ಆಗಾಗ ಬಂದು ಹೋಗುವ ಅತಿಥಿ ತಲೆನೋವು. ಜೀವನದಲ್ಲಿ ಅದೆಷ್ಟು ಬಾರಿ ತಲೆನೋವು ಬರುತ್ತೋ ನೆನಪಿರೋದಿಲ್ಲ. ಹಾಗಂತ ಇದನ್ನು ಮಾಮೂಲಿ ಅಂತ ನಿರ್ಲಕ್ಷ್ಯ ಮಾಡೋದು ಮೂರ್ಖತನ. ಅದರಿಂದ ಪ್ರಾಣವೇ ಹೋಗ್ಬಹುದು.
ಜೀವನದಲ್ಲಿ ಒಮ್ಮೆಯೂ ನನಗೆ ತಲೆನೋವು ಕಾಣಿಸಿಕೊಂಡೇ ಇಲ್ಲ ಎನ್ನುವವರು ಬಹಳ ಅಪರೂಪ. ತಲೆನೋವು ನಮಗೆ ಸಾಮಾನ್ಯ ಎನ್ನುವಂತೆ ಕಾಣುತ್ತದೆ. ಕೆಲವರಿಗೆ ತಲೆನೋವು ಪ್ರತಿದಿನ ಬರುವ ರೋಗ. ಮತ್ತೆ ಕೆಲವರಿಗೆ ಅತಿ ಟೆನ್ಷನ್ ಆದಾಗ ತಲೆನೋವು ಕಾಣಿಸಿಕೊಳ್ಳುತ್ತದೆ. ತಲೆ ನೋವು ಬರ್ತಿದ್ದಂತೆ ಜನರು ಮಾತ್ರೆ ಸೇವನೆ ಮಾಡ್ತಾರೆ. ಕೆಲವೇ ಕ್ಷಣದಲ್ಲಿ ಅದು ಕಡಿಮೆಯಾಗುತ್ತದೆ. ಕೆಲವೊಮ್ಮೆ ಕಾಡುವ ತಲೆನೋವು ಯಾವ ಮಾತ್ರೆ ಸೇವನೆ ಮಾಡಿದ್ರೂ ಕಡಿಮೆಯಾಗುವ ಲಕ್ಷಣ ಕಾಣಿಸೋದಿಲ್ಲ. ನಿಮಗೂ ತಲೆನೋವು ಕಾಣಿಸಿಕೊಂಡ್ರೆ, ಪದೇ ಪದೇ ಸಹಿಸಲಾಗದಷ್ಟು ನೋವು ಬರುತ್ತಿದ್ದರೆ ನಿರ್ಲಕ್ಷ್ಯ ಮಾಡ್ಬೇಡಿ. ವ್ಯಕ್ತಿಯೊಬ್ಬ ತಲೆ ನೋವಿಗೆ ಬಲಿಯಾಗಿದ್ದಾನೆ.
ಆಗ್ನೇಯ ಲಂಡನ್ (London) ನಲ್ಲಿ ಘಟನೆ ನಡೆದಿದೆ. ವ್ಯಕ್ತಿ ಸಾವಿಗೆ ವೈದ್ಯರು (Doctor) ಕೂಡ ಕಾರಣರಾಗಿದ್ದಾರೆ. ತಲೆನೋವಿ (Headache) ಗೆ ಕಾರಣವೇನು ಎಂಬುದನ್ನು ನೀವು ಬರಿಗಣ್ಣಿನಲ್ಲಿ ಪತ್ತೆ ಹಚ್ಚಲು ಸಾಧ್ಯವಿಲ್ಲ ಎಂಬುದಕ್ಕೆ ಈ ವ್ಯಕ್ತಿ ಸಾವು ಉತ್ತಮ ನಿದರ್ಶನವಾಗಿದೆ. ಆಗ್ನೇಯ ಲಂಡನ್‌ನಲ್ಲಿ ವಾಸಿಸುವ 25 ವರ್ಷದ ಜೋಶುವಾ ವಾರ್ನರ್ ತಲೆ ನೋವಿಗೆ ಸಾವನ್ನಪ್ಪಿದ ವ್ಯಕ್ತಿ. ಆತನಿಗೆ ಸುಮಾರು 15 ದಿನಗಳವರೆಗೆ ತಲೆನೋವು ಕಾಣಿಸಿಕೊಂಡಿದೆ. ವೈದ್ಯರಿಂದ ಚಿಕಿತ್ಸೆ ಕೂಡ ಪಡೆದಿದ್ದಾನೆ. ಭಯಂಕರ ರೋಗವನ್ನು ಗುರುತಿಸಲಾಗದ ವೈದ್ಯರ ತಪ್ಪಿನಿಂದಾಗಿ ವಾರ್ನರ್ ಸಾವನ್ನಪ್ಪಿದ್ದಾನೆ.
