Latest Videos

ಮದುವೆಯ ದಿನ ಸ್ಲಿಮ್ ಆಗಿ ಕಾಣಬೇಕೆಂದು ವೈಟ್‌ ಲಾಸ್ ಡಯೆಟ್ ಮಾಡ್ತಿದ್ದ ಯುವತಿ ಸಾವು!

By Vinutha PerlaFirst Published May 23, 2024, 5:12 PM IST
Highlights

ಮದುವೆಯ ದಿನ ಸುಂದರವಾಗಿ ಕಾಣಬೇಕೆಂದು ಪ್ರತಿಯೊಬ್ಬ ಯುವತಿಯೂ ಬಯಸುತ್ತಾಳೆ. ಹೀಗಾಗಿ ಮದುವೆ ನಿಶ್ಚಯವಾದೊಡನೆ ಯುವತಿಯರು ವೈಟ್ ಲಾಸ್‌ ಡಯೆಟ್‌, ಬ್ಯೂಟಿ ಟ್ರೀಟ್‌ಮೆಂಟ್‌ ತೆಗೆದುಕೊಳ್ಳಲು ಆರಂಭಿಸುತ್ತಾರೆ. ಆದ್ರೆ ಹೀಗೆ ವೈಟ್ ಲಾಸ್ ಮಾಡ್ತಿದ್ದ ಭಾವೀ ವಧು ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾಳೆ.

ಮದುವೆಯ ದಿನ ಸುಂದರವಾಗಿ ಕಾಣಬೇಕೆಂದು ಪ್ರತಿಯೊಬ್ಬ ಯುವತಿಯೂ ಬಯಸುತ್ತಾಳೆ. ಹೀಗಾಗಿ ಮದುವೆ ನಿಶ್ಚಯವಾದೊಡನೆ ಯುವತಿಯರು ವೈಟ್ ಲಾಸ್‌ ಡಯೆಟ್‌, ಬ್ಯೂಟಿ ಟ್ರೀಟ್‌ಮೆಂಟ್‌ ತೆಗೆದುಕೊಳ್ಳಲು ಆರಂಭಿಸುತ್ತಾರೆ. ಆದರೆ ಹೀಗೆ ನಿರ್ಧಿಷ್ಟ ಸಮಯದಲ್ಲಿ ತೂಕ ಇಳಿಸಿಕೊಳ್ಳಬೇಕು ಎಂದು ಯುವತಿಯರು ಮಾಡುವ ಡಯೆಟ್‌, ಪಡೆದುಕೊಳ್ಳುವ ಚಿಕಿತ್ಸೆ ಕೆಲವೊಮ್ಮೆ ಎಡವಟ್ಟಿಗೂ ಕಾರಣವಾಗುತ್ತದೆ. ಹೀಗಾಗಿ ಬ್ರೆಜಿಲ್‌ನಲ್ಲಿ ತೂಕ ಇಳಿಸಿಕೊಳ್ಳಲು ಯತ್ನಿಸಿದ ವಧು ನಿಧನಳಾಗಿದ್ದಾಳೆ.

ಲಾರಾ ಫೆರ್ನಾಂಡಿಸ್ ಕೋಸ್ಟಾ ತನ್ನ ಮದುವೆಯ ದಿನದ ಮೊದಲು 8 ಕೆಜಿ ತೂಕವನ್ನು ಕಳೆದುಕೊಳ್ಳಬೇಕೆಂದು ಬಯಸಿದ್ದರು. ಹೀಗೆ ಶೀಘ್ರವಾಗಿ ಲಾರಾ ತನ್ನ ತೂಕವನ್ನು ಕಳೆದುಕೊಳ್ಳಲು ಸಹಾಯ ಮಾಡಲು ಹೊಟ್ಟೆಯಲ್ಲಿ ಗ್ಯಾಸ್ಟ್ರಿಕ್ ಬಲೂನ್ ಅನ್ನು ಅಳವಡಿಸಿಕೊಂಡಿದ್ದಾಳೆ ಎಂದು ವರದಿಯಾಗಿದೆ.

