ಯಾವುದೇ ಚಾಲೆಂಜ್ ಸ್ವೀಕಾರ ಮಾಡುವಾಗ್ಲೂ ಮುಂದೇನಾಗ್ಬಹುದು ಎಂಬುದನ್ನು ಲೆಕ್ಕ ಹಾಕ್ಬೇಕು. ಕುಡಿತ ಎಷ್ಟೇ ಅಭ್ಯಾಸವಿದ್ರೂ ಅಲ್ಕೋಹಾಲ್ ಅತಿಯಾದ ಪ್ರಮಾಣದಲ್ಲಿ ಹೊಟ್ಟೆ ಸೇರಿದ್ರೆ ಸಾವು ನಿಶ್ಚಿತ. ಅದಕ್ಕೆ ಬ್ರಿಟನ್ ನಲ್ಲಿ ನಡೆದ ಈ ಘಟನೆ ಸಾಕ್ಷಿ.
ಕೆಲವರು ಮದ್ಯ ಸೇವನೆಯನ್ನು ಎಷ್ಟು ಇಷ್ಟಪಡ್ತಾರೆ ಅಂದ್ರೆ ಅದಿಲ್ಲದೆ ಇರಲು ಅವರಿಗೆ ಸಾಧ್ಯವೇ ಇಲ್ಲ. ದಿನಕ್ಕೊಂದು ಪೆಗ್ ಒಳಗೆ ಹೋಗಿಲ್ಲವೆಂದ್ರೆ ಚಡಪಡಿಕೆ ಶುರುವಾಗುತ್ತದೆ. ಹುಚ್ಚರಂತೆ ವರ್ತಿಸಲು ಶುರು ಮಾಡ್ತಾರೆ. ಸಂದರ್ಭ ಯಾವುದೇ ಇರಲಿ, ಮದ್ಯಪಾನ ಆಗ್ಲೇಬೇಕು. ಹುಟ್ಟುಹಬ್ಬದ ಖುಷಿ ಇರಲಿ ಇಲ್ಲ ಸಾವಿನ ನೋವಿರಲಿ ಎಲ್ಲದಕ್ಕೂ ಗುಂಡಿದ್ರೆ ಗಮ್ಮತ್ತು ಎನ್ನುವವರು ಅವರು.
ಸಾಯಲು ಸಿದ್ಧವಿದ್ದೇನೆ ಆದ್ರೆ ಮದ್ಯಪಾನ (Alcohol) ಬಿಡೋದಿಲ್ಲ ಎನ್ನುವವರು ನೀವು ನೋಡಿಬಹುದು. ಒಮ್ಮೆ ಆಲ್ಕೋಹಾಲ್ ಚಟಕ್ಕೆ ಬಲಿಯಾದ್ರೆ ಅದ್ರಿಂದ ಹೊರಗೆ ಬರುವುದು ಬಹಳ ಕಷ್ಟ. ಅದೆಷ್ಟು ಪ್ರಯತ್ನಿಸಿದ್ರೂ ಮದ್ಯದ ವಾಸನೆ ಅವರನ್ನು ಸೆಳೆಯುತ್ತದೆ. ಹಾಗಂತ ಮದ್ಯ ಸೇವನೆಯನ್ನು ಸಂಪೂರ್ಣವಾಗಿ ಬಿಟ್ಟ ಜನರು ಸಾಕಷ್ಟು ಮಂದಿಯಿದ್ದಾರೆ. ಕೊನೆಯವರೆಗೂ ಕುಡಿದು ಸತ್ತವರ ಸಂಖ್ಯೆ ಅದಕ್ಕಿಂತ ಹೆಚ್ಚಿದೆ.