undefined
ಮಗುವಿನ ತೂಕ-ಎತ್ತರ ಚೆನ್ನಾಗಿರ್ಬೇಕು ಅಂದ್ರೆ ಇಂಥಾ ಪೌಷ್ಠಿಕ ಆಹಾರ ಕೊಡೋದು ಮರೀಬೇಡಿ
ತಲೆ ನೋವು ಪದೇ ಪದೇ ಬರ್ತಿದ್ದ ಕಾರಣ ವಾರ್ನರ್ ವೈದ್ಯರ ಬಳಿ ಹೋಗಿದ್ದಾನೆ. ವೈದ್ಯರು ಸಿಟಿ ಸ್ಕ್ಯಾನ್ ಮಾಡಿದ್ದಾರೆ. ನಂತ್ರ ಅಪೆಂಡಿಸೈಟಿಸ್ ಎಂದು ಗುರುತಿಸಿ ಶಸ್ತ್ರಚಿಕಿತ್ಸೆ ನಡೆಸಿ ಅಪೆಂಡಿಕ್ಸ್ ತೆಗೆದಿದ್ದಾರೆ. ಶಸ್ತ್ರಚಿಕಿತ್ಸೆ ನಂತ್ರವೂ ವಾರ್ನ್ ಗೆ ತಲೆನೋವು ಕಡಿಮೆಯಾಗಿಲ್ಲ. ಮತ್ತೆ ಆತ ವೈದ್ಯರ ಬಳಿಗೆ ಹೋಗಿದ್ದಾನೆ. ಆಗ ಮತ್ತೆ ಪರೀಕ್ಷೆ ನಡೆಸಲಾಗಿದೆ. ಈ ಸಂದರ್ಭದಲ್ಲಿ ಮೆದುಳಿನಲ್ಲಿ ವಸ್ತುವಿರುವುದು ಪತ್ತೆಯಾಗಿದೆ. ಆದ್ರೆ ಅದನ್ನು ವೈದ್ಯರು ಅಲ್ಲಗಳೆದಿದ್ದಾರೆ. ಕಂಪ್ಯೂಟರ್ ತಪ್ಪು ಎಂದಿದ್ದಾರೆ. ತಲೆ ನೋವಿನಿಂದ ಬಳಲುತ್ತಿದ್ದ ವಾರ್ನರ್ ಒಂದು ದಿನ ಪ್ರಜ್ಞೆ ಕಳೆದುಕೊಂಡಿದ್ದಾನೆ. ಈ ಸಂದರ್ಭದಲ್ಲಿ ಕುಟುಂಬಸ್ಥರು ಆತನನ್ನು ಬೇರೆ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಅಲ್ಲಿ ಸಿಟಿ ಸ್ಕ್ಯಾನ್ ಮಾಡಿದ ವೈದ್ಯರು, ವಾರ್ನರ್, ಕ್ಯಾನ್ಸರ್ ನಿಂದ ಬಳಲುತ್ತಿರುವ ಸತ್ಯ ಬಿಚ್ಚಿಟ್ಟಿದ್ದಾರೆ. ಈ ಕ್ಯಾನ್ಸರ್ ವಾರ್ನರ್ ಅವರ ಮೆದುಳಿನ ಬಲಭಾಗದಿಂದ ಹಿಂಭಾಗ ಮತ್ತು ಮೆದುಳಿನ ಕಾಂಡಕ್ಕೆ ಹರಡಿತ್ತು. ವಾರ್ನರ್ ಕ್ಯಾನ್ಸರ್ ಕೊನೆ ಹಂತದಲ್ಲಿದ್ದ ಕಾರಣ ಅವರನ್ನು ಉಳಿಸಿಕೊಳ್ಳಲು ಸಾಧ್ಯವಾಗಲಿಲ್ಲ.
