2ನೇ ಬಾರಿ ಕ್ಯಾನ್ಸ‌ರ್ ತಡೆಗೆ ಟಾಟಾ ಇನ್‌ಸ್ಟಿಟ್ಯೂಟ್‌ನಿಂದ 100 ರೂಪಾಯಿಯ ಮಾತ್ರೆ

By Anusha Kb  |  First Published Feb 28, 2024, 9:31 AM IST

ಒಮ್ಮೆ ಕ್ಯಾನ್ಸರ್‌ಗೆ ತುತ್ತಾದವರು 2ನೇ ಬಾರಿ ಕ್ಯಾನ್ಸರ್‌ಗೆ ತುತ್ತಾಗುವುದನ್ನು ತಡೆಯಲು ಟಾಟಾ ಇನ್‌ಸ್ಟಿಟ್ಯೂಟ್ ಮಾತ್ರೆಯೊಂದನ್ನು ಅಭಿವೃದ್ಧಿಪಡಿಸಿದೆ. ಈ ಮಾತ್ರೆಯ ಬೆಲೆ ಕೇವಲ 100 ರುಪಾಯಿ. ಎಂದು ಸಂಸ್ಥೆ ತಿಳಿಸಿದೆ.


ಮುಂಬೈ: ಒಮ್ಮೆ ಕ್ಯಾನ್ಸರ್‌ಗೆ ತುತ್ತಾದವರು 2ನೇ ಬಾರಿ ಕ್ಯಾನ್ಸರ್‌ಗೆ ತುತ್ತಾಗುವುದನ್ನು ತಡೆಯಲು ಟಾಟಾ ಇನ್‌ಸ್ಟಿಟ್ಯೂಟ್ ಮಾತ್ರೆಯೊಂದನ್ನು ಅಭಿವೃದ್ಧಿಪಡಿಸಿದೆ. ಈ ಮಾತ್ರೆಯ ಬೆಲೆ ಕೇವಲ 100 ರುಪಾಯಿ. ಎಂದು ಸಂಸ್ಥೆ ತಿಳಿಸಿದೆ.

ಕ್ಯಾನ್ಸರ್‌ಗೆ ತುತ್ತಾದವರು ರೇಡಿಯೇಶನ್ ಚಿಕಿತ್ಸೆಗೆ ಒಳಗಾದ ಬಳಿಕ ಕ್ಯಾನ್ಸರ್ ಕೋಶಗಳು ಆರೋಗ್ಯವಂತ ಕೋಶಗಳನ್ನು ಸೇರಿ ಅವುಗಳು ಕ್ಯಾನ್ಸರ್‌ಗೆ ಕ್ಯಾನ್ಸರ್‌ಗೆ ತುತ್ತಾಗುವಂತೆ ಮಾಡುತ್ತಿದ್ದವು. ಆದರೆ ಈ ಮಾತ್ರೆ ತೆಗೆದುಕೊಳ್ಳುವುದರಿಂದ ಚಿಕಿತ್ಸೆಯ ಬಳಿಕ ವಿಘಟನೆಗೊಂಡ ಕ್ಯಾನ್ಸರ್ ಕೋಶಗಳು ನಾಶವಾಗಲಿವೆ. ಹೀಗಾಗಿ ರೋಗಿಯು 2ನೇ ಬಾರಿ ಕ್ಯಾನ್ಸರ್‌ಗೆ ತುತ್ತಾಗುವುದು ತಪ್ಪಲಿದೆ ಎಂದು ಟಾಟಾ ಸಂಸ್ಥೆ ಹೇಳಿದೆ.

