ಇಯರ್ ಆಂಡ್ ಬ್ಯಾಕ್ ಟು ಬ್ಯಾಕ್ ಪಾರ್ಟಿ ಮೋಜಿನ ಜೊತೆ ಡಬಲ್ ನೋವು ನೀಡುತ್ತೆ

Published : Dec 22, 2025, 09:46 PM IST
New Year Party

ಸಾರಾಂಶ

ಇಯರ್ ಆಂಡ್ ನಲ್ಲಿ ಪಾರ್ಟಿಗಳು ಮಾಮೂಲಿ. ವರ್ಷದ ಕೊನೆ ಅಂತ ನೀವೂ ಒಂದಾದ್ಮೇಲೆ ಒಂದು ಪಾರ್ಟಿಗೆ ಹೋಗ್ತಾನೇ ಇದ್ರೆ ಸಂತೋಷ ಸಿಗ್ಬಹುದು. ಆದ್ರೆ ದೇಹ ಸಹಿಸೋದಿಲ್ಲ. ಏನಾಗುತ್ತೆ ಗೊತ್ತಾ?

ಇಯರ್ ಆಂಡ್ ಶುರುವಾಗಿದೆ. ಜನರು ಪಾರ್ಟಿಗಳಿಗೆ ಚಾಲನೆ ನೀಡಿದ್ದಾರೆ. ಫ್ರೆಂಡ್ಸ್‌ ಜೊತೆ, ಸಂಬಂಧಿಕರ ಜೊತೆ ಕುಟುಂಬದವರ ಜೊತೆ ಅಂತ ಬ್ಯಾಕ್ ಟು ಬ್ಯಾಕ್ ಪಾರ್ಟಿಗಳಿಗೆ ಜನರು ಪ್ಲಾನ್ ಮಾಡ್ತಿದ್ದಾರೆ. ಇಯರ್‌ ಆಂಡ್‌ ನಲ್ಲಿ ಒಂದಿಷ್ಟು ಪಾರ್ಟಿ ಆದ್ರೆ ನ್ಯೂ ಇಯರ್‌ ಆರಂಭದಲ್ಲಿ ಇನ್ನೊಂದಿಷ್ಟು ಪಾರ್ಟಿ. ಈ ಪಾರ್ಟಿಗಳು ವೆರೈಟಿ ಊಟ, ಮೋಜು – ಮಸ್ತಿ, ಡಾನ್ಸ್, ಸ್ವೀಟ್, ಡ್ರಿಂಕ್ ಅಂತ ಮನಸ್ಸಿಗೆ ಸಂತೋಷವನ್ನು ನೀಡುತ್ತೆ. ಆದ್ರೆ ಇಯರ್ ಆಂಡ್ ನಲ್ಲಿ ಈ ಬ್ಯಾಕ್ ಟು ಬ್ಯಾಕ್ ಪಾರ್ಟಿ ಆರೋಗ್ಯವನ್ನು ಹಾಳು ಮಾಡೋದು ನೂರಕ್ಕೆ ನೂರು ಸತ್ಯ. ಅನೇಕ ವೈದ್ಯರು, ಈ ಬ್ಯಾಕ್ ಟು ಬ್ಯಾಕ್ ಪಾರ್ಟಿಯ ಬಗ್ಗೆ ಎಚ್ಚರಿಕೆ ನೀಡ್ತಾರೆ. ಇದು ಹಾರ್ಟ್, ಲಿವರ್ ಹಾಗೂ ಕರುಳಿನ ಮೇಲೆ ಹಠಾತ್ ಒತ್ತಡವನ್ನುಂಟು ಮಾಡುತ್ತೆ. ಮನಸ್ಪೂರ್ವಕವಾಗಿ ನೀವು ಈ ಪಾರ್ಟಿಗಳಲ್ಲಿ ತೊಡಗಿಕೊಂಡಿಲ್ಲ ಅಂದ್ರೆ ನಿಮ್ಮ ಮನಸ್ಸಿನ ಮೇಲೂ ಇದು ಪರಿಣಾಮ ಬೀರುತ್ತೆ.

ಹಾಲಿಡೇ ಹೆಲ್ತ್ ಹ್ಯಾಂಗೋವರ್ 

ಆಲ್ಕೋಹಾಲ್, ಭಾರೀ ಊಟ, ಅನಿಯಮಿತ ನಿದ್ರೆ, ನಿರ್ಜಲೀಕರಣ ಮತ್ತು ದೀರ್ಘಕಾಲ ಕುಳಿತುಕೊಳ್ಳುವಿಕೆ ಹಾಲಿಡೇ ಹೆಲ್ತ್ ಹ್ಯಾಂಗೋವರ್ ಗೆ ಕಾರಣವಾಗುತ್ತದೆ ಎಂದು ವೈದ್ಯರು ಎಚ್ಚರಿಕೆ ನೀಡಿದ್ದಾರೆ.

