Coconut Husk: ತೆಂಗಿನಕಾಯಿಯೊಂದೇ ಅಲ್ಲ ಅದರ ಚಿಪ್ಪೂ ಆರೋಗ್ಯಕ್ಕೆ ಬೇಕು!

By Suvarna NewsFirst Published Apr 23, 2023, 7:00 AM IST
Highlights

ತೆಂಗಿಕಾಯಿ ಬಹುಪಯೋಗಿ. ಸಿಪ್ಪೆ ತೆಗೆದು, ಕಟ್ ಮಾಡಿ ಒಳಗಿರುವ ತೆಂಗಿನ ತುರಿಯನ್ನು ಮಾತ್ರ ಬಳಕೆ ಮಾಡ್ತೇವೆ. ಆದ್ರೆ ಇನ್ಮುಂದೆ ತೆಂಗಿನಕಾಯಿ ಕರಟವನ್ನು ಬಿಡಬೇಡಿ. ಅದರಿಂದ ಸಾಕಷ್ಟು ಪ್ರಯೋಜನವಿದೆ. ಅದನ್ನು ಸಂಗ್ರಹಿಸಿ, ಪುಡಿಮಾಡಿಟ್ಟುಕೊಳ್ಳಿ. 
 

ತೆಂಗಿನ ಮರವನ್ನು ಕಲ್ಪವೃಕ್ಷ ಎಂದು ಪೂಜಿಸುವ ಸಂಸ್ಕೃತಿ ನಮ್ಮದು. ಬೇಡಿದ್ದನ್ನು ಕೊಡುವ ವೃಕ್ಷ ಇದೆಂದು ಕೆಲವರು ಬೆಳಿಗ್ಗೆ ಎದ್ದೊಡನೆ ತೆಂಗಿನ ಮರ ನೋಡುತ್ತಾರೆ. ಎಲ್ಲ ಪೂಜೆ ಅಥವಾ ಹಬ್ಬಗಳಿಗೂ ತೆಂಗಿನಕಾಯಿ ಬೇಕೇ ಬೇಕು. ಇಂಗು, ತೆಂಗು ಇದ್ದರೆ ಮಂಗನೂ ಅಡಿಗೆ ಮಾಡುತ್ತೆ ಅನ್ನೋ ಹಾಗೆ ಅಡಿಗೆ ಮನೆಯಲ್ಲಂತೂ ತೆಂಗಿನಕಾಯಿ ಬೇಕೇ ಬೇಕು. ತೆಂಗಿನ ಕಾಯಿ, ಅದರ ಗರಿ ಹಾಗೂ ಎಳೆನೀರು ಎಲ್ಲವೂ ಒಂದಲ್ಲ ಒಂದು ರೀತಿಯಲ್ಲಿ ಆರೋಗ್ಯಕ್ಕೆ ಹಾಗೂ ಜನಜೀವನಕ್ಕೆ ಪ್ರಯೋಜನಕಾರಿಯಾಗಿದೆ. ಇತ್ತೀಚೆಗೆ ತೆಂಗಿನ ಗರಿ ಹಾಗೂ ಕರಟದ ಕಲಾಕೃತಿಗಳು ಪ್ರಖ್ಯಾತಿ ಪಡೆದಿದೆ. ಅಷ್ಟೇ ಅಲ್ಲದೇ ಕೆಲವರು ತೆಂಗಿನ ಕರಟವನ್ನು ಅಡುಗೆ ಮಾಡಲು ಕೂಡ ಬಳಸುತ್ತಿದ್ದಾರೆ.

ತೆಂಗಿನಕಾಯಿ (Coconut) ಯನ್ನು ಹೆಚ್ಚಾಗಿ ಎಲ್ಲರೂ ಬಳಸುತ್ತಾರೆ. ಆದರೆ ಅದರ ಕರಟ ಅಥವಾ ಚಿಪ್ಪನ್ನು ಬಳಸುವವರು ವಿರಳ. ಹಳ್ಳಿಗಳಲ್ಲಿ ಬೆಂಕಿ ( Fire) ಉರಿಸಲು ಕರಟಗಳನ್ನು ಬಳಸುತ್ತಾರೆ. ಆದರೆ ಉಳಿದ ಕಡೆಗಳಲ್ಲಿ ಇದನ್ನು ಕಸಕ್ಕೆ ಎಸೆಯುತ್ತಾರೆ. ಹೀಗೆ ಕಸದಂತೆ ಎಸೆಯುವ ತೆಂಗಿನ ಚಿಪ್ಪು ಅನೇಕ ವಿಧಗಳಲ್ಲಿ ಪ್ರಯೋಜನಕಾರಿಯಾಗಿದೆ. ಇದರ ಕೆಲವು ಅದ್ಭುತ ಉಪಯೋಗಗಳ ಬಗ್ಗೆ ಕೆಲವು ಮಾಹಿತಿ ಇಲ್ಲಿದೆ.

