ಜನರು ಸುಂದರವಾಗಿ ಕಾಣಲು ನಾನಾ ಪ್ರಯತ್ನ ಮಾಡ್ತಾರೆ. ತುಟಿ, ಸ್ತನ, ಮೂಗು ಅಂತಾ ಸರ್ಜರಿಗೆ ಮುಂದಾಗ್ತಾರೆ. ಆದ್ರೆ ಎಲ್ಲವೂ ಆರೋಗ್ಯಕ್ಕೆ ಒಳ್ಳೆಯದಲ್ಲ. ಕೆಲ ಶಸ್ತ್ರಚಿಕಿತ್ಸೆ ನಮ್ಮ ಪ್ರಾಣವನ್ನೇ ತೆಗೆಯಬಹುದು.
ಮದುವೆ ಪ್ರತಿಯೊಬ್ಬರ ಜೀವನದಲ್ಲೂ ವಿಶೇಷವಾಗಿರುತ್ತದೆ. ಆ ಕ್ಷಣವನ್ನು ಸದಾ ನೆನಪಿಟ್ಟುಕೊಳ್ಳಲು ಜನರು ಬಯಸ್ತಾರೆ. ತಮಗಿಷ್ಟವಾಗು ಸಂಗಾತಿ ಸಿಕ್ಕಲ್ಲಿ, ಅವರನ್ನು ಕೈ ಹಿಡಿಯುವ ಸಂದರ್ಭದಲ್ಲಿ ಉತ್ಸಾಹ ಇಮ್ಮಡಿಗೊಂಡಿರುತ್ತದೆ. ಮದುವೆ ಸಮಯದಲ್ಲಿ ತೆಗೆದ ಫೋಟೋ,ವಿಡಿಯೋಗಳು ಸದಾ ನಮ್ಮ ಬಳಿ ಇರುವ ಕಾರಣ, ಮದುವೆ ಸಮಯದಲ್ಲಿ ಸುಂದರವಾಗಿ ಕಾಣ್ಬೇಕು, ಎಲ್ಲರೂ ನಮ್ಮನ್ನು ಹೊಗಳಬೇಕೆಂಬ ಬಯಕೆ ವಧು – ವರ ಇಬ್ಬರಿಗೂ ಇರುತ್ತದೆ. ಮದುವೆಗೆ ಒಂದೆರಡು ತಿಂಗಳ ಮೊದಲೇ ತಯಾರಿ ಶುರುವಾಗಿರುತ್ತದೆ. ಈಗಿನ ದಿನಗಳಲ್ಲಿ ವೆಡ್ಡಿಂಗ್ ಡ್ರೆಸ್ ಗಳು ಹೆಚ್ಚು ಪ್ರಸಿದ್ಧಿ ಪಡೆಯುತ್ತಿವೆ. ಮದುವೆ ಸಮಯದಲ್ಲಿ ತುಂಬಾ ಸುಂದರವಾಗಿ ಕಾಣ್ಬೇಕೆಂಬ ಕನಸು ಕಂಡು, ಸ್ತನ ಸರ್ಜರಿಗೆ ಒಳಗಾದ ಯುವತಿಯೊಬ್ಬಳಿಗೆ ಮದುವೆ ಡ್ರೆಸ್ ಧರಿಸುವ ಅವಕಾಶವೇ ಸಿಗಲಿಲ್ಲ. ಸ್ತನದ ಗಾತ್ರ ಹೆಚ್ಚಿಸಿಕೊಳ್ಳುವ ಆಕೆ ಹುಚ್ಚು ಆಕೆಯನ್ನೇ ಬಲಿ ಪಡೆದಿದೆ. ಇಷ್ಟಕ್ಕೂ ಈ ಘಟನೆ ನಡೆದಿದ್ದು ಎಲ್ಲಿ, ಏನಾಯ್ತು ಎಂಬುದರ ವಿವರ ಇಲ್ಲಿದೆ.
