ಬೀಡಿ-ಸಿಗರೇಟ್ ಸೇದದ ಮಹಿಳೆಯರನ್ನೂ ಕಾಡುತ್ತೆ ಶ್ವಾಸಕೋಶದ ಕ್ಯಾನ್ಸರ್, ಮನೆಯಲ್ಲೇ ಇದೆ ರೋಗಾಣು

Published : Dec 23, 2025, 09:34 PM IST
 Lung cancer

ಸಾರಾಂಶ

ಇತ್ತೀಚಿನ ದಿನಗಳಲ್ಲಿ ಕ್ಯಾನ್ಸರ್ ಸಂಖ್ಯೆ ಗಣನೀಯವಾಗಿ ಏರಿದೆ. ಶ್ವಾಸಕೋಶದ ಕ್ಯಾನ್ಸರ್ ಗೆ ಸಾವಿರಾರು ಮಂದಿ ಸಾಯ್ತಿದ್ದಾರೆ. ಬೀಡಿ, ಸಿಗರೆಟು ಸೇದೋರಿಗೆ ಮಾತ್ರವಲ್ಲ ಇವೆಲ್ಲದರಿಂದ ದೂರ ಇರುವ ಮಹಿಳೆಯರಿಗೂ ಈ ಕ್ಯಾನ್ಸರ್ ಕಾಡಲು ಕಾರಣ ಏನು?

ಬೀಡಿ ಇಲ್ಲ, ಸಿಗರೇಟ್ ಇಲ್ಲ ಆದ್ರೂ ಮಹಿಳೆಯರನ್ನು ಕಾಡುವ ಶ್ವಾಸಕೋಶದ ಕ್ಯಾನ್ಸರ್ಗೆ ಇದು ಕಾರಣ ವಿಶ್ವ ಆರೋಗ್ಯ ಸಂಸ್ಥೆ ಅಂಕಿ ಅಂಶದ ಪ್ರಕಾರ, ವಿಶ್ವದಾದ್ಯಂತ ಸಾಮಾನ್ಯ ಖಾಯಿಲೆಗಳಲ್ಲಿ ಶ್ವಾಸಕೋಶದ ಕ್ಯಾನ್ಸರ್ (Lung cancer) ಒಂದಾಗಿದೆ. ಪ್ರತಿ ವರ್ಷ ಲಕ್ಷಾಂತರ ಜನರು ಇದಕ್ಕೆ ಬಲಿಯಾಗ್ತಿದ್ದಾರೆ. ಶ್ವಾಸಕೋಶದ ಕ್ಯಾನ್ಸರ್ ಗೆ ಮುಖ್ಯ ಕಾರಣ ಧೂಮಪಾನ ಹಾಗೂ ತಂಬಾಕು ಉತ್ಪನ್ನ. ಆದ್ರೆ ಬೀಡಿ ಅಥವಾ ಸಿಗರೇಟ್ ಸೇದದ ಸಾವಿರಾರು ಮಹಿಳೆಯರು ಪ್ರತಿ ವರ್ಷ ಶ್ವಾಸಕೋಶದ ಕ್ಯಾನ್ಸರ್ಗೆ ಬಲಿಯಾಗ್ತಿದ್ದಾರೆ. ಉಸಿರಾಟದ ತೊಂದರೆ, ನಿರಂತರ ಕೆಮ್ಮು ಮತ್ತು ರಕ್ತಸಿಕ್ತ ಕೆಮ್ಮು ಇದ್ರ ಮುಖ್ಯ ಲಕ್ಷಣವಾಗಿದ್ದು, ಇದಕ್ಕೆ ಕಾರಣ ಏನು ಎನ್ನುವ ಮಾಹಿತಿ ಇಲ್ಲಿದೆ.

ಶ್ವಾಸಕೋಶದ ಕ್ಯಾನ್ಸರ್ ಗೆ ಪ್ರಮುಖ ಕಾರಣ 

ಮಹಿಳೆಯರಲ್ಲಿ ಕಾಡುವ ಶ್ವಾಸಕೋಶದ ಕ್ಯಾನ್ಸರ್ ಗೆ ಎರಡು ಪ್ರಮುಖ ಕಾರಣ ಇದೆ. ರಾಷ್ಟ್ರೀಯ ಕ್ಯಾನ್ಸರ್ ನೋಂದಣಿ ಕಾರ್ಯಕ್ರಮದ ಐತಿಹಾಸಿಕ ದತ್ತಾಂಶ ಶ್ವಾಸಕೋಶದ ಕ್ಯಾನ್ಸರ್ ಮತ್ತು ಒಳಾಂಗಣ ಗಾಳಿಯ ಕ್ವಾಲಿಟಿ ನಡುವೆ ಬಲವಾದ ಸಂಬಂಧ ಹೊಂದಿದೆ. ಹೆಚ್ಚಿನ ಮನೆಗಳಲ್ಲಿ ವೆಂಟಿಲೇಟರ್ ವ್ಯವಸ್ಥೆ ಸರಿಯಾಗಿರೋದಿಲ್ಲ. ಅಡುಗೆಯಿಂದ ಬರುವ ಹೊಗೆ ಮನೆಯಿಂದ ಹೊರಗೆ ಹೋಗೋದಿಲ್ಲ. ಇದು ಅಪಾಯವನ್ನುಂಟು ಮಾಡುತ್ತದೆ. ಜೈವಿಕ ಇಂಧನದಲ್ಲಿ ಹೆಚ್ಚಿನ ಶಾಖದಲ್ಲಿ ಆಹಾರ ಹುರಿಯುವುದು ಇದಕ್ಕೆ ಪ್ರಮುಖ ಕಾರಣವಾಗಿದೆ.

