ಇನ್ಮುಂದೆ ಹೆಲ್ದೀ ಆಗಲಿದೆ ಆಲೂ ಚಿಪ್ಸ್ , ಇಷ್ಟು ದಿನ ಕೆಟ್ಟದಾಗಿದ್ದು ಇನ್ನು ಹೇಗಪ್ಪಾ ಒಳ್ಳೇಯದಾಗುತ್ತೆ?

Published : Feb 27, 2024, 12:43 PM IST
ಇನ್ಮುಂದೆ ಹೆಲ್ದೀ ಆಗಲಿದೆ ಆಲೂ ಚಿಪ್ಸ್ , ಇಷ್ಟು ದಿನ ಕೆಟ್ಟದಾಗಿದ್ದು ಇನ್ನು ಹೇಗಪ್ಪಾ ಒಳ್ಳೇಯದಾಗುತ್ತೆ?

ಸಾರಾಂಶ

ಆಲೂಗಡ್ಡೆ ಚಿಪ್ಸ್ ಆರೋಗ್ಯಕ್ಕೆ ಒಳ್ಳೆಯದಲ್ಲ ಎನ್ನುವ ಮಾತಿದೆ. ಅದ್ರಿಂದ ಸಾಕಷ್ಟು ಅನಾರೋಗ್ಯ ಕಾಡುತ್ತೆ. ಕ್ಯಾನ್ಸರ್ ಕೂಡ ಒಂದು. ಅದನ್ನು ತಿನ್ನೋಕೆ ಹೆದರುವ ಜನರಿಗೆ ಸಂಶೋಧಕರು ಪರಿಹಾರ ಕಂಡುಹಿಡಿದಿದ್ದಾರೆ.  

ತ್ವರಿತ ಆಹಾರ ಪದಾರ್ಥಗಳಿಗೆ ವಿಶ್ವದಲ್ಲಿ ಅತಿ ಹೆಚ್ಚು ಬೇಡಿಕೆ ಇದೆ. ಅಮೆರಿಕ ಒಂದರಲ್ಲೇ ಇದು ಬಹುಕೋಟಿ ಡಾಲರ್ ಮಾರುಕಟ್ಟೆಯನ್ನು ಇದು ಹೊಂದಿದೆ. ಇದ್ರಲ್ಲಿ ಚಿಪ್ಸ್ ಪಾಲು ದೊಡ್ಡದಿದೆ. ಬಹುತೇಕ ಎಲ್ಲರಿಗೂ ಕುರುಕುಲು ತಿಂಡಿಯಲ್ಲಿ ಚಿಪ್ಸ್ ಇಷ್ಟ. ಅದ್ರಲ್ಲೂ ಆಲೂಗಡ್ಡೆ ಚಿಪ್ಸ್ ಪ್ರೇಮಿಗಳ ಸಂಖ್ಯೆ ಹೆಚ್ಚಿದೆ. ಟೀ ಜೊತೆ, ಟೈಂ ಪಾಸ್ ಗೆ, ಪಾರ್ಟಿ ಸೇರಿದಂತೆ ವಿಶೇಷ ಸಮಾರಂಭಗಳಲ್ಲೂ ಆಲೂಗಡ್ಡೆ ಚಿಪ್ಸ್ ಆದ್ಯತೆ ಪಡೆಯುತ್ತದೆ. ಮಕ್ಕಳಿಂದ ವೃದ್ಧರವರೆಗೆ ಎಲ್ಲರಿಗೂ ಪ್ರಿಯವಾದ ಈ ಆಲೂಗಡ್ಡೆ ಚಿಪ್ಸ್ ಆರೋಗ್ಯಕ್ಕೆ ಅಷ್ಟು ಒಳ್ಳೆಯದಲ್ಲ. ಇದ್ರಿಂದ ಕ್ಯಾನ್ಸರ್ ನಂತಹ ಅಪಾಯ ಹೆಚ್ಚು. ಇದ್ರ ಸೇವನೆಯಿಂದ ದೂರ ಇರುವಂತೆ ತಜ್ಞರು ಸಲಹೆ ನೀಡ್ತಿರುತ್ತಾರೆ. ಅದೇನೇ ಇದ್ರೂ ಆಲೂಗಡ್ಡೆ ಚಿಪ್ಸ್ ಗೆ ಬೇಡಿಕೆ ಕಡಿಮೆ ಆಗಿಲ್ಲ. ಇದನ್ನು ನೀವು ಸಣ್ಣ ಉದ್ಯಮವಾಗಿ ಶುರು ಮಾಡಬಹುದು. ಆದ್ರೆ ಈ ಉದ್ಯಮದಲ್ಲೂ ಸಾಕಷ್ಟು ಸವಾಲಿದೆ. ಆಲೂಗಡ್ಡೆ ನಿರಂತರ ಪೂರೈಕೆ ದೊಡ್ಡ ಸಮಸ್ಯೆ. ಆಲೂಗಡ್ಡೆಯನ್ನು ಕೋಲ್ಡ್ ಸ್ಟೋರೇಜ್ ಮಾಡೋದು ಸರಿಯಾಗಿ ಸಾಧ್ಯವಾಗ್ತಿಲ್ಲ. ಇಂಥ ಸಮಸ್ಯೆಗೆ ಈಗ ಇಬ್ಬರು ವಿಜ್ಞಾನಿಗಳು ಪರಿಹಾರ ಕಂಡುಹಿಡಿಯುವ ಪ್ರಯತ್ನ ನಡೆಸಿದ್ದಾರೆ. 

