
ತೂಕ ಇಳಿಕೆಗೆ ಅತ್ಯದ್ಭುತ ಟಿಪ್ಸ್
ಬೊಜ್ಜಿನಿಂದ ಜನರು ತುಂಬಾ ಕಷ್ಟಪಡುತ್ತಾರೆ. ಪ್ರಪಂಚದಾದ್ಯಂತ ಹೆಚ್ಚಿನ ಜನರು ಅಧಿಕ ತೂಕದ ಸಮಸ್ಯೆಯಿಂದ ಬಳಲುತ್ತಿದ್ದಾರೆ. ತೂಕ ಹೆಚ್ಚಾಗುವುದರಿಂದ ಅನೇಕ ರೋಗಗಳು ನಮ್ಮನ್ನು ಕಾಡುತ್ತವೆ. ಅನಾರೋಗ್ಯಕರ ಜೀವನಶೈಲಿ ಮತ್ತು ಕೆಟ್ಟ ಆಹಾರ ಪದ್ಧತಿಯಿಂದ ದೇಹದ ತೂಕ ಹೆಚ್ಚಾಗುತ್ತದೆ. ಅದರಲ್ಲೂ ಸೊಂಟ ಮತ್ತು ಹೊಟ್ಟೆಯ ಭಾಗದಲ್ಲಿ ಕೊಬ್ಬು ಹೆಚ್ಚಾದರೆ ಅದನ್ನು ಕರಗಿಸುವುದು ತುಂಬಾ ಕಷ್ಟ.
ದೇಹದ ತೂಕ ಇಳಿಸಿಕೊಳ್ಳಲು ಹಲವರು ನಾನಾ ಕಸರತ್ತು ಮಾಡುತ್ತಾರೆ. ಕೆಲವರು ಜಿಮ್‌ಗೆ ಹೋಗುತ್ತಾರೆ. ಇನ್ನೂ ಕೆಲವರು ಕಠಿಣ ಆಹಾರ ಪದ್ಧತಿಯನ್ನು ಅನುಸರಿಸುತ್ತಾರೆ. ಆದರೆ ಕಾಳು ಮೆಣಸಿನ ಟೀ ಕುಡಿಯುವುದರಿಂದ ದೇಹದ ತೂಕವನ್ನು ವೇಗವಾಗಿ ಇಳಿಸಬಹುದು ಎಂಬುದು ನಮ್ಮಲ್ಲಿ ಹಲವರಿಗೆ ತಿಳಿದಿಲ್ಲ. ಹಾಗಾದರೆ ದೇಹದ ತೂಕ ಇಳಿಸಲು ಕಾಳು ಮೆಣಸಿನ ಟೀ ಹೇಗೆ ಸಹಾಯ ಮಾಡುತ್ತದೆ? ಅದನ್ನು ತಯಾರಿಸುವುದು ಹೇಗೆ ಎಂದು ಈಗ ಈ ಲೇಖನದಲ್ಲಿ ತಿಳಿಯೋಣ.
ಕಾಳು ಮೆಣಸು (Black pepper) ಪ್ರತಿಯೊಬ್ಬರ ಅಡುಗೆಮನೆಯಲ್ಲಿ ಬಳಸುವ ಮಸಾಲೆ ಪದಾರ್ಥಗಳಲ್ಲಿ ಒಂದಾಗಿದೆ. ಅದರ ಮಸಾಲೆಯುಕ್ತ ರುಚಿ ಮತ್ತು ಸುವಾಸನೆಗಾಗಿ ಇದನ್ನು ಸಸ್ಯಾಹಾರಿ ಮತ್ತು ಮಾಂಸಾಹಾರಿ ಭಕ್ಷ್ಯಗಳಲ್ಲಿ ಬಳಸಲಾಗುತ್ತದೆ. ಕಾಳು ಮೆಣಸಿನಲ್ಲಿರುವ ಖನಿಜಗಳು ಮತ್ತು ಉತ್ಕರ್ಷಣ ನಿರೋಧಕಗಳು ನಮ್ಮ ಒಟ್ಟಾರೆ ಆರೋಗ್ಯಕ್ಕೆ ಪ್ರಯೋಜನಕಾರಿ. ಕಾಳು ಮೆಣಸಿನ ಚಹಾವು ಹಲವಾರು ಆರೋಗ್ಯ ಪ್ರಯೋಜನಗಳನ್ನು ಹೊಂದಿರುವ ಒಂದು ಸೂಪರ್ ಗಿಡಮೂಲಿಕೆ ಮಿಶ್ರಣವಾಗಿದೆ.