Latest Videos

ಹೃದಯಾಘಾತಕ್ಕೂ ಮೊದಲು ಚರ್ಮದಲ್ಲಿ ಹೀಗೆಲ್ಲಾ ಬದಲಾವಣೆಯಾಗುತ್ತೆ, ಗಮನಿಸ್ಕೊಳ್ಳಿ

ಗಾಯವನ್ನು ವಾಸಿಮಾಡುತ್ತೆ : ತೆಂಗಿನ ಕರಟ ಗಾಯವಾದ ಅಂಗಗಳಿಗೆ ದಿವ್ಯೌಷಧವಾಗಿದೆ. ತೆಂಗಿನ ಕರಟವನ್ನು ಬಿಸಿಲಲ್ಲಿ ಒಣಗಿಸಿ ಅದನ್ನು ಪುಡಿ ಮಾಡಿ ಪೌಡರ್ ತಯಾರಿಸಿಕೊಳ್ಳಬೇಕು. ಈ ಪೌಡರ್ ಅನ್ನು ಅರಿಸಿನ ಪುಡಿಯೊಂದಿಗೆ ಬೆರೆಸಿ ಗಾಯವಾದ ಸ್ಥಳಕ್ಕೆ ಹಚ್ಚಬೇಕು. ಇದರಿಂದ ಗಾಯದಿಂದಾಗಿರುವ ಊತ ಕಡಿಮೆಯಾಗುತ್ತದೆ.

ಹಲ್ಲು (Tooth) ಗಳ ಸ್ವಚ್ಛತೆ :  ಚಿಕ್ಕ ಮಕ್ಕಳ ಹಾಗೂ ದೊಡ್ಡವರ ಹಲ್ಲುಗಳು ಕೂಡ ಕೆಲವೊಮ್ಮೆ ಹಳದಿಗಟ್ಟುತ್ತದೆ. ಹೀಗೆ ಹಳದಿಗಟ್ಟಿದ ಹಲ್ಲುಗಳು ತೆಂಗಿನ ಕರಟದ ಪೌಡರ್ ನಿಂದ ಸ್ವಚ್ಛವಾಗುತ್ತವೆ. ಈ ಪೌಡರ್ ತಯಾರಿಸಲು ಮೊದಲು ಕರಟವನ್ನು ಬೆಂಕಿಯಲ್ಲಿ ಸುಡಬೇಕು. ನಂತರ ಇದನ್ನು ನುಣ್ಣನೆಯ ಪೌಡರ್ ಮಾಡಿಕೊಳ್ಳಬೇಕು. ಪೌಡರ್ ಜೊತೆ ಸ್ವಲ್ಪ ಸೋಡ ಬೆರೆಸಿ ಅದರಿಂದ ಹಲ್ಲುಜ್ಜಿದರೆ ಹಲ್ಲುಗಳಲ್ಲಿರುವ ಹಳದಿ ಬಣ್ಣ ಹೋಗಿ ಬೆಳ್ಳಗೆ ಹೊಳೆಯುತ್ತವೆ.