ದಿನಕ್ಕೆರಡೇ ಸಿಗರೇಟ್ ಸೇದೋದು ಮಗಾ, ಇಷ್ಟು ಧಮ್ಮೆಳೆದ್ರೆನಾಗುತ್ತೆ ಅನ್ನೋರಿಗೆ ಉತ್ತರ

ಹೃದಯದ ಒತ್ತಡ

ಮದ್ಯಪಾನ ಅಥವಾ ಅತಿಯಾಗಿ ತಿನ್ನುವುದು, ಹೃದಯದ ಮೇಲೆ ಒತ್ತಡಕ್ಕೆ ಕಾರಣವಾಗುತ್ತದೆ. ಈ ಹಠಾತ್ ಹಾಗೂ ತೀವ್ರ ಬದಲಾವಣೆಗಳು ಹೃದಯರಕ್ತನಾಳದ ಕಾರ್ಯದ ಮೇಲೆ ಪ್ರತಿಕೂಲ ಪರಿಣಾಮ ಬೀರಬಹುದು. ಅಧಿಕ ರಕ್ತದೊತ್ತಡ ಮತ್ತು ಅನಿಯಮಿತ ಹೃದಯ ಬಡಿತಗಳ ಅಪಾಯ ಕಾಡುತ್ತದೆ. ಅತಿಯಾದ ಮದ್ಯ ಸೇವನೆ, ಹೆಚ್ಚಿನ ಸೋಡಿಯಂ ಆಹಾರಗಳು ರಕ್ತದೊತ್ತಡವನ್ನು ಹೆಚ್ಚಿಸುತ್ತವೆ. ಬೊಜ್ಜು, ಧೂಮಪಾನ ಅಥವಾ ನಿಯಂತ್ರಿಸಲಾಗದ ಒತ್ತಡದ ಸಮಸ್ಯೆ ಹೊಂದಿರುವ ಜನರಿಗೆ ಹೃದಯದ ಸಮಸ್ಯೆ ಹೆಚ್ಚಿನ ಮಟ್ಟದಲ್ಲಿ ಕಾಡುತ್ತದೆ. ಹೊರಗಿನಿಂದ ಆರೋಗ್ಯವಂತರಾಗಿ ಕಾಣಿಸಿಕೊಂಡರೂ ಹೃದಯದ ಅಸ್ವಸ್ಥತೆ ಮತ್ತು ಉಸಿರಾಟದ ತೊಂದರೆ ಗುಪ್ತವಾಗಿ ಕಾಡುತ್ತದೆ ಎಂದು ವೈದ್ಯರು ಎಚ್ಚರಿಕೆ ನೀಡಿದ್ದಾರೆ.

ಲಿವರ್ ಆರೋಗ್ಯ 

ಬಿಡುವಿಲ್ಲದೆ ಪಾರ್ಟಿ ಮಾಡುವ ಜನರು ಸಾಮಾನ್ಯ ದಿನಕ್ಕಿಂತ ಹೆಚ್ಚು ಸೇವನೆ ಮಾಡ್ತಾರೆ. ಇದು ದೇಹದ ಅತಿ ಮುಖ್ಯ ಭಾಗವಾಗಿರುವ, ದೇಹದ ವಿಷವನ್ನು ಹೊರಗೆ ಹಾಕುವ ಲಿವರ್ ಗೆ ಒತ್ತಡ ಹೇರುತ್ತದೆ. ಮದ್ಯದ ಚಯಾಪಚಯ ಕ್ರಿಯೆಯು ಯಕೃತ್ತಿನ ಉರಿಯೂತವನ್ನು ಹೆಚ್ಚಿಸುತ್ತದೆ. ಕೊಬ್ಬಿನ, ಸಂಸ್ಕರಿಸಿದ ಆಹಾರಗಳು ಯಕೃತ್ತನ್ನು ಚಯಾಪಚಯದ ಓವರ್ಲೋಡ್ಗೆ ತಳ್ಳುತ್ತವೆ. ಇದು ಪಾರ್ಟಿ ಮುಗಿಯುವವರೆಗೆ ಅಂತ ನೀವು ಭಾವಿಸ್ಬಹುದು. ಆದ್ರೆ ಪಾರ್ಟಿಯಲ್ಲಿ ಅಂದ್ರೆ ಅಲ್ಪಾವಧಿಯಲ್ಲಿ ನೀವು ಜಂಕ್ ಫುಡ್ ಮತ್ತು ಆಲ್ಕೋಹಾಲನ್ನು ಅತಿಯಾಗಿ ಸೇವನೆ ಮಾಡೋದ್ರಿಂದ ಸಮಸ್ಯೆ ಶುರುವಾಗುತ್ತದೆ. ಲಿವರ್ ಕಿಣ್ವಗಳು ಹೆಚ್ಚಾಗಲು, ಕೊಬ್ಬಿನ ಪಿತ್ತಜನಕಾಂಗದ ಉಲ್ಬಣಗೊಳ್ಳುವಿಕೆ ಮತ್ತು ಜೀರ್ಣಕಾರಿ ಅಸಹಿಷ್ಣುತೆಗೆ ಕಾಡುತ್ತದೆ.

