ಹಸ್ತಮೈಥುನ ಮಾಡಿಕೊಳ್ಳುವಾಗ ಜಾರ್ಜರ್ ಒಳಗೆ ಸೇರಿಸಿಕೊಂಡಿದ್ದ/ ಆಪರೇಶನ್ ಮಾಡಿ ಕೇಬಲ್ ಹೊರಗೆ ತೆಗೆದ ವೈದ್ಯರು/ ಜಾರ್ಜರ್ ತಿಂದಿದ್ದಾಗಿ ಹೇಳಿದ್ದ ಯುವಕ
ನವದೆಹಲಿ(ಜೂ. 05) ಗುಹವಾಟಿ ಮನುಷ್ಯನೊಬ್ಬನ ಮೂತ್ರಕೋಶ ಆಪರೇಶನ್ ಮಾಡಿದಾಗ ಮೊಬೈಲ್ ಜಾರ್ಜರ್ ಸಿಕ್ಕಿದೆ! ಪುಣ್ಯಾತ್ಮ ಹಸ್ತಮೈಥುನ ಮಾಡಿಕೊಳ್ಳುವಾಗ ಜಾರ್ಜರ್ ಒಳಗೆ ಸೇರಿಸಿಕೊಂಡಿದ್ದಾನೆ.
30 ವರ್ಷದ ವ್ಯಕ್ತಿ ಹಸ್ತಮೈಥುನ ಮಾಡುವಾಗ ಕೇಬಲ್ ಮೂತ್ರನಾಳದ ಮೂಲಕ ಇನ್ ಸರ್ಟ್ ಮಾಡಿಕೊಂಡಿದ್ದಾನೆ. ಘಟನೆ ಮಾಡಿಕೊಂಡು ಐದು ದಿನಗಳ ನಂತರ ಅಸ್ಸಾಂ ಆಸ್ಪತ್ರೆಗೆ ಹೋಗಿದ್ದಾನೆ. ವೈದ್ಯರ ಬಳಿ ತಾನು ಕೇಬಲ್ ತಿಂದಿದ್ದಾಗಿ ಹೇಳಿಕೊಂಡಿದ್ದಾನೆ.
ಚೆಂದುಳ್ಳಿ ಚೆಲುವೆ ಹೆಂಡತಿ ಇದ್ದರೂ ಗಂಡ ಹಸ್ತಮೈಥುನ ಮಾಡಿಕೊಳ್ಳುತ್ತಾನಲ್ಲ!
ವೈದ್ಯರು ಆತನ ಜೀರ್ಣಾಂಗವ್ಯೂಹ ಸ್ಕಾನ್ ಮಾಡಿ ನೋಡಿದಾಗ ಯಾವ ವಸ್ತುಗಳು ಪತ್ತೆಯಾಗಿಲ್ಲ. ವೈದ್ಯ ವಾಲಿಯೇ ಇಸ್ಲಾಂ ಇನ್ನೊಂದು ಎಕ್ಸರೇ ಮಾಡುವ ತೀರ್ಮಾನಕ್ಕೆ ಬಂದಿದ್ದಾರೆ. ಮೂತ್ರಕೋಶದ ಎಕ್ಸರೇ ತೆಗೆದುಕೊಂಡಾಗ ಅದರಲ್ಲಿ ಕೇಬಲ್ ಇರುವುದು ಪತ್ತೆಯಾಗಿದೆ.
undefined
ಡಾಕ್ಟರ್ ಇಸ್ಲಾಂ ಈ ಎಲ್ಲ ವಿವರಗಳನ್ನು ತಮ್ಮ ಫೇಸ್ ಬುಕ್ ಪೇಜ್ ಮೂಲಕ ಹಂಚಿಕೊಂಡಿದ್ದು ವಿಡಿಯೋ ಒಂದನ್ನು ಪೂರಕವಾಗಿ ಸೇರಿಸಿದ್ದಾರೆ.
ಏನು ಮಾಡಿಕೊಂಡಿದ್ದ?
ಹಸ್ತ ಮೈಥುನದ ಹೆಚ್ಚಿನ ತೃಪ್ತಿ ಪಡೆಯಲು ವ್ಯಕ್ತಿ ಮೊಬೈಲ್ ಜಾರ್ಜರ್ ಕೇಬಲ್ ತನ್ನ ಗುಪ್ತಾಂಗದೊಳಗೆ ತೂರಿಸಿಕೊಂಡಿದ್ದಾನೆ. ಹೀಗೆ ತೂರಿಸಿಕೊಂಡ ಕೇಬಲ್ ಹೊರಬರೆದೆ ಮೂತ್ರಕೋಶಕ್ಕೆ ಹೋಗಿ ಸಿಲುಕಿಕೊಂಡಿದೆ.
ಈ ಬಗೆಯ ಹಸ್ತಮೈಥುನವನ್ನು ಯುರೇರ್ಥಲ್ ಸೌಂಡಿಂಗ್(Urethral Sounding) ಎಂದು ಕರೆಯಲಾಗುತ್ತದೆ. ಮೈಥುನದ ಹೆಚ್ಚಿನ ತೃಪ್ತಿಗಾಗಿ ಕೆಲ ಪುರುಷರು ಶಿಶ್ನದ ಮೂಲಕ ಕೇಬಲ್ ಅಥವಾ ಕೆಲವು ದ್ರವರೂಪದ ವಸ್ತುಗಳನ್ನು ತೂರಿಸಿಕೊಳ್ಳುವುದನ್ನು ರೂಢಿಸಿಕೊಂಡಿರುತ್ತಾರೆ. ಇದು ಅಪಾಯಕಾರಿ ಎಂದು ಗೊತ್ತಿದ್ದರೂ ಮುಂದುವರಿಸಿರುತ್ತಾರೆ.