ಹೃದಯಾಘಾತ ಉಂಟಾದಾಗ ಸಿಪಿಆರ್ನಿಂದ ಜೀವ ಉಳಿಸಿ: ನಟಿ ಮೇಘನಾ ರಾಜ್ ಸಂದೇಶ
ಮೆದುಳಿನ ಕ್ಯಾನ್ಸರ್ : ವೈದ್ಯರ ಪ್ರಕಾರ ಮೆದುಳಿನ ಕ್ಯಾನ್ಸರ್ ನಾಲ್ಕು ಹಂತದಲ್ಲಿರುತ್ತದೆ. ಒಂದು ಮತ್ತು ಎರಡನೇ ಹಂತದಲ್ಲಿ ಗಡ್ಡೆ ತುಂಬಾ ಚಿಕ್ಕದಾಗಿರುತ್ತದೆ. ಮೂರು ಮತ್ತು ಕೊನೆ ಹಂತದಲ್ಲಿ ಗಡ್ಡೆ ದೊಡ್ಡದಾಗುವ ಜೊತೆಗೆ ಇತರ ಭಾಗಗಳಿಗೆ ಹರಡುತ್ತದೆ. ಇದು ಮಾರಣಾಂತಿಕವಾಗಿರುತ್ತದೆ.
ಮೆದುಳಿನ ಕ್ಯಾನ್ಸರ್ ಲಕ್ಷಣ : ಮೆದುಳಿನ ಕ್ಯಾನ್ಸರ್ ಮೊದಲ ಲಕ್ಷಣವೆಂದ್ರೆ ತಲೆನೋವು. ಬೆಳಗಿನ ಸಮಯದಲ್ಲಿ ಈ ತಲೆನೋವು ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ. ಕೆಮ್ಮಿದಾಗ ಅಥವಾ ವ್ಯಕ್ತಿ ಹೆಚ್ಚು ಆಯಾಸಗೊಂಡಾಗ ತಲೆನೋವು ಹೆಚ್ಚಾಗುತ್ತದೆ. ಪದೇ ಪದೇ ತಲೆನೋವು ಬರ್ತಿದ್ದರೆ ಅದನ್ನು ನಿರ್ಲಕ್ಷ್ಯ ಮಾಡಬಾರದು. ತಕ್ಷಣ ವೈದ್ಯರನ್ನು ಭೇಟಿಯಾಗುವುದು ಮುಖ್ಯ. ಮೆದುಳಿನ ಕ್ಯಾನ್ಸರ್ ನಲ್ಲಿ ತಲೆನೋವಿನ ಜೊತೆಗೆ ಆಗಾಗ ವಾಂತಿ ಕಾಣಿಸಿಕೊಳ್ಳುತ್ತದೆ. ವ್ಯಕ್ತಿ ಸದಾ ಅನಾರೋಗ್ಯದಿಂದ ಬಳಲುತ್ತಾನೆ. ಕಣ್ಣಿನ ದೃಷ್ಟಿಯಲ್ಲಿ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಮಾತನಾಡಲು ಕೂಡ ಆತ ಕಷ್ಟಪಡುತ್ತಾನೆ. ಮಾತು ಸ್ಪಷ್ಟವಾಗಿ ಬರುವುದಿಲ್ಲ. ಜೊತೆಗೆ ನೆನಪಿನ ಶಕ್ತಿ ಕಡಿಮೆಯಾಗುತ್ತ ಬರುತ್ತದೆ. ಆರಂಭದಲ್ಲಿಯೇ ರೋಗ ಪತ್ತೆ ಮಾಡುವುದು ಬಹಳ ಮುಖ್ಯ.