ಇದನ್ನು ಕುಡಿಯಿರಿ, ವೈದ್ಯರಿಂದ ದೂರವಿರಿ: ಚೀನಿಯರ ಸೌಂದರ್ಯ, ಆರೋಗ್ಯ, ದೀರ್ಘಾಯಸ್ಸಿನ ಗುಟ್ಟು ರಟ್ಟು

ವೈದ್ಯರ ಪ್ರಕಾರ, ಬೀಡಿ, ಸಿಗರೇಟ್, ತಂಬಾಕು ಸೇವನೆ ಮಾಡದೆ ಮಹಿಳೆಯರಲ್ಲಿ ಕಾಡುವ ಶ್ವಾಸಕೋಶದ ಕ್ಯಾನ್ಸರ್ ಗೆ ಇನ್ನೊಂದು ಸಾಂಸ್ಕೃತಿಕ ಕಾರಣ. ಭಾರತದ ಪ್ರತಿಯೊಬ್ಬರೂ ತಮ್ಮದೇ ಶೈಲಿಯಲ್ಲಿ ದೇವರ ಪೂಜೆ ಮಾಡ್ತಾರೆ. ಎಲ್ಲಾ ಧರ್ಮಗಳ ಜನರು ಸಾಮಾನ್ಯವಾದ ಪೂಜೆ ವೇಳೆ ಧೂಪ, ಅಗರಬತ್ತಿಯನ್ನು ಹಚ್ಚಲಾಗುತ್ತದೆ. ಇದರಿಂದ ಬರುವ ಹೊಗೆ ಶ್ವಾಸಕೋಶದ ಆರೋಗ್ಯವನ್ನು ಹಾಳು ಮಾಡುತ್ತದೆ. ಮುಚ್ಚಿದ ಮನೆಯಲ್ಲಿ ಗಾಳಿ ಸರಿಯಾಗಿ ಬರದ ಕಾರಣ ಹೊಗೆ ಒಳಾಂಗಣ ಗಾಳಿಯಲ್ಲಿ ಹಾನಿಕಾರಕ ಕಣಗಳ ಸಾಂದ್ರತೆಯನ್ನು ಹೆಚ್ಚಿಸುತ್ತದೆ. ಇದು ಶ್ವಾಸಕೋಶಗಳಿಗೆ ಹಾನಿಯುಂಟು ಮಾಡುತ್ತದೆ. 

EGFR (ಎಪಿಡರ್ಮಲ್ ಗ್ರೋತ್ ಫ್ಯಾಕ್ಟರ್ ರಿಸೆಪ್ಟರ್) ಎಂದು ಕರೆಯಲ್ಪಡುವ ನಿರ್ದಿಷ್ಟ ಆನುವಂಶಿಕ ರೂಪಾಂತರ ಧೂಮಪಾನ ಮಾಡದ ಭಾರತೀಯ ಮಹಿಳೆಯರಲ್ಲಿ ಶ್ವಾಸಕೋಶದ ಕ್ಯಾನ್ಸರ್ಗೆ ಸಂಬಂಧಿಸಿದೆ ಎಂದು ಹಲವಾರು ಅಧ್ಯಯನಗಳು ಸೂಚಿಸುತ್ತವೆ. ಇದು ಏಷ್ಯನ್ ಮಹಿಳೆಯರಲ್ಲಿ ಹೆಚ್ಚಾಗಿ ಕಂಡುಬರುತ್ತದೆ. ಭಾರತದಲ್ಲಿ, ವಿಶೇಷವಾಗಿ ನಗರಗಳಲ್ಲಿ ವಾತಾವರಣ ಕ್ಷಣ ಕ್ಷಣಕ್ಕೂ ಹದಗೆಡುತ್ತಿದೆ. ವಾಹನಗಳಿಂದ ಹೊರಸೂಸುವಿಕೆ, ನಿರ್ಮಾಣದ ಧೂಳು ಮತ್ತು ಕೈಗಾರಿಕಾ ಹೊಗೆ ಗಾಳಿಯಲ್ಲಿ PM2.5 ಮಟ್ಟವನ್ನು ಗಮನಾರ್ಹವಾಗಿ ಹೆಚ್ಚಿಸಿವೆ. ಇದು ದೀರ್ಘಕಾಲದ ಶ್ವಾಸಕೋಶದ ಹಾನಿಯನ್ನುಂಟುಮಾಡುತ್ತಿದೆ. ಮಹಿಳೆಯರ ಶ್ವಾಸಕೋಶಗಳು ಪುರುಷರಿಗಿಂತ ಚಿಕ್ಕದಾಗಿರುತ್ತವೆ. ಇದು ಅವರನ್ನು ಹೆಚ್ಚು ದುರ್ಬಲಗೊಳಿಸುತ್ತದೆ.

