Health Tips: ಬೇಸಿಗೆಯಲ್ಲೂ ಶೀತವಾಗ್ತಿದ್ಯಾ? ನಿರ್ಲಕ್ಷ್ಯ ಬೇಡ

By Suvarna NewsFirst Published Jan 24, 2024, 3:34 PM IST
Highlights

ನಮ್ಮ ದೇಹದಲ್ಲಿ ಆಗುವ ಸಣ್ಣಪುಟ್ಟ ಬದಲಾವಣೆಗಳ ಬಗ್ಗೆಯೂ ನಾವು ಗಮನ ಹರಿಸಬೇಕು. ಆರೋಗ್ಯದ ವಿಷ್ಯದಲ್ಲಿ ಬೇರೆಯವರಿಗಿಂತ ನಾವು ಭಿನ್ನವಾಗಿ ಕಂಡಾಗ ಚಿಕಿತ್ಸೆ ಅತ್ಯಗತ್ಯ. ಇಲ್ಲವೆಂದ್ರೆ ಮುಂದೆ ದೊಡ್ಡ ಸಮಸ್ಯೆ ನಿಮ್ಮನ್ನು ಕಾಡಬಹುದು. 
 

ಒಬ್ಬೊಬ್ಬರ ಶರೀರದ ಒಂದೊಂದು ರೀತಿ ಇರುತ್ತದೆ. ಕೆಲವರಿಗೆ ವಿಪರೀತ ಚಳಿಯಾದರೆ ಮತ್ತೆ ಕೆಲವರಿಗೆ ಸೆಕೆ ಜಾಸ್ತಿ. ನೀವೂ ಸೆಕೆಗಾಲದಲ್ಲೂ ಚಳಿ ಎನ್ನುತ್ತಿದ್ದರೆ  ಆರೋಗ್ಯವನ್ನು ನಿರ್ಲಕ್ಷಿಸಬಾರದು. ಏಕೆಂದರೆ ಇದು ಖಾಯಿಲೆಯ ಲಕ್ಷಣವಾಗಿರಬಹುದು. ಇದು ಹೈಪೋಥೈರಾಯ್ಡಿಸಮ್ ಅಥವಾ ಥೈರಾಯ್ಡ್ ನಿಷ್ಕ್ರಿಯತೆಯಿಂದ ಉಂಟಾಗುತ್ತದೆ.

ಥೈರಾಯ್ಡ್ (Thyroid ) ಸಮಸ್ಯೆಯಿಂದ ಶೀತ (Cold) ದ ಅನುಭವ :  ಥೈರಾಯ್ಡ್ ನಮ್ಮ ಕುತ್ತಿಗೆಯ ಭಾಗದಲ್ಲಿರುವ ಗ್ರಂಥಿಯಾಗಿದೆ. ಈ ಗ್ರಂಥಿ ನಮ್ಮ ಚಯಾಪಚಯ ಕ್ರಿಯೆ, ಬೆಳವಣಿಗೆಗೆ ಪೂರಕವಾಗುವ ಹಾರ್ಮೋನ್ ಗಳನ್ನು ಉತ್ಪಾದಿಸುತ್ತದೆ. ಥೈರಾಯ್ಡ್ ಗ್ರಂಥಿಯು ಸಾಕಷ್ಟು ಥೈರಾಯ್ಡ್ ಹಾರ್ಮೋನುಗಳನ್ನು ಉತ್ಪಾದಿಸದೇ ಇದ್ದಾಗ ಹೈಪೋಥೈರಾಯ್ಡಿಸಮ್ (Hypothyroidism) ಉಂಟಾಗುತ್ತದೆ. ಇದರಿಂದ ಶೀತ ಸಂವೇದನೆ, ಆಯಾಸ, ತೂಕ ಏರಿಕೆ ಮುಂತಾದ ಸಮಸ್ಯೆಗಳು ಎದುರಾಗುತ್ತವೆ. ಹೈಪೋಥೈರಾಯ್ಡಿಸಮ್ ನಮ್ಮ ಇಡೀ ದೇಹದ ಮೇಲೆ ಪರಿಣಾಮ ಬೀರುತ್ತದೆ. ಇದು ನಮ್ಮ ಚಯಾಪಚಯ ಕ್ರಿಯೆಯನ್ನು ನಿಧಾನಗೊಳಿಸುತ್ತದೆ. ದೇಹದ ಚಯಾಪಚಯ ಕ್ರಿಯೆ ನಿಧಾನವಾದಾಗ ದೇಹದ ಉಷ್ಣತೆ ಕಡಿಮೆಯಾಗುತ್ತದೆ. ಇದರಿಂದ ಹೈಪೋಥೈರಾಯ್ಡಿಸಮ್ ಸಮಸ್ಯೆ ಇರುವವರಿಗೆ ಚಳಿಗಾಲದಲ್ಲಿ ಮಾತ್ರವಲ್ಲದೇ ಬೇಸಿಗೆಯಲ್ಲು ಕೂಡ ಚಳಿಯ ಅನುಭವವಾಗುತ್ತದೆ. ದೇಹದಲ್ಲಿ ರಕ್ತಹೀನತೆ ಮತ್ತು ರಕ್ತದ ಪರಿಚಲನೆ ದುರ್ಬಲಗೊಂಡಾಗಲೂ ಶೀತದ ಅನುಭವ ಹೆಚ್ಚಾಗುತ್ತದೆ.

