗಿ ಕಾಣಬೇಕೆಂದು ಬಯಸುತ್ತಾರೆ. ಅದಕ್ಕಾಗಿ ವಿಶೇಷವಾಗಿ ಸಾವಿರಾರು ರೂಪಾಯಿ ಖರ್ಚು ಮಾಡಿ ಹಲವು ಉತ್ಪನ್ನಗಳನ್ನು ಖರೀದಿಸುತ್ತಾರೆ. ಆದರೆ ಎಷ್ಟೇ ಬ್ಯೂಟಿ ಪ್ರಾಡಕ್ಟ್ ಬಳಸಿದರೂ ಚರ್ಮಕ್ಕೆ ಸೆಲೆಬ್ರಿಟಿ ಗ್ಲೋ ಯಾಕೆ ಬರುವುದಿಲ್ಲ ಎಂದು ಅಚ್ಚರಿಪಡುತ್ತಾರೆ. ಮೇಕಪ್ ಇಲ್ಲದೆಯೂ ನಟ-ನಟಿಯರ ಸ್ಕಿನ್ ಶೈನ್ ಆಗಲು ನಿರ್ಧಿಷ್ಟ ಕಾರಣವೂ ಇದೆ. ಅವರು ಬಳಸುವ ಉತ್ಪನ್ನಗಳನ್ನು ಬಳಸುವುದರಿಂದ ಮಾತ್ರವಲ್ಲ, ಅವರು ಮಾಡುವ ಕೆಲವು ಕೆಲಸಗಳಿಂದಲೂ ನಾವು ಅವರಂತೆ ಫಳಫಳ ಹೊಳೆಯೋ ಚರ್ಮವನ್ನು ಪಡೆಯಬಹುದು. ಹಾಗಿದ್ರೆ ಸೆಲೆಬ್ರಿಟಿಗಳು ಫಾಲೋ ಮಾಡೋ ಸ್ಕಿನ್ ರೊಟೀನ್ ಏನು?

ಅನೇಕ ನಾಯಕಿಯರ ಮುಖವನ್ನು ನೋಡಿರಬಹುದು. ಮುಖದಲ್ಲಿ ಯಾವುದೇ ಸುಕ್ಕುಗಳಿಲ್ಲ, ಕಲೆಗಳಿಲ್ಲ. ಮೇಕಪ್ ಮಾಡುವುದರಿಂದ ಅದನ್ನೆಲ್ಲ ನೋಡಲು ಸಾಧ್ಯವಿಲ್ಲ ಎಂದು ಹಲವರು ಭಾವಿಸುತ್ತಾರೆ. ಆದರೆ ಮೇಕಪ್ ಮಾಡದೆಯೂ ಕೆಲವು ನಟ-ನಟಿಯರ ಫೇಸ್ ಸಹಜವಾಗಿಯೇ ಶೈನಿಂಗ್ ಆಗಿರುತ್ತದೆ. ಇದಕ್ಕೆ ಕಾರಣವಾಗೋದು ಸೆಲೆಬ್ರಿಟಿಗಳು ಉಪಯೋಗಿಸುವ ಸ್ಪೆಷಲ್‌ ಸ್ಕಿನ್ ರೊಟೀನ್‌ ಐಸ್ ಕ್ಯೂಬ್‌.

Tap to resize

Latest Videos

59 ವಯಸ್ಸಲ್ಲೂ 20ರ ಹುಡುಗಿಯಂತೆ ಕಾಣುವ ಈ ಮಹಿಳೆಯ ಬ್ಯೂಟಿ ಸೀಕ್ರೆಟ್ ಏನು ಗೊತ್ತಾ?

ಚರ್ಮಕ್ಕೆ ಐಸ್‌ಕ್ಯೂಬ್ ಬಳಕೆ
ಬೆಳಗ್ಗೆ ಎದ್ದಾಗ ತ್ವಚೆಯ ಆರೈಕೆಯತ್ತ ಗಮನ ಹರಿಸುವವರು ಅನೇಕರಿದ್ದಾರೆ. ನೀವು ಅವರಲ್ಲಿ ಒಬ್ಬರಾಗಿದ್ದರೆ.. ಈ ಐಸ್ ವಾಟರ್ ಹ್ಯಾಕ್‌ನ್ನು ಪ್ರಯತ್ನಿಸಿ. ಒಂದು ಬೌಲ್‌ನಲ್ಲಿ ಐಸ್ ಕ್ಯೂಬ್‌ಗಳನ್ನು ಹಾಕಿ.. ಆ ಬೌಲ್‌ನಲ್ಲಿ ಮುಖವನ್ನು ಕೆಲವು ಸೆಕೆಂಡುಗಳ ಕಾಲ ಇರಿಸಿ. ಇದನ್ನು ಹಲವಾರು ಬಾರಿ ಮಾಡಿ. ಪ್ರತಿನಿತ್ಯ ಈ ತಂತ್ರವನ್ನು ಪ್ರಯತ್ನಿಸಿದರೆ.ಮುಖದಲ್ಲಿ ಸೆಲೆಬ್ರಿಟಿಗಳ ಹೊಳಪು ಮೂಡುತ್ತದೆ. ನಿಮ್ಮ ಮುಖವನ್ನು ಐಸ್ ಕ್ಯೂಬ್‌ ಬೌಲ್‌ನಲ್ಲಿ ಮುಳುಗಿಸಲು ಸಾಧ್ಯವಾಗದಿದ್ದರೆ, ಅದೇ ಐಸ್ ಕ್ಯೂಬ್‌ನಿಂದ ನಿಮ್ಮ ಮುಖವನ್ನು ಚೆನ್ನಾಗಿ ಮಸಾಜ್ ಮಾಡಬೇಕು.

