ಎಷ್ಟೋ ತರಕಾರಿಗಳನ್ನು (Vegetables) ನಾವು ತಿನ್ನಬೇಕಲ್ಲಾ ಎಂದು ತಿನ್ನುತ್ತೇವೆ. ಆದರೆ ಅದರಿಂದ ಆರೋಗ್ಯದ ಮೇಲಾಗುವ ಪ್ರಯೋಜನಗಳ ಬಗ್ಗೆ ತಿಳಿದಿರುವುದಿಲ್ಲ. ಕುಂಬಳ ಕಾಯಿ ಕುಟುಂಬಕ್ಕೆ ಸೇರಿದ ಸೋರೆಕಾಯಿ (Bottle Gourd) ಆರೋಗ್ಯದ ದೃಷ್ಠಿಯಿಂದ ಒಳ್ಳೆಯದು. ಆದರೆ ಇತ್ತೀಚೆಗೆ ಅಧ್ಯಯನ ಒಂದು ಈ ಕುರಿತು ನಡೆದಿದ್ದು, ಈ ತರಕಾರಿ ಸೇವನೆಯಿಂದ ಆರೋಗ್ಯಕ್ಕೆ ಮಾರಕವಾಗಲುಬಹುದು ಎಂದು ತಿಳಿದುಬಂದಿದೆ. ಅದು ಹೇಗೆ ಎಂಬುದನ್ನು ಇಲ್ಲಿ ತಿಳಿಸಲಾಗಿದೆ.
ಸಾಂಪ್ರದಾಯಿಕ (Traditional) ತರಕಾರಿಗಳಲ್ಲಿ (Vegetables) ಈ ಹಾಲುಗುಂಬಳ ಅಥವಾ ಸೋರೆಕಾಯಿ (Bottle Gourd) ಸಹ ಒಂದು. ಇದನ್ನು ಸೇವಿಸುವುದರಿಂದ ಆರೋಗ್ಯಕ್ಕೆ (Health) ಬಹಳ ಲಾಭದಾಯಕವಾಗಿದೆ. ಅಷ್ಟೇ ಅಲ್ಲದೆ ಹಲವು ಕಾಯಿಲೆಗಳನ್ನು ಗುಣಪಡಿಸುವ ಶಕ್ತಿ ಇದರಲ್ಲಿದೆ ಎಂದು ಹೇಳಲಾಗುತ್ತದೆ. ಸೋರೆಕಾಯಿ ಪಾಯಸ ಮಾಡಿ ಬಾಣಂತಿಯರು ಕುಡಿಯುವುದರಿಂದ ಹಾಲು (Milk) ಉತ್ಪತ್ತಿಯಾಗುತ್ತದೆ ಎನ್ನಲಾಗುತ್ತದೆ. ಅಷ್ಟೇ ಅಲ್ಲದೆ ಡಯಾಬಿಟಿಕ್ (Diabetic) ಕಾಯಿಲೆ ಇರುವವರು ಈ ತರಕಾರಿ ತಿನ್ನುವುದು ಒಳ್ಳೆಯದು ಎನ್ನಲಾಗುತ್ತದೆ.
ಆದರೆ ಇತ್ತೀಚೆಗೆ ಸೋರೆಕಾಯಿ ಕುರಿತು ಅಧ್ಯಯನ(Research) ನಡೆದಿದ್ದು, ಇದನ್ನು ಸೇವಿಸುವುದರಿಂದ ಆರೋಗ್ಯಕ್ಕೆ ಒಳ್ಳೆಯದಲ್ಲ ಎಂದು ತಿಳಿದುಬಂದಿದೆ.
ಬೂದುಗುಂಬಳ, ಸಿಹಿಗುಂಬಳ, ಕಲ್ಲಂಗಡಿ(Watermelon), ಕುಂಬಳಕಾಯಿ(Pumpkin), ಹಾಗಲಕಾಯಿ(Bitter Ground) ಕುಟುಂಬಕ್ಕೆ ಸೇರಿದೆ ಈ ಸೋರೆಕಾಯಿ. ಭಾರತದಲ್ಲಿ ಇದನ್ನು ಹೆಚ್ಚಾಗಿ ಉಪಯೋಗಿಸಲಾಗುತ್ತದೆ. ಅಷ್ಟೇ ಅಲ್ಲದೆ ತೂಕ ಇಳಿಸುವುದಕ್ಕೆ(Weight Loss), ಮಲಬದ್ಧತೆ(Constipation), ಹೃದಯಕ್ಕೆ(Heart) ಹಾಗೂ ನಿರ್ಜಲೀಕರಣಕ್ಕೆ(Dehydrate) ಹೀಗೆ ಹಲವು ಸಮಸ್ಯೆಗಳಿಗೆ ಉತ್ತಮ ಗುಣವುಳ್ಳ ತರಕಾರಿ ಎನ್ನಲಾಗುತ್ತದೆ. ಸಕ್ಕರೆ ಕಾಯಿಲೆ ಇರುವವರಿಗೆ ಇದು ಉತ್ತಮ ಮನೆಮದ್ದೂ ಹೌದು.
