ವಿಟಮಿನ್ ಡಿ ನಮ್ಮ ದೇಹಕ್ಕೆ ಅತ್ಯಗತ್ಯ. ಗಡಿಗಿಂತ ಇದು ಕಡಿಮೆ ಆದ್ರೂ ಸಮಸ್ಯೆ ಶುರುವಾಗುತ್ತೆ. ತ್ವರಿತವಾಗಿ ವಿಟಮಿನ್ ಡಿ ಹೆಚ್ಚಳ ಕೆಲ ಚಿಕಿತ್ಸೆಗೆ ಅಗತ್ಯವಾಗುತ್ತೆ. ಹಿಂದಿದ್ದ ಕೆಲ ತೊಡಕಿಗೆ ಈಗ ಹೊಸ ಇಂಜೆಕ್ಷನ್ ಪರಿಹಾರವಾಗಲಿದೆ.
ನಮ್ಮ ದೇಹಕ್ಕೆ ಪ್ರತಿಯೊಂದು ವಿಟಮಿನ್ ಅಗತ್ಯತೆ ಇರುತ್ತದೆ. ಕೆಲವೊಂದು ವಿಟಮಿನ್ ದೇಹದಲ್ಲಿ ಕಡಿಮೆಯಾದಾಗ ನಾನಾ ಸಮಸ್ಯೆಗಳು ಎದುರಾಗುತ್ತದೆ. ಕೆಲ ಗಂಭೀರ ಕಾಯಿಲೆಗಳಿಗೆ ತುತ್ತಾಗಬೇಕಾಗುತ್ತದೆ. ವಿಟಮಿನ್ ಕೊರತೆಯಿಂದ ಸಾವು ಸಂಭವಿಸುವ ಅಪಾಯವೂ ಇದೆ. ಇದ್ರಲ್ಲಿ ವಿಟಮಿನ್ ಡಿ ಕೂಡ ಸೇರಿದೆ. ವ್ಯಕ್ತಿಯ ದೇಹಕ್ಕೆ ವಿಟಮಿನ್ ಡಿ ಅವಶ್ಯಕತೆ ಇದೆ.
ಸೂರ್ಯ (Sun) ನ ಬೆಳಕು ವಿಟಮಿನ್ ಡಿ (Vitamin D) ಗೆ ಉತ್ತಮ ಮೂಲ. ಈಗಿನ ದಿನಗಳಲ್ಲಿ ಜನರು ಬಿಸಿಲಿಗೆ ಮೈ ಒಡ್ಡೋದು ಕಡಿಮೆ. ಅಪಾರ್ಟ್ಮೆಂಟ್ ನಲ್ಲಿ ವಾಸಿಸುವ ಜನರ ದೇಹಕ್ಕೆ ಬಿಸಿಲು ತಾಗೋದಿಲ್ಲ. ವಿಟಮಿನ್ ಡಿ ಹೆಚ್ಚಿರುವ ಆಹಾರ ಸೇವನೆ ಕೂಡ ಕಡಿಮೆ ಆದಾಗ ದೇಹದಲ್ಲಿ ವಿಟಮಿನ್ ಡಿ ಉತ್ಪಾದನೆ ಸಂಪೂರ್ಣ ಕಡಿಮೆ ಆಗುತ್ತದೆ. ಆರಂಭದಲ್ಲಿ ಇದು ಪತ್ತೆಯಾದ್ರೆ ವೈದ್ಯರು ಸಪ್ಲಿಮೆಂಟರಿ ಮಾತ್ರೆಗಳನ್ನು ನೀಡ್ತಾರೆ. ಅದೇ ಕೊನೆ ಹಂತದಲ್ಲಿ ಪತ್ತೆಯಾದ್ರೆ ಚಿಕಿತ್ಸೆ ಕಷ್ಟವಾಗುತ್ತದೆ. ವಿಟಮಿನ್ ಡಿಗೆ ಸಂಬಂಧಿಸಿದಂತೆ ಈಗ ಖುಷಿ ಸುದ್ದಿಯೊಂದು ಹೊರಬಿದ್ದಿದೆ.