ಮದುವೆ (Marriage ) ಡ್ರೆಸ್ ಗಾಗಿ ಶಸ್ತ್ರಚಿಕಿತ್ಸೆಗೆ ಮುಂದಾದ ಯುವತಿ : ಘಟನೆ ನಡೆದಿರೋದು ಇಟಲಿ (Italy) ಯಲ್ಲಿ. ಯುವತಿ ಹೆಸರು ಅಲೆಸಿಯಾ ನೆಬೊಸೊ (Alessia Neboso). ಆಕೆಗೆ 21 ವರ್ಷ ವಯಸ್ಸಾಗಿತ್ತು. ಮದುವೆ ಬಗ್ಗೆ ಅಲೆಸಿಯಾ ನೆಬೊಸೊ ನೂರಾರು ಕನಸು ಕಂಡಿದ್ದಳು. ಮದುವೆಯಲ್ಲಿ ಅತ್ಯಂತ ಸುಂದರವಾಗಿ ಕಾಣಬೇಕೆಂದು ಬಯಸಿದ್ದಳು. ಅದಕ್ಕಾಗಿ ಲೋ ಕಟ್ ಗೌನ್ ಧರಿಸುವ ಆಸೆ ಹೊಂದಿದ್ದಳು. ಸುಂದರವಾಗಿ ಕಾಣಬೇಕೆಂಬ ಕಾರಣಕ್ಕೆ ಆಕೆ ಸ್ತನ ಶಸ್ತ್ರಚಿಕಿತ್ಸೆಗೆ ಒಳಗಾಗಲು ಬಯಸಿದ್ದಳು.
ಸೇಫ್ಟಿ ಹೆಚ್ಚಿರ್ಲಿ ಅಂತ ಒಂದೇ ಬಾರಿಗೆ ಎರಡು ಕಾಂಡೋಮ್ ಬಳಸಿದರೆ ಏನಾಗುತ್ತೆ ಗೊತ್ತಾ?
ಭಾವಿ ಪತಿಯ ವಿರೋಧ : ಅಲೆಸಿಯಾ ನೆಬೊಸೊ ಸ್ತನ ಶಸ್ತ್ರಚಿಕಿತ್ಸೆ ಮಾಡಿಕೊಳ್ಳುವುದು ಆಕೆ ಭಾವಿ ಪತಿಗೆ ಇಷ್ಟವಿರಲಿಲ್ಲ. 22 ವರ್ಷದ ಮಾರಿಯೋ ಲುಚ್ಚೆಸಿ (Mario Lucchesi) ಶಸ್ತ್ರಚಿಕಿತ್ಸೆ ಮಾಡಿಕೊಳ್ಳದಂತೆ ಸೂಚನೆ ನೀಡಿದ್ದ. ಆದ್ರೆ ಅಲೆಸಿಯಾ ನೆಬೊಸೊ ಅದಕ್ಕೆ ಗಮನ ನೀಡಿರಲಿಲ್ಲ. ಆಕೆ ತನ್ನ ಸ್ನೇಹಿತರ ಬಳಿಯೂ ಈ ವಿಷ್ಯವನ್ನು ಹೇಳಿದ್ದಳಂತೆ. ಮೆನಿಕ್ಯೂರ್ ಗೆ ಬಂದಿದ್ದ ಅಲೆಸಿಯಾ ನೆಬೊಸೊ, ಕೆಲವೇ ದಿನಗಳ ತಾನು ಸ್ತನ ಶಸ್ತ್ರಚಿಕಿತ್ಸೆ ಮಾಡಿಸಿಕೊಳ್ಳುವುದಾಗಿ ಹೇಳಿದ್ದಳು. ಖುಷಿಯಲ್ಲಿರೋದಾಗಿ ಹೇಳಿದ್ದಳು.