Tap to resize

Latest Videos

ಪ್ರಯೋಗ ನಡೆಸಿದ್ದು ಹೇಗೆ?: ಇದರ ಪ್ರಯೋಗಕ್ಕಾಗಿ ಇಲಿಗಳನ್ನು ಬಳಸಿಕೊಂಡಿದ್ದು, ಮೊದಲಿಗೆ ಕ್ಯಾನ್ಸರ್ ಕೋಶಗಳನ್ನು ಒಳಸೇರಿಸಿ ಕ್ಯಾನ್ಸರ್‌ಗೆ ತುತ್ತಾಗುವಂತೆ ಮಾಡಲಾಯಿತು. ಬಳಿಕ ರೇಡಿಯೇಶನ್ ಚಿಕಿತ್ಸೆ ನೀಡಿ ಕ್ಯಾನ್ಸರ್‌ ಗುಣಪಡಿಸಿ, ಕೆಲವು ಇಲಿಗಳಿಗೆ ಈ ಮಾತ್ರೆ ತಿನ್ನಿಸಲಾಗಿದೆ. ಮಾತ್ರೆ ತಿಂದ ಇಲಿಗಳಲ್ಲಿ 2ನೇ ಬಾರಿ ಕ್ಯಾನ್ಸರ್ ಕಾಣಿಸಿಕೊಂಡಿಲ್ಲ.

ಗ್ಯಾಸ್ ಬೆಂಕಿಯಲ್ಲಿ ಚಪಾತಿ ಬೇಯಿಸಿ ತಿನ್ತೀರಾ, ಕ್ಯಾನ್ಸರ್‌ ಬರುತ್ತೆ ಹುಷಾರ್‌!

ಪ್ಯಾಸೆಂಜ‌ರ್ ರೈಲು ಟಿಕೆಟ್ ದರ ಶೇ.50ರಷ್ಟು ಇಳಿಕೆ

ನವದೆಹಲಿ: ಕೋವಿಡ್ ಸಾಂಕ್ರಾಮಿಕದ ವೇಳೆ ಏರಿಕೆ ಮಾಡಲಾಗಿದ್ದ ಹಲವು ಪ್ಯಾಸೆಂಜರ್ ರೈಲುಗಳ ಕನಿಷ್ಠ ದರವನ್ನು ಭಾರತೀಯ ರೈಲ್ವೆ ಮಂಗಳವಾರದಿಂದ ಇಳಿಕೆ ಮಾಡಿದೆ. ಹೀಗಾಗಿ ಸಾಮಾನ್ಯ ರೈಲಿನ ಸೆಕೆಂಡ್ ಕ್ಲಾಸ್ ಕನಿಷ್ಠ ಟಿಕೆಟ್ ದರದಲ್ಲಿ ಶೇ.50ರಷ್ಟು ಕಡಿಮೆಯಾಗಿದೆ ಎಂದು ಮಾಧ್ಯಮ ವರದಿಗಳು ಹೇಳಿವೆ.

ಕೋವಿಡ್ ಸಾಂಕ್ರಾಮಿಕದ ಲಾಕ್‌ಡೌನ್ ತೆರವು ನಂತರ ಹಲವು ಪ್ಯಾಸೆಂಜ‌ರ್ ರೈಲುಗಳ ಹೆಸರನ್ನು ಎಕ್ಸ್‌ಪ್ರೆಸ್ ಸ್ಪೆಷಲ್ ಅಥವಾ ಮೆಮು/ಡೆಮು ಎಕ್ಸ್‌ಪ್ರೆಸ್ ಎಂದು ಬದಲಾವಣೆ ಮಾಡಲಾಗಿತ್ತು. ಕನಿಷ್ಕ ಟಿಕೆಟ್ ದರವನ್ನು 10 ರು.ನಿಂದ 30 ರು. ವರೆಗೆ ಏರಿಕೆ ಮಾಡಲಾಗಿತ್ತು. ಆದರೆ ರೈಲ್ವೆಯ ಈ ನಡೆಗೆ ವ್ಯಾಪಕ ಟೀಕೆ ವ್ಯಕ್ತವಾಗಿತ್ತು. ಪ್ಯಾಸೆಂಜರ್ ರೈಲಿಗೆ ಕೇವಲ ತೋರಿಕೆಗೆ ಎಕ್ಸ್‌ಪ್ರೆಸ್ ಎಂದು ಹೆಸರು ಬದಲಿಸಿ, ಎಕ್ಸ್‌ಪ್ರೆಸ್‌ಗೆ ಸಮನಾದ ರೈಲು ದರ ಪೀಕುವುದು ಸರಿಯೆ ಎಂದು ಜನ ಪ್ರಶ್ನೆ ಮಾಡಿದ್ದರು.

