ಮಕ್ಕಳಲ್ಲಿ ಈ ಸಮಸ್ಯೆ ಕಾಣಿಸಿದ್ರೆ ತಕ್ಷಣ ವೈದ್ಯರಿಗೆ ತೋರಿಸಿ, ಡಯಾಬಿಟಿಸ್ ಸೂಚನೆ ಆಗಿರ್ಬೋದು!

By Vinutha PerlaFirst Published Feb 9, 2024, 2:43 PM IST
Highlights

ಮಧುಮೇಹ ವಯಸ್ಸಾದವರಿಗೆ ಮಾತ್ರ ಬರುವ ಕಾಯಿಲೆ ಎಂದು ಹಲವರು ಭಾವಿಸುತ್ತಾರೆ. ಆದರೆ ಬದಲಾಗುತ್ತಿರುವ ಜೀವನಶೈಲಿಯಿಂದ ಈ ರೋಗ ಈಗ ಚಿಕ್ಕ ಮಕ್ಕಳನ್ನೂ ಕಾಡುತ್ತಿದೆ. ಮಕ್ಕಳಲ್ಲಿ ಮಧುಮೇಹದ ಲಕ್ಷಣ ಹೇಗಿರುತ್ತೆ? ಇಲ್ಲಿದೆ ಮಾಹಿತಿ.

ಮಧುಮೇಹದಿಂದ ಬಳಲುತ್ತಿರುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ. ಪ್ರಪಂಚದಾದ್ಯಂತ ಲಕ್ಷಾಂತರ ಮಂದಿ ಮಧುಮೇಹದಿಂದ ಬಳಲುತ್ತಿದ್ದಾರೆ. ಇದಕ್ಕೆ ಮುಖ್ಯ ಕಾರಣ ನಮ್ಮ ಜೀವನ ಶೈಲಿಯಲ್ಲಿ ಆಗಿರುವ ಬದಲಾವಣೆ. ಇನ್ಸುಲಿನ್ ಅಥವಾ ಇನ್ಸುಲಿನ್ ಪ್ರತಿರೋಧದ ಕೊರತೆಯು ರಕ್ತದಲ್ಲಿನ ಸಕ್ಕರೆಯನ್ನು ನಿಯಂತ್ರಿಸುವುದು ತುಂಬಾ ಕಷ್ಟಕರವಾಗಿರುತ್ತದೆ. ಇದು ರಕ್ತದಲ್ಲಿನ ಸಕ್ಕರೆಯ ಮಟ್ಟವನ್ನು ಹೆಚ್ಚಿಸುತ್ತದೆ. ಇದನ್ನು ಮಧುಮೇಹ ಎಂದು ಕರೆಯಲಾಗುತ್ತದೆ.

ಮಧುಮೇಹವು ವಯಸ್ಸಾದವರಿಗೆ ಮಾತ್ರ ಬರುವ ಕಾಯಿಲೆ ಎಂದು ಹಲವರು ಭಾವಿಸುತ್ತಾರೆ. ಆದರೆ ಬದಲಾಗುತ್ತಿರುವ ಜೀವನಶೈಲಿಯಿಂದ ಈ ರೋಗ ಈಗ ಚಿಕ್ಕ ಮಕ್ಕಳನ್ನೂ ಕಾಡುತ್ತಿದೆ. ಮಕ್ಕಳ ಬೆಳವಣಿಗೆ ಮತ್ತು ಅವರ ಸಾಮಾನ್ಯ ಜೀವನದ ಮೇಲೆ ಪರಿಣಾಮ ಬೀರುತ್ತದೆ. ಅದಕ್ಕಾಗಿಯೇ ಮಕ್ಕಳಲ್ಲಿ ಮಧುಮೇಹದ ಆರಂಭಿಕ ಲಕ್ಷಣಗಳನ್ನು ಗುರುತಿಸಿ ಚಿಕಿತ್ಸೆ ನೀಡಬೇಕು. ಮಕ್ಕಳಲ್ಲಿ ಮಧುಮೇಹದ ಲಕ್ಷಣ ಹೇಗಿರುತ್ತೆ? ಮಕ್ಕಳಿಗೆ ಮಧುಮೇಹ ಬಂದರೆ ಏನಾಗುತ್ತದೆ ಮೊದಲಾದ ವಿಚಾರವನ್ನು ತಿಳ್ಕೊಳ್ಳೋಣ.

Latest Videos

ಚಿಕ್ಕವಯಸ್ಸಿನಲ್ಲಿ ಪಿರಿಯಡ್ಸ್ ಆದ್ರೆ ಡಯಾಬಿಟಿಸ್ ಬರೋ ಛಾನ್ಸಸ್ ಹೆಚ್ಚಿರುತ್ತಾ?

ತೂಕ ಇಳಿಕೆ
ಮಕ್ಕಳು ದಿಢೀರ್ ಆಗಿ ತೂಕ ಕಳೆದುಕೊಂಡರೆ ಇದು ಆತಂಕ ಪಡುವ ವಿಷಯ. ಮಗುವಿನಲ್ಲಿ ಹಠಾತ್ ತೂಕ ನಷ್ಟವು ಕಾಣಿಸಿಕೊಂಡಲ್ಲಿ, ಇದು ಮಧುಮೇಹದ ಸಂಕೇತವಾಗಿದೆ. ಈ ರೋಗಲಕ್ಷಣವು ಹೆಚ್ಚಾಗಿ ಟೈಪ್-1 ಮಧುಮೇಹದಲ್ಲಿ ಕಂಡುಬರುತ್ತದೆ. ಆದರೆ ಟೈಪ್ 2 ಡಯಾಬಿಟಿಸ್ ಸಹ ಈ ರೋಗಲಕ್ಷಣವನ್ನು ಹೊಂದಿದೆ. 

