ತಾಕಿದ್ರೆ ಮೈ ಮೇಲೆ ಆಸಿಡ್ ಸುರಿದಂತಾಗುತ್ತೆ, ಬೋರೆಂದು ಡೇಂಜರಸ್ ಗಿಡ ಬೆಳೆಸ್ತಿದ್ದಾನೆ ಭೂಪ !

By Vinutha Perla  |  First Published Nov 6, 2022, 2:19 PM IST

ಬೋರಾಗುತ್ತೆ ಅಂದ್ರೆ ನಾವೇನ್ ಮಾಡ್ತೀವಿ. ಸುಮ್ನೆ ಎದ್ದು ಹೊರಗೆ ಹೋಗ್ತೀವಿ, ಇಲ್ಲಾಂದ್ರೆ ಸಾಂಗ್ ಕೇಳ್ತೀವಿ, ಮೂವಿ ನೋಡ್ತೀವಿ ಹೀಗೆ ಏನಾದ್ರೊಂದು ಮಾಡ್ತೀವಿ ಅಲ್ವಾ ? ಆದ್ರೆ ಇಲ್ಲೊಬ್ಬಾತ ಬೋರಾಗುತ್ತೆ ಅಂತ ಹೀಗೆ ಏನಾದ್ರೂ ಮಾಡೋ ಬದ್ಲು ಮನೆಯೊಳಗೆ ಪ್ರಪಂಚದ ಅತ್ಯಂತ ವಿಷಕಾರಿ ಗಿಡವನ್ನು ನೆಟ್ಟಿದ್ದಾನೆ. ಅಯ್ಯಯ್ಯೋ ಅಂತ ಗಾಬರಿಯಾಗ್ಬೇಡಿ. ಹೆಚ್ಚಿನ ಮಾಹಿತಿ ಇಲ್ಲಿದೆ.


ಬೇಸರವಾದಾಗ ನೀವು ಸಾಮಾನ್ಯವಾಗಿ ಏನು ಮಾಡುತ್ತೀರಿ ? ಚಲನಚಿತ್ರ ಅಥವಾ ವೆಬ್ ಸಿರೀಸ್ ವೀಕ್ಷಿಸುತ್ತೀರಾ ? ಅಥವಾ ಪುಸ್ತಕವನ್ನು ಓದುವುದು ಅಥವಾ ಹಾಸಿಗೆಯಲ್ಲಿ ಮಲಗಿ ಮೊಬೈಲ್ ಸ್ಕ್ರೋಲಿಂಗ್ ಮಾಡ್ತೀರಾ ? ಹೀಗೆಲ್ಲಾ ಮಾಡುವುದಾದರೆ ಸರಿ. ಆದರೆ ಯುನೈಟೆಡ್ ಕಿಂಗ್‌ಡಮ್‌ನಲ್ಲೊಬ್ಬ ವ್ಯಕ್ತಿ ಸ್ವಲ್ಪ ಅತಿರೇಕವಾಗಿ ಎನ್ನುವಂತಹದ್ದು ಮಾಡಿದ್ದಾನೆ. ಆಕ್ಸ್‌ಫರ್ಡ್‌ನ ಡೇನಿಯಲ್ ಎಮ್ಲಿನ್-ಜೋನ್ಸ್ ಅವರು 'ಜಗತ್ತಿನ ಅತ್ಯಂತ ಅಪಾಯಕಾರಿ ಸಸ್ಯ' ಎಂದು ಕರೆಯಲ್ಪಡುವ ಗಿಡವನ್ನುಮನೆಯಲ್ಲಿ ಬೆಳೆಸಿದ್ದಾನೆ. ತಜ್ಞರ ಪ್ರಕಾರ, 'ಜಿಂಪಿ-ಜಿಂಪಿ' ಅಥವಾ 'ಆತ್ಮಹತ್ಯೆ ಸಸ್ಯ' ಎಂದೂ ಕರೆಯಲ್ಪಡುವ ಸಸ್ಯವು ತುಂಬಾ ನೋವಿನಿಂದ ಕೂಡಿದೆ, ಅದು ಆತ್ಮಹತ್ಯೆಯ ಆಲೋಚನೆಗಳನ್ನು ಪ್ರಚೋದಿಸುತ್ತದೆ ಎಂದು ತಿಳಿದುಬಂದಿದೆ.