ಇದನ್ನೂ ಓದಿ: ವಿಟಮಿನ್ Cಗಾಗಿ ಸೋರೆಕಾಯಿ ಜ್ಯೂಸ್ ಕುಡಿದು ನಟಿ ICUನಲ್ಲಿ
ಪ್ರಯೋಜನಗಳು
ಸೋರೆಕಾಯಿಯಲ್ಲಿ ಹಲವು ಔಷಧೀಯ(Medicinal) ಗುಣಗಳಿವೆ. ಅಷ್ಟೇ ಅಲ್ಲದೆ ಮಕ್ಕಳಿಗೆ ಇದನ್ನು ಆಹಾರ ಪದಾರ್ಥಗಳಲ್ಲಿ ಕೊಡುವುದರಿಂದ ಚುರುಕು ಹಾಗೂ ಬುದ್ಧಿ ಬೆಳವಣಿಗೆಯಾಗುತ್ತದೆ ಎನ್ನುತ್ತಾರೆ. ಇದರಲ್ಲಿ ಹೇರಳವಾಗಿ ಕ್ಯಾಲೋರಿ(Calories), ವಿಟಮಿನ್ ಸಿ(Vitamin C), ಜಿಂಕ್(Zinc), ಪೊಟ್ಯಾಶಿಯಂ(Potassium), ಮೆಗ್ನೀಶಿಯಂ(Magnesium), ಫಾಸ್ಫರಸ್, ಸೋಡಿಯಂ(Sodium) ಅಂಶಗಳು ಇವೆ. ಇದರ ಬೀಜವನ್ನು(Seeds) ಡ್ರೆöÊ ಫ್ರೂಟ್ಸ್(Dry Fruits) ರೀತಿಯಲ್ಲಿ ಸೇವಿಸಲಾಗುತ್ತದೆ ಹಾಗೂ ಡಯೆಟ್ ಫ್ರೆಂಡ್ಲಿ ಫುಡ್(Diet Friendly) ಇದಾಗಿದೆ.
ಸೋರೆಕಾಯಿ ವಿಷ ಹೇಗೆ?
ಅಧ್ಯಯನದ ಪ್ರಕಾರ ಸೋರೆಕಾಯಿಯಲ್ಲಿ ಕೆಲ ವಿಷಗಳಿವೆ(Toxic), ಇದನ್ನು ಸೇವಿಸುವಾಗ ಎಚ್ಚರದಿಂದ ಇರಬೇಕು ಎಂದು ಹೇಳಲಾಗಿದೆ. ಏಕೆಂದರೆ ಇದರಲ್ಲಿ ಕಹಿ ರುಚಿ(Bitter Taste) ಮತ್ತು ವಿಷತ್ವಕ್ಕೆ ಕಾರಣವಾಗಿರುವ ಕುಕುರ್ಬಿಟಾಸಿನ್(Cucurbitacins) ಎಂಬ ವಿಷಕಾರಿ ಟೆಟ್ರಾಸೈಕ್ಲಿಕ್ ಟ್ರೆöÊಟರ್‌ಪೆನಾಯ್ಡ್(Tetracyclic Triterpenoid) ಸಂಯುಕ್ತಗಳನ್ನು ಹೊಂದಿದೆ. ಸೋರೆಕಾಯಿ ಬಳ್ಳಿಯು ಸಸ್ಯಾಹಾರಿ ಪ್ರಾಣಿಗಳಿಂದ ತನ್ನನ್ನು ರಕ್ಷಿಸಿಕೊಳ್ಳಲು ಈ ವಿಷವನ್ನು ಉತ್ಪಾದಿಸುತ್ತದೆ. ಇದರ ವಿರುದ್ಧ ಹೋರಾಡಬಲ್ಲ ಮತ್ತೊಂದು ವಿಷವಿಲ್ಲ ಎನ್ನಲಾಗಿದೆ.
ಕಹಿ ಇರುವ ಸೋರೆಕಾಯಿಯನ್ನು ಜ್ಯೂಸ್ ಮಾಡಿ ಕುಡಿಯುವುದರಿಂದ ಆರೋಗ್ಯ ಹದಗೆಡುತ್ತದೆ. ದೇಹದಲ್ಲಿ ವಿಷದ ಅಂಶ ಹರಡುತ್ತದಲ್ಲದೆ, ವಾಂತಿ(Vomit), ಹೊಟ್ಟೆ ನೋವು(Stomach Pain), ಅತಿಸಾರ, ಹೆಮಟೆಮೆಸಿಸ್, ಹೆಮಟೊಚೆಜಿಯಾ, ಆಘಾತ(Shock), ಮತ್ತು ಸಾವಿಗೆ ದಾರಿ(Death) ಮಾಡಿಕೊಡುತ್ತದೆ. ಹಾಗಾಗಿ ಕಹಿ ಇರುವ ಸೋರೆಕಾಯಿ ಜ್ಯೂಸ್ ಅನ್ನು ಸೇವಿಸಲು ಉತ್ತಮವಲ್ಲ ಎಂದು ಅಧ್ಯಯನದಿಂದ ತಿಳಿಸಲಾಗಿದೆ.