Home Remedy: ನಿತ್ಯ ಕಾಡುವ ಆ್ಯಸಿಡಿಟಿ ತಲೆನೋವಿಗೆ ಇದೇ ಬೆಸ್ಟ್ ಮದ್ದು
ವಾರಕ್ಕೆ ಒಂದು ಬಾರಿ ಸ್ವಲ್ಪ ಪ್ರಮಾಣದಲ್ಲಿ ಆಲ್ಕೋಹಾಲ್ ಸೇವನೆ ಮಾಡಿದ್ರೆ ಹೆಚ್ಚು ಅಪಾಯವಿಲ್ಲ. ಆದ್ರೆ ದಿನವಿಡಿ ಕುಡಿಯೋದು ಆರೋಗ್ಯ (Health) ಕ್ಕೆ ಹಾನಿಕರ. ಕೆಲವರು ಬರೀ ತಾವು ಮಾತ್ರ ಮದ್ಯಪಾನ ಮಾಡೋದಿಲ್ಲ, ಇದ್ರಲ್ಲಿ ಚಾಲೆಂಜ್ (Challenge) ಕಟ್ಟಿಕೊಂಡು ಸಾವಿನ ಜೊತೆ ಗುದ್ದಾಟ ನಡೆಸ್ತಾರೆ. ಸ್ನೇಹಿತರ ಮಧ್ಯೆ ಪೆಗ್ ಚಾಲೆಂಜ್ ಮಾಮೂಲಿ. ಇದಕ್ಕೆ ಬ್ರಿಟನ್ (Britain) ನಲ್ಲಿ ನಡೆದ ಘಟನೆಯೊಂದು ಉತ್ತಮ ನಿದರ್ಶನ. ರಜೆಯನ್ನು ಆರಾಮವಾಗಿ ಕಳೆಯುವ ಬದಲು, ಚಾಲೆಂಜ್ ಕಟ್ಟಿಕೊಂಡು ಪ್ರಾಣಬಿಟ್ಟ ವ್ಯಕ್ತಿ ಈಗ ಎಲ್ಲರ ಚರ್ಚೆಗೆ ಕಾರಣವಾಗಿದ್ದಾನೆ.
ಅವನ ಬಾಳಲ್ಲಿ ಇದೇ ಕೊನೆ ಚಾಲೆಂಜ್ ಆಯ್ತು : ಮದ್ಯಪಾನ ಮಾಡಿ ಸಾವಿಗೆ ಶರಣಾದ ಆ ವ್ಯಕ್ತಿಯ ಹೆಸರು ತಿಮೋತಿ ಸದರ್ನ್. ಅವನಿಗೆ 53 ವರ್ಷ. ರಜೆಗೆಂದು ಕುಟುಂಬ ಸಮೇತ ಇಂಗ್ಲೆಂಡ್‌ನಿಂದ ಜಮೈಕಾಕ್ಕೆ ಬಂದಿದ್ದ ತಿಮೋತಿ ಸದರ್ನ್. ಇಲ್ಲಿ ಸವಾಲೊಂದನ್ನು ಸ್ವೀಕರಿಸಿದ್ದಾನೆ. ಬೆಟ್ಟಿಂಗ್ ಗೆಲ್ಲುವ ಬರದಲ್ಲಿ ಪ್ರಾಣ ಬಿಟ್ಟಿದ್ದಾನೆ. ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿರುವ ಇಬ್ಬರು ಹುಡುಗಿಯರು ತಿಮೋತಿ ಸದರ್ನ್ ಗೆ ಚಾಲೆಂಜ್ ನೀಡಿದರು. ಸೇಂಟ್ ಆನ್‌ನಲ್ಲಿರುವ ರಾಯಲ್ ಡೆಕಾಮೆರಾನ್ ಕ್ಲಬ್ ಕೆರಿಬಿಯನ್ ಬಾರ್‌ನಲ್ಲಿ ಚಾಲೆಂಜ್ ಸ್ವೀಕರಿಸಿದ್ದ. 21 ಕಾಕ್‌ಟೇಲ್‌ಗಳನ್ನು ಕುಡಿಯುವುದಾಗಿ ಆತ ಚಾಲೆಂಜ್ ಮಾಡಿದ್ದ. ಚಾಲೆಂಜ್ ಪೂರ್ಣಗೊಳಿಸಲು 12 ಕಾಕ್ ಟೇಲ್ ಪೂರ್ಣಗೊಳಿಸಿದ್ದ. ಆಗ್ಲೇ ಆತನ ಆರೋಗ್ಯ ಹದಗೆಟ್ಟಿತ್ತು. ಚಾಲೆಂಜ್ ಸ್ವೀಕರಿಸುವ ಮುನ್ನವೇ ತಿಮೋತಿ, ಬ್ರಾಂಡಿ ಮತ್ತು ಬಿಯರ್ ಕುಡಿದಿದ್ದ. ನಂತರ ತಿಮೋತಿ, ಜನ್ಮದಿನವನ್ನು ಆಚರಿಸುತ್ತಿರುವ ಇಬ್ಬರು ಕೆನಡಾದ ಹುಡುಗಿಯರನ್ನು ಭೇಟಿಯಾಗಿದ್ದ. ಹಿಂದೆ ಕುಡಿದಿದ್ದನ್ನು ಲೆಕ್ಕಿಸದೆ ಕಾಕ್ ಟೇಲ್ ಏರಿಸಿದ್ದಾನೆ.