- ಅನೇಕ ಜನರು ಬೆಳಿಗ್ಗೆ ಎದ್ದಾಗ ಮುಖ ಉಬ್ಬಿರುತ್ತದೆ. ಕಣ್ಣುಗಳ ಕೆಳಗೆ ಉಬ್ಬುವುದು ಹೆಚ್ಚು ಕಾಣಿಸುತ್ತದೆ. ಹೀಗಾದಾಗ ಮುಖವನ್ನು ತಂಪಾದ ಐಸ್ ನೀರಿನಲ್ಲಿ ಮಸಾಜ್ ಮಾಡುವುದರಿಂದ ಪಫಿನೆಸ್ ಕಡಿಮೆಯಾಗುತ್ತದೆ. ರಕ್ತ ಸಂಚಾರ ತುಂಬಾ ಚೆನ್ನಾಗಿ ಆಗುತ್ತದೆ. ಇದು ಕಣ್ಣಿನ ಆಯಾಸವನ್ನು ಸಹ ಕಡಿಮೆ ಮಾಡುತ್ತದೆ.

ತಿನ್ನೋದೊಂದೆ ಅಲ್ಲ ಮುಖಕ್ಕೂ ಹಚ್ಕೊಂಡ್ ನೋಡಿ ಚಾಕೊಲೇಟ್

- ವಯಸ್ಸಾದಂತೆ, ಚರ್ಮವು ಸಡಿಲಗೊಳ್ಳುತ್ತದೆ. ಮುಖ ಮತ್ತು ಕತ್ತಿನ ಬಳಿ ಇದು ಸ್ಪಷ್ಟವಾಗಿ ಕಂಡುಬರುತ್ತದೆ. ಚರ್ಮವು ಸಡಿಲವಾಗಲು ಪ್ರಾರಂಭಿಸುತ್ತದೆ. ಆದರೆ.. ಈ ಐಸ್ ಹ್ಯಾಕ್ ನಿಂದಾಗಿ ಚರ್ಮ ಬಿಗಿಯಾಗುತ್ತದೆ. ಇದರಿಂದ ನೀವು ವಯಸ್ಸಾದವರಂತೆ ಕಾಣುವುದಿಲ್ಲ. 

- ಐಸ್‌ಕ್ಯೂಬ್ ಬಳಕೆ ಮುಖದಲ್ಲಿ ಉತ್ತಮ ರಕ್ತ ಸಂಚಾರಕ್ಕೆ ನೆರವಾಗುತ್ತವೆ. ರಕ್ತ ಸಂಚಾರ ಚುರುಕಾಗಿದ್ದರೆ ಮುಖ ಹೆಚ್ಚು ಕಾಂತಿಯುತವಾಗಿ ಕಾಣುತ್ತದೆ. ಈ ರೀತಿ ಐಸ್ ಮಸಾಜ್ ಮಾಡಿದ ನಂತರ ಮುಖಕ್ಕೆ ಮೇಕಪ್ ಹಾಕಿಕೊಂಡರೂ ಅದು ಉತ್ತಮವಾಗಿ ವಿಲೀನಗೊಳ್ಳಲು ಸಹಾಯವಾಗುತ್ತದೆ. ಮೇಕಪ್ ಚೆನ್ನಾಗಿ ಅಂಟಿಕೊಳ್ಳುತ್ತದೆ.

- ಸರಿಯಾಗಿ ನಿದ್ದೆ ಮಾಡದಿದ್ದರೂ ಕಣ್ಣಿನ ಕೆಳಗೆ ಕಪ್ಪು ವರ್ತುಲ ಉಂಟಾಗುತ್ತದೆ. ಅನೇಕ ಜನರು ತಮ್ಮ ಕಣ್ಣುಗಳ ಕೆಳಗೆ ಡಾರ್ಕ್ ಸರ್ಕಲ್‌ ಹೊಂದಿರುತ್ತಾರೆ ಮತ್ತು ಯಾವಾಗಲೂ ದಣಿದಂತೆ ಕಾಣುತ್ತಾರೆ. ಅಂತಹವರು ಈ ಐಸ್ ಹ್ಯಾಕ್ ಅನ್ನು ಪ್ರಯತ್ನಿಸುವ ಮೂಲಕ ಬ್ಲ್ಯಾಕ್‌ ಸರ್ಕಲ್‌ ಹೋಗಲಾಡಿಸಬಹುದು. ಬೆಳಗ್ಗೆ ಈ ರೀತಿ ಐಸ್ ಮಸಾಜ್ ಮಾಡುವುದರಿಂದ ಸಾಕಷ್ಟು ರಿಲೀಫ್ ಸಿಗುತ್ತದೆ.

ಆದರೆ.. ಇಷ್ಟೆಲ್ಲಾ ಉಪಯೋಗಗಳನ್ನು ಹೊಂದಿರುವ ಈ ಐಸ್ ಮಸಾಜ್ ಎಲ್ಲರ ಸ್ಕಿನ್‌ಗೆ ಹಿಡಿಸದೇ ಇರಬಹುದು. ಕೆಲವರ ತ್ವಚೆ ತುಂಬಾ ಸೂಕ್ಷ್ಮವಾಗಿರುವಂತಹ ಸಮಸ್ಯೆಗಳಿರಬಹುದು. ಹೀಗಾಗಿ ಐಸ್‌ ಹ್ಯಾಕ್‌ನ್ನು ಬಳಸುವ ಮುನ್ನ ತಜ್ಞರ ಸಹಾಯವನ್ನು ತೆಗೆದುಕೊಳ್ಳುವುದು ಉತ್ತಮ.

click me!