
ಬ್ರಿಟಿಷ್ ಹಾರ್ಟ್ ಫೌಂಡೇಶನ್ ಪ್ರಕಾರ, ಯುಕೆಯಲ್ಲಿ ಅಂದಾಜು 7.6 ಮಿಲಿಯನ್ ಜನರು ಹೃದಯ ಅಥವಾ ರಕ್ತಪರಿಚಲನಾ (circulatory diseases) ಕಾಯಿಲೆಗಳಿಂದ ಬಳಲುತ್ತಿದ್ದಾರೆ. ಆದರೆ ಹೆಚ್ಚಿನವರು ತಮ್ಮ ಜೀವನಶೈಲಿಯನ್ನು ಸರಿಯಾಗಿ ಇಟ್ಟುಕೊಳ್ಳದೆ ಅವುಗಳಿಗೆ ಗುರಿಯಾಗುತ್ತಾರೆ. ಈ ಕಾಯಿಲೆಗಳು ಪ್ರತಿ ವರ್ಷ 170,000 ಕ್ಕೂ ಹೆಚ್ಚು ಸಾವುಗಳಿಗೆ ಕಾರಣವಾಗುತ್ತವೆ. ಹೃದಯ ಕಾಯಿಲೆಯು ವಿಶ್ವಾದ್ಯಂತ ಸಾವಿಗೆ ಪ್ರಮುಖ ಕಾರಣಗಳಲ್ಲಿ ಒಂದಾಗಿದೆ. ಆದರೆ ಒಳ್ಳೆಯ ಸುದ್ದಿ ಏನೆಂದರೆ ಅನೇಕ ಅಪಾಯಕಾರಿ ಅಂಶಗಳು ನಮ್ಮ ನಿಯಂತ್ರಣದಲ್ಲಿವೆ. ಆರೋಗ್ಯಕರ ಅಭ್ಯಾಸಗಳನ್ನು ಅಳವಡಿಸಿಕೊಳ್ಳುವುದರಿಂದ ಹೃದಯಾಘಾತದ ಸಾಧ್ಯತೆಗಳನ್ನು ಕಡಿಮೆ ಮಾಡಬಹುದು ಮತ್ತು ದೀರ್ಘಕಾಲೀನ ಹೃದಯದ ಆರೋಗ್ಯವನ್ನು ಸುಧಾರಿಸಬಹುದು.
ಹೃದ್ರೋಗ ತಜ್ಞರಾದ ಡಾ. ಜ್ಯಾಕ್ ವುಲ್ಫ್ಸನ್, ತಮ್ಮ ಇನ್‌ಸ್ಟಾ ಕುಟುಂಬದೊಂದಿಗೆ ಆರೋಗ್ಯ ಮತ್ತು ಯೋಗಕ್ಷೇಮಕ್ಕೆ ಸಂಬಂಧಿಸಿದ ವಿಡಿಯೋಗಳನ್ನು ಆಗಾಗ್ಗೆ ಹಂಚಿಕೊಳ್ಳುತ್ತಾರೆ. ಸುಮಾರು 500 ಸಾವಿರ ಟಿಕ್‌ಟಾಕ್ ಅನುಯಾಯಿಗಳನ್ನು ಹೊಂದಿರುವ ಈ ಹೃದ್ರೋಗ ತಜ್ಞರು ಏಪ್ರಿಲ್ 30 ರ ಅವರ ಇನ್ಸ್ಟಾ ಪೋಸ್ಟ್‌ನಲ್ಲಿ, ಹೃದಯಾಘಾತದ ಅಪಾಯವನ್ನು ಕಡಿಮೆ ಮಾಡಲು ಸಹಾಯ ಮಾಡುವ 5 ಸರಳ ಆದರೆ ಪರಿಣಾಮಕಾರಿ ಹಂತಗಳನ್ನು ಅವರು ಹೈಲೈಟ್ ಮಾಡಿದ್ದಾರೆ.
ಹೊರಾಂಗಣದಲ್ಲಿ ಹೆಚ್ಚು ಸಮಯವಿರಿ
ಹೊರಾಂಗಣದಲ್ಲಿ ಹೆಚ್ಚು ಸಮಯ ಕಳೆಯುವುದರಿಂದ ಹೃದಯಾಘಾತದ ಅಪಾಯವನ್ನು ಗಮನಾರ್ಹವಾಗಿ ಕಡಿಮೆ ಮಾಡಬಹುದು ಎಂದು ಹೃದಯ ತಜ್ಞರು ಒತ್ತಿ ಹೇಳುತ್ತಾರೆ. ತಾಜಾ ಗಾಳಿ, ನೈಸರ್ಗಿಕ ಬೆಳಕು ಮತ್ತು ಚಲನೆಯು ನಿಮ್ಮ ಹೃದಯ ಮತ್ತು ಒಟ್ಟಾರೆ ಯೋಗಕ್ಷೇಮಕ್ಕೆ ಸಹಕಾರಿಯಾಗಲಿದೆ.