ವೆಬ್ ಸೀರೀಸ್ ನೋಡೋದಕ್ಕೆ ರಾತ್ರಿಯೆಲ್ಲಾ ಎಚ್ಚರ ಇರೋರಿಗೆ ಇದು ಎಚ್ಚರಿಕೆಯ ಕರೆಗಂಟೆ!

ಹೈಪೋಥೈರಾಯ್ಡಿಸಮ್ ಲಕ್ಷಣಗಳು :  ಹೈಪೋಥೈರಾಯ್ಡಿಸಮ್ ತೊಂದರೆಯನ್ನು ಹೊಂದಿದವರಿಗೆ ಆಯಾಸ, ಕೈ ಮರಗಟ್ಟುವಿಕೆ ಮತ್ತು ಜುಮ್ಮೆನಿಸುವಿಕೆ, ಮಲಬದ್ಧತೆ, ತೂಕ ಇಳಿಕೆ ಖಿನ್ನತೆ, ಒರಟಾದ ಚರ್ಮ ಹಾಗೂ ಕೂದಲು, ಮುಟ್ಟಿನ ತೊಂದರೆ, ಇಳಿ ಬೀಳುವ ಕಣ್ಣು, ಮುಖ ಊದಿಕೊಳ್ಳುವುದು, ದುರ್ಬಲ ಉಗುರು, ಮೆದುಳಿನ ತೊಂದರೆ ಮುಂತಾದ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ.

ಹೈಪೋಥೈರಾಯ್ಡಿಸಮ್ ಗೆ ಕಾರಣವೇನು? :  ಹೈಪೋಥೈರಾಯ್ಡಿಸಮ್ ನ ಪ್ರಾಥಮಿಕ ಲಕ್ಷಣಗಳು ತೀರ ಸಾಮಾನ್ಯವಾಗಿದೆ. ಅನೇಕ ಬಾರಿ ಇದು ಹಶಿಮೊಟೊಸ್ ಆಟೊ ಇಮ್ಯೂನ್ ಗೆ ಕಾರಣವಾಗುತ್ತದೆ. ಇದು ಸ್ವಯಂ ನಿರೋಧಕ ಖಾಯಿಲೆಯಾಗಿದ್ದು, ಇದರಲ್ಲಿ ಥೈರಾಯ್ಡ್ ಕೋಶಗಳು ನಾಶವಾಗುತ್ತವೆ. ಇದು ಥೈರಾಯ್ಡ್ ಗ್ರಂಥಿ ಥೈರಾಯ್ಡ್ ಹಾರ್ಮೋನ್ ಅನ್ನು ಬಿಡುಗಡೆಗೊಳಿಸುವುದನ್ನು ತಡೆಯುತ್ತದೆ. ಪಿಟ್ಯುಟರಿ ಗ್ರಂಥಿಗಳು ಥೈರಾಯ್ಡ್ ಗ್ರಂಥಿಯನ್ನು ನಿಯಂತ್ರಿಸುತ್ತವೆ. ಇದರಿಂದ ಟಿಸಿಎಚ್ ಹಾರ್ಮೋನ್ ಹಾಗೂ ಥೈರಾಯ್ಡ್ ಗ್ರಂಥಿಯಿಂದ ಟಿ3 ಮತ್ತು ಟಿ4 ಮಾರ್ಮೋನ್ ನಮ್ಮ ರಕ್ತಕ್ಕೆ ಸೇರುತ್ತದೆ. ಥೈರಾಯ್ಡ್ ಸಮಸ್ಯೆಯಾದಾಗ ಪಿಟ್ಯುಟರಿ ಗ್ರಂಥಿಯು ಥೈರಾಯ್ಡ್ ಹಾರ್ಮೋನುಗಳನ್ನು ಸಮತೋಲನಗೊಳಿಸುವಂತಹ ಹಾರ್ಮೋನ್ ಅಥವಾ ಟಿಸಿಎಚ್ ಅನ್ನು ಥೈರಾಯ್ಡ್ ಗೆ ಕಳುಹಿಸಲು ಸಾಧ್ಯವಾಗುವುದಿಲ್ಲ. ಈ ಕಾರಣದಿಂದಲೂ ಹೈಪೋಥೈರಾಯ್ಡಿಸಮ್ ಉಂಟಾಗುತ್ತದೆ.