ಅಚಾನಕ್ ರೋಗಗ್ರಸ್ತಳಾದ ಅಲೆಸಿಯಾ ನೆಬೊಸೊ : ಸೆಪ್ಟೆಂಬರ್ 11ರಂದು ಸ್ಥಳೀಯ ಕ್ಲಿನಿಕ್ ಗೆ ಹೋಗಿದ್ದ ಅಲೆಸಿಯಾ ನೆಬೊಸೊ, ಸ್ತನ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಳು. ಸ್ತನದ ಗಾತ್ರವನ್ನು ದೊಡ್ಡದು ಮಾಡಿಕೊಂಡಿದ್ದಲ್ಲದೆ ಅದೇ ದಿನ ಮನೆಗೆ ವಾಪಸ್ ಬಂದಿದ್ದಳು. ಸೆಪ್ಟೆಂಬರ್ 18ರ ವೇಳೆಗೆ ಆಕೆ ಆರೋಗ್ಯವಾಗೇ ಇದ್ದಳು. ಆದ್ರೆ ಇದ್ರ ನಂತ್ರ ಅಲೆಸಿಯಾ ನೆಬೊಸೊಗೆ ಜ್ವರ, ಕೆಮ್ಮು ಕಾಣಿಸಿಕೊಂಡಿತ್ತು. ಸುಸ್ತಾಗಿದ್ದಳು. ಗ್ಯಾಸ್ ಸಮಸ್ಯೆಯಿಂದಲೂ ಆಕೆ ಬಳಲುತ್ತಿದ್ದಳು. ಸೆಪ್ಟೆಂಬರ್ 20ರಂದು ಆಕೆಯನ್ನು ಆಸ್ಪತ್ರೆಗೆ ಸೇರಿಸಲಾಗಿದೆ. ಆದ್ರೆ ಅಲ್ಲಿಯೂ ಆಕೆ ಸ್ಥಿತಿ ಸುಧಾರಿಸಲಿಲ್ಲ.
Oprah Winfrey: 69ನೇ ವಯಸ್ಸಿನಲ್ಲೂ ಫಿಟ್ ಆಗಿರುವ ಓಫ್ರಾ ಡಯಟ್ ಗುಟ್ಟೇನು?
ಉಸಿರಾಟದ ತೊಂದರೆ, ಕಿಡ್ನಿ ಫೇಲ್ : ರಕ್ತದಲ್ಲಿನ ಬಿಳಿ ಕಣಗಳ ಪ್ರಮಾಣ ಕಡಿಮೆಯಾಗತೊಡಗಿತು. ಉಸಿರಾಡಲು ಸಮಸ್ಯೆಯಾಯ್ತು. ಕಿಡ್ನಿ ಫೇಲ್ ಆಗಿದ್ದಲ್ಲದೆ ಹೃದಯಾಘಾತದಿಂದ ಆಕೆ ಸಾವನ್ನಪ್ಪಿದಳು. ಅಲೆಸಿಯಾ ನೆಬೊಸೊ ಕುಟುಂಬ, ಸಾವಿಗೆ ಕಾರಣವೇನು ಎಂಬ ಚಿಂತೆಯಲ್ಲಿದೆ. ಈ ಬಗ್ಗೆ ತನಿಖೆಗೆ ಮುಂದಾಗಿದೆ. ವೈದ್ಯರ ತಪ್ಪಿನಿಂದ ಅಲೆಸಿಯಾ ನೆಬೊಸೊ ಸಾವನ್ನಪ್ಪಿದ್ದಾಳೆಂದು ಕುಟುಂಬಸ್ಥರು ಆರೋಪ ಮಾಡಿದ್ದಾರೆ.
ಆಪರೇಷನ್ ಥಿಯೇಟರ್ ನಲ್ಲಿ ಏನಾಯ್ತು ಎಂಬುದು ಗೊತ್ತಿಲ್ಲ ಎಂದು ಕುಟುಂಬಸ್ಥರು ಹೇಳ್ತಿದ್ದಾರೆ. ಶಸ್ತ್ರಚಿಕಿತ್ಸೆಗೆ ಒಳಗಾಗುವ ಮೊದಲು ಅಲೆಸಿಯಾ ನೆಬೊಸೊ ಆರೋಗ್ಯ ಸರಿಯಾಗಿತ್ತು. ಆಪರೇಷನ್ ನಂತ್ರ ಅವಳ ಸ್ಥಿತಿ ಹೀಗಾಯ್ತು ಎಂದು ಕುಟುಂಬಸ್ಥರು ಹೇಳಿದ್ದಾರೆ.ಸಾಮಾಜಿಕ ಜಾಲತಾಣದಲ್ಲಿ ಅಲೆಸಿಯಾ ನೆಬೊಸೊ ಮದುವೆಯಾಗಬೇಕಿದ್ದ ಹುಡುಗ ದುಃಖ ತೋಡಿಕೊಂಡಿದ್ದಾನೆ. ನಿನ್ನನ್ನು ಮರೆತು ಜೀವನ ನಡೆಸೋದು ಕಷ್ಟ ಎಂದಿದ್ದಾನೆ.