ಉತ್ತಮ ನಿದ್ರೆ ಬೇಕು
"ನೀವು ಪ್ರಸ್ತುತ ಎಷ್ಟು ಸಮಯ ಮಲಗುತ್ತೀರೋ, ಒಂದು ಗಂಟೆ ಮುಂಚಿತವಾಗಿ ಮಲಗಿ" ಎಂದು ಅವರು ಸಲಹೆ ನೀಡುತ್ತಾರೆ. ಗುಣಮಟ್ಟದ ನಿದ್ರೆ ನಿಮ್ಮ ಹೃದಯಕ್ಕೆ ಅಗತ್ಯವಿರುವ ವಿಶ್ರಾಂತಿಯನ್ನು ನೀಡುತ್ತದೆ ಮತ್ತು ಉತ್ತಮ ಚೇತರಿಕೆ ಮತ್ತು ಹಾರ್ಮೋನ್ ಸಮತೋಲನವನ್ನು ಬೆಂಬಲಿಸುತ್ತದೆ.
ಪರದೆಯ ಸಮಯ ಕಡಿಮೆ ಮಾಡಿ
ಡಾ. ಜ್ಯಾಕ್ ತಂತ್ರಜ್ಞಾನವನ್ನು ಕಡಿಮೆ ಮಾಡಲು ಸೂಚಿಸುತ್ತಾರೆ. ಪರದೆ ನೋಡುವ ಸಮಯವನ್ನು ಕಡಿಮೆ ಮಾಡುವುದರಿಂದ ನಿದ್ರೆ ಸುಧಾರಿಸಬಹುದು, ಒತ್ತಡ ಕಡಿಮೆಯಾಗಬಹುದು ಮತ್ತು ಹೃದಯಕ್ಕೆ ಆರೋಗ್ಯಕರ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಲು ಹೆಚ್ಚಿನ ಅವಕಾಶಗಳು ದೊರೆಯುತ್ತವೆ. ಅತಿಯಾದ ಪರದೆ ನೋಡುವ ಸಮಯ, ವಿಶೇಷವಾಗಿ ಮಲಗುವ ಮುನ್ನ, ನಿಮ್ಮ ದೇಹದ ನೈಸರ್ಗಿಕ ನಿದ್ರೆ-ಎಚ್ಚರ ಚಕ್ರಕ್ಕೆ ಅಡ್ಡಿಪಡಿಸಬಹುದು ಮತ್ತು ಮಾನಸಿಕ ಆಯಾಸಕ್ಕೆ ಕಾರಣವಾಗಬಹುದು.
ಹೊರಗೆ ಬರಿಗಾಲಿನಲ್ಲಿ ನಿಂತುಕೊಳ್ಳಿ
"ಹೊರಗೆ ಬರಿಗಾಲಿನಲ್ಲಿ ನಿಂತುಕೊಳ್ಳಿ, ಇದನ್ನು ಗ್ರೌಂಡಿಂಗ್ ಎಂದು ಕರೆಯಲಾಗುತ್ತದೆ. ಹಾಗೆಯೇ ಇದು ನಿಮ್ಮ ಹೃದಯಕ್ಕೆ ಒಳ್ಳೆಯದು" ಎಂದು ಡಾ. ಜ್ಯಾಕ್ ಹೇಳುತ್ತಾರೆ. ಗ್ರೌಂಡಿಂಗ್ ಅಥವಾ ಭೂಮಿಯೊಂದಿಗೆ ಸಂಪರ್ಕ ಸಾಧಿಸುವುದು ಉರಿಯೂತವನ್ನು ಕಡಿಮೆ ಮಾಡುತ್ತದೆ ಮತ್ತು ರಕ್ತ ಪರಿಚಲನೆ ಸುಧಾರಿಸುತ್ತದೆ ಎಂದು ನಂಬಲಾಗಿದೆ. ಅಷ್ಟೇ ಅಲ್ಲ, ಉರಿಯೂತ, ರೋಗನಿರೋಧಕ ಶಕ್ತಿ ಹೆಚ್ಚಳ, ಗಾಯ ಗುಣಪಡಿಸುವುದು ಮತ್ತು ದೀರ್ಘಕಾಲದ ಉರಿಯೂತ ಮತ್ತು ಸ್ವಯಂ ನಿರೋಧಕ ಕಾಯಿಲೆಗಳ ತಡೆಗಟ್ಟುವಲ್ಲಿ ಪ್ರಮುಖ ಪಾತ್ರ ವಹಿಸಲಿದೆ.
ಕೃತಜ್ಞತೆಯನ್ನು ಅಭ್ಯಾಸ ಮಾಡಿ
"ದಿನಕ್ಕೆ ಒಮ್ಮೆಯಾದರೂ ದೇವರಿಗೆ ಕೃತಜ್ಞತೆ ಸಲ್ಲಿಸಿ" ಎಂದು ಅವರು ಹಂಚಿಕೊಳ್ಳುತ್ತಾರೆ. ಕೃತಜ್ಞತೆ ಸಲ್ಲಿಸಲು ಸಮಯ ತೆಗೆದುಕೊಳ್ಳುವುದರಿಂದ ಒತ್ತಡ ಕಡಿಮೆ ಮಾಡಬಹುದು, ಮನಸ್ಥಿತಿ ಸುಧಾರಿಸಬಹುದು ಮತ್ತು ಕಾರ್ಟಿಸೋಲ್ ಮಟ್ಟವನ್ನು ಕಡಿಮೆ ಮಾಡುವ ಮೂಲಕ ಆರೋಗ್ಯಕರ ಹೃದಯ ಪಡೆಯಲು ಉತ್ತೇಜಿಸುತ್ತದೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.