ಹೈಪೋಥೈರಾಯ್ಡಿಸಮ್ ಅನ್ನು ತಡೆಯಲು ಸಾಧ್ಯವಿಲ್ಲ. ಹಾಗಾಗಿ ಇದರ ಕೆಲವು ಲಕ್ಷಣಗಳು ಕಾಣಿಸಿಕೊಂಡಾಗಲೇ ಮುನ್ನೆಚ್ಚರಿಕೆ ವಹಿಸಿ ಸೂಕ್ತ ಪರಿಹಾರ ಕಂಡುಕೊಳ್ಳಬೇಕು. ಇದು ಚಿಕ್ಕವರಿಗೆ ಹಾಗೂ ದೊಡ್ಡವರಿಗೆ ಯಾರಲ್ಲಿ ಬೇಕಾದರೂ ಕಾಣಿಸಿಕೊಳ್ಳಬಹುದು. ಹಾಗಾಗಿ ಇದರ ಲಕ್ಷಣಗಳು ಕಂಡುಬಂದಾಗ ರಕ್ತ ಪರೀಕ್ಷೆ ಮಾಡಿಸಿಕೊಳ್ಳಬೇಕು ಮತ್ತು ಆರೋಗ್ಯಕರ ಆಹಾರ ಕ್ರಮ ರೂಢಿಸಿಕೊಳ್ಳಬೇಕು.  ಜೀವನದ ವಿವಿಧ ಹಂತಗಳಲ್ಲಿ,  ರೋಗಲಕ್ಷಣಗಳನ್ನು ಪರಿಗಣಿಸಿ ಔಷಧಿಯನ್ನು ನೀಡಲಾಗುತ್ತದೆ.  ಆಗಾಗ ಪರೀಕ್ಷೆ ಮಾಡಿಸಿಕೊಂಡು ನೀವು ಔಷಧಿಗಳ ಪ್ರಮಾಣವನ್ನು ಬದಲಾಯಿಸಬೇಕಾಗಬಹುದು. ನಿಮ್ಮ ಔಷಧಿ ಸರಿಯಾಗಿ ಕಾರ್ಯನಿರ್ವಹಿಸುತ್ತಿದೆಯೇ ಎಂದು ಖಚಿತಪಡಿಸಿಕೊಳ್ಳಲು ನಿಮ್ಮ ಜೀವನದುದ್ದಕ್ಕೂ ನಿಮ್ಮ ಹೈಪೋಥೈರಾಯ್ಡಿಸಮ್  ಮಟ್ಟವನ್ನು ಮೇಲ್ವಿಚಾರಣೆ ಮಾಡಬೇಕಾಗುತ್ತದೆ.

ಸ್ಮೋಕಿಂಗ್ ಮಾಡ್ತೀರಾ?... ಸೆಕ್ಸ್ ಲೈಫ್ ಹಾಳಾಗೋಗುತ್ತೆ !

ಹೈಪೋಥೈರಾಯ್ಡಿಸಮ್ ನಿಂದ ಬಳಲುವವರು ಈ ಆಹಾರ ತಿನ್ನಬೇಡಿ : ಅಯೋಡಿನ್ ಕೊರತೆಯಿಂದಲೂ ಹೈಪೋಥೈರಾಯ್ಡಿಸಮ್ ಸಮಸ್ಯೆ ಉಂಟಾಗಬಹುದು. ಹಾಗಾಗಿ ಇಂತಹ ಪರಿಸ್ಥಿತಿಯಲ್ಲಿ ಅಯೋಡಿನ್ ಯುಕ್ತ ಉಪ್ಪಿನೊಂದಿಗೆ ಅಯೋಡಿನ್ ಯುಕ್ತ ಪದಾರ್ಥಗಳನ್ನು ಸೇವಿಸುವಂತೆ ವೈದ್ಯರು ಶಿಫಾರಸು ಮಾಡುತ್ತಾರೆ. ಆದರೆ ಇದನ್ನು ಅತಿಯಾಗಿ ಸೇವಿಸುವುದರಿಂದ ಅನೇಕ ಸಮಸ್ಯೆಗಳು ಉಂಟಾಗಬಹುದು.  ಜಂಕ್ ಫುಡ್‌ ಸೇವನೆ, ಹೆಚ್ಚು ಕಾಫಿ ಮತ್ತು ಟೀ ಕುಡಿಯುವುದು ಒಳ್ಳೆಯದಲ್ಲ. ಏಕೆಂದರೆ ಪ್ರತಿದಿನ 300 ಮಿಗ್ರಾಂಗಿಂತ ಹೆಚ್ಚು ಕೆಫೀನ್ ಸೇವಿಸುವುದರಿಂದ ಥೈರಾಯ್ಡ್ ಸಮಸ್ಯೆಗಳನ್ನು ಹೆಚ್ಚಿಸಬಹುದು.ಸೋಯಾಬೀನ್ ಮತ್ತು ಸೋಯಾ ಒಳಗೊಂಡಿರುವ ಆಹಾರ ಪದಾರ್ಥಗಳು ಒಳ್ಳೆಯದಲ್ಲ. ಕ್ಯಾಲ್ಸಿಯಂ ಮತ್ತು ಕಬ್ಬಿಣದ ಭರಿತ ಆಹಾರಗಳ ಅತಿಯಾದ ಸೇವನೆಯು ಅನೇಕ ಥೈರಾಯ್ಡ್ ಔಷಧಿಗಳ ಪರಿಣಾಮವನ್ನು ಕಡಿಮೆ ಮಾಡುತ್ತದೆ.  

click me!