ಮಕ್ಕಳಿಗೆ ಇಂಥಾ ಆಹಾರ ಕೊಟ್ರೆ ಕಾಯಿಲೆ ಬೀಳದೆ ಸ್ಟ್ರಾಂಗ್ ಆಗಿರ್ತಾರೆ

By Suvarna NewsFirst Published Jul 28, 2022, 10:38 AM IST
Highlights

ಮಕ್ಕಳು ಆರೋಗ್ಯವಾಗಿರಬೇಕೆಂದು ಪ್ರತಿಯೊಬ್ಬ ಪೋಷಕರು ಬಯಸ್ತಾರೆ. ಇದಕ್ಕಾಗಿ ಮಕ್ಕಳಿಗೆ ಹೊಟ್ಟೆ ತುಂಬಾ ತಿನ್ನೋಕೆ ಕೊಟ್ರೆ ಸಾಲ್ದು. ಮಕ್ಕಳ ದೇಹಕ್ಕೆ ಪೂರಕವಾದ ಆಹಾರವನ್ನು ಕೊಡುತ್ತಿರಬೇಕು. ಅದು ಯಾವುದು ?

ಮಕ್ಕಳ ಲಾಲನೆ-ಪಾಲನೆ ಬಹಳ ಕಷ್ಟದ ಕೆಲಸ. ಮಕ್ಕಳ ಆರೋಗ್ಯ, ಆಹಾರ ಎಲ್ಲದರ ಬಗ್ಗೆಯೂ ಗಮನಹರಿಸಬೇಕಾಗುತ್ತದೆ. ಅದರಲ್ಲೂ ಪುಟ್ಟ ಮಕ್ಕಳು ಆಗಾಗ ಕಾಯಿಲೆಗೆ ತುತ್ತಾಗುತ್ತಿರುತ್ತಾರೆ. ಹೀಗಾಗಿ ಅವರ ಆಹಾರ ಯಾವ ರೀತಿಯಿದೆ ಎಂಬುದನ್ನು ಪ್ರತ್ಯೇಕವಾಗಿ ಗಮನಹರಿಸಬೇಕು. ಮಕ್ಕಳು ಬುದ್ಧಿವಂತರಾಗಲು ಮಕ್ಕಳ ಮೆದುಳಿಗೆ ಪೂರಕವಾದ ಪೋಷಕಾಂಶದ ಆಹಾರ ನೀಡುವಂತೆಯೇ, ಮಕ್ಕಳ ಅಂಗಾಂಗಗಳು ಸ್ಟ್ರಾಂಗ್‌ ಆಗಿರಲು ನಿರ್ಧಿಷ್ಟ ಆಹಾರವನ್ನು ಕೊಡುವ ಅಭ್ಯಾಸವನ್ನು ರೂಢಿಸಿಕೊಳ್ಭಬೇಕು. ಮಗುವಿನ ಮೆದುಳಿನ ಬೆಳವಣಿಗೆಯಲ್ಲಿ ಪೌಷ್ಠಿಕಾಂಶವು ಪ್ರಮುಖ ಪಾತ್ರ ವಹಿಸುತ್ತದೆ. ಪೌಷ್ಟಿಕ ಆಹಾರವು ಮೆದುಳಿನ ಮೇಲೆ ಧನಾತ್ಮಕವಾಗಿ ಪರಿಣಾಮ ಬೀರುತ್ತದೆ. ಮಕ್ಕಳು ಶ್ರದ್ಧೆಯಿಂದ ಕಲಿಯಲು, ನೆನಪಿನ ಶಕ್ತಿಯನ್ನು ಹೆಚ್ಚಿಸಿಕೊಳ್ಳಲು ನೆರವಾಗುತ್ತದೆ. ಹಾಗೆಯೇ ತಿನ್ನುವ ಆಹಾರವು ಮಕ್ಕಳು ದೈಹಿಕವಾಗಿ ಸ್ಟ್ರಾಂಗ್‌ ಆಗಲು ನೆರವಾಗುತ್ತದೆ. ಹಾಗಿದ್ರೆ ಮಕ್ಕಳ ದೇಹವನ್ನು ಸ್ಟ್ರಾಂಗ್ ಮಾಡುವ ಆಹಾರಗಳು ಯಾವುದೆಂದು ತಿಳ್ಕೊಳ್ಳೋಣ.