ಜಗತ್ತಿನ ಅತ್ಯಂತ ಅಪಾಯಕಾರಿ ಸಸ್ಯವನ್ನು ಬೆಳೆಸುತ್ತಿರುವ ವ್ಯಕ್ತಿ
ಅತ್ಯಾಸಕ್ತಿಯ ತೋಟಗಾರ, ಎಮ್ಲಿನ್-ಜೋನ್ಸ್ ಕುಖ್ಯಾತ 'ಡೆಂಡ್ರೊಕ್ನೈಡ್ ಮೊರೊಯಿಡ್ಸ್' ಅನ್ನು ಬೆಳೆಸಿದನು. ಇದು ಆಸ್ಟ್ರೇಲಿಯಾ ಮತ್ತು ಮಲೇಷಿಯಾದಲ್ಲಿ ಸ್ಥಳೀಯ ಸಸ್ಯವಾಗಿದ್ದು ಅದು ಅಸಹನೀಯವಾಗಿ ನೋವಿನ (Pain) ಕುಟುಕುಗಳನ್ನು ನೀಡುತ್ತದೆ. ಸಸ್ಯದ ಕುಟುಕುವ ಕೂದಲನ್ನು ಚರ್ಮದಿಂದ (Skin) ತೆಗೆದುಹಾಕದಿದ್ದರೆ ಒಂದು ವರ್ಷಕ್ಕೂ ಹೆಚ್ಚು ಕಾಲ ವ್ಯಕ್ತಿಯನ್ನು ಹಿಂಸಿಸುವ ಸಾಮರ್ಥ್ಯವನ್ನು ಹೊಂದಿದೆ ಎಂದು ತಿಳಿದುಬಂದಿದೆ.

Latest Videos

undefined

ಒಂಟಿ ಒಂಟಿಯಾಗಿರೋದು ಬೋರೋ ಬೋರು ಅಂತ ಅನ್ಕೋಬೇಡಿ, ಅಂದ್ರಿಂದಾನೂ ಉಪಯೋಗವಿದೆ!

ಡೇಂಜರಸ್ ಸಸ್ಯದ ಬಗ್ಗೆ ತಿಳಿದಿರುವ ಎಮ್ಲಿನ್-ಜೋನ್ಸ್ ಸಸ್ಯವನ್ನು ಮಾನವ ಸ್ಪರ್ಶದಿಂದ ದೂರವಿಡುವ ಬಗ್ಗೆ ಎಚ್ಚರಿಕೆ (Warning) ವಹಿಸಿದ್ದಾರೆ. ಗಿಡವನ್ನು ಬೋನಿನ ಒಳಗಿಟ್ಟು ಅದರ ಮೇಲೆ ಅಪಾಯದ ಫಲಕ ಬರೆದಿಟ್ಟಿದ್ದಾರೆ. 'ಇದು ನನ್ನ ತೋಟಗಾರಿಕೆಯ ಹವ್ಯಾಸಕ್ಕೆ ಸ್ವಲ್ಪ ಥ್ರಿಲ್ಲಿಂಗ್ ನೀಡಿದೆ ಎಂದು ನಾನು ಭಾವಿಸಿದ್ದೆನೆ. ನೀವು ಈ ಅಪಾಯಕಾರಿ ಗಿಡವನ್ನು (Dangerous plant) ಬೆಳೆಸಲು ಬಯಸುವುದಾದರೆ ಅಂತರ್ಜಾಲದಲ್ಲಿ ಬೀಜಗಳನ್ನು ಪಡೆಯಬಹುದು. ಆದರೆ ಅದು ಒಳಗೊಂಡಿರುವ ಪ್ರದೇಶದಿಂದ ಹರಡದಂತೆ ನೀವು ಜಾಗರೂಕರಾಗಿರಬೇಕು, ಆದ್ದರಿಂದ ನಾನು ಅದನ್ನು ನನ್ನ ಮುಂಭಾಗದ ಕೋಣೆಯಲ್ಲಿ ಇರಿಸುತ್ತೇನೆ. ನಾನು ಆಸ್ಟ್ರೇಲಿಯಾದ ಕಂಪನಿಯಿಂದ ನನ್ನ ಬೀಜಗಳನ್ನು ಪಡೆದುಕೊಂಡಿದ್ದೇನೆ, ಅದರ ಬೆಲೆ ಅರವತ್ತು ಆಸ್ಟ್ರೇಲಿಯನ್ ಡಾಲರ್‌ಗಳಷ್ಟಿದೆ, ಆದ್ದರಿಂದ ಅದು ಅಗ್ಗವಾಗಿರಲಿಲ್ಲ' ಎಂದು ಡೇನಿಯಲ್ ಹೇಳಿದರು.