ಇದರ ನಡುವೆ ಫೆ. 26ರಂದು ನಡೆದ ರೈಲ್ವೆ ಮಂಡಳಿ ಸಭೆಯಲ್ಲಿ, 2ನೇ ದರ್ಜೆಯ ಸಾಮಾನ್ಯ ಟಿಕೆಟ್‌ಗಳ ಕನಿಷ್ಠ ದರವನ್ನು ಮೊದಲಿನಂತೆ ಇಳಿಸಲಾಗಿದೆ. ಸ್ಲೀಪರ್‌ ಕ್ಲಾಸ್ ದರದಲ್ಲಿ ಯಾವುದೇ ಬದಲಾವಣೆ ಇಲ್ಲ.

ತೆಲಂಗಾಣ ಸರ್ಕಾರದ 6 ಗ್ಯಾರಂಟಿಗಳಲ್ಲಿ 2 ಜಾರಿ

ಹೈದರಾಬಾದ್: ಕರ್ನಾಟಕದ ಮಾದರಿಯಲ್ಲಿ ತೆಲಂಗಾಣದ ಕಾಂಗ್ರೆಸ್ ಸರ್ಕಾರ ಚುನಾವಣೆ ಪೂರ್ವದಲ್ಲಿ ಘೋಷಿಸಿದ್ದ ಮತ್ತೆರಡು ಗ್ಯಾರಂಟಿಗಳನ್ನು ಜಾರಿಗೊಳಿಸಿದೆ. 200 ಯೂನಿಟ್‌ವರೆಗೆ ಉಚಿತ ವಿದ್ಯುತ್ ನೀಡುವ 'ಗೃಹ ಜ್ಯೋತಿ' ಯೋಜನೆ ಹಾಗೂ 500 ರು.ಗೆ ರಿಯಾಯ್ತಿ ದರದಲ್ಲಿ ನೀಡುವ ಅಡುಗೆ ಅನಿಲ ಯೋಜನೆಗೆ ಮುಖ್ಯಮಂತ್ರಿ ರೇವಂತ್ ರೆಡ್ಡಿ ಹಾಗೂ ಸಂಪುಟ ಸಚಿವರು ಮಂಗಳವಾರ ಚಾಲನೆ ನೀಡಿದರು. ಈ ಮೊದಲು ಮಹಿಳೆಯರಿಗೆ ಸರ್ಕಾರಿ ಬಸ್ಸಿನಲ್ಲಿ ಉಚಿತವಾಗಿ ಪ್ರಯಾಣಿಸುವ 'ಮಹಾಲಕ್ಷ್ಮೀ ಯೋಜನೆ' ಹಾಗೂ 10 ಲಕ್ಷ ರು.ವರೆಗಿನ ಆರೋಗ್ಯ ಯೋಜನೆಗಳಿಗೆ ಚಾಲನೆ ನೀಡಿದ್ದರು. ತೆಲಂಗಾಣದ ಕಾಂಗ್ರೆಸ್ ಪಕ್ಷ ಚುನಾವಣೆಗೂ ಮುನ್ನ 6 ಗ್ಯಾರಂಟಿಗಳನ್ನು ಘೋಷಣೆ ಮಾಡಿತ್ತು.

ಕ್ಯಾನ್ಸರ್ ಚಿಕಿತ್ಸೆಗಾಗಿ ದೂರವಿದ್ದ ಅಜ್ಜಿ ಕಂಡು ಬಿಕ್ಕಿ ಬಿಕ್ಕಿ ಅತ್ತ ಮೊಮ್ಮಗ; ನಿಷ್ಕಲ್ಮಶ ಪ್ರೀತಿಗೆ ನೆಟ್ಟಿಗರ ಕಣ್ಣೀರು

ಕರ್ನಾಟಕ ಕಾಂಗ್ರೆಸ್ ಪಕ್ಷ ಚುನಾವಣೆ ವೇಳೆ ಇದೇ ಮಾದರಿಯ ಗ್ಯಾರಂಟಿ ಘೋಷಿಸಿ ಗೆದ್ದಿತ್ತು. ಅದೇ ರೀತಿಯನ್ನು ತೆಲಂಗಾಣ ಕಾಂಗ್ರೆಸ್ ಕೂಡ ಅನುಸರಿಸಿತ್ತು.

click me!