ಅಮೆರಿಕ (America)ದ ಇಬ್ಬರು ವಿಜ್ಞಾನಿ (Scientist) ಗಳು ಆರೋಗ್ಯಕರ ಚಿಪ್ಸ್ ಮತ್ತು ಫ್ರೈಗಳನ್ನು ತಯಾರಿಸುವ ವಿಧಾನವನ್ನು ಅಭಿವೃದ್ಧಿಪಡಿಸಿದ್ದಾರೆ. ಅವರ ವಿಧಾನದಂತೆ ಚಿಪ್ಸ್ (Chips) ತಯಾರಿಸಿದ್ರೆ ಕ್ಯಾನ್ಸರ್ ಅಪಾಯವನ್ನು ಬಹುಮಟ್ಟಿಗೆ ಕಡಿಮೆ ಮಾಡಬಹುದು ಎಂದು ಅವರು ಹೇಳಿದ್ದಾರೆ. ಮಿಚಿಗನ್ ಸ್ಟೇಟ್ ಯೂನಿವರ್ಸಿಟಿಯ ಪ್ರಾಧ್ಯಾಪಕರಾದ ಜಿಮಿಂಗ್ ಜಿಯಾಂಗ್ ಮತ್ತು ಡೇವಿಡ್ ಡೋಚೆಸ್ ಈ ಬಗ್ಗೆ ಸಂಶೋಧನೆ ನಡೆಸಿದ್ದಾರೆ. ಆಲೂಗೆಡ್ಡೆ ಉದ್ಯಮದಲ್ಲಿ ಕ್ರಾಂತಿಕಾರಿ ಬದಲಾವಣೆಗೆ ಅವರು ಮಾರ್ಗ ಕಂಡುಹಿಡಿದಿದ್ದಾರೆ. ಅವರ ಪ್ರಕಾರ, ಕೋಲ್ಡ್ ಸೋರೇಜ್ ನಲ್ಲಿಟ್ಟ ಆಲೂಗಡ್ಡೆಯನ್ನು ಫ್ರೈ ಮಾಡಿದ್ರೆ ಕ್ಯಾನ್ಸರ್ ಬರುವ ಸಾಧ್ಯತೆ ಕಡಿಮೆಯಂತೆ. 

ಈ ಐದು ಕಾರಣಕ್ಕೆ ಕ್ಯಾರೆಟ್ ಹಲ್ವಾ ತಿನ್ಲೇಬೇಕು ಅಂತಿದ್ದಾರೆ ಉದ್ಯಮಿ ಆನಂದ್ ಮಹೀಂದ್ರಾ

ಆಲೂಗಡ್ಡೆಯನ್ನು ಕೋಲ್ಡ್ ಸ್ಟೋರೇಜ್ ನಲ್ಲಿಟ್ಟಾಗ ಪಿಷ್ಟ ಸಕ್ಕರೆಯಾಗಿ ಪರಿವರ್ತನೆಗೊಳ್ಳುತ್ತದೆ. ಇದನ್ನು ಸಿಐಎಸ್ ಎಂದು ಕರೆಯಲಾಗುತ್ತದೆ. ಇಂಥ ಆಲೂಗಡ್ಡೆಯಿಂದ ಮಾಡಿದ ಚಿಪ್ಸ್ ಕಪ್ಪು ಮತ್ತು ಹೆಚ್ಚು ಅಕ್ರಿಲಾಮೈಡ್ ಅನ್ನು ಹೊಂದಿರುತ್ತದೆ. ಆಲೂಗಡ್ಡೆಯನ್ನು ಹೆಚ್ಚಿನ ತಾಪಮಾನದಲ್ಲಿ ಬೇಯಿಸಿದಾಗ ಕಾರ್ಸಿನೋಜೆನಿಕ್ ರೂಪುಗೊಳ್ಳುತ್ತದೆ. ಈ ಚಿಪ್ಸ್ ಸೇವನೆ ಮಾಡಿದಾಗ, ಕ್ಯಾನ್ಸರ್ ನಂತಹ ಗಂಭೀರ ಅಪಾಯವನ್ನು ಹೆಚ್ಚಿಸುತ್ತದೆ. ಕೋಲ್ಡ್ ಸ್ಟೋರೇಜ್ ಆಲೂಗಡ್ಡೆಯಲ್ಲಿ ಪಿಷ್ಟವನ್ನು ಕಡಿಮೆ ಮಾಡುವ ವಿಧಾನ ಇದೆ. ಆದ್ರೆ ಅದು ದುಬಾರಿ. ಹಾಗೆಯೇ ಆಲೂಗಡ್ಡೆ ಚಿಪ್ಸ್ ರುಚಿ ಇಲ್ಲಿ ಬದಲಾಗುತ್ತದೆ. 