ಆಯಾಸ
ಮಗು ಯಾವುದೇ ಚಟುವಟಿಕೆಯನ್ನು ಮಾಡಿದ ಬಳಿಕ ಬೇಗ ಸುಸ್ತಾದರೆ ಅಥವಾ ಯಾವಾಗಲೂ ಸುಸ್ತಾದಂತೆ ತೋರುತ್ತಿದ್ದರೆ ಇದು ಸಹ ಮಧುಮೇಹದ ಲಕ್ಷಣ ಆಗಿರಬಹುದು. ದೈಹಿಕ ಚಟುವಟಿಕೆಯಿಲ್ಲದೆ ಮಕ್ಕಳು ದಣಿದರೆ ಸಾಕು ಇದು ಅಪಾಯದ ಸೂಚನೆಯಾಗಿದೆ. ನಿಮ್ಮ ಮಕ್ಕಳಲ್ಲಿ ಈ ಲಕ್ಷಣಗಳು ಕಂಡುಬಂದರೆ ಜಾಗರೂಕರಾಗಿರಿ. 

ಹೆಚ್ಚಿದ ಬಾಯಾರಿಕೆ
ಹೆಚ್ಚಿದ ರಕ್ತದಲ್ಲಿನ ಸಕ್ಕರೆಯ ಮಟ್ಟವು ತೀವ್ರವಾದ ಬಾಯಾರಿಕೆಗೆ ಕಾರಣವಾಗುತ್ತದೆ. ಅದಕ್ಕಾಗಿಯೇ ಮಗು ಇದ್ದಕ್ಕಿದ್ದಂತೆ ಅಗತ್ಯಕ್ಕಿಂತ ಹೆಚ್ಚು ನೀರು ಕುಡಿದರೆ ಅಥವಾ ಪದೇ ಪದೇ ಬಾಯಾರಿಕೆಯಾದರೆ, ಆಸ್ಪತ್ರೆಗೆ ಹೋಗಿ ತೋರಿಸಿ. ಏಕೆಂದರೆ ಇದು ಮಧುಮೇಹದ ಲಕ್ಷಣವಾಗಿದೆ. 

30 ವರ್ಷಕ್ಕಿಂತ ಮೇಲ್ಪಟ್ಟವರು ಮಧುಮೇಹದ ಈ ಲಕ್ಷಣಗಳನ್ನು ಎಂದಿಗೂ ಕಡೆಗಣಿಸ್ಬೇಡಿ

ಹೆಚ್ಚಿದ ಹಸಿವು
ಮಕ್ಕಳು ಯಾವಾಗಲೂ ಹಸಿವಾಗುತ್ತೆ ಅಂತ ಹೇಳಿದರೆ, ಹೆಚ್ಚು ಹೆಚ್ಚು ತಿನ್ನುತ್ತಿದ್ದರೆ ಈ ಬಗ್ಗೆ ಎಚ್ಚರ ವಹಿಸಬೇಕು. ಹೊಟ್ಟೆ ತುಂಬ ಊಟ ಮಾಡಿದ ನಂತರವೂ ಮಕ್ಕಳಿಗೆ ಹಸಿವಾಗುವುದು ಮಧುಮೇಹದ ಲಕ್ಷಣ ಎನ್ನುತ್ತಾರೆ ತಜ್ಞರು. 

ಆಗಾಗ ಮೂತ್ರ ವಿಸರ್ಜನೆ
ರಕ್ತದಲ್ಲಿನ ಸಕ್ಕರೆ ಮಟ್ಟ ಹೆಚ್ಚಳ ನಿರಂತರ ಬಾಯಾರಿಕೆಗೆ ಕಾರಣವಾಗುತ್ತದೆ. ಹೆಚ್ಚು ನೀರು ಕುಡಿಯುವುದರಿಂದಲೂ ಹೆಚ್ಚಾಗಿ ಮೂತ್ರ ವಿಸರ್ಜನೆಯಾಗುತ್ತದೆ. ಪದೇ ಪದೇ ಮೂತ್ರ ವಿಸರ್ಜನೆ ಮಾಡುವುದು ಅಥವಾ ಮಲಗುವಾಗ ತೊದಲುವುದು ಕೂಡ ಸಮಸ್ಯೆಯಾಗುತ್ತದೆ ಎನ್ನುತ್ತಾರೆ ತಜ್ಞರು. 

ಮನಸ್ಥಿತಿಯಲ್ಲಿ ಬದಲಾವಣೆಗಳು
ಮಗುವಿನ ಮನಸ್ಥಿತಿಯಲ್ಲಿ ಹಠಾತ್ ಬದಲಾವಣೆ ಕಂಡುಬಂದರೆ ಅದು ಮಧುಮೇಹದ ಲಕ್ಷಣವೂ ಆಗಿರಬಹುದು ಎನ್ನುತ್ತಾರೆ ತಜ್ಞರು. ನಿಮ್ಮ ಮಗುವು ನಿರಂತರ ಅಳು, ಕಿರಿಕಿರಿ, ಕೋಪದಂತಹ ಸ್ವಭಾವವನ್ನು ತೋರಿಸಬಹುದು. ಮಕ್ಕಳು ಈ ಯಾವುದೇ ರೀತಿ ವಿಚಿತ್ರವಾಗಿ ವರ್ತಿಸಿದರೂ ತಕ್ಷಣವೇ ಆಸ್ಪತ್ರೆಗೆ ಹೋಗಿ. 

click me!