ಬೆಡ್ ಮೇಲೆ ಮಲಗಿದ್ದ ರೋಗಿಗೆ ಹಿಗ್ಗಾಮುಗ್ಗಾ ಥಳಿಸಿದ ವೈದ್ಯ

ಕರುಳಿನ ಆರೋಗ್ಯ

ನಿತ್ಯದ ಜೀವನ ಶೈಲಿಗೆ ಕರುಳು ಹೊಂದ್ಕೊಂಡಿರುತ್ತದೆ. ನೀವು ತ್ವರಿತವಾಗಿ ಅದ್ರಲ್ಲಿ ಬದಲಾವಣೆ ಮಾಡಿದಾಗ ಸೂಕ್ಷ್ಮವಾಗಿರುವ ಕರುಳಿಗೆ ಹೊಂದಿಕೊಳ್ಳೋದು ಕಷ್ಟವಾಗುತ್ತದೆ. ಪಾರ್ಟಿಯಲ್ಲಿ ಜನರು ಸಮಯಕ್ಕೆ ಸರಿಯಾಗಿ ಆಹಾರ ಸೇವನೆ ಮಾಡೋದಿಲ್ಲ. ಫೈಬರ್ ಸೇವನೆ ಕಡಿಮೆ ಮಾಡ್ತಾರೆ. ಆಲ್ಕೋಹಾಲ್, ಜಂಕ್ ಫುಡ್ ಆಮ್ಲೀಯತೆ, ಹೊಟ್ಟೆ ಉಬ್ಬರ, ಮಲಬದ್ಧತೆ ಅಥವಾ ಅತಿಸಾರಕ್ಕೆ ಕಾರಣವಾಗುತ್ತದೆ.

ಪಾರ್ಟಿಗೆ ಹೋಗ್ಬಾರದಾ? 

ಇಯರ್ ಆಂಡ್ ನಲ್ಲೂ ಪಾರ್ಟಿ ಮಾಡ್ಬಾರದು ಅಂದ್ರೆ ಹೇಗೆ ಎನ್ನುವ ಪ್ರಶ್ನೆ ನಿಮ್ಮನ್ನು ಕಾಡ್ಬಹುದು. ಪಾರ್ಟಿ ಮಾಡಿ. ಆದ್ರೆ ಕೆಲ ಎಚ್ಚರಿಕೆಯನ್ನು ತೆಗೆದುಕೊಳ್ಳಿ. ಕಡಿಮೆ ಆಲ್ಕೋಹಾಲ್ ಸೇವನೆ,ತಡರಾತ್ರಿಯವರೆಗೆ ಊಟ ಮಾಡದೆ ಇರುವುದು, ಸತತ ಎರಡು – ಮೂರು ದಿನ ನಿದ್ರೆ ಮಾಡದಿರುವುದು, ದೈಹಿಕ ಚಟುವಟಿಕೆಗೆ ಬ್ರೇಕ್, ಅತಿಯಾದ ಫಾಸ್ಟ್ ಫುಡ್ ಸೇವನೆಯನ್ನು ತಪ್ಪಿಸಿ. ಹಣ್ಣು,ತರಕಾರಿ, ನಾರಿನಾಂಶದ ಆಹಾರ ಸೇವನೆ ಮಾಡಿ. ಸರಿಯಾಗಿ ನಿದ್ರೆ ಮಾಡಿ. ನೀರು ಕುಡಿಯಿರಿ. ದೈಹಿಕ ಚಟುವಟಿಕೆಗೆ ಆದ್ಯತೆ ನೀಡಿ.

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ದಿನಕ್ಕೆರಡೇ ಸಿಗರೇಟ್ ಸೇದೋದು ಮಗಾ, ಇಷ್ಟು ಧಮ್ಮೆಳೆದ್ರೆನಾಗುತ್ತೆ ಅನ್ನೋರಿಗೆ ಉತ್ತರ ಇಲ್ಲಿದೆ
ಬೆಡ್ ಮೇಲೆ ಮಲಗಿದ್ದ ರೋಗಿಗೆ ಹಿಗ್ಗಾಮುಗ್ಗಾ ಥಳಿಸಿದ ವೈದ್ಯ