ಹೃದಯ ಗಟ್ಟಿ ಇರ್ಬೇಕು ಅಂದ್ರೆ ಇಂಥ ಆಹಾರ ತಪ್ಪದೇ ಅವೈಡ್ ಮಾಡಿ, ಏನು ತಿನ್ನಬಾರದು?

ಈ ಪ್ರಕ್ರಿಯೆಯಲ್ಲಿ, ಲವಣಯುಕ್ತ ತುಂಬಿದ ಸಿಲಿಕೋನ್ ಚೀಲವನ್ನು ಹೊಟ್ಟೆಯೊಳಗೆ ಸೇರಿಸಲಾಗುತ್ತದೆ ಮತ್ತು ಅದು ಪೂರ್ಣತೆಯ ಭಾವನೆಯನ್ನು ಉಂಟುಮಾಡುತ್ತದೆ. ಹೀಗಾಗಿ ಹೆಚ್ಚು ತಿನ್ನುವುದನ್ನು ತಡೆಯುತ್ತದೆ. 

31 ವರ್ಷ ವಯಸ್ಸಿನ ಇಂಜಿನಿಯರ್‌ ಆಗಿರುವ ಲಾರಾ ಏಪ್ರಿಲ್ 26ರಂದು ಕ್ಲಿನಿಕ್‌ನಲ್ಲಿ ಆಪ್‌ಗೆ ಒಳಗಾಗಿದ್ದರು. ಕುಟುಂಬ ಸದಸ್ಯರ ಪ್ರಕಾರ, ಮರುದಿನ ಆಕೆ ರಕ್ತ ವಾಂತಿ ಮಾಡಲು ಪ್ರಾರಂಭಿಸಿದಳು. ಲಾರಾ ನಂತರ ಮೇ 1ರಂದು ಬೇರೆ ಚಿಕಿತ್ಸಾಲಯಕ್ಕೆ ಹೋದರು. ಇಲ್ಲಿನ ವೈದ್ಯರು ಆಕೆಯ ಹೊಟ್ಟೆಯಿಂದ ಬಲೂನ್‌ನ್ನು ತೆಗೆದುಹಾಕಿದರು. ಆದರೂ, ಲಾರಾ ತೀವ್ರ ನೋವಿನಿಂದ ಬಳಲುತ್ತಿದ್ದರು ಮತ್ತು ಮೇ 6ರಂದು ಆಸ್ಪತ್ರೆಗೆ ದಾಖಲಾಗಿದ್ದರು. ಆಕೆಯ ಹೊಟ್ಟೆಯಲ್ಲಿ ರಂಧ್ರ ಉಂಟಾಗಿದ್ದು, ಅದು ಸೋಂಕನ್ನು ಉಂಟುಮಾಡಿದೆ ಎಂದು ವೈದ್ಯರು ಕಂಡುಹಿಡಿದರು. ಅದರ ಮರುದಿನ ಯುವತಿ ಮೃತಪಟ್ಟಳು.

ಭಾರತ; ಅನಾರೋಗ್ಯ ಆಹಾರ ತಿಂದೇ ಶೇ. 56.4 ಕಾಯಿಲೆ ಪ್ರಮಾಣ ಹೆಚ್ಚಳ!

ಲಾರಾ ನಿಶ್ಚಿತ ವರ ಮ್ಯಾಥ್ಯೂಸ್ ಟರ್ಚೆಟ್ ಮಾತನಾಡಿ, 'ಲಾರಾ ನಿಜವಾಗಿಯೂ ಹೆಚ್ಚು ಸ್ಥೂಲಕಾಯವಾಗಿರಲಿಲ್ಲ. ಆರೋಗ್ಯವಂತಳಾಗಿದ್ದಳು ಆಕೆಯ ತೂಕ ಕೇವಲ 70 ಕೆ.ಜಿ. ಆದರೂ ಆಕೆ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಳು' ಎಂದು ಹೇಳಿದ್ದಾರೆ. ಲಾರಾ ಮತ್ತು ಮ್ಯಾಥ್ಯೂಸ್ ಸೆಪ್ಟೆಂಬರ್ 7ರಂದು ಮದುವೆಯಾಗಲು ನಿರ್ಧರಿಸಿದ್ದರು.

click me!