ಮಕ್ಕಳ ಆರೋಗ್ಯಕ್ಕೆ ಪೂರಕವಾದ ಆಹಾರಗಳು
ಒಮೆಗಾ -3 ಕೊಬ್ಬಿನಾಮ್ಲಗಳು: ಮಕ್ಕಳ (Children) ಬೆಳವಣಿಗೆಯಲ್ಲಿ ಒಮೆಗಾ -3 ಕೊಬ್ಬಿನಾಮ್ಲಗಳು ಪ್ರಮುಖ ಪಾತ್ರ ವಹಿಸುವ ಪೋಷಕಾಂಶವಾಗಿದೆ. ಮಗುವಿನ ಆಹಾರ (Food)ದಲ್ಲಿ ಎಲ್ಲಾ ಪೋಷಕಾಂಶಗಳನ್ನು ಸೇರಿಸಲು ನೀವು ಬಯಸಿದರೆ, ಅವರ ಬೆಳವಣಿಗೆಗೆ ಸಹಾಯ ಮಾಡಲು ಬಯಸಿದರೆ, ಖಂಡಿತವಾಗಿಯೂ ಅವರ ಆಹಾರದಲ್ಲಿ ಒಮೆಗಾ 3 ಆಹಾರವನ್ನು ಸೇರಿಸಿ. ಮಗುವಿನ ಆಹಾರದಲ್ಲಿ ಈ ಒಂದು ಪದಾರ್ಥವನ್ನು ಸೇರಿಸುವುದರಿಂದ ಮೂಳೆಗಳು (Bones) ಬಲವಾಗಿರುತ್ತವೆ ಮತ್ತು ರೋಗಗಳು ದೂರ ಉಳಿಯುತ್ತವೆ. ಒಮೆಗಾ -3 ಕೊಬ್ಬಿನಾಮ್ಲಗಳು ಅಗತ್ಯವಾದ ಕೊಬ್ಬಿನಾಮ್ಲಗಳಾಗಿವೆ, ಅದು ಹೃದಯವನ್ನು ಆರೋಗ್ಯಕರವಾಗಿಡಲು ಸಹಾಯ ಮಾಡುತ್ತದೆ ಮತ್ತು ಮಕ್ಕಳ ಸರಿಯಾದ ಬೆಳವಣಿಗೆಗೆ ಅವಶ್ಯಕವಾಗಿದೆ. 

Parenting Tips : ಮಣ್ಣು ತಿನ್ನುವ ಮಕ್ಕಳಿಗೆ ಇದನ್ನು ಕೊಟ್ಟು ನೋಡಿ

ಮಕ್ಕಳ ಸಮತೋಲಿತ ಆಹಾರವು ಒಮೆಗಾ -3 ಅನ್ನು ಸಹ ಒಳಗೊಂಡಿರಬೇಕು. ಒಮೆಗಾ-3 ಗಳಲ್ಲಿ ಮೂರು ವಿಧಗಳಿವೆ - ಡೊಕೊಸಾಹೆಕ್ಸೆನೊಯಿಕ್ ಆಮ್ಲ, ಐಕೊಸಾಪೆಂಟೆನೊಯಿಕ್ ಆಮ್ಲ ಮತ್ತು ಆಲ್ಫಾ-ಲಿನೋಲಿಕ್ ಆಮ್ಲ. ಇವು ಸಮುದ್ರಾಹಾರದಂತಹ ಎಣ್ಣೆಯುಕ್ತ ಮೀನುಗಳಲ್ಲಿ ಕಂಡುಬರುವ ದೀರ್ಘ ಕೊಬ್ಬಿನಾಮ್ಲಗಳಾಗಿವೆ. ಸಸ್ಯ ಆಹಾರಗಳಾದ ಅಗಸೆಬೀಜಗಳು ಮತ್ತು ಚಿಯಾ ಬೀಜಗಳಲ್ಲಿ ಈ ಅಂಶ ಕಂಡುಬರುತ್ತದೆ. ಒಮೆಗಾ -3 ನಿಯಮಿತ ಸೇವನೆಯು ದೀರ್ಘಕಾಲದ ಕಾಯಿಲೆಗಳ ಅಪಾಯವನ್ನು ಕಡಿಮೆ ಮಾಡುತ್ತದೆ. ಮೀನಿನ ಎಣ್ಣೆಯ ಪೂರಕಗಳಂತಹ ಆಹಾರ ಪೂರಕಗಳು ಸಹ ಒಮೆಗಾ -3ಗಳನ್ನು ಹೊಂದಿರುತ್ತವೆ. 