ಆಹಾರ, ಒತ್ತಡ ಇದ್ಯಾವುದೂ ಅಲ್ಲ.. ಬೆಳಗಿನ ಜಾವದ ಹೃದಯಾಘಾತಕ್ಕೆ ಕಾರಣ 'ಈ ಅಭ್ಯಾಸ'

ಶ್ವಾಸಕೋಶದ ಕ್ಯಾನ್ಸರ್ ಲಕ್ಷಣಗಳು 

ಮಹಿಳೆಯರಲ್ಲಿ ಶ್ವಾಸಕೋಶದ ಕ್ಯಾನ್ಸರನ್ನು ಆರಂಭಿಕ ಹಂತಗಳಲ್ಲಿ ಪತ್ತೆಹಚ್ಚುವುದು ಕಷ್ಟ. ನಿರಂತರ ಕೆಮ್ಮು ಶ್ವಾಸಕೋಶದ ಕ್ಯಾನ್ಸರ್ನ ಆರಂಭಿಕ ಮತ್ತು ಸಾಮಾನ್ಯ ಲಕ್ಷಣವಾಗಿದೆ. ನಿಮ್ಮ ಕೆಮ್ಮು ವಾರಗಳು ಅಥವಾ ತಿಂಗಳುಗಳವರೆಗೆ ಮುಂದುವರಿದರೆ ಅಥವಾ ಕ್ರಮೇಣ ಹೆಚ್ಚಾದರೆ, ಅದನ್ನು ನಿರ್ಲಕ್ಷಿಸಬಾರದು. ಉಸಿರಾಟದಲ್ಲಿ ತೊಂದರೆ. ಶ್ವಾಸಕೋಶದಲ್ಲಿ ಗೆಡ್ಡೆ ಬೆಳೆದಂತೆ, ಸಾಮರ್ಥ್ಯ ಕಡಿಮೆಯಾಗುತ್ತದೆ. ಇದರಿಂದ ದಣಿವು ಹೆಚ್ಚಾಗುತ್ತದೆ. ಉಸಿರಾಟದಲ್ಲಿ ತೊಂದರೆಯಾಗುತ್ತದೆ. ಮಹಿಳೆಯರಲ್ಲಿ ಶ್ವಾಸಕೋಶದ ಕ್ಯಾನ್ಸರ್ನಲ್ಲಿ ಎದೆ ನೋವು, ಒತ್ತಡ ಅಥವಾ ಸುಡುವ ಸಂವೇದನೆ ಸಾಮಾನ್ಯವಾಗಿದೆ. ಈ ನೋವು ಕೆಲವೊಮ್ಮೆ ಬೆನ್ನು, ಭುಜಗಳು ಅಥವಾ ತೋಳುಗಳಿಗೆ ಹರಡಬಹುದು. ಕ್ಯಾನ್ಸರ್ ದೇಹದಲ್ಲಿ ಶಕ್ತಿಯ ಇಳಿಕೆಗೆ ಕಾರಣವಾಗುತ್ತದೆ. ಯಾವುದೇ ಸ್ಪಷ್ಟ ಕಾರಣವಿಲ್ಲದೆ ಮಹಿಳೆಯರು ನಿರಂತರ ಆಯಾಸ, ಆಲಸ್ಯ ಅಥವಾ ದೌರ್ಬಲ್ಯವನ್ನು ಅನುಭವಿಸಬಹುದು. ಆಹಾರ ಅಥವಾ ವ್ಯಾಯಾಮವಿಲ್ಲದೆ ಹಠಾತ್ ತೂಕ ನಷ್ಟವು ಶ್ವಾಸಕೋಶದ ಕ್ಯಾನ್ಸರ್ನ ಸಂಕೇತವೂ ಆಗಿರಬಹುದು.

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಇದನ್ನು ಕುಡಿಯಿರಿ, ವೈದ್ಯರಿಂದ ದೂರವಿರಿ: ಚೀನಿಯರ ಸೌಂದರ್ಯ, ಆರೋಗ್ಯ, ದೀರ್ಘಾಯಸ್ಸಿನ ಗುಟ್ಟು ರಟ್ಟು
ನೀಲಿ ಮತ್ತು ಹಳದಿ ಬಣ್ಣದ ಉಗುರು ಯಾವ ಕಾಯಿಲೆಯ ಲಕ್ಷಣವಾಗಿದೆ?