ತಾಮ್ರದ ಬಾಟಲ್ ನಲ್ಲಿ ನೀರು ಸೇವನೆ ಮಾಡೋದ್ರಿಂದ ಅನೇಕ ಪ್ರಯೋಜನವಿದೆ ಎಂಬುದು ಬಹುತೇಕರಿಗೆ ತಿಳಿದಿದೆ. ಹಾಗಾಗಿಯೇ ಪ್ರತಿ ದಿನ ತಾಮ್ರದ ನೀರು ಕುಡಿಯೋರಿದ್ದಾರೆ. ಆದ್ರೆ ಅದ್ರ ಬಗ್ಗೆ ಸರಿಯಾಗಿ ತಿಳಿಯದೆ ನೀರು ಕುಡಿತಿದ್ರೆ ಆರೋಗ್ಯ ಸುಧಾರಿಸುವ ಬದಲು ಹಾಳಾಗುತ್ತೆ.
ತಾಮ್ರದ ಲೋಟ ಅಥವಾ ಬಾಟಲಿಯಲ್ಲಿ ನೀರು ಸೇವನೆ ಮಾಡ್ಬೇಕು ಅಂತ ಹಿರಿಯರು ಹೇಳ್ತಿರುತ್ತಾರೆ. ರಾತ್ರಿ ತಾಮ್ರದ ಪಾತ್ರೆಯಲ್ಲಿ ನೀರಿಟ್ಟು ಅದನ್ನು ಬೆಳಿಗ್ಗೆ ಸೇವನೆ ಮಾಡ್ಬೇಕು ಎಂಬ ಮಾತನ್ನು ನೀವು ಕೇಳಿರಬಹುದು. ತಾಮ್ರದ ಪಾತ್ರೆಯಲ್ಲಿ ನೀರು ಕುಡಿಯೋದ್ರಿಂದ ಆರೋಗ್ಯ ಮತ್ತು ಹೊಟ್ಟೆ ಎರಡೂ ಸುಧಾರಿಸುತ್ತದೆ. ಪ್ರತಿದಿನ ನೀವು ತಾಮ್ರದ ಪಾತ್ರೆಯಲ್ಲಿ ನೀರು ಕುಡಿಯುವುದರಿಂದ ದೇಹಕ್ಕೆ ಚೈತನ್ಯ ಸಿಗುತ್ತದೆ. ದೇಹದಲ್ಲಿರುವ ವಿಷವನ್ನು ತೆಗೆದುಹಾಕುವ ಕೆಲಸವನ್ನು ಅದು ಮಾಡುತ್ತದೆ. ಇದು ನೈಸರ್ಗಿಕ ಡಿಟಾಕ್ಸ್ ಆಗಿ ಕೆಲಸ ಮಾಡುತ್ತದೆ.
ರಾತ್ರಿ (Night) ಯಿಡೀ ತಾಮ್ರ (Copper) ದ ಪಾತ್ರೆಯಲ್ಲಿ ನೀರನ್ನು ಇಟ್ಟು ಅದನ್ನು ನೀವು ಬೆಳಿಗ್ಗೆ ಸೇವನೆ ಮಾಡಿದ್ರೆ ನೀರಿನಲ್ಲಿರುವ ಬ್ಯಾಕ್ಟೀರಿಯಾ ನಾಶವಾಗಿರುತ್ತದೆ. ಇದ್ರಿಂದ ನೀರು ಶುದ್ಧವಾಗುತ್ತದೆ. ಹಾಗಾಗಿಯೇ ತಾಮ್ರದ ನೀರನ್ನು ಶುದ್ಧ ನೀರು ಎನ್ನಲಾಗುತ್ತದೆ. ತಾಮ್ರದ ನೀರ (Water) ನ್ನು ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಅಥವಾ ಊಟದ ನಂತರ ಕುಡಿಯುವುದು ಒಳ್ಳೆಯದು ಎನ್ನುತ್ತಾರೆ ತಜ್ಞರು. ತಾಮ್ರದ ಪಾತ್ರೆಯಲ್ಲಿಟ್ಟ ನೀರನ್ನು ಸೇವನೆ ಮಾಡುವ ಮೊದಲು ಕೆಲ ವಿಷ್ಯವನ್ನು ನೀವು ನೆನಪಿನಲ್ಲಿ ಇಟ್ಟುಕೊಳ್ಳಬೇಕು. ತಾಮ್ರದ ನೀರು ಆರೋಗ್ಯ (Health) ಕ್ಕೆ ಒಳ್ಳೆಯದು ಎನ್ನುವ ಕಾರಣಕ್ಕೆ ನೀವು ಪ್ರತಿ ದಿನ ಲೀಟರ್ ಗಟ್ಟಲೆ ನೀರನ್ನು ಸೇವನೆ ಮಾಡೋದು ಒಳ್ಳೆಯದಲ್ಲ. ಕೇವಲ 2-3 ಗ್ಲಾಸ್ ನೀರನ್ನು ಮಾತ್ರ ನೀವು ಕುಡಿಯಬೇಕು. ಹೆಚ್ಚಿನ ಪ್ರಮಾಣದಲ್ಲಿ ನೀವು ತಾಮ್ರದ ನೀರನ್ನು ಕುಡಿದ್ರೆ ಅದು ದೇಹದ ಮೇಲೆ ಅಡ್ಡಪರಿಣಾಮ ಬೀರುತ್ತದೆ.
FRUIT JUICE : ಬಾಯಾರಿಕೆ ಅಂತ ಹೋಗ್ತಾ ಬರ್ತಾ ಹಣ್ಣಿನ ಜ್ಯೂಸ್ ಕುಡಿಬೇಡಿ
ಇಷ್ಟೇ ಅಲ್ಲ ಬೇಸಿಗೆಯಲ್ಲಿ ತಾಮ್ರದ ಪಾತ್ರೆಯಲ್ಲಿರುವ ನೀರನ್ನು ಫ್ರಿಜ್ ನಲ್ಲಿಟ್ಟು ಕುಡಿದ್ರೆ ಎಷ್ಟು ಪ್ರಯೋಜನೆ ಎಂಬ ಪ್ರಶ್ನೆ ಸಾಮಾನ್ಯವಾಗಿ ಅನೇಕರನ್ನು ಕಾಡುತ್ತದೆ. ಇದಕ್ಕೆ ನೇರವಾದ ಉತ್ತರವೆಂದ್ರೆ, ತಾಮ್ರದ ನೀರನ್ನು ಫ್ರಿಜ್ ನಲ್ಲಿ ಇಟ್ಟು ಕುಡಿಯೋದು ಒಳ್ಳೆಯದಲ್ಲ. ತಾಮ್ರದ ನೀರು ಬಿಸಿಯಾಗಿರುತ್ತದೆ. ಅದು ನಂಜುನಿರೋಧ ಗುಣದಿಂದ ಕೂಡಿರುತ್ತದೆ. ಹಾಗಾಗಿ ಬೇಸಿಗೆ ಬದಲು ಚಳಿಗಾಲದಲ್ಲಿ ತಾಮ್ರದ ಬಾಟಲಿ ನೀರನ್ನು ಸೇವನೆ ಮಾಡ್ಬೇಕು. ಅದೇ ನೀವು ಫ್ರಿಜ್ ನಲ್ಲಿ ತಾಮ್ರದ ನೀರನ್ನಿಟ್ಟಾಗ ನೀರು ತಣ್ಣಗಾಗುವ ಬದಲು ಬಿಸಿಯಾಗುತ್ತದೆ. ಇದು ನಿಮ್ಮ ಆರೋಗ್ಯವನ್ನು ಹಾಳು ಮಾಡುತ್ತದೆ.
