ಎಬೋಲಾ, ಮಾರ್ ಬರ್ಗ್, ಸಾರ್ಸ್, ನಿಫಾ- ಈ ನಾಲ್ಕು ವೈರಸ್ಸುಗಳು ಭವಿಷ್ಯಕ್ಕೆ ಆತಂಕ ತಂದೊಡ್ಡಿವೆ. ಏಕೆಂದರೆ, ಈ ವೈರಸ್ಸುಗಳ ಅಸ್ತಿತ್ವ ದಿನದಿಂದ ದಿನಕ್ಕೆ ವಿಸ್ತಾರವಾಗುತ್ತಿದೆ. 1960ರ ದಶಕದಲ್ಲಿ ಈ ವೈರಸ್ಸುಗಳು ಮೊಟ್ಟಮೊದಲು ಕಾಣಿಸಿಕೊಂಡ ಸಮಯದಿಂದ ಇಲ್ಲಿಯವರೆಗೆ ಇವುಗಳ ಪ್ರದೇಶದ ವ್ಯಾಪ್ತಿ ಗಮನಾರ್ಹವಾಗಿ ಹೆಚ್ಚಾಗಿದೆ.
ಜಗತ್ತನ್ನೇ ಕಾಡಿಸಿದ್ದ ಕೋವಿಡ್ ಸಾಂಕ್ರಾಮಿಕದಿಂದ ಈಗಷ್ಟೇ ಚೇತರಿಸಿಕೊಳ್ಳುತ್ತಿದ್ದೇವೆ. ಸೋಂಕನ್ನೇನೋ ಮೆಟ್ಟಿ ನಿಂತಿದ್ದೇವೆ ಎಂದು ಭಾವಿಸಿದ್ದರೂ ಅದರ ಬೇರೆ ಬೇರೆ ಪರಿಣಾಮಗಳಿಗೆ ರೋಸಿ ಹೋಗಿದ್ದೇವೆ. ಆತ್ಮೀಯರನ್ನು ಕಳೆದುಕೊಂಡಿದ್ದೇವೆ, ಜೀವನ ಅನಿರೀಕ್ಷಿತವಾಗಿ ಬದಲಾಗಿ ಹೋಗಿದೆ. ಕೋವಿಡ್ ಸಾಂಕ್ರಾಮಿಕದ ಆಘಾತ ನೆನಪಿನಿಂದ ಮಾಸುವ ಮುನ್ನವೇ ಮತ್ತೊಂದು ಆತಂಕಕಾರಿ ಸುದ್ದಿಯನ್ನು ಇತ್ತೀಚೆಗೆ ಬ್ರಿಟಿಷ್ ಮೆಡಿಕಲ್ ಜರ್ನಲ್ ಪ್ರಕಟ ಮಾಡಿದೆ. ಜಗತ್ತು ಶೀಘ್ರದಲ್ಲೇ ಮತ್ತೊಂದು ಸಾಂಕ್ರಾಮಿಕವನ್ನು ಎದುರಿಸುವ ಸಾಧ್ಯತೆಯಿದೆ ಎಂದು ಹೇಳಲಾಗಿದೆ. ನಿರ್ದಿಷ್ಟವಾದ ಸಮಯ ಹೇಳಿಲ್ಲವಾದರೂ, ಈಗ ಇರುವ ಎಬೋಲಾ, ಮಾರ್ ಬರ್ಗ್, ಸಾರ್ಸ್, ನಿಫಾದಂತಹ ವೈರಸ್ಸುಗಳೇ ಮುಂದಿನ ದಿನಗಳಲ್ಲಿ ಸಾಂಕ್ರಾಮಿಕವಾಗಿ ಇಡೀ ವಿಶ್ವವನ್ನು ಕಾಡಿಸುವ ಎಲ್ಲ ಸಾಧ್ಯತೆಗಳೂ ಇವೆ ಎಂದು ತಜ್ಞರು ಎಚ್ಚರಿಕೆ ನೀಡಿದ್ದಾರೆ. ಜತೆಗೆ, ಎಬೋಲಾದಂತಹ ಮಾಚುಪೋ ವೈರಸ್ ಕೂಡ ಸಾಂಕ್ರಾಮಿಕವಾಗಬಲ್ಲದು. ಈಗಾಗಲೇ ವಿಶ್ವ ಆರೋಗ್ಯ ಸಂಸ್ಥೆ ಕೂಡ ಇವುಗಳನ್ನು ಸಂಭಾವ್ಯ ಸಾಂಕ್ರಾಮಿಕ ರೋಗಕ್ಕೆ ಕಾರಣವಾಗುವ ಅಂಶಗಳು ಎಂದು ಗುರುತಿಸಿದೆ. ವಿಶ್ವದ ಹಲವು ಪ್ರದೇಶಗಳ ತಜ್ಞರನ್ನು ಒಳಗೊಂಡ ಗುಂಪು ಈ ಬಗ್ಗೆ ಎಚ್ಚರಿಕೆ ನೀಡಿದೆ.