undefined
ಕಹಿಯಾಗಿದ್ದರೂ ಇಂಥಾ ಆಹಾರ ತಿನ್ನಿ..ಡಯಾಬಿಟಿಸ್, ಕೊಲೆಸ್ಟ್ರಾಲ್‌ನಿಂದ ದೂರವಿರ್ಬೋದು
ಕ್ಯಾಡಿಲಾ ಫಾರ್ಮಾಸ್ಯುಟಿಕಲ್ಸ್, ವಿಟಮಿನ್ ಡಿ ಜಲೀಯ ಇಂಜೆಕ್ಷನ್ (Injection) ಕಂಡು ಹಿಡುಯುವ ಕೆಲಸ ಮಾಡ್ತಿದೆ. ಕೊಲೆಕ್ಯಾಲ್ಸಿಫೆರಾಲ್ ಕೊಲೆಕ್ಯಾಲ್ಸಿಫೆರಾಲ್‌ನ ಜಲೀಯ ಫಾರ್ಮುಲೇಷನ್ ಬಿಡುಗಡೆ ಮಾಡುವುದಾಗಿ ಘೋಷಿಸಿದೆ. ಈ ಚುಚ್ಚುಮದ್ದು ವಿಟಮಿನ್ ಡಿ ಚಿಕಿತ್ಸೆಯಲ್ಲಿ ಕ್ರಾಂತಿಯನ್ನುಂಟು ಮಾಡುತ್ತದೆ ಎಂದು ನಿರೀಕ್ಷಿಸಲಾಗಿದೆ. ವಿಟಮಿನ್ ಡಿ ಚುಚ್ಚುಮದ್ದಿನ ಈ ಸೂತ್ರೀಕರಣವು ಮಾರುಕಟ್ಟೆಯಲ್ಲಿ ಲಭ್ಯವಿರುವ ತೈಲ ಆಧಾರಿತ ಕೊಲೆಕ್ಯಾಲ್ಸಿಫೆರಾಲ್ ಗಿಂತ ಹೆಚ್ಚು ಪ್ರಭಾವಶಾಲಿಯಾಗಲಿದೆ.
ಇದು ಚಿಕಿತ್ಸೆಯ ಪರಿಣಾಮಕಾರಿತ್ವವನ್ನು ಹೆಚ್ಚಿಸಲಿದೆ. ರೋಗಿಗಳ ಆರೈಕೆಯಲ್ಲಿ ಗಮನಾರ್ಹ ಪ್ರಗತಿಗೆ ಕಾರಣವಾಗಲಿದೆ. ನೋವುರಹಿತ ಮತ್ತು ಸುಲಭವಾದ ಚಿಕಿತ್ಸೆಗೆ ಇದು ಸಹಕಾರಿಯಾಗಲಿದೆ. ಈ ಇಂಜೆಕ್ಷನ್ ಅಲ್ಪಾವಧಿಯಲ್ಲಿ ವಿಟಮಿನ್ ಡಿ ಕೊರತೆಯನ್ನು ತ್ವರಿತವಾಗಿ ಸರಿಪಡಿಸಲಿದೆ. ಇದ್ರಿಂದ ರೋಗಿಗಳಿಗೆ ಪ್ರಯೋಜನವಾಗಲಿದೆ. ಅನೇಕ ಪ್ರಮುಖ ಕಾಯಿಲೆಗಳಲ್ಲಿ ತ್ವರಿತ ಚಿಕಿತ್ಸೆಯ ಫಲಿತಾಂಶಗಳಿಗೆ ನಿರ್ಣಾಯಕ ಪಾತ್ರವನ್ನು ಈ ಇಂಜೆಕ್ಷನ್ ವಹಿಸಲಿದೆ. ವಿಟಮಿನ್ ಡಿ ಕೊರತೆಯು ಗಂಭೀರವಾದ ಆರೋಗ್ಯ ಸಮಸ್ಯೆಯಾಗಿದೆ. ಕ್ಲೀವ್ಲ್ಯಾಂಡ್ ಕ್ಲಿನಿಕ್ ಪ್ರಕಾರ, ವಿಶ್ವಾದ್ಯಂತ ಸುಮಾರು 1 ಬಿಲಿಯನ್ ಜನರ ಮೇಲೆ ಇದು ಪರಿಣಾಮ ಬೀರುತ್ತಿದೆ.