ಸೋರೆಕಾಯಿ ಕಹಿ ಇರುವ ಜ್ಯೂಸ್ ಕುಡಿದಲ್ಲಿ ಒಂದು ಗಂಟೆಯಲ್ಲಿ(One Hour) ಈ ಎಲ್ಲಾ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ಈ ವಿಷದ ಆರಂಭಿಕ ಲಕ್ಷಣಗಳು ವಾಂತಿ, ಅತಿಸಾರ, ಮೇಲಿನ ಜಠರಗರುಳಿನ ರಕ್ತಸ್ರಾವ ಮತ್ತು ಹೈಪೊಟೆನ್ಷನ್ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ.
ಇದನ್ನೂ ಓದಿ: ರೆಸಿಪಿ - ಸೋರೆಕಾಯಿ ಸಿಪ್ಪೆಯಿಂದ ಮಾಡಿ ಟೆಸ್ಟಿ ಈಸಿ ಚಟ್ನಿ!
ಸೋರೆಕಾಯಿ ಜ್ಯೂಸ್ ಸೈನೆಡ್‌ಗೆ ಸಮ
ಕಹಿ ಇರುವ ಸೋರೆಕಾಯಿ ಜ್ಯೂಸ್ (Juice) ಕುಡಿದರೆ ಆರೋಗ್ಯ ಕೈಕೊಡುವುದು ಗ್ಯಾರೆಂಟಿ. 2021ರಲ್ಲಿ ತಹಿರಾ ಕಷ್ಯಪ್ ಎಂಬುವವರು ಈ ಸಮಸ್ಯೆಗೆ ಒಳಗಾಗಿದ್ದರು. ಪ್ರತೀ ದಿನ ಅರಿಶಿಣ (Turmeric) ಸೋರೆಕಾಯಿ, ನಲ್ಲಿಕಾಯಿ ಜ್ಯೂಸ್ (Amla) ಅನ್ನು ಬೆಳಗ್ಗೆ ಕುಡಿಯುತ್ತಿದ್ದರಂತೆ. ಆದರೆ ಒಮ್ಮೆ ಈ ಕಹಿ ಸೋರೆಕಾಯಿ ಜ್ಯೂಸ್ ಕುಡಿದು ವಾಂತಿಗೆ ಕಾರಣವಾಗಿ ಐಸಿಯು ಸೇರಿದ್ದರಂತೆ. ಅವರ ವೈದ್ಯರು ಹೇಳಿದ ಪ್ರಕಾರ. ಈ ರೀತಿಯ ಜ್ಯೂಸ್ ಕುಡಿದರೆ ಅದು ಸೈನೆಡ್‌ಗೆ (cyanide) ಸಮ ಎಂದಿದ್ದರು.
ವಿಟಮಿನ್ ಸಿ (Vitamin C) ಹೆಚ್ಚಿರುವುದರಿಂದ ಈ ಕಹಿ ಕಾಣಿಸಿಕೊಂಡಿದೆ ಎಂದು ತಪ್ಪಾಗಿ ಗ್ರಹಿಸಿ ಜ್ಯೂಸ್ ಸೇವಿಸಿದ್ದರಂತೆ. ಈ ಜ್ಯೂಸ್ ಸೇವಿಸಿದ ಕೆಲವೇ ನಿಮಿಷಗಳಲ್ಲಿ ಅವರು 17 ಭಾರಿ ವಾಂತಿ ಮಾಡಿದ್ದರಲ್ಲದೆ, ಅವರ ರಕ್ತದೊತ್ತಡ (Blood Pressure) 40ಕ್ಕೆ ಇಳಿದಿತ್ತಂತೆ.
ಸೋರೆಕಾಯಿ ಕಹಿ ಇರುವುದು ತಿಳಿಯುವುದು ಹೇಗೆ?
ಸೋರೆಕಾಯಿ ಜ್ಯೂಸ್ ಮಾಡುವ ಮೊದಲು ಚೆನ್ನಾಗಿ ತೊಳೆದು ಅದನ್ನು ಕಟ್ ಮಾಡಿ. ಕಟ್ ಮಾಡಿದ ಸಣ್ಣ ಪೀಸ್ ಅನ್ನು ಹಸಿದಾಗಿಯೇ ತಿಂದು(Raw Peace) ನೋಡಬೇಕು. ಅದು ಕಹಿ ಇದ್ದರೆ ತಕ್ಷಣ ಅದನ್ನು ಎಸೆಯುವುದು ಒಳ್ಳೆಯದು. ಕಹಿ ಇಲ್ಲದಿದ್ದರೆ ಅದನ್ನು ಜ್ಯೂಸ್ ಮಾಡಿ ಸೇವಿಸಬಹುದು.