ಬ್ರಿಟಿಷ್ ಮೆಡಿಕಲ್ ಜರ್ನಲ್ (British Medical Journal) ನಲ್ಲಿ ಪ್ರಕಟವಾಗಿರುವ ವರದಿ ಪ್ರಕಾರ, 2050ರ ಹೊತ್ತಿಗೆ ಎಬೋಲಾ, ಮಾರ್ ಬರ್ಗ್, ಸಾರ್ಸ್, ನಿಫಾ ವೈರಸ್ ಗಳಿಂದಾಗಿ ಸಾವಿಗೀಡಾಗುವ ಮಾನವರ ಪ್ರಮಾಣ ಈಗಿರುವ 12 ಪಟ್ಟು ಏರಿಕೆಯಾಗಲಿದೆ.
ಎಬೋಲಾ (Ebola) ಮತ್ತು ಮಾರ್ ಬರ್ಗ್ (Marburg)
ಎಬೋಲಾ ಮತ್ತು ಮಾರ್ ಬರ್ಗ್ ಈ ಎರಡೂ ವೈರಸ್ ಗಳು (Virus) ಬಾವಲಿಗಳಲ್ಲಿ ಕಂಡುಬರುತ್ತವೆ. ಇವೆರಡೂ ಹೆಚ್ಚು ಸೋಂಕುಕಾರಕ (Infectious). ಆಫ್ರಿಕಾದಾದ್ಯಂತ ಕಳೆದ ಕೆಲವು ವರ್ಷಗಳಿಂದ ಇವೆರಡೂ ಸೋಂಕು ಹೆಚ್ಚಾಗಿದ್ದು, ಸಾವಿರಾರು ಜನ ಅಸುನೀಗಿದ್ದಾರೆ.
undefined
ಟೈಂ ಸಿಕ್ಕಾಗ ಸಂಗಾತಿ ತಬ್ಬಿದರೇನಿವಾಗ? ಸಾವಿರ ಮಾತು ಹೇಳೋ ಅಪ್ಪುಗೆಯಲ್ಲಿದೆ ದಾಂಪತ್ಯದ ಸಾಮರಸ್ಯ!
ಅಧ್ಯಯನದ ಪ್ರಕಾರ, ಈ ಎರಡೂ ವೈರಸ್ಸುಗಳು ಜಾಗತಿಕವಾಗಿ (Global) ಹರಡಬಲ್ಲವು. ಎಬೋಲಾ ಕಾಡುಪ್ರಾಣಿಗಳಿಂದ ಸುಲಭವಾಗಿ ಹರಡುತ್ತದೆ (Transmit) ಹಾಗೂ ಮನುಷ್ಯ-ಮನುಷ್ಯರ ಸಂಪರ್ಕದಿಂದ ಜಾಗತಿಕವಾಗಿ ಹರಡುವ ಎಲ್ಲ ಸಾಧ್ಯತೆಗಳೂ ಇವೆ. ಇವೆರಡೂ ಸೋಂಕುಗಳು ಶೇಕಡ 50ರಷ್ಟು ಮರಣ ಪ್ರಮಾಣ ಹೊಂದಿವೆ. ಅಧಿಕ ಜ್ವರ (Fever), ತಲೆನೋವು, ಕಣ್ಣುಗಳಿಂದ ರಕ್ತಸ್ರಾವ, ಆಂತರಿಕವಾಗಿ ರಕ್ತಸ್ರಾವ ಉಂಟಾಗಿ ಸಾವು (Death) ಸಂಭವಿಸುತ್ತದೆ.
ಸಾರ್ಸ್ (SARS)
ಸೀವಿಯರ್ ಅಕ್ಯೂಟ್ ರೆಸ್ಪಿರೇಟರಿ ಸಿಂಡ್ರೋಮ್ ಅಥವಾ ಸಾರ್ಸ್, ಕೊರೋನಾ ವೈರಸ್ ನಿಂದ ಉಂಟಾಗುವ ತೀವ್ರ ಉಸಿರಾಟದ (Respiratory) ಸೋಂಕು. ಸಾರ್ಸ್ ವೈರಸ್ ಕೋವಿಡ್-19 ಸೋಂಕಿಗೂ ಮೂಲವಾಗಿದೆ. ಶ್ವಾಸಕೋಶದ ಮಾರ್ಗವನ್ನು ತೀವ್ರವಾಗಿ ಬಾಧಿಸುವ ಸಾರ್ಸ್, ಜ್ವರ, ಸಾಮಾನ್ಯ ಶೀತ-ನೆಗಡಿ, ತಲೆನೋವು, ದೇಹದಲ್ಲಿ ನೋವು (Pain), ಕೆಮ್ಮು, ನ್ಯೂಮೋನಿಯಾ ಲಕ್ಷಣಗಳನ್ನು ಹೊಂದಿದೆ. ಸಾರ್ಸ್ ವೈರಸ್ ಸಿಕ್ಕಾಪಟ್ಟೆ ಸೋಂಕುಕಾರಕವಾಗಿದ್ದು, ಶ್ವಾಸಕೋಶದಿಂದ ಹೊರಬರುವ ಕಣಗಳಿಂದ ಹರಡುತ್ತದೆ. ಇದು ಕೆಲವೇ ವರ್ಷಗಳ ಹಿಂದೆ ಪತ್ತೆಯಾದ ಸೋಂಕು. 2003ರಲ್ಲಿ ಏಷ್ಯಾದಲ್ಲಿ (Asia) ಕಂಡುಬಂದಿತ್ತು. ಕೆಲ ವರ್ಷಗಳಲ್ಲೇ ಕೋವಿಡ್-19 ಸಾಂಕ್ರಾಮಿಕಕ್ಕೆ (Pandemic) ಕಾರಣವಾಗಿತ್ತು.
ನಿಫಾ (Nipha)
ನಿಫಾ ವೈರಸ್ ನಮ್ಮ ಪಕ್ಕದ ಕೇರಳ ಹಾಗೂ ರಾಜ್ಯದ ಕೆಲ ಕಡೆ ವರದಿಯಾಗಿದೆ. ಹಣ್ಣುಗಳ ಬಾವಲಿಗಳಿಂದ (Bat) ಹರಡುತ್ತದೆ. ಮುಂದಿನ ಬೃಹತ್ ಸಾಂಕ್ರಾಮಿಕ ರೋಗದ ಮೂಲ ಇದೇ ಆಗಬಹುದು ಎನ್ನಲಾಗಿದೆ. ಈ ವೈರಸ್ ಮಿದುಳಿನಲ್ಲಿ ಉರಿಯೂತ (Inflammation) ಸೃಷ್ಟಿಸುತ್ತದೆ, ಮರಣ ದರ ಶೇ.75ರಷ್ಟಿದೆ.
ಕನ್ಯಾ ಸಂಸ್ಕಾರದ ವಿಶೇಷವೇನು? ಮಂತ್ರ ಪಠಣದಿಂದ ಹೆಣ್ಮಕ್ಕಳ ಮಾನಸಿಕ, ದೈಹಿಕ ಆರೋಗ್ಯಕ್ಕೆ ಒಳ್ಳೇದಾ?
ಮಾಚುಪೋ (Machupo)
ದಕ್ಷಿಣ ಅಮೆರಿಕದ ಬೊಲಿವಿಯಾದಲ್ಲಿ 1950ರ ದಶಕದಲ್ಲಿ ಮೊದಲು ಕಂಡುಬಂದಿದ್ದ ಮಾಚುಪೋ, ಮುಂದಿನ ಸಾಂಕ್ರಾಮಿಕದ ಸಂಭಾವ್ಯ ಸಾಲಿನಲ್ಲಿದೆ. ಇದನ್ನು ಬ್ಲಾಕ್ ಟೈಫಸ್, ಬೊಲಿವಿಯನ್ ಫೀವರ್ ಎಂದೂ ಕರೆಯಲಾಗುತ್ತದೆ. ಮಲೇರಿಯಾ ಲಕ್ಷಣಗಳನ್ನು ಹೋಲುತ್ತದೆ. ಈ ವೈರಸ್ ದೇಹದಲ್ಲಿ 7 ದಿನಗಳೊಳಗೆ ಹೆಮರಾಜಿಕ್ ಹಂತಕ್ಕೆ ತಲುಪುತ್ತದೆ. ಶೇ.25ರಷ್ಟು ಮರಣದರ (Death Rate) ಹೊಂದಿದೆ.