ಜಲೀಯ ಇಂಜೆಕ್ಷನ್ ಎಂದರೇನು? : ಜಲೀಯ ಎಂದರೆ ನೀರು ಎಂದರ್ಥ. ಔಷಧವನ್ನು ನೀರಿನ ಮೂಲದ ದ್ರಾವಣದಲ್ಲಿ ಕರಗಿಸಲಾಗುತ್ತದೆ ಮತ್ತು ಇಂಜೆಕ್ಷನ್ ಮೂಲಕ ನೇರವಾಗಿ ದೇಹಕ್ಕೆ ನೀಡಲಾಗುತ್ತದೆ. ಈ ತಂತ್ರವನ್ನು ನೀರಿನಲ್ಲಿ ಸುಲಭವಾಗಿ ಕರಗುವ ಮತ್ತು ತ್ವರಿತ ಕ್ರಿಯೆಯ ಅಗತ್ಯವಿರುವ ಔಷಧಿಗಳಿಗೆ ವ್ಯಾಪಕವಾಗಿ ಬಳಸಲಾಗುತ್ತದೆ.
ಮನೆಯಲ್ಲಿ ಹಾಗಲಕಾಯಿ ಗಿಡ ನೆಡೋದು ಅಶುಭ ಫಲ ನೀಡುತ್ತಂತೆ !
ವಿಟಮಿನ್ ಡಿ ಕೊರತೆಯಿಂದ ಆಗುವ ಸಮಸ್ಯೆ : ವಿಟಮಿನ್ ಡಿ ಕೊರತೆ ಹಲವಾರು ತೊಡಕುಗಳಿಗೆ ಕಾರಣವಾಗಬಹುದು. ಇದು ಪ್ರಾಥಮಿಕವಾಗಿ ಮೂಳೆಯ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಇದು ಮಕ್ಕಳಲ್ಲಿ ಮೂಳೆ ದುರ್ಬಲಗೊಳಿಸುವ ರಿಕೆಟ್‌ಗಳಂತಹ ಪರಿಸ್ಥಿತಿಗಳಿಗೆ ಕಾರಣವಾಗುತ್ತದೆ. ವಯಸ್ಕರಲ್ಲಿ ಆಸ್ಟಿಯೋಮಲೇಶಿಯಾ, ಮೂಳೆ ನೋವು ಮತ್ತು ಸ್ನಾಯು ದೌರ್ಬಲ್ಯವನ್ನು ಉಂಟುಮಾಡುತ್ತದೆ. ವಿಟಮಿನ್ ಡಿ ಕೊರತೆಯು ಆಸ್ಟಿಯೊಪೊರೋಸಿಸ್ ಗೆ ಕಾರಣವಾಗಬಹುದು. ಮೂಳೆ ಮುರಿತದ ಅಪಾಯವನ್ನು ಇದು ಹೆಚ್ಚಿಸುತ್ತದೆ. ಇದಲ್ಲದೆ ಕಡಿಮೆ ಮಟ್ಟದ ವಿಟಮಿನ್ ಡಿ ಕೆಲವು ಕ್ಯಾನ್ಸರ್ ಗಳು, ಹೃದಯರಕ್ತನಾಳದ ಕಾಯಿಲೆಗಳು, ಸ್ವಯಂ ನಿರೋಧಕ ಕಾಯಿಲೆಗಳು ಮತ್ತು ಸೋಂಕುಗಳ ಅಪಾಯವನ್ನು ಹೆಚ್ಚಿಸುತ್ತದೆ.
ವಿಟಮಿನ್ ಡಿ ಹೆಚ್ಚಳದ ಮಾರ್ಗ : ಮೊದಲೇ ಹೇಳಿದಂತೆ ವಿಟಮಿನ್ ಡಿಯ ಮೂಲ ಸೂರ್ಯನ ಕಿರಣ (Sun Rays). ಈ ವಿಟಮಿನ್ ಡಿ ಕೊರತೆ ಇರುವವರು ಪ್ರತಿ ದಿನ ಹತ್ತರಿಂದ ಮೂವತ್ತು ನಿಮಿಷಗಳ ಕಾಲ ಬಿಸಿಲಿನಲ್ಲಿ ಕುಳಿತುಕೊಳ್ಳಬೇಕು. ಸಾಲ್ಮನ್ ಮೀನು (Fish), ಮೊಟ್ಟೆಯ ಹಳದಿ ಭಾಗ (Yellow Part of Egg) ಸೇರಿದಂತೆ ವಿಟಮಿನ್ ಡಿ ಭರಿತ ಆಹಾರಗಳನ್ನು ಸೇವಿಸಬೇಕು.