ಈಗ ಸಿಐಎಸ್ ಪ್ರಕ್ರಿಯೆಗೆ ಕಾರಣವಾಗಿದ್ದ ನಿರ್ದಿಷ್ಟ ಜೀನ್ ಗಳನ್ನು ಸಂಶೋಧಕರು ಪತ್ತೆ ಮಾಡಿದ್ದಾರೆ. ಇವು ಶೀತ ಪರಿಸ್ಥಿತಿಗಳಲ್ಲಿ ನಿಯಂತ್ರಕವಾಗಿ ಕೆಲಸ ಮಾಡುತ್ತದೆ. ಕ್ಯಾನ್ಸರ್ ಅಂಶ ಇಲ್ಲದ ಆಲೂಗಡ್ಡೆಯನ್ನು ಇಲ್ಲಿ ಉತ್ಪಾದನೆ ಮಾಡಬಹುದಾಗಿದೆ. ಜೀನ್ ಅಭಿವ್ಯಕ್ತಿ ವಿಶ್ಲೇಷಣೆ, ಪ್ರೋಟೀನ್ ಗುರುತಿಸುವಿಕೆ ಮತ್ತು ನಿರ್ದಿಷ್ಟ ಮ್ಯಾಪಿಂಗ್ ಮೂಲಕ ಸಿಐಎಸ್  ಜೀನ್‌ನ ನಿಯಂತ್ರಕ ಅಂಶವನ್ನು ಗುರುತಿಸಲು ಒಂದು ಮಾರ್ಗವನ್ನು ಕಂಡುಕೊಂಡಿದ್ದಾರೆ. ಇದ್ರಿಂದ ಅಡ್ಡಪರಿಣಾಮವಿಲ್ಲ. ವಿಷಕಾರಿ ಅಂಶದ ಉತ್ಪಾದನೆಯನ್ನು ಇದು ತಡೆಯುತ್ತದೆ. 

ಊಟ ಮಾಡಿದ ತಕ್ಷಣ ಟೀ, ಕಾಫಿ ಕುಡೀತಿರಾ, ಹಾಗಿದ್ರೆ ನೀವಿದನ್ನು ತಿಳ್ಕೊಳ್ಳೇಬೇಕು

ಸಂಶೋಧಕರ ಈ ಸಂಶೋಧನೆ (Research) ಮುಂದಿನ ದಿನಗಳಲ್ಲಿ ಸಾಕಷ್ಟು ನೆರವಾಗುವ ಸಾಧ್ಯತೆ ಇದೆ. ಆಲೂಗಡ್ಡೆ ಸಂಗ್ರಹಣೆ ಮತ್ತು ವಿತರಣೆಯಲ್ಲಿರುವ ಸಮಸ್ಯೆಯನ್ನು ತೊಡೆದುಹಾಕುವ ಸಾಧ್ಯತೆ ಇದೆ. ಆಹಾರದ ಸಂರಕ್ಷಣೆ ಸುಲಭವಾಗಲಿದೆ. ಇದ್ರಿಂದ ತಗಲುವ ಖರ್ಚು – ವೆಚ್ಚದಲ್ಲೂ ಇಳಿಕೆಯಾಗುವ ಸಾಧ್ಯತೆ ಇದೆ. ಈ ಸಿಐಎಸ್ ನಿರೋಧಕ ಆಲೂಗಡ್ಡೆ ಶೀಘ್ರದಲ್ಲಿಯೇ ಮಾರುಕಟ್ಟೆಯಲ್ಲಿ ಲಭ್ಯವಾಗುವ ಸಾಧ್ಯತೆ ಇದೆ ಎಂದು ಸಂಶೋಧಕರು ಭರವಸೆ ನೀಡಿದ್ದಾರೆ. ಒಂದ್ವೇಳೆ ಅಂದುಕೊಂಡಂತೆ ಆದ್ರೆ ಜನರು ಆಲೂಗಡ್ಡೆ ಚಿಪ್ಸನ್ನು ಯಾವುದೇ ಭಯವಿಲ್ಲದೆ ಆರಾಮವಾಗಿ ಸೇವನೆ ಮಾಡಬಹುದು. 

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

Foods that Block Arteries: ನೀವು ಪ್ರತಿದಿನ ಸೇವಿಸೋ ಈ ಆಹಾರಗಳೇ ಹೃದಯಾಘಾತಕ್ಕೆ ಕಾರಣವಾಗಬಹುದು ಎಚ್ಚರ
ಕೆಲ್ಸ ಮಾಡೋವಾಗ ಮಾತ್ರವಲ್ಲ ರಜೆಯಲ್ಲೂ ಕಾಡುತ್ತೆ ಖಿನ್ನತೆ, ಹಾಲಿಡೇ ಡಿಪ್ರೆಷನ್ ಅಂದ್ರೇನು?