ಒಮೆಗಾ -3 ಕೊಬ್ಬಿನಾಮ್ಲಗಳು ಮಕ್ಕಳಿಗೆ ಏಕೆ ಮುಖ್ಯ ?
ಮಗುವಿನ ಆರೋಗ್ಯಕ್ಕೆ ಒಮೆಗಾ -3 ಕೊಬ್ಬಿನಾಮ್ಲ ತುಂಬಾ ಮುಖ್ಯವಾಗಿದೆ. ಕಣ್ಣುಗಳ ಸಾಮಾನ್ಯ ಬೆಳವಣಿಗೆಗೆ ಒಮೆಗಾ -3 ಗಳು ಅವಶ್ಯಕ. ಒಮೆಗಾ 3 ಕೊರತೆಯು ಕಣ್ಣುಗಳಲ್ಲಿ ಕ್ರಿಯಾತ್ಮಕ ದೋಷಗಳನ್ನು ಉಂಟುಮಾಡಬಹುದು. ಮಗುವಿನ ಆಹಾರದಲ್ಲಿ ಒಮೆಗಾ -3 ಅನ್ನು ಸೇರಿಸುವ ಮೂಲಕ, ನೀವು ಅವರ ದೇಹದಲ್ಲಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಬಹುದು. ಇದು ಮಕ್ಕಳ ರೋಗನಿರೋಧಕ ಶಕ್ತಿಯನ್ನು ಬಲಪಡಿಸಲು ಮತ್ತು ದೇಹವು ರೋಗಗಳ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ.

Clean Hand: ತರಾತುರಿಯಲ್ಲಿ ಕೈ ತೊಳೆಯೋವಾಗ ಮಕ್ಕಳು ಮಾಡ್ತಾರೆ ಈ ತಪ್ಪು

1-3 ವರ್ಷದ ಹುಡುಗರಿಗೆ 0.7 ಗ್ರಾಂ/ದಿನ ಮತ್ತು ಹುಡುಗಿಯರಿಗೆ 0.7 ಗ್ರಾಂ/ದಿನ, 4-8 ವರ್ಷ ವಯಸ್ಸಿನ ಹುಡುಗರಿಗೆ 0.9 ಗ್ರಾಂ/ದಿನ ಮತ್ತು ಹುಡುಗಿಯರಿಗೆ 0.9 ಗ್ರಾಂ/ದಿನ, 9-13 ವರ್ಷ ವಯಸ್ಸಿನ ಹುಡುಗರಿಗೆ 1.2 ಗ್ರಾಂ/ದಿನ ಮತ್ತು ಹುಡುಗಿಯರಿಗೆ 1.0 ಗ್ರಾಂ/ದಿನ, 14-18 ವರ್ಷ ವಯಸ್ಸಿನ ಹುಡುಗರಿಗೆ 1.6 ಗ್ರಾಂ/ದಿನ ಮತ್ತು ಹುಡುಗಿಯರಿಗೆ 1.1 ಗ್ರಾಂ/ದಿನಕ್ಕೆ ಒಮೆಗಾ-3 ಕೊಬ್ಬಿನಾಮ್ಲಗಳು ಬೇಕಾಗುತ್ತವೆ.

ನ್ಯಾಷನಲ್ ಲೈಬ್ರರಿ ಆಫ್ ಮೆಡಿಸಿನ್ ಪ್ರಕಾರ, ಒಮೆಗಾ-3 ಕೊಬ್ಬಿನಾಮ್ಲಗಳು, ಮಕ್ಕಳ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತದೆ. ಇದು ನರಮಂಡಲ ಮತ್ತು ಬೌದ್ಧಿಕ ಕಾರ್ಯಗಳನ್ನು ಸುಧಾರಿಸಲು ಸಹಾಯ ಮಾಡುತ್ತದೆ. ಇದು ಮಕ್ಕಳ ಕಣ್ಣುಗಳ ಮೇಲೂ ಉತ್ತಮ ಪರಿಣಾಮ ಬೀರುತ್ತದೆ. ಇದು ಹೃದಯರಕ್ತನಾಳದ ಆರೋಗ್ಯ ಮತ್ತು ರಕ್ತದೊತ್ತಡಕ್ಕೂ ಒಳ್ಳೆಯದು. ಇದು ಮಕ್ಕಳ ರೋಗನಿರೋಧಕ ಶಕ್ತಿಯನ್ನು ಸಹ ಬಲಪಡಿಸುತ್ತದೆ.

click me!