ತಾಮ್ರದ ನೀರನ್ನು ಹೀಗೆ ಸೇವನೆ ಮಾಡಿ : ತಾತಾಮ್ರದ ನೀರನ್ನು ನೀವು ಬೇಸಿಗೆಯಲ್ಲೂ ಸೇವನೆ ಮಾಡ್ತೀರಿ ಎಂದಾದ್ರೆ ನೀವು ಅದನ್ನು ಫ್ರಿಜ್ ನಲ್ಲಿಟ್ಟು ತಪ್ಪು ಮಾಡ್ಬೇಡಿ. ತಾಮ್ರದ ನೀರನ್ನು ನೀವು ಸಾಮಾನ್ಯ ತಾಪಮಾನದಲ್ಲಿ ಇಡಬೇಕು. ಹಾಗೆಯೇ ಮೂರು ಲೋಟದವರೆಗೆ ಮಾತ್ರ ತಾಮ್ರದ ನೀರನ್ನು ಕುಡಿಯಿರಿ. ನಿಮ್ಮ ದೇಹ ಉಷ್ಣವಾಗಿದ್ದರೆ ಮತ್ತಷ್ಟು ಕಡಿಮೆ ಪ್ರಮಾಣದಲ್ಲಿ ತಾಮ್ರದ ನೀರನ್ನು ಕುಡಿಯಿರಿ. ಯಾಕೆಂದ್ರೆ ತಾಮ್ರ ಉಷ್ಣವಾಗಿರುವ ಕಾರಣ ನಿಮ್ಮ ಚರ್ಮಕ್ಕೆ ಹಾಗೂ ದೇಹಕ್ಕೆ ಹಾನಿಯುಂಟು ಮಾಡುತ್ತದೆ.
ಕಾಲು ಅಲುಗಿಸೋ ಅಭ್ಯಾಸ ನಿಮಗಿದೆಯೇ? ಈ ಸಮಸ್ಯೆಗಳನ್ನು ಎದುರಿಸಲು ಸಿದ್ಧರಾಗಿ!
ಫ್ರಿಜ್ ನಲ್ಲಿಟ್ಟ ಯಾವ ನೀರೂ ಒಳ್ಳೆಯದಲ್ಲ ಏಕೆ? : ತಾಮ್ರದ ಬಾಟಲಿ ಮಾತ್ರವಲ್ಲ ಸ್ಟೀಲ್, ಪ್ಲಾಸ್ಟಿಕ್, ಮಣ್ಣಿನ ಬಾಟಲಿಯಲ್ಲಿ ನೀರು ತುಂಬಿ ನಾಲ್ಕೈದು ದಿನ ಇಡೋದು ಕೂಡ ಒಳ್ಳೆಯದಲ್ಲ. ಸಂಶೋಧನೆಗಳ ಪ್ರಕಾರ, ಹೀಗೆ ಫ್ರಿಜ್ ನಲ್ಲಿಟ್ಟ ನೀರಿನಲ್ಲಿ ಬ್ಯಾಕ್ಟೀರಿಯಾ ಬೆಳೆಯಲು ಶುರುವಾಗುತ್ತದೆ. ಅದನ್ನು ನಾವು ಸೇವನೆ ಮಾಡೋದ್ರಿಂದ ನಮ್ಮ ಹೊಟ್ಟೆ ಹಾಳಾಗುತ್ತದೆ. ಬೇಸಿಗೆ ಇರಲಿ ಇಲ್ಲ ಯಾವುದೇ ಋತುವಿರಲಿ ನೀವು ಸಾಮಾನ್ಯ ತಾಪಮಾನದಲ್ಲಿಟ್ಟ ನೀರನ್ನೇ ಸೇವನೆ ಮಾಡಬೇಕು. ಸಾಮಾನ್ಯ ತಾಪಮಾನದಲ್ಲಿ ಕೂಡ ನಾಲ್ಕೈದು ದಿನ ಒಂದೇ ಬಾಟಲಿಯಲ್ಲಿ ನೀರನ್ನು ಸಂಗ್ರಹಿಸಿಡುವುದು ಒಳ್ಳೆಯದಲ್ಲ. ಆದಷ್ಟು ತಾಜಾ ನೀರಿನ ಸೇವನೆಗೆ ಆದ್ಯತೆ ನೀಡಿ.