Health Tips: ನುಗ್ಗೆಕಾಯಿ ಕಷಾಯ ಸೇವಿಸಿ ಫಟಾಫಟ್ ಆಗಿ ಬೊಜ್ಜು ಕರಗಿಸಿ

ಕೂದಲಿನ ಆರೋಗ್ಯ ಕಾಪಾಡುತ್ತೆ : ಹೆಣ್ಣು ಮಕ್ಕಳಾಗಲೀ, ಗಂಡುಮಕ್ಕಳಾಗಲೀ ಕೂದಲಿನ ಆರೋಗ್ಯಕ್ಕೆ ಹೆಚ್ಚು ಒತ್ತುಕೊಡುತ್ತಾರೆ. ಕೂದಲು ಚೆನ್ನಾಗಿ ಬೆಳೆಯಲು ಹಾಗೂ ಹೊಟ್ಟಿನ ಸಮಸ್ಯೆಗಳು ದೂರವಾಗಲು ಅನೇಕ ರೀತಿಯ ಔಷಧಗಳನ್ನು ಮಾಡುತ್ತಾರೆ. ತೆಂಗಿನ ಚಿಪ್ಪಿನಿಂದ ತಯಾರಿಸಿದ ಇದ್ದಿಲು ಕೂದಲಿಗೆ ಬಹಳ ಒಳ್ಳೆಯದು. ಇದು ಕೂದಲನ್ನು ಪುನರುಜ್ಜೀವನಗೊಳಿಸಲು ಸಹಾಯ ಮಾಡುತ್ತೆ. ಹಾಗಾಗಿ ಇದನ್ನು ನಿಯಮಿತವಾಗಿ ಬಳಸಬಹುದಾಗಿದೆ. ಸುಟ್ಟ ತೆಂಗಿನಕಾಯಿ ಚಿಪ್ಪಿನ ಬೂದಿಯನ್ನು ತೆಂಗಿನ ಎಣ್ಣೆಯೊಂದಿಗೆ ಬೆರೆಸಿ ಲೇಪಿಸಿಕೊಳ್ಳಬೇಕು. ಇದು ಕೂದಲಿನ ನೆತ್ತಿಯ ಪಿಎಚ್ ಮಟ್ಟವನ್ನು ಸಮತೋಲನದಲ್ಲಿಡುತ್ತದೆ ಮತ್ತು ಕೂದಲಿನ ಬೆಳವಣಿಗೆಗೂ ಸಹಕಾರಿಯಾಗಿದೆ.
ತೆಂಗಿನ ಕರಟದ ಬೂದಿಯನ್ನು ಹೇರ್ ಮಾಸ್ಕ್ ರೀತಿಯಲ್ಲಿ ಕೂಡ ಬಳಸಬಹುದು. ಇದನ್ನು ತಲೆಗೆ ಹಚ್ಚಿ ಮಸಾಜ್ ಮಾಡಿ ನಂತರ ಶಾಂಪೂವಿನಿಂದ ಸ್ನಾನ ಮಾಡಬೇಕು.

ಮೂಲವ್ಯಾಧಿಯನ್ನು ನಿವಾರಿಸುತ್ತೆ : ತೆಂಗಿನ ಚಿಪ್ಪು ಮೂಲವ್ಯಾಧಿಯನ್ನು ಗುಣಪಡಿಸುತ್ತದೆ. ತೆಂಗಿನ ಚಿಪ್ಪನ್ನು ಬೆಂಕಿಯಲ್ಲಿ ಸುಟ್ಟು ಅದರ ಪೌಡರ್ ತಯಾರಿಸಿಕೊಳ್ಳಬೇಕು. ಆ ಪೌಡರ್ ಅನ್ನು ಚೆನ್ನಾಗಿ ಸೋಸಿಕೊಂಡು ಅದನ್ನು ನೀರಿಗೆ ಹಾಕಿ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಸೇವಿಸಬೇಕು. ಪ್ರತಿನಿತ್ಯ ಹೀಗೆ ಮಾಡುವುದರಿಂದ ಮೂಲವ್ಯಾಧಿಯ ಸಮಸ್ಯೆ ದೂರವಾಗುತ್ತದೆ.

ಮುಟ್ಟಿನ ಸಮಸ್ಯೆ ದೂರಮಾಡುತ್ತೆ : ಯುವತಿಯರಿಗೆ ಅಥವಾ ಮಹಿಳೆಯರಿಗೆ ಋತುಸ್ರಾವದ ಸಮಯದಲ್ಲಿ ಸಹಿಸಲಾಗದಂತಹ ನೋವು ಕಾಣಿಸಿಕೊಳ್ಳುತ್ತದೆ. ಇದು ಸಹಜ ಕ್ರಿಯೆ. ಅಂತಹ ಸಮಸ್ಯೆಯನ್ನು ಹೊಂದಿರುವವರು ತೆಂಗಿನ ಕರಟವನ್ನು ಸುಟ್ಟು ಅದರ ಪೌಡರ್ ಅನ್ನು ನೀರಿಗೆ ಹಾಕಿ ಕುಡಿಯಬೇಕು. ಇದರಿಂದ ಮುಟ್ಟಿಗೆ ಸಂಬಂಧಿಸಿದ ನೋವು ಶಮನವಾಗುತ್ತದೆ. ಕೆಲವರಿಗೆ ಇದರಿಂದ ಅಲರ್ಜಿ ಸಮಸ್ಯೆ ಉಂಟಾಗಬಹುದು. ಅಂತಹ ಸಮಸ್ಯೆ ಇರುವವರು ಇದರ ಸೇವನೆಯನ್ನು ಕೂಡಲೇ ನಿಲ್ಲಿಸಿಬಿಡುವುದು ಸೂಕ್ತ.
 

click me!