ಕಾಳು ಮೆಣಸಿನ ಚಹಾ ತಯಾರಿಸುವುದು ಹೇಗೆ?
ಬೇಕಾಗುವ ಪದಾರ್ಥಗಳು :
ಕಾಳು ಮೆಣಸಿನ ಪುಡಿ - 1 ಚಮಚ
ಜೇನುತುಪ್ಪ - 1 ಚಮಚ
ನಿಂಬೆ ರಸ - 1 ಚಮಚ
ಕತ್ತರಿಸಿದ ಶುಂಠಿ - 1 ಚಮಚ
ನೀರು - 2 ಕಪ್
ತಯಾರಿಸುವ ವಿಧಾನ :
ಒಂದು ಪಾತ್ರೆಯನ್ನು ಸ್ಟೌವ್ ಮೇಲೆ ಇಟ್ಟು ಅದಕ್ಕೆ ನೀರು ಹಾಕಿ ಚೆನ್ನಾಗಿ ಕುದಿಸಿ. ಈಗ ಕತ್ತರಿಸಿದ ಶುಂಠಿ ಮತ್ತು ಕಾಳು ಮೆಣಸು ಸೇರಿಸಿ ಚೆನ್ನಾಗಿ ಕುದಿಸಿ. ನಂತರ ಅದನ್ನು ಫಿಲ್ಟರ್ ಮಾಡಿ ಮತ್ತು ರುಚಿಗೆ ಜೇನುತುಪ್ಪ ಮತ್ತು ನಿಂಬೆ ರಸವನ್ನು ಸೇರಿಸಿ. ಅಷ್ಟೇ, ರುಚಿಕರವಾದ ಕರಿಮೆಣಸಿನ ಚಹಾ ಸಿದ್ಧ.
-ಕಾಳು ಮೆಣಸಿನಲ್ಲಿರುವ ಕೆಲವು ಸಂಯುಕ್ತಗಳು ದೇಹದಲ್ಲಿನ ಚಯಾಪಚಯವನ್ನು ವೇಗಗೊಳಿಸಲು ಸಹಾಯ ಮಾಡುತ್ತದೆ ಎಂದು ಕೆಲವು ಸಂಶೋಧನೆಗಳು ಹೇಳುತ್ತವೆ.
- ತೂಕ ಇಳಿಸಲು ಸಹಾಯ ಮಾಡುವ ಕೆಲವು ಮಸಾಲೆಗಳಲ್ಲಿ ಕಾಳು ಮೆಣಸು ಕೂಡ ಒಂದು. ಇದು ದೇಹದಲ್ಲಿನ ಕೊಬ್ಬನ್ನು ಕಡಿಮೆ ಮಾಡಲು ತುಂಬಾ ಸಹಕಾರಿ.
- ಕಾಳು ಮೆಣಸಿನಲ್ಲಿ ವಿಟಮಿನ್ ಎ, ವಿಟಮಿನ್ ಸಿ, ವಿಟಮಿನ್ ಕೆ, ಫೈಬರ್, ಪೊಟ್ಯಾಸಿಯಮ್, ಕಬ್ಬಿಣ, ಮೆಗ್ನೀಸಿಯಮ್, ಮ್ಯಾಂಗನೀಸ್ ಮತ್ತು ಸತುವಿನಂತಹ ಅನೇಕ ಪೋಷಕಾಂಶಗಳಿವೆ.