'ನಾನು ಯಾವಾಗಲೂ ಸಸ್ಯಗಳನ್ನು ಇಷ್ಟಪಡುತ್ತೇನೆ. ಆದರೆ ನಾನು ಜೆರೇನಿಯಂಗಳೊಂದಿಗೆ ಸ್ವಲ್ಪ ಬೇಸರಗೊಂಡಿದ್ದೇನೆ. ಅಂತರ್ಜಾಲದ ಪ್ರಕಾರ, ಮೂಲನಿವಾಸಿಗಳು ಸಂಧಿವಾತಕ್ಕೆ ಚಿಕಿತ್ಸೆ ನೀಡಲು ಇದನ್ನು ಬಳಸುತ್ತಾರೆ. ಅದು ಎಷ್ಟು ನಿಜ, ಅಥವಾ ಅದು ಹೇಗೆ ಕೆಲಸ ಮಾಡುತ್ತದೆ ಎಂದು ನನಗೆ ಖಚಿತವಿಲ್ಲ' ಎಂದು  ಎಮ್ಲಿನ್-ಜೋನ್ಸ್ ಸೇರಿಸಿದ್ದಾರೆ.

ಹುಡುಗೀರು ಒಂಟಿ ಒಂಟಿಯಾಗಿರೋದೆ ಇಷ್ಟ ಅನ್ತಿದ್ದಾರಲ್ಲ, ಯಾಕಪ್ಪಾ ಹೀಗೆ ?

ಆತ್ಮಹತ್ಯೆಗೆ ಪ್ರಚೋದಿಸುತ್ತೆ ಡೇಂಜರಸ್ ಗಿಡ
'ಜಿಂಪಿ-ಜಿಂಪಿ' ಪ್ರಪಂಚದ ಅತ್ಯಂತ ಮಾರಣಾಂತಿಕ ಸಸ್ಯವಾಗಿದೆ. ಈ ಸಸ್ಯದ ಕುಟುಕಿದರೆ ಊದಿಕೊಂಡ ಕೈಕಾಲುಗಳು, ಅಲರ್ಜಿಗಳು, ಸೀನುವಿಕೆ ಮತ್ತು ಕೆಂಪು ದದ್ದುಗಳ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಒಬ್ಬ ವ್ಯಕ್ತಿಯು ತಿಳಿಯದೇ ಈ ಸಸ್ಯವನ್ನು ಟಾಯ್ಲೆಟ್ ಪೇಪರ್ ಆಗಿ ಬಳಸಿದ್ದು, ನೋವಿನಿಂದ ಒದ್ದಾಡಿ ಮೃತಪಟ್ಟನು ಎಂದು ತಿಳಿದುಬಂದಿದೆ. ಜಿಂಪಿ-ಜಿಂಪಿ, ಇದನ್ನು 'ಆಸ್ಟ್ರೇಲಿಯನ್ ಕುಟುಕುವ ಮರ' ಎಂದೂ ಕರೆಯುತ್ತಾರೆ, ಇದು ವಿಶ್ವದ ಅತ್ಯಂತ ವಿಷಕಾರಿ (Poisonous) ಸಸ್ಯವಾಗಿದೆ. ಈ ಸಸ್ಯದ ಕುಟುಕು ಎಷ್ಟು ಭೀಕರವಾಗಿದೆಯೆಂದರೆ ಇದು ಚರ್ಮಕ್ಕೆ ತಗುಲಿದರೆ ಬಿಸಿ ಆಸಿಡ್‌ನಿಂದ ಸುಟ್ಟಂತೆ ಅಥವಾ ವಿದ್ಯುತ್ ಶಾಕ್ ತಗುಲಿದಂತೆ ಭಾಸವಾಗುತ್ತದೆ ಎಂದು ತಜ್ಞರು ತಿಳಿಸಿದ್ದಾರೆ.

ಯಾರಾದರೂ ಈ ಸಸ್ಯವನ್ನು ಒಂದು ಸೆಕೆಂಡಿಗೆ ಮುಟ್ಟಿದರೆ, ಸಣ್ಣ ಕೂದಲಿನಂತಹ ಸೂಜಿಗಳು ಸುಡುವ ಸಂವೇದನೆಯನ್ನು ನೀಡುತ್ತದೆ, ಅದು ಮುಂದಿನ 20 ರಿಂದ 30 ನಿಮಿಷಗಳಲ್ಲಿ ತೀವ್ರಗೊಳ್ಳುತ್ತಾ ಹೋಗುತ್ತದೆ. ಕೊನೆಗೆ ಮಾರಣಾಂತಿಕವಾಗಿಯೂ ಪರಿಣಮಿಸುತ್ತದೆ ಎಂದು ತಿಳಿದುಬಂದಿದೆ.

click me!