ಮಳೆ ಬಂದ್ರೆ ಚಡ್ಡಿ ಒಣಗೋಲ್ಲ, ಆದ್ರೆ ಒದ್ದೆ ಒಳ ಉಡುಪು ತರೋ ಅಪಾಯ ಗೊತ್ತಾ?
ಹೊಟೇಲ್ ನಿರ್ಲಕ್ಷ್ಯವೂ ಕಾರಣವಾಯ್ತಾ? : ಚಾಲೆಂಜ್ ನಂತೆ 12 ಕಾಕ್‌ಟೈಲ್‌ಗಳನ್ನು ಸೇವಿಸಿದ ನಂತರ ತಿಮೋತಿ ಅಸ್ವಸ್ಥಗೊಂಡ. ಆತನ ಸಂಬಂಧಿಕರು ತಿಮೋತಿಯನ್ನು ಆಸ್ಪತ್ರೆಗೆ ಸೇರಿಸುವಂತೆ ಹೋಟೆಲ್ ಸಿಬ್ಬಂದಿಯನ್ನು ಕೇಳಿದ್ದರು. ಆತನ ಆರೋಗ್ಯ ತೀರಾ ಹದಗೆಡುತ್ತ ಬಂದಿತ್ತು. ತಿಮೋತಿಗೆ ಉಸಿರಾಡಲು ತೊಂದರೆಯಾಗ್ತಿತ್ತು. ಅಲ್ಲದೆ ತಿಮೋತಿ ವಾಂತಿ ಮಾಡುತ್ತಿದ್ದ. ಸ್ವಲ್ಪ ಸಮಯದ ನಂತರ ನರ್ಸ್ ಒಬ್ಬರು ಹೋಟೆಲ್‌ಗೆ ಬಂದಿದ್ದಾರೆ. ತಿಮೋತಿಯ ಪರೀಕ್ಷೆ ಮಾಡಿದ್ದಾರೆ. ಆದ್ರೆ ಯಾವುದೇ ಆಂಬ್ಯುಲೆನ್ಸ್ ಹೊಟೇಲ್ ಗೆ ಬರಲಿಲ್ಲ. ಹೊಟೇಲ್ ನಿಂದ ಯಾವುದೇ ವೈದ್ಯಕೀಯ ಚಿಕಿತ್ಸೆ ಸಿಗಲಿಲ್ಲ. ತಿಮೋತಿ ದೇಹದ ಉಷ್ಣತೆ ನಿರಂತರವಾಗಿ ಕುಸಿಯುತ್ತಲೇ ಇತ್ತು. ತಿಮೋತಿ ಹೊಟೇಲ್ ನಲ್ಲಿಯೇ ಸಾವನ್ನಪ್ಪಿದ್ದಾನೆ. ತಿಮೋತಿ ಮೃತ ದೇಹವನ್ನು ಇಂಗ್ಲೆಂಡ್‌ಗೆ ಹಿಂತಿರುಗಿಸಲು ಸಂಬಂಧಿಕರ ಬಳಿ ಸೂಕ್ತ ಹಣವಿರಲಿಲ್ಲ. ಹಾಗಾಗಿ ಫೇಸ್‌ಬುಕ್ ಪುಟವನ್ನು ರಚಿಸಿ, ಹಣ ಸಂಗ್ರಹಣೆಗೆ ತೊಡಗಿದ್ದಾರೆ. ತಿಮೋತಿಗೆ ಯಾವುದೇ ವಿಮಾ ರಕ್ಷಣೆ ಇರಲಿಲ್ಲ.