- ಕಾಳು ಮೆಣಸಿನ ಚಹಾವು ಶೀತ ಮತ್ತು ಕೆಮ್ಮನ್ನು ಕಡಿಮೆ ಮಾಡಲು ತುಂಬಾ ಉಪಯುಕ್ತವಾಗಿದೆ.
- ಕಾಳು ಮೆಣಸು ದೇಹದಲ್ಲಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಇದಲ್ಲದೆ, ಇದರಲ್ಲಿರುವ ಆ್ಯಂಟಿ-ಅಲರ್ಜಿ ಗುಣಲಕ್ಷಣಗಳು ದೇಹದಲ್ಲಿನ ಫ್ರೀ ರಾಡಿಕಲ್‌ಗಳ ವಿರುದ್ಧ ಹೋರಾಡುತ್ತವೆ ಮತ್ತು ಅನೇಕ ಆರೋಗ್ಯ ಸಮಸ್ಯೆಗಳನ್ನು ತಡೆಯುತ್ತವೆ.
- ಕಾಳು ಮೆಣಸಿನ ಚಹಾ ಕುಡಿಯುವುದರಿಂದ ಆತಂಕ, ಒತ್ತಡ ಕಡಿಮೆಯಾಗಿ ಮನಸ್ಸು ಶಾಂತವಾಗಿರುತ್ತದೆ.
- ಕಾಳು ಮೆಣಸಿನ ಚಹಾ ಕುಡಿಯುವುದರಿಂದ ದೇಹದಲ್ಲಿನ ಎಲ್ಲಾ ವಿಷಕಾರಿ ಅಂಶಗಳು ಹೊರಹಾಕಲ್ಪಡುತ್ತವೆ. ಇದು ದೇಹದ ಕಾರ್ಯವನ್ನು ಮತ್ತಷ್ಟು ಸುಧಾರಿಸುತ್ತದೆ.
- ಕರಿಮೆಣಸಿನಲ್ಲಿ ವಿಟಮಿನ್ ಕೆ, ಆ್ಯಂಟಿಆಕ್ಸಿಡೆಂಟ್‌ಗಳಿವೆ. ಇವು ಕ್ಯಾನ್ಸರ್ ವಿರುದ್ಧ ಹೋರಾಡಲು ಸಹಾಯ ಮಾಡುತ್ತವೆ. ಕರಿಮೆಣಸಿನ ಚಹಾಕ್ಕೆ ಒಂದು ಚಿಟಿಕೆ ಅರಿಶಿನ ಪುಡಿಯನ್ನು ಸೇರಿಸಿ ಕುಡಿಯುವುದು ತುಂಬಾ ಪ್ರಯೋಜನಕಾರಿ ಎಂದು ಹೇಳಲಾಗುತ್ತದೆ.
- ಕಾಳು ಮೆಣಸಿನ ಚಹಾ ಕುಡಿಯುವುದರಿಂದ ಜೀರ್ಣಾಂಗ ವ್ಯವಸ್ಥೆ ಆರೋಗ್ಯಕರವಾಗಿರುತ್ತದೆ.
ನೆನಪಿನಲ್ಲಿಡಿ :
ಕಾಳು ಮೆಣಸಿನ ಚಹಾ ಆರೋಗ್ಯಕ್ಕೆ ಒಳ್ಳೆಯದಾದರೂ, ಅದನ್ನು ಅತಿಯಾಗಿ ಕುಡಿಯಬಾರದು ಎಂಬುದನ್ನು ನೆನಪಿನಲ್ಲಿಡಿ. ಹಾಗೆಯೇ ವೈದ್ಯರನ್ನು ಸಂಪರ್ಕಿಸಿದ ನಂತರ ಈ ಚಹಾವನ್ನು ಕುಡಿಯುವುದು ಉತ್ತಮ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.